ಧಗಧಗನೆ ಹೊತ್ತಿ ಉರಿದ ಕಾರು !
(ನ್ಯೂಸ್ ಕಡಬ) newskadaba.com ಶಿವಮೊಗ್ಗ , ಡಿ 18 : ಚಲಿಸುತ್ತಿದ್ದ ಡಸ್ಟರ್ ಕಾರೊಂದರಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾದ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬೀರನಕೆರೆ ಹಾಗೂ ಕುಂಚೇನಹಳ್ಳಿ ಗ್ರಾಮಗಳ ಸಡುವಿನ ಸವಳಂಗ ರಸ್ತೆಯಲ್ಲಿ ಸಂಭವಿಸಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ, ಕಾರಲ್ಲಿದ್ದವರು ಹೊರ ಬಂದಿದ್ದಾರೆ. ಇದರಿಂದ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸದರಿ ಕಾರು ಶಿವಮೊಗ್ಗ ನಗರದ ಮಾರ್ಗವಾಗಿ ಶಿಕಾರಿಪುರದೆಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಧಗಧಗನೆ ಹೊತ್ತಿ ಉರಿದ ಕಾರು ! Read More »
ಕರ್ನಾಟಕ
