newskadaba

ದಕ್ಷಿಣ ಕನ್ನಡ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ➤ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.28.ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು, ಅದರಲ್ಲೂ ವಿಶೇಷವಾಗಿ ಧರ್ಮಸ್ಥಳ ಹಾಗೂ ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಸಿ ಚರ್ಚಿಸಿದರು. ಧರ್ಮಸ್ಥಳದಲ್ಲಿ ಈ ಬಾರಿ ನೇತ್ರಾವತಿ ನೀರು ಬತ್ತಿ ಹೋಗಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಸೂಚನೆಯಂತೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ಸಮಸ್ಯೆ ಕುರಿತು ಮಾಹಿತಿ ನೀಡಿದರು. […]

ದಕ್ಷಿಣ ಕನ್ನಡ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ➤ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ Read More »

ಕರಾವಳಿ

ಪಣಂಬೂರ್ ಬೀಚ್ ಕಿಕ್ಕಿರಿದ ಪ್ರವಾಸಿಗರು ➤ಒಂದೇ ದಿನ 20 ಸಾವಿರಕ್ಕೂ ಹೆಚ್ಚಿನ ಮಂದಿ..!

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27.ರವಿವಾರ ಪಣಂಬೂರ್‌ ಬೀಚ್‌ಗೆ ಸುಮಾರು 20,000ಕ್ಕೂ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ.ಶಾಲಾ ವಿದ್ಯಾರ್ಥಿಗಳಿಗೆ ಇನ್ನೇನು ರಜೆ ಕೊನೆಗೊಳ್ಳುತ್ತಿದ್ದು, ವಿವಿಧ ಜಿಲ್ಲೆ, ರಾಜ್ಯಗಳಿಂದ ಬೀಚ್‌ಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆ ಬಂದರೂ, ಬೇಸಗೆಯ ಸೆಕೆ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ನಗರದ ಬೀಚ್‌ಗಳಿಗೆ ಆಗಮಿಸುವ ಮಂದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಮಳೆ ಬಾರದ ಕಾರಣಕ್ಕೆ ಸಮುದ್ರ ಕೂಡ ಶಾಂತವಾಗಿದೆ. ಇದರಿಂದಾಗಿ ಹೆಚ್ಚಿನ ಮಂದಿ ಪ್ರವಾಸಿಗರು ನೀರಿನಲ್ಲಿಆಡಲು ಇಷ್ಟಪಡುತ್ತಿದ್ದಾರೆ.

ಪಣಂಬೂರ್ ಬೀಚ್ ಕಿಕ್ಕಿರಿದ ಪ್ರವಾಸಿಗರು ➤ಒಂದೇ ದಿನ 20 ಸಾವಿರಕ್ಕೂ ಹೆಚ್ಚಿನ ಮಂದಿ..! Read More »

ಕರಾವಳಿ

ರಸ್ತೆ ಕಾಮಗಾರಿ ವೇಳೆ ಗುಡ್ಡ ಕುಸಿತ ➤ಮೂವರು ಕಾರ್ಮಿಕರ ದುರ್ಮರಣ

  (ನ್ಯೂಸ್ ಕಡಬ) newskadaba.com ಬೆಳಗಾವಿ, ಮೇ.27. ಸೋಮವಾರ ತಾಲೂಕಿನ ದೇಸೂರು ಬಳಿ  ರಸ್ತೆ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಖಾನಾಪುರ-ಬೆಳಗಾವಿ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕರಾದ ದುರ್ಗೆಶ್ ಕುಮಾರ್(22ವರ್ಷ), ಅರ್ಜುನ್ ಸಿಂಗ್ (21ವರ್ಷ), ಸುಖಾನ್ ಎಂದು ಗುರುತಿಸಲಾಗಿದೆ.ಸುಖಾನ್ ಎಂಬ ಕಾರ್ಮಿಕನನ್ನು ಜೆಸಿಬಿ ಮೂಲಕ ಮಣ್ಣು ಅಗೆದು ಶವವನ್ನು ಹೊರತೆಗೆಯಲಾಯಿತು ಎಂದು ವರದಿ ತಿಳಿಸಿದೆ.

ರಸ್ತೆ ಕಾಮಗಾರಿ ವೇಳೆ ಗುಡ್ಡ ಕುಸಿತ ➤ಮೂವರು ಕಾರ್ಮಿಕರ ದುರ್ಮರಣ Read More »

ರಾಷ್ಟ್ರೀಯ ನ್ಯೂಸ್

ಪಾಶ್ಚಾತ್ಯ ಆಹಾರಗಳಿಗೆ ಮಾರುಹೋಗುತ್ತಿದೆ ಭಾರತ ➤ಮರೆಯಾಗುತ್ತಿದೆ ಭಾರತೀಯ ಆಹಾರ ಪದ್ದತಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.27. ಪಾಶ್ಚಾತ್ಯ ಆಹಾರಗಳಿಗೆ ಮಾರುಹೊಗಿ ಭಾರತೀಯ ಆಹಾರ ಸಂಸ್ಕೃತಿಯನ್ನು ಜನ ಮರೆತಿರುವುದು ವಿಷಾದ‌ನೀಯ.ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಬೆಳ್ತಂಗಡಿ ವತಿಯಿಂದ ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಆವರಣದಲ್ಲಿ ರವಿವಾರ ಸಿರಿಧಾನ್ಯ ಕೆಫೆ ಉದ್ಘಾಟಿಸಿ ಈ ಭಾರತೀಯ ಅಹಾರ ಪದ್ದತಿಯನ್ನು ಉಳಿಸುವ ಸಲುವಾಗಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಮರೆಯಾದ ನಮ್ಮ ಪಾರಂಪರಿಕ ಆಹಾರ ಪದ್ಧತಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಟ್ರಸ್ಟಿ ಶ್ರದ್ಧಾ

ಪಾಶ್ಚಾತ್ಯ ಆಹಾರಗಳಿಗೆ ಮಾರುಹೋಗುತ್ತಿದೆ ಭಾರತ ➤ಮರೆಯಾಗುತ್ತಿದೆ ಭಾರತೀಯ ಆಹಾರ ಪದ್ದತಿ Read More »

ಕರಾವಳಿ

ಬಿಜೆಪಿ ಶಾಸಕಾಂಗ ಪಕ್ಷದ ಸಭೆ

  (ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.27.  ಜೂ.1ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಯಿದೆ.ಈ ಮಧ್ಯೆ, ಲೋಕಸಭಾ ಚುನಾವಣೆ ಫ‌ಲಿತಾಂಶದ ವಿಚಾರದಲ್ಲಿ ಮೈತ್ರಿ ಪಕ್ಷಗಳ ನಿಲುವು ಆಧರಿಸಿ ಮುಂದಿನ ಹೆಜ್ಜೆ ಇಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದರೂ ಕಾಂಗ್ರೆಸ್‌ ಶಾಸಕರು ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿರುವುದು ಕುತೂ ಹಲ ಮೂಡಿಸಿದೆ. ಪ್ರಧಾನಿ ಮೋದಿ ಅವರ ಪ್ರಮಾಣ ವಚನ ಸಮಾರಂಭ ಮುಗಿದ ನಂತರ ರಾಜ್ಯದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದು, ಪ್ರಸಕ್ತ ವಿದ್ಯಮಾನಗಳ ಬಗ್ಗೆ

ಬಿಜೆಪಿ ಶಾಸಕಾಂಗ ಪಕ್ಷದ ಸಭೆ Read More »

ರಾಷ್ಟ್ರೀಯ ನ್ಯೂಸ್

ಪ್ರಾಕೃತಿಕ ವಿಕೋಪ ನೋಡಲ್ ಅಧಿಕಾರಿಗಳ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27.ಪ್ರಾಕೃತಿಕ ವಿಕೋಪ ವೇಳೆ ತುರ್ತು ಪರಿಸ್ಥಿತಿಯ ನಿಭಾಯಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಅವರು ಆದೇಶ ಹೊರಡಿಸಿದ್ದಾರೆ.ರಾಜ್ಯದಲ್ಲಿ ಮುಂಗಾರು ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಲವು ಮುಂಜಾಗರೂಕತಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಈ ಹಿಂದಿನ ವರ್ಷಗಳಲ್ಲಿ ಸಂಭವಿಸಿದ ಅನಾಹುತಗಳನ್ನು ಗಮನದಲ್ಲಿರಿಸಿ ಪ್ರತೀ ಪ್ರದೇಶಗಳನ್ನು ಗುರುತಿಸಲಾಗಿದೆ. ಪ್ರತೀ ತಾಲೂಕಿಗೆ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ತಾಲೂಕು ಗಳಲ್ಲಿ ಗುರುತಿಸಲಾದ ಪ್ರದೇಶಗಳ

ಪ್ರಾಕೃತಿಕ ವಿಕೋಪ ನೋಡಲ್ ಅಧಿಕಾರಿಗಳ ನೇಮಕ Read More »

ಕರಾವಳಿ

ದ.ಕ ಜಿಲ್ಲಾ ಪೊಲೀಸ್ ಘಟಕದ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿರುವ ಹಳೆಯ ಮತ್ತು ನಿರುಪಯುಕ್ತ ಸಾಮಾಗ್ರಿಗಳಬಹಿರಂಗ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27.  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿರುವ ವೈರ್‍ಲೆಸ್ ಗೆ ಸಂಬಂಧಿಸಿದ ಹಳೆಯ ಮತ್ತು ನಿರುಪಯುಕ್ತ ಸಾಮಾಗ್ರಿಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಜೂನ್ 10 ರಂದು ಪೂರ್ವಾಹ್ನ 11 ಗಂಟೆಗೆ ಹರಾಜು ಏರ್ಪಡಿಸಲಾಗಿದೆ. ಆಸಕ್ತ ಬಿಡ್‍ದಾರರು ಹರಾಜಿಗೆ ಒಂದು ಗಂಟೆಗೆ ಮುಂಚಿತವಾಗಿ ಇ.ಎಂ.ಡಿ ಮೊತ್ತ ರೂ 3000/ ದೊಂದಿಗೆ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್

ದ.ಕ ಜಿಲ್ಲಾ ಪೊಲೀಸ್ ಘಟಕದ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿರುವ ಹಳೆಯ ಮತ್ತು ನಿರುಪಯುಕ್ತ ಸಾಮಾಗ್ರಿಗಳಬಹಿರಂಗ ಹರಾಜು Read More »

ಕರಾವಳಿ

ವಿಶ್ವ ರಕ್ತದಾನಿಗಳ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27. ರಕ್ತದಾನ ಅತ್ಯಂತ ಪವಿತ್ರವಾದ ದಾನ. ಇದು ಸಾವಿರಾರು ಜನರ ಪ್ರಾಣವನ್ನು ನಿತ್ಯವೂ ಉಳಿಸುತ್ತಿದೆ. ಜಿಲ್ಲೆಯಲ್ಲಿ ಸಹಸ್ರಾರು ಯುವಕ ಯುವತಿಯರು ಪ್ರತಿನಿತ್ಯ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ರೋಗಿಗಳ ಜೀವಕ್ಕೆ ಆಶಾಕಿರಣವಾಗಿರುತ್ತಾರೆ. ಅಂತಹ ರಕ್ತದಾನಿಗಳ ಸ್ವಯಂಪ್ರೇರಿತ ಸೇವೆಯನ್ನು ಸ್ಮರಿಸುವ ದಿನ ವಿಶ್ವ ರಕ್ತದಾನಿಗಳ ದಿನ ಜೂನ್ 14 ರಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ಪುರಭವನದಲ್ಲಿ ಆಚರಿಸಿ, ರಕ್ತದಾನಿಗಳನ್ನು ಗೌರವಿಸಲಾಗುವುದು. 15 ಬಾರಿಗಿಂತ ಮೇಲ್ಪಟ್ಟು ರಕ್ತದಾನ ಮಾಡಿದ ವ್ಯಕ್ತಿಗಳು ದಾಖಲೆಗಳೊಂದಿಗೆ ಮಾಹಿತಿ

ವಿಶ್ವ ರಕ್ತದಾನಿಗಳ ದಿನಾಚರಣೆ Read More »

ಕರಾವಳಿ

ಬಾಹ್ಯಾಕಾಶ ಅನ್ವೇಷಣೆ -ಚಲನಚಿತ್ರ ಪ್ರದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27.ಪಿಲಿಕುಳದ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಬಾಹ್ಯಾಕಾಶಯಾನದ ಉದಯ (Dawn of the Space Age) ಎಂಬ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಹೊಸ 3ಡಿ ಚಲನಚಿತ್ರವನ್ನು ಮೇ 26 ರಿಂದ ಪ್ರದರ್ಶಿಸಲಾಗುವುದು. ಈ ಪ್ರದರ್ಶನವು ಚಂದ್ರನತ್ತ ಉಡಾವಣೆಗೊಂಡ ಪ್ರಥಮ ಬಾಹ್ಯಾಕಾಶ ಕೃತಕ ಉಪಗ್ರಹ ಸ್ಪುಟ್ನಿಕ್‍ನಿಂದ ಹಿಡಿದು ಇತ್ತೀಚಿನವರೆಗೆ ಮಾನವ ನಡೆಸಿದ ಬಾಹ್ಯಾಕಾಶ ಅನ್ವೇಷಣೆ ಕುರಿತ 4ಕೆ 3ಡಿ ಪ್ರದರ್ಶನ. ವಾರದ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ದಿನಗಳಲ್ಲಿ ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ

ಬಾಹ್ಯಾಕಾಶ ಅನ್ವೇಷಣೆ -ಚಲನಚಿತ್ರ ಪ್ರದರ್ಶನ Read More »

ಕರಾವಳಿ

ಇಂಡಿಯಾ ಓಪನ್ ಬಾಕ್ಸಿಂಗ್ ➤ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ತಂದಿತ್ತರು 12 ಬಂಗಾರದ ಪದಕ

(ನ್ಯೂಸ್ ಕಡಬ) newskadaba.com ನವದೆಹಲಿ,25.ಶುಕ್ರವಾರ ಮುಗಿದ ದ್ವಿತೀಯ “ಇಂಡಿಯನ್‌ ಓಪನ್‌ ಬಾಕ್ಸಿಂಗ್‌’ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕೂಟದ ಒಟ್ಟು 18 ಬಂಗಾರದ ಪದಕಗಳಲ್ಲಿ 12 ಪದಕ ಭಾರತದ ಪಾಲಾಯಿತು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಇಮ್ಮಡಿ ಸಾಧನೆಯಾಗಿದೆ. 2018ರಲ್ಲಿ ಭಾರತ 6 ಚಿನ್ನ ಗೆದ್ದಿತ್ತು.ಮೇರಿ ಕೋಮ್‌, ಎಲ್‌. ಸರಿತಾದೇವಿ, ಅಮಿತ್‌ ಪಂಘಲ್‌, ಶಿವ ಥಾಪ ಬಂಗಾರದ ಪದಕ ತಂದಿತ್ತ ಸಾಧಕರು. ಇದೇ ಮೊದಲ ಸಲ 60 ಕೆಜಿ ಸ್ಪರ್ಧೆಗಿಳಿದ ಅವರು ಸಿಮ್ರನ್‌ಜಿತ್‌ ಕೌರ್‌ ವಿರುದ್ಧ 3-2 ಅಂತರದ ಜಯ ಸಾಧಿಸಿದರು.

ಇಂಡಿಯಾ ಓಪನ್ ಬಾಕ್ಸಿಂಗ್ ➤ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ತಂದಿತ್ತರು 12 ಬಂಗಾರದ ಪದಕ Read More »

ಕ್ರೀಡಾ ನ್ಯೂಸ್
Scroll to Top