ಕಪ್ಪು ಹಣ ವಿರುದ್ಧ ಮೋದಿ ಸರ್ಕಾರದಿಂದ ಮತ್ತೊಂದು ಅಸ್ತ್ರ.! ► ರೂ 50 ಸಾವಿರಗಿಂತ ಹೆಚ್ಚಿನ ವಹಿವಾಟಿಗೆ ಅಸಲಿ ದಾಖಲೆಗಳು ಕಡ್ಡಾಯ..!!!
(ನ್ಯೂಸ್ ಕಡಬ) newskadaba.com ನವದೆಹಲಿ, ಅ.23. ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳುವವರ ವಿರುದ್ಧ ಪ್ರಧಾನಿ ಮೋದಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಬ್ಯಾಂಕ್ ವ್ಯವಹಾರದ ವೇಳೆ 50 ಸಾವಿರ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸುವವರು ಇನ್ನು ಕಡ್ಡಾಯವಾಗಿ ಅಸಲಿ ದಾಖಲೆಗಳನ್ನು ತೋರಿಸುವುದು ಕಡ್ಡಾಯ ಎಂಬ ನಿಯಮವನ್ನು ಅಕ್ರಮ ನಗದು ಚಲಾವಣೆ ತಡೆ ಕಾಯ್ದೆ ನಿಯಮ 9ರ (ಪಿಎಂಎಲ್‍ಎ) ಅಡಿಯಲ್ಲಿ ಜಾರಿಗೆ ತರಲಾಗಿದೆ. ಬ್ಯಾಂಕ್ ಸಿಬ್ಬಂದಿ ದಾಖಲೆಗಳಲ್ಲಿನ ಮಾಹಿತಿಯನ್ನು ನಮೂದಿಸಿಕೊಳ್ಳಬೇಕಿದೆ. ಅಲ್ಲದೇ ಈ ಅಗತ್ಯ ಬಿದ್ದಲ್ಲಿ ಈ ಮಾಹಿತಿಯನ್ನು […]

