ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ
(ನ್ಯೂಸ್ ಕಡಬ) newskadaba.com ಕಡಬ, ಆ .14, ರಾಜ್ಯ ಸಂಸದೀಯ ಕಾರ್ಯದರ್ಶಿ, ಪುತ್ತೂರು ಶಾಸಕಿಯೂ ಆದ ಶಕುಂತಳಾ ಶೆಟ್ಟಿಯವರು ಕೊೖಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಶಾಸಕರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನೀತ್ ರಾಜ್ ಶೆಟ್ಟಿ ಆರ್ವಾರ, ಸದಸ್ಯರುಗಳಾದ ಪುರಂದರ ರೈ ಸಬಳೂರು, ಬಿ.ಕೆ.ಚಂದ್ರಶೇಖರ, ಚಂದ್ರಶೇಖರ ಗೌಡ, ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಕುಮಾರ್ ಬಾನಡ್ಕ ಉಪಸ್ಥಿತರಿದ್ದರು.
ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ Read More »
ಕರಾವಳಿ
