savanooru

ಹಿರಿಯರ ಕ್ರೀಡಾಕೂಟ: ಎಂ.ಎಸ್.ವಸಂತಿ ಮೆದು ರಾಷ್ಟ್ರಮಟ್ಟಕ್ಕೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.30. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಿ.ಚನ್ನಬೈರೇ ಗೌಡ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಶನ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಸವಣೂರಿನ ವಸಂತಿ ಶಿವರಾಮ ಮೆದು ಅವರು ಬಹುಮಾನ ಪಡೆದುಕೊಂಡು ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು 1500 ಮೀ ಓಟದಲ್ಲಿ ಪ್ರಥಮ, 800 ಮೀ. ಓಟದಲ್ಲಿ ದ್ವಿತೀಯ ಶಾಟ್‍ಪುಟ್‍ನಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡು ಮಂಗಳೂರಿನಲ್ಲಿ ಎ.13, 14 ,15 ರಂದು ನಡೆಯುವ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. […]

ಹಿರಿಯರ ಕ್ರೀಡಾಕೂಟ: ಎಂ.ಎಸ್.ವಸಂತಿ ಮೆದು ರಾಷ್ಟ್ರಮಟ್ಟಕ್ಕೆ Read More »

ಕ್ರೀಡಾ ನ್ಯೂಸ್

ಪೆರಿಯಡ್ಕ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ► ಸಮ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸವಣೂರು, ಮಾ.30. ಮಕ್ಕಳ ತಾಯಂದಿರು ಮಕ್ಕಳಲ್ಲಿರುವ ಧನಾತ್ಮಕ ಗುಣವನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳು ಪ್ರತಿಭಾನ್ವಿತರಾಗಿ ಬೆಳೆಯಲು ಸಾಧ್ಯ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಜಾತ ಹೇಳಿದರು.ಅವರು ಸವಣೂರು ಗ್ರಾಮದ ಪೆರಿಯಡ್ಕ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ಮತ್ತು ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ನಡೆದ ಬಾಲ ಮೇಳ, ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುತ್ತೂರು ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ

ಪೆರಿಯಡ್ಕ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ► ಸಮ್ಮಾನ ಕಾರ್ಯಕ್ರಮ Read More »

ಕರಾವಳಿ

ಕಾಣಿಯೂರು: ಬಿಜೆಪಿ ಪ್ರಮುಖ ಕಾರ್ಯಕತರ ಸಭೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.30. ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಬೆಳಂದೂರು ಮಹಾಶಕ್ತಿ ಕೇಂದ್ರದ ಪ್ರಮುಖ ಕಾರ್ಯಕರ್ತರ ಸಭೆ ಗುರುವಾರ ಕಾಣಿಯೂರು ಲಕ್ಷ್ಮಿ ನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು. ಚುನಾವಣಾ ಸಂಯೋಜಕ ಕಾಸರಗೋಡು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸುಧಾಮ, ವಿಸ್ತಾರಕ್ ಪುರಂದರ ತೆಕ್ಕಟ್ಟೆ, ಹಿರಿಯ ಮುಂದಾಳು ಶ್ರೀನಿವಾಸ್ ಉಬರಡ್ಕ ಅವರು ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು. ಸಭೆಯಲ್ಲಿ ವಿಧಾನ ಸಭಾ ಚುನಾಚಣೆಯ ಹಿನ್ನಲೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿನ ಕಾರ್ಯತಂತ್ರ, ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳುವಿಕೆ ಹಾಗೂ ಚುನಾವಣೆ ಸಂಭಂಧಪಟ್ಟ

ಕಾಣಿಯೂರು: ಬಿಜೆಪಿ ಪ್ರಮುಖ ಕಾರ್ಯಕತರ ಸಭೆ Read More »

ಕರಾವಳಿ

ಬೆಳಂದೂರು: ನೆರೆಹೊರೆ ಯುವ ಸಂಸತ್ತು ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಸವಣೂರು, ಮಾ.29. ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಶ್ರೀ ಗೌರಿ ಯುವತಿ ಮಂಡಲ ಸರ್ವೆ ಇದರ ಆಶ್ರಯದಲ್ಲಿ ನೆರೆಹೊರೆ ಯುವ ಸಂಸತ್ತು ಮಾಹಿತಿ ಕಾರ್ಯಗಾರ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಮಾಹಿತಿ ಕಾರ್ಯಾಗಾರವನ್ನು ಕಾಲೇಜಿನ ಪ್ರಾಚಾರ್ಯ ಪ್ರೋ.ಪದ್ಮನಾಭ ಕೆ. ಅವರು ಉದ್ಘಾಟಿಸಿ ಮಾತನಾಡಿ, ಯುವಜನತೆಯ ಬೆಳವಣಿಗೆಗೆ ಪೂರಕವಾಗಿ ತರಬೇತಿ ಕಾರ್ಯಗಳು ದೊರಕಿದರೆ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ

ಬೆಳಂದೂರು: ನೆರೆಹೊರೆ ಯುವ ಸಂಸತ್ತು ಕಾರ್ಯಾಗಾರ Read More »

ಕರಾವಳಿ

ಸವಣೂರು ಮೆಸ್ಕಾಂ ಉಪವಿಭಾಗ ಜೆಇ ಆಗಿ ನಾಗರಾಜ್ ಕೆ.

(ನ್ಯೂಸ್ ಕಡಬ) newskadaba.com ಸವಣೂರು, ಮಾ.28. ಸವಣೂರು ಮೆಸ್ಕಾಂ ಉಪವಿಭಾಗಕ್ಕೆ ಜೆಇ ಆಗಿ ನಾಗರಾಜ್ ಕೆ. ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಾಗರಾಜ್ ಕೆ. ಅವರು ಈ ಹಿಂದೆ ಕಡಬದಲ್ಲಿ 3 ವರ್ಷ,ಮೂಡಿಗೆರೆಯಲ್ಲಿ 4 ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ನಾಗರಾಜ್ ಕೆ ಅವರು ಮೂಲತಃ ಹಾಸನ ಜಿಲ್ಲೆ ಯ ಆಲೂರು ತಾಲೂಕಿನವರು.

ಸವಣೂರು ಮೆಸ್ಕಾಂ ಉಪವಿಭಾಗ ಜೆಇ ಆಗಿ ನಾಗರಾಜ್ ಕೆ. Read More »

ಕರಾವಳಿ

ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್.ರೈ ದಂಪತಿಯಿಂದ ಮುಗೇರು ದೇವಸ್ಥಾನಕ್ಕೆ ನೂತನ ವಸಂತಕಟ್ಟೆ ಸಮರ್ಪಣೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.28. ಇಲ್ಲಿನ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸುಮಾರು ರೂ. 3 ಲಕ್ಷ ವೆಚ್ಚದಲ್ಲಿ ನೂತನ ವಸಂತ ಕಟ್ಟೆಯನ್ನು ಸೇವಾಕರ್ತರಾದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್. ರೈ ಅವರು ಶ್ರೀ ದೇವಸ್ಥಾನಕ್ಕೆ ಸಮರ್ಪಿಸಿದರು. ಈ ಸಂದರ್ಭ ನೂತನ ವಸಂತ ಕಟ್ಟೆಯ ಸೇವಾಕರ್ತರಾದ ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್.ರೈ ದಂಪತಿಯನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ

ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್.ರೈ ದಂಪತಿಯಿಂದ ಮುಗೇರು ದೇವಸ್ಥಾನಕ್ಕೆ ನೂತನ ವಸಂತಕಟ್ಟೆ ಸಮರ್ಪಣೆ Read More »

ಕರಾವಳಿ

ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಮಾ.28. ಇಂದಿನ ವಿದ್ಯಾರ್ಥಿಗಳೇ ನಮ್ಮ ದೇಶವನ್ನಾಳುವ ಮುಂದಿನ ಜನಾಂಗದವರಾಗಿದ್ದು, ತಮ್ಮ ಮುಂದಿನ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ತಮ್ಮ ಮೇಲೆ ತಾವು ಆತ್ಮ ವಿಶ್ವಾಸವನ್ನು ಇಟ್ಟುಕೊಂಡು ದೃಢ ನಿರ್ಧಾರದಿಂದ ಕಾರ್ಯವನ್ನು ಕೈಗೊಂಡಾಗ ಮಾತ್ರ ಸಾಧ್ಯ. ಅದರಂತೆಯೇ ಅಹಂಕಾರವನ್ನು ತ್ಯಜಿಸಿ ವಿನಯವನ್ನು ತಮ್ಮದಾಗಿಸಿಕೊಂಡಾಗ ಭವಿಷ್ಯವು ಉಜ್ವಲವಾಗುತ್ತದೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ, ಬಂಟ್ವಾಳ ಎಸ್.ವಿ.ಎಸ್ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ತುಕಾರಾಮ್ ಪೂಜಾರಿ ಹೇಳಿದರು. ಅವರು ಸವಣೂರು ಮಾ.28ರಂದು ನಡೆದ

ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ Read More »

ಕರಾವಳಿ

ಬೆಳಂದೂರು ಅಬೀರ ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬೀರ ಅಂಗನವಾಡಿ ಕೇಂದ್ರದಲ್ಲಿ ನೂತನ ಬಾಲವಿಕಾಸ ಸಮಿತಿಯನ್ನು ರಚನೆ ಮಾಡಲಾಯಿತು. ನೂತನ ಬಾಲವಿಕಾಸ ಸಮಿತಿಯ ಅಧ್ಯಕ್ಷರಾಗಿ ವಿಮಲ ಎನ್.ಎಮ್. ರವರು ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ ಪ್ರತಿನಿಧಿಯಾಗಿ ಪಂಚಾಯತ್ ಸದಸ್ಯರಾದ ಜಯಂತ ಅಬೀರ, ಶಾಲಾ ಮುಖ್ಯೋಪಾಧ್ಯಾಯರಾದ ಪುಂಡಲೀಕ ಪೂಜಾರ, ಆಶಾ ಕಾರ್ಯಕರ್ತೆ ಕುಸುಮ, ಅಂಗನವಾಡಿ ವ್ಯಾಪ್ತಿಗೆ ಬರುವ ಪ್ರಾಯಪೂರ್ವ ಬಾಲಕಿ ಮೋಹಿನಿ, ಮಕ್ಕಳ ತಾಯಂದಿರ ಪರವಾಗಿ ಜಯಶ್ರೀ ಮತ್ತು ಸೀತಾ, ಅಂಗನವಾಡಿ ಫಲಾನುಭವಿಯ ತಂದೆ ಗಿರಿಯಪ್ಪ ಮಾದೋಡಿ,

ಬೆಳಂದೂರು ಅಬೀರ ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ರಚನೆ Read More »

ಕರಾವಳಿ

ಬೆಳಂದೂರು ಗ್ರಾಮದ ಬೂತ್ 2ರ ಬಿಜೆಪಿ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಬೆಳಂದೂರು ಗ್ರಾಮದ ಬೂತ್ 2ರ ಬಿಜೆಪಿ  ಸಮಿತಿಯ ಸಭೆಯು ಪ್ರತಿ 10 ದಿನಗಳಿಗೊಮ್ಮೆ ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ನಡೆಯುತ್ತಿದ್ದು ಈ ಬಾರಿಯ ಸಭೆಯು ಬಿಜೆಪಿ ಪಂಚಾಯತ್ ಸಮಿತಿಯ ಮಹಿಳಾ ಮೊರ್ಛದ ಕಾರ್ಯದರ್ಶಿಯಾದ ಚಂಪಾ ಕುಶಾಲಪ್ಪ ಗೌಡರ ಮನೆಯಲ್ಲಿ ಬೂತ್ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ನೀರಜರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿ ಪೇಜ್ ಪ್ರಮುಖರ ನೇಮಕ ಮಾಡಲಾಯಿತು. ಚುನಾವಣಾ ಪೂರ್ವ ಚಟುವಟಿಕೆಯ ಬಗ್ಗೆ ಚರ್ಚೆ ಮಾಡಲಾಯಿತು. ಸಭೆಯಲ್ಲಿ ದಕ್ಷಿಣ

ಬೆಳಂದೂರು ಗ್ರಾಮದ ಬೂತ್ 2ರ ಬಿಜೆಪಿ ಸಮಿತಿ ಸಭೆ Read More »

ಕರಾವಳಿ

ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಲ್ಲಿ 2 ಲಕ್ಷ ಮಂಜೂರು

(ನ್ಯೂಸ್ ಕಡಬ) newskadaba.com ಸವಣೂರು, ಮಾ.23. ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಲ್ಲಿ ದಿ.ಶೀನಪ್ಪ ಗೌಡ ಗಾಳಿಬೆಟ್ಟು ಇವರ ಪತ್ನಿಗೆ 2 ಲಕ್ಷ ಮೊತ್ತದ ಚೆಕ್ ನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಜನರಲ್ ಮೆನೇಜರ್ ಎಸ್.ಎಂ. ಗೋರ್ಬಲ್ ಅವರು ಕಾಣಿಯೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಂ. ಗೋರ್ಬಲ್ ಬ್ಯಾಂಕಿನ ಪ್ರತಿಯೊಬ್ಬ ಗ್ರಾಹಕರು ವರ್ಷಕ್ಕೆ ರೂ.330 ಮತ್ತು ರೂ.12 ರ ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಪ್ರಾದೇಶಿಕ ಪ್ರಬಂಧಕರಾದ

ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಲ್ಲಿ 2 ಲಕ್ಷ ಮಂಜೂರು Read More »

ಕರಾವಳಿ
Scroll to Top