newskadaba

‘ಬೆಳಕಿನ ಹಬ್ಬ ದೀಪಾವಳಿ ವೇಳೆ ಆಹಾರದ ಸಾಂಸ್ಕೃತಿಕ ಮಹತ್ವ’ ✍️ ಡಾ.ಅಜಿತ್ ಕೆ ಕೋಡಿಂಬಾಳ

(ನ್ಯೂಸ್ ಕಡಬ) newskadaba.com ಅ. 31. ದೀಪಾವಳಿ, ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಸಿದ್ಧವಾದ ಹಬ್ಬಗಳಲ್ಲಿ ಒಂದಾಗಿದೆ. ಇದು “ಎಲೆಕುಂಬು” ಎಂದು ಕರೆಯುವ ಹಬ್ಬವಾಗಿದ್ದು, ಕತ್ತಲೆಯಿಂದ ಬೆಳಕಿಗೆ ಹೋಗುವ ಸಂಕೇತವನ್ನು ಹೊಂದಿದೆ. ದೀಪಾವಳಿಯ ಸಂದರ್ಭದಲ್ಲಿ ಆಹಾರವು ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ, ಇದು ಕೇವಲ ಉಲ್ಲಾಸಕ್ಕಾಗಿ ಮಾತ್ರವಲ್ಲ, ಸಹಜವಾಗಿ ಆಳವಾದ ಸಾಂಸ್ಕೃತಿಕ ಮತ್ತು ವೈದಿಕ ಅರ್ಥವನ್ನು ಒಳಗೊಂಡಿದೆ. 1. ಆಹಾರ ಮತ್ತು ಧಾರ್ಮಿಕ ತತ್ವಗಳು ದೀಪಾವಳಿ ಸಂದರ್ಭದಲ್ಲಿ ತಯಾರಾದ ಆಹಾರವು ದೇವತೆಗಳಿಗೆ ಅರ್ಪಣೆಯಾಗುತ್ತದೆ. ಪುರಾಣಗಳ ಪ್ರಕಾರ, ಈ ಹಬ್ಬದಲ್ಲಿ […]

‘ಬೆಳಕಿನ ಹಬ್ಬ ದೀಪಾವಳಿ ವೇಳೆ ಆಹಾರದ ಸಾಂಸ್ಕೃತಿಕ ಮಹತ್ವ’ ✍️ ಡಾ.ಅಜಿತ್ ಕೆ ಕೋಡಿಂಬಾಳ Read More »

ವಿಶೇಷ ಲೇಖನಗಳು

ರಾಜ್ಯಮಟ್ಟದ ಅಥ್ಲೆಟಿಕ್ಸ್‍ ನಲ್ಲಿ ಶಕ್ತಿ ವಿದ್ಯಾರ್ಥಿಗಳಿಗೆ ಪದಕಗಳು..!

(ನ್ಯೂಸ್ ಕಡಬ) newskadaba.com ಅ. 31. ವಿದ್ಯಾಭಾರತಿ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವು ಬೀದರ್ ನಲ್ಲಿ ಆಗಸ್ಟ್ 31ರಿಂದ ಅಕ್ಟೋಬರ್ 2ರವರೆಗೆ ನಡೆಯಿತು. ಈ ಕ್ರೀಡಾಕೂಟದಲ್ಲಿ ಶಕ್ತಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ರಿತಿಕ್ ಶೆಟ್ಟಿ ದ್ವಿತೀಯ ವಿಜ್ಞಾನ ವಿಭಾಗ ಎತ್ತರ ಜಿಗಿತದಲ್ಲಿ ಕಂಚಿನ ಪದಕ ಹಾಗೂ ಶಕ್ತಿ ವಸತಿ ಶಾಲೆಯ ದಿಶಾಂಕ್ 9ನೇ ತರಗತಿ ಉದ್ದಜಿಗಿತದಲ್ಲಿ ಕಂಚಿನಪದಕವನ್ನು ಪಡೆದಿರುತ್ತಾರೆ. ವಿಜೇತರನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೈಕ್, ಕಾರ್ಯದರ್ಶಿ ಶ್ರೀ ಸಂಜಿತ್ ನಾೈಕ್. ಪ್ರಧಾನ ಸಲಹೆಗಾರರಾದ ಶ್ರೀ

ರಾಜ್ಯಮಟ್ಟದ ಅಥ್ಲೆಟಿಕ್ಸ್‍ ನಲ್ಲಿ ಶಕ್ತಿ ವಿದ್ಯಾರ್ಥಿಗಳಿಗೆ ಪದಕಗಳು..! Read More »

ಕರಾವಳಿ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ) newskadaba.com ಅ. 31. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನವೆಂಬರ್ 2ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಶನಿವಾರ ಬೆಳಗ್ಗೆ 10.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಮಧ್ಯಾಹ್ನ 12 ಗಂಟೆಗೆ ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ಅವರ ಕಾರ್ಯಕ್ರಮದಲ್ಲಿ ಭಾಗಿ, ಮಧ್ಯಾಹ್ನ 2 ಗಂಟೆಗೆ ಪುತ್ತೂರಿನಿಂದ ನಿರ್ಗಮನ, ಸಂಜೆ 4ಗಂಟೆಗೆ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವರು. ರಾತ್ರಿ 8.40 ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ವಿಮಾನ ಮೂಲಕ ತೆರಳಲಿದ್ದಾರೆ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ Read More »

ಕರಾವಳಿ, ಕರ್ನಾಟಕ

ನವೆಂಬರ್ 05ರಂದು RTA ಸಭೆ

(ನ್ಯೂಸ್ ಕಡಬ) newskadaba.com ಅ. 31. ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 5ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೆಂಬರ್ 05ರಂದು RTA ಸಭೆ Read More »

ಕರಾವಳಿ

ರಬ್ಬರ್ ಮಂಡಳಿಯಲ್ಲಿ ವಿವಿಧ ಹುದ್ದೆಗಳು- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಅ. 31. ರಬ್ಬರ್ ಮಂಡಳಿ ರಬ್ಬರ್ ಉತ್ಪಾದನಾ ಇಲಾಖೆಯ ವಿಸ್ತರಣಾ ಸೇವೆಗಳಲ್ಲಿ ತಾಂತ್ರಿಕ ಮಾನವ ಸಂಪನ್ಮೂಲವನ್ನು ಯುವ ವೃತ್ತಿಪರರಾಗಿ ತೊಡಗಿಸಿಕೊಳ್ಳಲು ಯುವ ವೃತ್ತಿಪರರಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ರಬ್ಬರ್ ಉತ್ಪಾದನಾ ಇಲಾಖೆಯಲ್ಲಿನ ವಿಸ್ತರಣಾ ಸೇವೆಗಳು, ಸಾಂಪ್ರದಾಯಿಕವಲ್ಲದ ಪ್ರದೇಶದಲ್ಲಿ (ಕೇರಳ ಮತ್ತು ತಮಿಳುನಾಡು ಹೊರತುಪಡಿಸಿ) ಮತ್ತು ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿರುತ್ತದೆ. ನೇಮಕಾತಿಯ ಸ್ವರೂಪ ತಾತ್ಕಾಲಿಕವಾಗಿದ್ದು, ತಿಂಗಳಿಗೆ ರೂ 40,000 ಗಳ ವೇತನವಾಗಿರುತ್ತದೆ. ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿ ಲಭ್ಯವಿರುವ ಹುದ್ದೆಗಳ

ರಬ್ಬರ್ ಮಂಡಳಿಯಲ್ಲಿ ವಿವಿಧ ಹುದ್ದೆಗಳು- ಅರ್ಜಿ ಆಹ್ವಾನ Read More »

ಉದ್ಯೋಗ, ಕರ್ನಾಟಕ

ಪ್ರೌಢಶಾಲಾ ಶಿಕ್ಷಕರಿಗೆ ಜೀವಶಾಸ್ತ್ರ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಅ. 31. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಜೀವಶಾಸ್ತ್ರದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಪ್ರಾತ್ಯಕ್ಷಿಕೆ ಹಾಗೂ ಪ್ರಯೋಗಗಳೊಂದಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಆಳ್ವಾಸ್ ಕಾಲೇಜಿನ ಆಕಾಡೆಮಿಕ್ ಡೀನ್ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ| ರಾಮ ಭಟ್ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಕೃತಿಯ ಹಾಗೂ ಪರಿಸರದ ಜೀವರಾಶಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಹಾಗೂ ಸುಲಭ ಪ್ರಯೋಗಗಳಿಂದ ಜೈವಿಕ ತಂತ್ರಜ್ಞಾನದ ಲಾಭ ಹಾಗೂ ಉಪಯೋಗಗಳ

ಪ್ರೌಢಶಾಲಾ ಶಿಕ್ಷಕರಿಗೆ ಜೀವಶಾಸ್ತ್ರ ಕಾರ್ಯಾಗಾರ Read More »

ಕರಾವಳಿ

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

(ನ್ಯೂಸ್ ಕಡಬ) newskadaba.com ಅ. 31. ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025ರ ವೇಳಾಪಟ್ಟಿ ಹೊರಡಿಸಿದ್ದು, ಅಕ್ಟೋಬರ್ 29ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಅಕ್ಟೋಬರ್ 29 ರಿಂದ ನವೆಂಬರ್ 28ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ನವೆಂಬರ್ 9, 10 ಹಾಗೂ 23, 24ರಂದು ವಿಶೇಷ ನೋಂದಣಿ ಅಭಿಯಾನ ಆಯಾ ಮತಗಟ್ಟೆಗಳಲ್ಲಿ ನಡೆಯಲಿದೆ. ಡಿಸೆಂಬರ್ 24ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದ್ದು, ಜನವರಿ 6ರಂದು ಅಂತಿಮ ಮತದಾರರ

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ Read More »

ಕರಾವಳಿ, ಕರ್ನಾಟಕ

ವಿಶ್ವದಾಖಲೆ ಬರೆದ ಅಯೋಧ್ಯೆ ದೀಪೋತ್ಸವ; 25 ಲಕ್ಷಕ್ಕೂ ಅಧಿಕ ಬೆಳಗಿದ ದೀಪಗಳು..!

(ನ್ಯೂಸ್ ಕಡಬ) newskadaba.com ಅ. 31. ಅಯೋಧ್ಯೆಯ ರಾಮಮಂದಿರದಲ್ಲಿ ಮಹಾಮಸ್ತಕಾಭಿಷೇಕದ ನಂತರ ಪ್ರಥಮ ಬಾರಿಗೆ ರಾಮನಗರಿಯಲ್ಲಿ ದೀಪೋತ್ಸವವನ್ನು ಆಯೋಜಿಸಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ಕೇಶವ್ ಪ್ರಸಾದ್ ಮೌರ್ಯ ಅವರು ಶ್ರೀರಾಮನನ್ನು ಸೀತಾ, ಲಕ್ಷ್ಮಣ, ಹನುಮಾನ್ ಮತ್ತು ಇತರರೊಂದಿಗೆ ‘ಪುಷ್ಪಕ ವಿಮಾನ’ (ಹೆಲಿಕಾಪ್ಟರ್) ದಲ್ಲಿ ಅಯೋಧ್ಯೆಗೆ ಆಗಮಿಸಿದಾಗ ಸ್ವಾಗತಿಸಿದರು. ಮುಖ್ಯಮಂತ್ರಿ ಮತ್ತು ಇತರರು ರಾಮ ದರ್ಬಾರ್ ಸ್ಥಳಕ್ಕೆ ಶ್ರೀರಾಮನ ರಥವನ್ನು ಎಳೆದರು. ಆದಿತ್ಯನಾಥ್ ಅವರು ಆರತಿ ನೆರವೇರಿಸಿದರು. ಛೋಟಿ ದೀಪಾವಳಿಯ

ವಿಶ್ವದಾಖಲೆ ಬರೆದ ಅಯೋಧ್ಯೆ ದೀಪೋತ್ಸವ; 25 ಲಕ್ಷಕ್ಕೂ ಅಧಿಕ ಬೆಳಗಿದ ದೀಪಗಳು..! Read More »

ರಾಷ್ಟ್ರೀಯ ನ್ಯೂಸ್

ಮೀನುಗಾರರ ನಡುವೆ ಗಲಾಟೆ ಮೀನುಗಾರರನ್ನು ಕೊಂದು ಬೋಟ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು..!

(ನ್ಯೂಸ್ ಕಡಬ) newskadaba.com ಅ. 31. ಎರಡು ತಂಡದ ಮೀನುಗಾರರ ನಡುವೆ ವಾಗ್ವಾದ ನಡೆದು ಸಿಟ್ಟಿಗೆದ್ದ ಒಂದು ಬೋಟಿನ ಮೀನುಗಾರರು ಇನ್ನೊಂದು ಬೋಟಿನ ಮೀನುಗಾರರನ್ನು ಕೊಂದು ಆ ಬೋಟಿಗೆ ಬೆಂಕಿ ಹಚ್ಚಿರುವಂತಹ ಅಘಾತಕಾರಿ ಘಟನೆ ಮಹಾರಾಷ್ಟ್ರದ ಸಿಂಧುದುರ್ಗದ ದೇವಗಢದ ಕುಂಕೇಶ್ವರ ಬಳಿಯ ಸಮುದ್ರದಲ್ಲಿ ನಡೆದಿದೆ. ಮೀನುಗಾರರ ನಡುವೆ ವಾಗ್ವಾದ ನಡೆದ ಬಳಿಕ ಕೊಲೆ ನಡೆದಿದೆ ಎನ್ನಲಾಗಿದೆ. ಮೃತರನ್ನು ತಾಂಡೇಲ್ ರವೀಂದ್ರ ನಾಟೇಕರ್ ಎಂದು ಗುರುತಿಸಲಾಗಿದೆ. ಹತ್ತಿರದ ದೋಣಿಗಳು ಮೀನುಗಾರನನ್ನು ಉಳಿಸಲು ಪ್ರಯತ್ನಿಸಿದವು. ಆದರೂ ಏನು ಪ್ರಯೋಜನ ಆಗಲಿಲ್ಲ.

ಮೀನುಗಾರರ ನಡುವೆ ಗಲಾಟೆ ಮೀನುಗಾರರನ್ನು ಕೊಂದು ಬೋಟ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಡ್ರೆಸ್ ಕೋಡ್ ಉಲ್ಲಂಘನೆ- ಸ್ಟಾಲಿನ್ ಗೆ ಕೋರ್ಟ್ ನೋಟೀಸ್..!

(ನ್ಯೂಸ್ ಕಡಬ) newskadaba.com ಅ.31. ಡ್ರೆಸ್‌ಕೋಡ್‌ ಉಲ್ಲಂಘಿಸಿದ ಆರೋಪದಡಿ ಮದ್ರಾಸ್‌ ಹೈಕೋರ್ಟ್‌ ರಿಟ್‌ ಅರ್ಜಿ ವಿಚಾರವಾಗಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ಗೆ ನೋಟಿಸ್‌ ಜಾರಿ ಮಾಡಿದೆ. ಉದಯಿಸುತ್ತಿರುವ ಸೂರ್ಯ – ಇದು ಡಿಎಂಕೆ ಚಿಹ್ನೆಯಾಗಿದ್ದು, ಇದನ್ನು ತಮ್ಮ ಟಿ-ಶರ್ಟ್‌ ಧರಿಸಿ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಹೀಗಾಗಿ ರಾಜ್ಯ ಸರಕಾರಿ ನೌಕರರ ವಸ್ತ್ರ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ವಕೀಲ ಟಿ.ಸತ್ಯಕುಮಾರ್‌ ಎಂಬುವವರು ಪಿಐಎಲ್‌ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ಮಾಡಿದ ಕೋರ್ಟ್‌ ಇದೀಗ ನೋಟಿಸ್‌ ಜಾರಿ ಮಾಡಿದೆ.

ಡ್ರೆಸ್ ಕೋಡ್ ಉಲ್ಲಂಘನೆ- ಸ್ಟಾಲಿನ್ ಗೆ ಕೋರ್ಟ್ ನೋಟೀಸ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top