newskadaba

ನ. 23ರಂದು ಮುಲ್ಕಿ ತಾಲೂಕು ಘೋಷಣೆ ಸಾಧ್ಯತೆ ➤ ಶಾಸಕ ಉಮಾನಾಥ್ ಕೋಟ್ಯಾನ್

(ನ್ಯೂಸ್ ಕಡಬ) newskadaba.com ಮುಲ್ಕಿ  ನ. 21: ಮುಲ್ಕಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಮುಲ್ಕಿ ತಾಲೂಕು ನ.23 ರಂದು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.   ಈಗಾಗಲೇ ಮುಲ್ಕಿ ತಾಲೂಕು ರಚನೆ ಪ್ರಕ್ರಿಯೆ ಮುಗಿದಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಮುಲ್ಕಿ ತಾಲೂಕು ರಚನೆಗೆ 30 ಗ್ರಾಮಗಳು ಸೇರಲಿದ್ದು, ಜಿಲ್ಲಾಧಿಕಾರಿಗಳು ಅಧಿಕೃತ ಘೋಷಣೆ ಮಾಡಲಿದ್ದಾರೆ. ಬಳಿಕ ಮುಲ್ಕಿಯಲ್ಲಿ ತಾಲೂಕು ಮಟ್ಟದ ಎಲ್ಲಾ ಕಚೇರಿಗಳು ಆರಂಭಗೊಳ್ಳಲಿದೆ ಎಂದಿದ್ದಾರೆ.

ನ. 23ರಂದು ಮುಲ್ಕಿ ತಾಲೂಕು ಘೋಷಣೆ ಸಾಧ್ಯತೆ ➤ ಶಾಸಕ ಉಮಾನಾಥ್ ಕೋಟ್ಯಾನ್ Read More »

ಕರಾವಳಿ

ಕಮಿಲ: ಅಪಾಯಕಾರಿ ಮರಗಳನ್ನು ತೆರವುಗೊಳಿಸಿದ ನಾಗರಿಕರು

(ನ್ಯೂಸ್ ಕಡಬ) newskadaba.com ಕಮಿಲ ನ. 21: ಕಳೆದ ದಿನ ಗುತ್ತಿಗಾರು ಗ್ರಾಮದ ಕಮಿಲದಲ್ಲಿ ವಿದ್ಯುತ್ ಲೈನ್ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳನ್ನು ಮೆಸ್ಕಾಂ ಸಿಬ್ಬಂದಿಗಳ ಸಹಯೋಗದೊಂದಿಗೆ ತೆರವು ಗೊಳಿಸಲಾಯಿತು.     ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಹಾಗೂ ಸ್ಥಳೀಯ ಯುವಕರಾದ ನಿರಂಜನ ಕಾಂತಿಲ, ಪುನೀತ್ ಕಮಿಲ, ಭರತ್ ಕಾಂತಿಲ, ಧರ್ಮಪಾಲ ಕಮಿಲ, ಶಿವಕುಮಾರ್ ಕಮಿಲ, ಚನಿಯ ಕಮಿಲ, ಸುಂದರ ಬರೆಪ್ಪಾಡಿ, ದಿನೇಶ್ ಕಮಿಲ, ಪ್ರದೀಪ್ ಕಮಿಲ, ಶಿವಕುಮಾರ್ ಕಮಿಲ, ರಘುವೀರ್ ಮೊಗ್ರ, ಹರ್ಷಿತ್ ಕಾಂತಿಲ ಹಾಗೂ

ಕಮಿಲ: ಅಪಾಯಕಾರಿ ಮರಗಳನ್ನು ತೆರವುಗೊಳಿಸಿದ ನಾಗರಿಕರು Read More »

ಕರಾವಳಿ

ಪ್ರಧಾನಮಂತ್ರಿ “ವನ್ ಧನ್” ಯೋಜನೆಗೆ ಅನುದಾನ ➤ ಬ್ರ್ಯಾಂಡ್ ಆಗಲಿವೆ ಕಾಡಿನ ಉತ್ಪನ್ನಗಳು

(ನ್ಯೂಸ್ ಕಡಬ) newskadaba.com ಮಂಗಳೂರು ನ. 21: ಪವಿತ್ರ ನಾಗ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯ ಹಾಗೂ ದೇಶದ ವಿವಿಧ ಭಾಗದಿಂದ ಭಕ್ತಾಧಿಗಳು ಬರುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಡುತ್ಪನ್ನಗಳನ್ನು ಇಲ್ಲಿ, ದಕ್ಷಿಣಕನ್ನಡ ಜಿಲ್ಲೆಯ ಬ್ರಾಂಡ್ ಆಗಿ ಪರಿಚಯಿಸುವ ಪ್ರಯತ್ನ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ತಿಳಿಸಿದ್ದಾರೆ.   ಈ ಯೋಜನೆಗೆ ಪ್ರಧಾನಮಂತ್ರಿ ವನ್ ಧನ್ ಯೋಜನೆ ಮೂಲಕ 30 ಲಕ್ಷ ರೂಪಾಯಿಗಳ ಅನುದಾನ ಸಿಗುತ್ತಿದೆ. ಜಿಲ್ಲೆಯ ಎರಡು ಕಡೆಗಳಲ್ಲಿ ಈ

ಪ್ರಧಾನಮಂತ್ರಿ “ವನ್ ಧನ್” ಯೋಜನೆಗೆ ಅನುದಾನ ➤ ಬ್ರ್ಯಾಂಡ್ ಆಗಲಿವೆ ಕಾಡಿನ ಉತ್ಪನ್ನಗಳು Read More »

ಕರಾವಳಿ

ಉಡುಪಿ: ಯುವಕರ ಜೊತೆ ಕ್ರಿಕೆಟ್ ಆಡಿದ ಜಿಲ್ಲಾಧಿಕಾರಿ ಜಿ.ಜಗದೀಶ್

(ನ್ಯೂಸ್ ಕಡಬ) newskadaba.com ಉಡುಪಿ ನ. 20: ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಜನಸ್ನೇಹಿ ಡಿ.ಸಿ. ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಜಿ. ಜಗದೀಶ್ ನಿನ್ನೆ ಸ್ಥಳೀಯ ಯುವಕರ ಜೊತೆ ಕ್ರಿಕೆಟ್ ಆಡುವ ಮೂಲಕ ಯುವಕರನ್ನು ಖುಷಿ ಪಡಿಸಿದ್ದಾರೆ.   ಜಿಲ್ಲಾಸ್ಪತ್ರೆಯ ವೀಕ್ಷಣೆ ಸಂದರ್ಭ ಕೆಲ ಯುವಕರು ಕ್ರಿಕೆಟ್ ಆಡುತ್ತಿದ್ದರು. ಅಲ್ಲಿಗೆ ತೆರಳಿದ ಜಿಲ್ಲಾಧಿಕಾರಿ ಜಗದೀಶ್ ಯುವಕರ ಜೊತೆ ಕ್ರಿಕೆಟ್ ಆಡಿದ್ದಾರೆ. ಬ್ಯಾಟಿಂಗ್ ಮಾಡಿ ಬೌಂಡರಿ ಬಾರಿಸುವ ಮೂಲಕ ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ ಮತ್ತು ಕ್ರಿಕೆಟ್

ಉಡುಪಿ: ಯುವಕರ ಜೊತೆ ಕ್ರಿಕೆಟ್ ಆಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ Read More »

ಕರಾವಳಿ

ಹಾಸನ: ವೇಲ್ ಕಟ್ಟಿ ನಾಲೆಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

(ನ್ಯೂಸ್ ಕಡಬ) newskadaba.com ಹಾಸನ ನ. 20: ಹಾಸನ ಜಿಲ್ಲೆಯ ತಿಪಟೂರು ತಾಲೂಕಿನ ಬೆಳಗರಹಳ್ಳಿಯಲ್ಲಿ ಮದುವೆಗೆ ಹೆತ್ತವರ ವಿರೋಧ ಕಟ್ಟಿಕೊಂಡ ಪರಿಣಾಮ ಹೇಮಾವತಿ ನಾಲೆಗೆ ಜಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟ ಪ್ರೇಮಿಗಳನ್ನು ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದ ಸುಶ್ಮಿತ(18) ಹಾಗೂ ಮತಿಘಟ್ಟ ಗ್ರಾಮದ ರಮೇಶ್(19) ಎಂದು ಗುರುತಿಸಲಾಗಿದೆ.     ನ.16 ರಂದು ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಬಳಿಯ ಹೇಮಾವತಿ ಕಾಲುವೆ ಸುರಂಗದ ಬಳಿ ಬೈಕ್ ಮತ್ತು ಚಪ್ಪಲಿ ಬಿಟ್ಟು ನಾಪತ್ತೆಯಾಗಿದ್ದ ಈ ಯುವ ಪ್ರೇಮಿಗಳ ಮೃತದೇಹ

ಹಾಸನ: ವೇಲ್ ಕಟ್ಟಿ ನಾಲೆಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು : ಸೀಫುಡ್‌ ಪಾರ್ಕ್ ಯೋಜನೆ ಕೈ ಬಿಡದಿದ್ದಲ್ಲಿ ‘ಚಲೋ ಪುತ್ತೂರು ಅಭಿಯಾನ

(ನ್ಯೂಸ್ ಕಡಬ) newskadaba.com ಪುತ್ತೂರು ನ. 20: ಪುತ್ತೂರಿನ ಬನ್ನೂರಿನಲ್ಲಿ ಸೀ ಫುಡ್‌ ಪಾರ್ಕ್ ನಿರ್ಮಿಸಲು ಮುಂದಾಗಿದ್ದು, ಇದಕ್ಕಾಗಿ ಸರಕಾರಿ ಮೆಡಿಕಲ್‌ ಕಾಲೇಜಿಗೆ ಮೀಸಲಿಟ್ಟ ಜಾಗ ಬಳಸಿಕೊಳ್ಳಲು ಮುಂದಾಗಿರುವುದು ತಪ್ಪು. ಸೀ ಫುಡ್‌ ಪಾರ್ಕ್ ಮೂಲಕ ಜನರ ಆರೋಗ್ಯದ ಹಕ್ಕನ್ನು ಕಸಿಯುವ ಯತ್ನ ನಡೆಯುತ್ತಿದೆ. ಸರಕಾರ ಜಮೀನು ಹಸ್ತಾಂತರ ಪ್ರಕ್ರಿಯೆ ಕೈ ಬಿಡದಿದ್ದಲ್ಲಿ ಸಾವಿರಾರು ಜನರನ್ನು ಸೇರಿ ಪುತ್ತೂರು ಚಲೋ ಅಭಿಯಾನ ನಡೆಸಲಾಗುವುದು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಎಚ್ಚರಿಸಿದ್ದಾರೆ.ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮೀಸಲಿರಿಸಿದ ಸ್ಥಳದಲ್ಲಿ

ಪುತ್ತೂರು : ಸೀಫುಡ್‌ ಪಾರ್ಕ್ ಯೋಜನೆ ಕೈ ಬಿಡದಿದ್ದಲ್ಲಿ ‘ಚಲೋ ಪುತ್ತೂರು ಅಭಿಯಾನ Read More »

ಕರಾವಳಿ

ಕಾಲೇಜು ಆರಂಭವಾದ ಬೆನ್ನಲ್ಲೇ ಒಟ್ಟು 70 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು..!

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 20: ರಾಜ್ಯದಲ್ಲಿ ನವೆಂಬರ್ 17 ರಿಂದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕಾಲೇಜುಗಳು ಆರಂಭವಾಗಿವೆ. ಕಾಲೇಜು ಆರಂಭವಾದ ಮೂರೇ ದಿನಗಳಲ್ಲಿ ಸುಮಾರು 70 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ.      ಕಾಲೇಜಿಗೆ ಬರಲು ವಿದ್ಯಾರ್ಥಿಗಳು ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಾಲೇಜು ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ ಮನೆ ಮಾಡಿದ್ದು, ಸಂಪರ್ಕದಲ್ಲಿದ್ದ ಉಳಿದ ವಿದ್ಯಾರ್ಥಿಗಳಿಗೂ ಆತಂಕ ಶುರುವಾಗಿದೆ.  

ಕಾಲೇಜು ಆರಂಭವಾದ ಬೆನ್ನಲ್ಲೇ ಒಟ್ಟು 70 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು..! Read More »

ಕರ್ನಾಟಕ

ಕಡಬ ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಕಡಬ ನ. 20: ಕಡಬ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 5 ಮಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ.     ಕಡಬ ತಾಲೂಕಿನ ಶಿರಾಡಿ ನಿವಾಸಿ 18 ವರ್ಷದ ಯುವಕ, 37 ವರ್ಷದ ಮಹಿಳೆ, ರಾಮಕುಂಜದ 26 ವರ್ಷದ ಯುವಕ, 21 ವರ್ಷದ ಯುವಕ, ಸಿರಿಬಾಗಿಲು ನಿವಾಸಿ 20 ವರ್ಷದ ಯುವತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  

ಕಡಬ ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೋವಿಡ್ ದೃಢ Read More »

ಕರಾವಳಿ

ಉಡುಪಿ : ಮಾನಸಿಕ ಅಸ್ವಸ್ಥನಿಗೆ ಆಶ್ರಯ ನೀಡಿದ ಹೊಸಬೆಳಕು ಆಶ್ರಮ

(ನ್ಯೂಸ್ ಕಡಬ) newskadaba.com ಉಡುಪಿ ನ. 20: ಹಲವು ತಿಂಗಳುಗಳಿಂದ ಮಣಿಪಾಲದಲ್ಲಿ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ, ಅಪರಿಚಿತ ಮಾನಸಿಕ ಅಸ್ವಸ್ಥನನ್ನು ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಕಾರದಿಂದ ರಕ್ಷಿಸಿ, ದೊಡ್ಡಣಗುಡ್ಠೆ ಡಾ.ಎ.ವಿ ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿ ಮಾನವಿಯತೆ ಮೆರೆದಿದ್ದರು ಇದೀಗ ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮಣಿಪಾಲ ಹೊಸಬೆಳಕು ಆಶ್ರಮದಲ್ಲಿ ನೆಲೆ ಕಲ್ಪಿಸಲಾಗಿದೆ. ಈ ಕಾರ್ಯದಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಶ್ರೀಮತಿ

ಉಡುಪಿ : ಮಾನಸಿಕ ಅಸ್ವಸ್ಥನಿಗೆ ಆಶ್ರಯ ನೀಡಿದ ಹೊಸಬೆಳಕು ಆಶ್ರಮ Read More »

ಕರಾವಳಿ

ಸುರತ್ಕಲ್: ಅಸ್ವಸ್ಥ ಪ್ರಯಾಣಿಕನ ಜೀವ ಉಳಿಸಲು ಬಸ್ ನಿರ್ವಾಹಕನ ಹರಸಾಹಸ

(ನ್ಯೂಸ್ ಕಡಬ) newskadaba.com ಮಂಗಳೂರು ನ. 20: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಏಕಾಏಕಿ ಅಸ್ವಸ್ಥಗೊಂಡ ಪ್ರಯಾಣಿಕನ ಜೀವ ಉಳಿಸಲು ಬಸ್ಸಿನ ನಿರ್ವಾಹಕ ಜೀವದ ಹಂಗು ತೊರೆದು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಸುರತ್ಕಲ್ ಸಮೀಪದ ಬಜಪೆ ಕೈಕಂಬ ಮಾರ್ಗವಾಗಿ ಸಂಚರಿಸುವ ಶಾನ್ ಎಂಬ ಸರ್ವಿಸ್ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶದ ವಾರಣಾಸಿ ನಿವಾಸಿ ರಾಜೇಶ್ ಚೌಹಾನ್ (40) ಸುರತ್ಕಲ್ ಸನಿಹದ ಕಾಟಿಪಳ್ಳ ಬಳಿ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಗಣೇಶ್ ಅವರು

ಸುರತ್ಕಲ್: ಅಸ್ವಸ್ಥ ಪ್ರಯಾಣಿಕನ ಜೀವ ಉಳಿಸಲು ಬಸ್ ನಿರ್ವಾಹಕನ ಹರಸಾಹಸ Read More »

ಕರಾವಳಿ
Scroll to Top