ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ ಪ್ರತಿಭಟನೆ
ಸವಣೂರು: ರಾಜ್ಯ ಸರಕಾರ ಸಾಲಮನ್ನಾ ಮಾಡಿ ರೈತರನ್ನು ಸಾಲಮುಕ್ತರನ್ನಾಗಿಸುವ ಪ್ರಕ್ರಿಯೆಯಲ್ಲಿರುವಾಗ ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮರುಪಾವತಿಸಲು ಅಡಕೆ ಬೆಳೆಗಾರರಿಗೆ ಲೀಗಲ್ ನೊಟೀಸ್ ಕಳುಹಿಸಲಾಗುತ್ತಿದ್ದು ಇದನ್ನು ಖಂಡಿಸಿ ಅ.1ರಂದು ಸವಣೂರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೊಟೀಸ್ ಮೂಲಕ ರೈತರನ್ನು ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ.ಎಚ್ಚರಿಕೆ ನೀಡುವ ಸಲುವಾಗಿ ಸವಣೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ ಪ್ರತಿಭಟನೆ Read More »
ಕರಾವಳಿ, ಕರ್ನಾಟಕ
