newskadaba

ಕಡ್ಯ ಕೊಣಾಜೆ ಗ್ರಾ.ಪಂ. ವಿಶೇಷ ಗ್ರಾಮಸಭೆ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.15  ಕಡ್ಯ ಕೊಣಾಜೆ ಗ್ರಾ.ಪಂ.ನಲ್ಲಿ 2020-21ನೇ ಸಾಲಿನ ನಮ್ಮ ಗ್ರಾಮ ನಮ್ಮ ಯೋಜನೆಯ ವಿಶೇಷ ಗ್ರಾಮ ಸಭೆ ಬುಧವಾರ ಕಡ್ಯ ಕೊಣಾಜೆ ಶ್ರೀ ದುರ್ಗಾಂಬಿಕಾ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಬೇಬಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯಶೋಧರ ಗೌಡ ಮಾತನಾಡಿ, ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳ ಸದುಪಯೋಗಗಳನ್ನು ಗ್ರಾಮಸ್ಥರು ಪಡೆದು ಅಭಿವೃದ್ಧಿಗೆ ಕೈಜೋಡಿಸಿ ಎಂದರು. ಗ್ರಾ.ಪಂ. ಸದಸ್ಯರಾದ ಪುಷ್ಪಾ ಕುಮಾರಿ, ಚಂದ್ರಾವತಿ, ಪೊಡಿಯಾ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಜನೆಯ ಕುರಿತಾಗಿ […]

ಕಡ್ಯ ಕೊಣಾಜೆ ಗ್ರಾ.ಪಂ. ವಿಶೇಷ ಗ್ರಾಮಸಭೆ Read More »

ಕರಾವಳಿ

ನ.18ರಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಕುರಿತ ಎರಡು ಕೃತಿಗಳ ಬಿಡುಗಡೆ

 (ನ್ಯೂಸ್ ಕಡಬ) newskadaba.com ಮಂಗಳೂರು, ನ.15  ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ, ಹಿಂದೂಸ್ತಾನ್ ಪತ್ರಿಕೆಯ ಸಂಪಾದಕಿಯಾಗಿದ್ದ ಮೃಣಾಲ್ ಪಾಂಡೆ ಅವರ ಕುರಿತಾದ ಎರಡು ಕೃತಿಗಳ ಬಿಡುಗಡೆ ಸಮಾರಂಭ ನವೆಂಬರ್ 18ರಂದು ಸಂಜೆ 4ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಹಿಂದಿ ಶಿಕ್ಷಕಿ ಡಾ.ಯಶೋಧಾ ಕರನಿಂಗ ಅವರು ಬರೆದಿರುವ ಕೃತಿಗಳನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಬಿಡುಗಡೆ ಮಾಡಿ, ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ (ಎನ್ ಎಸ್ ಸಿಡಿಎಫ್)ವತಿಯಿಂದ ನಡೆಯುವ ಮೂರು ದಿನಗಳ ಸಂಸ್ಖೃತಿ

ನ.18ರಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಕುರಿತ ಎರಡು ಕೃತಿಗಳ ಬಿಡುಗಡೆ Read More »

ಕರಾವಳಿ

ನೂಜಿಬಾಳ್ತಿಲದಲ್ಲಿ ಪಿಂಗಾರ ಕಲಾ ಸಂಘದ ಕಲಾವಿಧರಿಂದ ಬೀದಿ ನಾಟಕ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.15  ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದ.ಕ. ಜಿಲ್ಲಾ ಪಂಚಾಯತ್ ಇದರ ಸಹಯೋಗದಲ್ಲಿ ಪಿಂಗಾರ ಕಲಾ ಸಂಘ ಕೈಕಂಬ ಮಂಗಳೂರು ಕಲಾವಿಧರಿಂದ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಬೀದಿ ನಾಟಕ ಬುಧವಾರದಂದು ನಡೆಯಿತು. ಕಾರ್ಯಕ್ರಮವನ್ನು ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು. ಪಿಂಗಾರ ಕಲಾವಿಧರು ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯ ಕುರಿತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಟನೆ, ಪ್ರದರ್ಶನದ ಮೂಲಕ

ನೂಜಿಬಾಳ್ತಿಲದಲ್ಲಿ ಪಿಂಗಾರ ಕಲಾ ಸಂಘದ ಕಲಾವಿಧರಿಂದ ಬೀದಿ ನಾಟಕ Read More »

ಕರಾವಳಿ

ವೇಗದ ನಡಿಗೆಯಲ್ಲಿ ನೂಜಿಬಾಳ್ತಿಲದ ಸ್ವಪ್ನ ರಾಷ್ಟ್ರಮಟ್ಟಕ್ಕೆ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.14  ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಇದರ ಆಶ್ರಯದಲ್ಲಿ ಮಂಡ್ಯದ ನೆಲಮಂಗಲದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ಅಥ್ಲೆಟಿಕ್ ಕ್ರೀಡಾಕೂಟದ 3 ಕಿ.ಮೀ. ವೇಗದ ನಡಿಗೆಯಲ್ಲಿ ನೂಜಿಬಾಳ್ತಿಲ ಬೆಥನಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸ್ವಪ್ನ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ನೂಜಿಬಾಳ್ತಿಲ ಗ್ರಾಮದ ಕುರಿಯಾಳಕೊಪ್ಪ ದಿ. ನಾರಾಯಣ ಹಾಗೂ ಪುಷ್ಪಾ ದಂಪತಿಗಳ ಪುತ್ರಿ. ಇವರಿಗೆ ಸಂಸ್ಥೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್

ವೇಗದ ನಡಿಗೆಯಲ್ಲಿ ನೂಜಿಬಾಳ್ತಿಲದ ಸ್ವಪ್ನ ರಾಷ್ಟ್ರಮಟ್ಟಕ್ಕೆ Read More »

ಕರಾವಳಿ

ಸರಸ್ವತೀ ವಿದ್ಯಾಲಯದಲ್ಲಿ ಪ್ರೌಢ ಮತ್ತು ಪದವಿಪೂರ್ವ ವಿಭಾಗದ ವತಿಯಿಂದ ನೇಜಿ ಕಟಾವು ಕಾರ್ಯ

(ನ್ಯೂಸ್ ಕಡಬ) newskadaba.com ನ.13  ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅನ್ನದ ಬೆಲೆಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸರಸ್ವತೀ ವಿದ್ಯಾಲಯದ ಪ್ರೌಢ ಹಾಗೂ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳೇ ನೇಜಿ ನಾಟಿ ಬೆಳೆದ ಪೈರನ್ನು ಕಟಾವು ಮಾಡಿದರು. ಸಂಸ್ಥೆಯ ಸಂಚಾಲಕ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ಭತ್ತ ಕಟಾವು ಕಾರ್ಯಕ್ಕೆ ಚಾಲನೆ ನೀಡಿ ಕೃಷಿಕರೇ ದೇಶದ ಬೆನ್ನೆಲುಬು, ಕೃಷಿ ಕಾರ್ಯದಲ್ಲಿ ತೊಡಗಿರುವವರಿಗೆ ಯಾವತ್ತು ದುರ್ಭೀಕ್ಷೆ ಇಲ್ಲ ಎಂದರು. ಆಡಳಿತ ಮಂಡಳಿ ನಿರ್ದೇಶಕ ಶಿವ ಪ್ರಸಾದ್ ರೈ ಮೈಲೇರಿ

ಸರಸ್ವತೀ ವಿದ್ಯಾಲಯದಲ್ಲಿ ಪ್ರೌಢ ಮತ್ತು ಪದವಿಪೂರ್ವ ವಿಭಾಗದ ವತಿಯಿಂದ ನೇಜಿ ಕಟಾವು ಕಾರ್ಯ Read More »

ಕರಾವಳಿ

ನೂತನ “ಕಡಬ ತಾಲೂಕು ಪಂಚಾಯತ್” ರಚನೆ ✍?ವಿಜಯ ಕುಮಾರ್ ಕಡಬ

✍?ವಿಜಯ ಕುಮಾರ್ ಕಡಬ (ನ್ಯೂಸ್ ಕಡಬ) newskadaba.com  ಕಡಬ,  ನ.13  ನೂತನ ಕಡಬ ತಾಲೂಕು ಉದ್ಘಾಟನೆಯಾಗಿ ಅನುಷ್ಠಾನ ಪ್ರಕ್ರಿಯೆಗಳು ಪ್ರಾರಂಭವಾಗುತ್ತಿದ್ದಂತೆ ಅದರಲ್ಲಿ ಕಡಬ ಗ್ರಾ.ಪಂ. ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ ಬಳಿಕ ಇದೀಗ ಕಡಬ ತಾಲೂಕು ಪಂಚಾಯತ್ ಅಸ್ತಿತ್ವಕ್ಕೆ ಸರಕಾರದಿಂದ ಅಧಿಕೃತ ಆದೇಶ ನೀಡಿದೆ. ದಿನಾಂಕ: 14-10-2019ರಿಂದ ಜಾರಿಗೆ ಬರುವಂತೆ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಸ್. ಮಹಾಲಕ್ಷ್ಮೀ ಅವರು ಕರ್ನಾಟಕ ರಾಜ್ಯ ಪತ್ರದಲ್ಲಿ ಆದೇಶ ಹೊರಡಿಸಿದ್ದಾರೆ. 13

ನೂತನ “ಕಡಬ ತಾಲೂಕು ಪಂಚಾಯತ್” ರಚನೆ ✍?ವಿಜಯ ಕುಮಾರ್ ಕಡಬ Read More »

ಕರಾವಳಿ

ಜೂಜಾಟ ಆಡುತ್ತಿದ್ದವರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com  ಧರ್ಮಸ್ಥಳ,  ನ.13  ಕೋಳಿ ಅಂಕ ಜೂಜಾಟ ಆಡುತ್ತಿದ್ದವರ ಪೈಕಿ 5 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಶಿಬರಾಜೆ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಅವರ ವಶದಿಂದ ವಿವಿಧ ಜಾತಿಯ ಒಟ್ಟು 8 ಹುಂಜ ಕೋಳಿಗಳನ್ನು ಮತ್ತು ಒಟ್ಟು 730 ರೂಪಾಯಿ ನಗದು ಹಣವನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಆಡುತ್ತಿದ್ದವರು ಪೊಲೀಸರ ವಶಕ್ಕೆ Read More »

ಕರಾವಳಿ

ಮುಖ್ಯಮಂತ್ರಿ ಭಗತ್ ಸಿಂಗ್ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು

 (ನ್ಯೂಸ್ ಕಡಬ) newskadaba.com  ಮುಂಬೈ,  ನ.12  ಮಹಾರಾಷ್ತ್ರ ಮುಖ್ಯಮಂತ್ರಿ ಭಗತ್ ಸಿಂಗ್ ಕೋಶ್ಯಾರಿ ಮಹಾರಾಷ್ಟ್ರದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಸರಕಾರ ರಚಿಸಲು ವಿಫಲವಾದ ಹಿನ್ನಲೆಯಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರದಿ ಕಳುಹಿಸಿದ್ದಾರೆಂದು ವರದಿಯಾಗಿದೆ. ಬಿಜೆಪಿ ಮತ್ತು ಶಿವಸೇನೆ ಸರಕಾರ ರಚಿಸಲು ವಿಫಲವಾದ ಹಿನ್ನಲೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್ ಸಿಪಿಗೆ ಸರಕಾರ ರಚನೆಗೆ ಅವಕಾಶ ನೀಡಲಾಗಿತ್ತು. ಮಂಗಳವಾರ ರಾತ್ರಿ 8.30ರ ಒಳಗೆ ಶಾಸಕರ ಬೆಂಬಲ ಪತ್ರವನ್ನು ನೀಡುವಂತೆ

ಮುಖ್ಯಮಂತ್ರಿ ಭಗತ್ ಸಿಂಗ್ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು Read More »

ರಾಷ್ಟ್ರೀಯ ನ್ಯೂಸ್

ಕುಕ್ಕೆಗೆ ಆಗಮಿಸಿದ ಶಿಕ್ಷಣ ಸಚಿವರು

 (ನ್ಯೂಸ್ ಕಡಬ) newskadaba.com  ಸುಬ್ರಹ್ಮಣ್ಯ,  ನ.12  ಜನ್ಮ ದಿನ ಆಚರಣೆಯ ಸಲುವಾಗಿ ಪತ್ನಿ ಸಾವಿತ್ರಿಯೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೋಮವಾರದಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ರಾಜೇಶ್ ಅವರು ಸಚಿವರನ್ನು ಶಾಲು ಹೊದೆಸಿ ಪ್ರಸಾದ ನೀಡಿ ಹರಸಿದರು. ಸಚಿವರು ಆರಂಭದಲ್ಲಿ ಆದಿಶೇಷ ವಸತಿಗೃಹದಲ್ಲಿ ತುಸು ಕಾಲ ವಿಶ್ರಾಂತಿ ಪಡೆದು ಬಳಿಕ ದೇವಸ್ಥಾನಕ್ಕೆ ತೆರಳಿದರು. ಗೋಪುರದ ಮುಂದೆ ನೂತನ ಬ್ರಹ್ಮರಥಕ್ಕೆ ನಡೆಯುತ್ತಿರುವ ಬ್ರಹ್ಮರಥದ ವೈದಿಕ ಕಾರ್ಯಕ್ರಮದಲ್ಲಿ ಕೆಲ

ಕುಕ್ಕೆಗೆ ಆಗಮಿಸಿದ ಶಿಕ್ಷಣ ಸಚಿವರು Read More »

ಕರಾವಳಿ

ಪಾದಚಾರಿಗೆ ಅಪಘಾತ

 (ನ್ಯೂಸ್ ಕಡಬ) newskadaba.com  ಬಂಟ್ವಾಳ  ನ.12  ಪಾದಚಾರಿಗೆ ಮೋಟಾರ್ ಸೈಕಲೊಂದು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು ಅರಳ ಗ್ರಾಮದ ಸೊರ್ನಾಡು ಎಂಬಲ್ಲಿ ಸೋಮವಾರದಂದು ನಡೆದಿದೆ. ಶ್ರೀಮತಿ ಸಂತಾನ್ ಬರ್ಬೋಜ್ರವರು ಬಂಟ್ವಾಳಕ್ಕೆ ಬರಲು ವಾಹನಕ್ಕಾಗಿ ಕಾಯುತ್ತಿದ್ದ ಸಮಯ ಮೋಟಾರ್ ಸೈಕಲೊಂದು ರಭಸವಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಎಡಕೈ ಹಾಗೂ ಬೆನ್ನಿಗೆ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಅಪಘಾತ Read More »

ಕರಾವಳಿ
Scroll to Top