ದೀಪಾವಳಿ ಹಬ್ಬದ ಪ್ರಯುಕ್ತ ► ಬಡ ಕುಟುಂಬಕ್ಕೆ ನೆರವು ನೀಡಿದ ಕಡಬದ ಶ್ರೀದುರ್ಗಾ ಎಂಟರ್ಪ್ರೈಸಸ್
(ನ್ಯೂಸ್ ಕಡಬ) newskadaba.com ಕಡಬ, ಅ.23. ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ಶ್ರೀದುರ್ಗಾ ಎಂಟರ್ಪ್ರೈಸಸ್ ವತಿಯಿಂದ ಕೋಡಿಂಬಾಳ ಗ್ರಾಮದ ಓಂತ್ರಡ್ಕದಲ್ಲಿ ಬಡ ಕುಟುಂಬಕ್ಕೆ ಅಕ್ಕಿ, ಬಟ್ಟೆ, ಆಹಾರ ಸಾಮಾಗ್ರಿ, ಸಿಹಿತಿಂಡಿ ವಿತರಿಸಲಾಯಿತು. ಸಂಸ್ಥೆಯ ಮಾಲಕರಾದ ರಮೇಶ್ ಪಿ.ರವರು ಬಾಬು ಆಚಾರಿ ಹಾಗೂ ಕಲ್ಯಾಣಿ ಅವರಿಗೆ ಅಕ್ಕಿ, ಬಟ್ಟೆ, ಆಹಾರ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಕ್ಕಳಾದ ಹರೀಶ್, ಆಚಾರಿ, ಗೌರಮ್ಮ, ಮೋಹಿನಿ, ಸ್ಥಳೀಯರಾದ ಸುರೇಶ್, ಸುಂದರಿ, ಚರಿಷ್ಮಾ, ಅಜಾಶ್, ಹರ್ಷಿತಾ, ಸುರೇಶ್ ಪಾದೆರೆ ಉಪಸ್ಥಿತರಿದ್ದರು.
ದೀಪಾವಳಿ ಹಬ್ಬದ ಪ್ರಯುಕ್ತ ► ಬಡ ಕುಟುಂಬಕ್ಕೆ ನೆರವು ನೀಡಿದ ಕಡಬದ ಶ್ರೀದುರ್ಗಾ ಎಂಟರ್ಪ್ರೈಸಸ್ Read More »
ಕರಾವಳಿ