newskadaba

ಲಾಕ್​ಡೌನ್​ ಸಡಿಲಿಕೆ ಕುರಿತು ಇನ್ನೆರಡು ದಿನಗಳಲ್ಲಿ ಸಿಎಂ ಚರ್ಚೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.09: ಕೊರೋನಾ ನಿಯಂತ್ರಣಕ್ಕೆ ಜೂ 14ರವರೆಗೆ ಲಾಕ್​ಡೌನ್​ ವಿಸ್ತರಿಸಿ ಈಗಾಗಲೇ ಸಿಎಂ ಆದೇಶ ನೀಡಿದ್ದರು. ಜೂ. 14 ಬಳಿಕ ರಾಜ್ಯದಲ್ಲಿ ನಿರ್ಬಂಧವನ್ನು ಸಡಿಲಗೊಳಿಸಿ, ಹಂತ ಹಂತವಾಗಿ ಅನ್​ಲಾಕ್​ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ.   ಈಗಾಗಲೇ ಮೂರು ಬಾರಿ ಲಾಕ್​ಡೌನ್​ ವಿಸ್ತರಿಸಿರುವ ಮುಖ್ಯಮಂತ್ರಿಗಳು ಜೂ 14 ರಬಳಿಕ ಮತ್ತೊಮ್ಮೆ ಲಾಕ್​ಡೌನ್​ ಹೇರುವ ಸಂಭಾವ್ಯ ಕಡಿಮೆ ಇದೆ. ಇದೇ ಹಿನ್ನಲೆ ಯಾವ ರೀತಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸೋಂಕು ನಿಯಂತ್ರಿಸಬೇಕು ಎಂಬ ಕುರಿತು […]

ಲಾಕ್​ಡೌನ್​ ಸಡಿಲಿಕೆ ಕುರಿತು ಇನ್ನೆರಡು ದಿನಗಳಲ್ಲಿ ಸಿಎಂ ಚರ್ಚೆ Read More »

ಕರ್ನಾಟಕ

ಬೆಲೆ ಏರಿಕೆ ಬಿಸಿಯ ನಡುವೆ ಮತ್ತೊಂದು ಶಾಕ್ ➤ ವಿದ್ಯುತ್​ ದರ ದಿಢೀರ್ ಏರಿಸಿದ ರಾಜ್ಯ ಸರ್ಕಾರ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.09:ಪೆಟ್ರೋಲ್ ಬೆಲೆ ಏರಿಕೆ ದೆಸೆಯಿಂದ ದಿನೋಪಯೋಗಿ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿದ್ದು, ಸಾರ್ವಜನಿಕರು ಪ್ರತಿನಿತ್ಯ ಬದುಕುವುದೇ ದುಸ್ಥರವಾಗಿದೆ. ಈ ನಡುವೆ ರಾಜ್ಯ ಸರ್ಕಾರ ಇಂದು ವಿದ್ಯುತ್​ ಬೆಲೆಯನ್ನು ಮತ್ತೆ ಏರಿಸುವ ಮೂಲಕ ಜನರಿಗೆ ಶಾಕ್ ನೀಡಿದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ನಡುವೆಯೇ ವಿದ್ಯುತ್​ ಬೆಲೆಯೂ ಇಂದು ದಾಖಲೆ ಬರೆದಿದ್ದು, ರಾಜ್ಯ ಸರ್ಕಾರ ಯೂನಿಟ್ ಗೆ 30 ಪೈಸೆ ಹೆಚ್ಚಳ‌ ಮಾಡಿ ಆದೇಶಿಸಿದೆ. ಕೆಪಿಟಿಸಿಎಲ್- ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೂತನ ದರ ಎಪ್ರಿಲ್.1 

ಬೆಲೆ ಏರಿಕೆ ಬಿಸಿಯ ನಡುವೆ ಮತ್ತೊಂದು ಶಾಕ್ ➤ ವಿದ್ಯುತ್​ ದರ ದಿಢೀರ್ ಏರಿಸಿದ ರಾಜ್ಯ ಸರ್ಕಾರ Read More »

ಕರ್ನಾಟಕ

ಲಾಕ್‍ಡೌನ್ ಎಫೆಕ್ಟ್‌ನಿಂದ ನಿರುದ್ಯೋಗ ➤ ನಟ ಆತ್ಮಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba,ಕೊಲ್ಕತ್ತ ಜೂ.09:ಕೋವಿಡ್ ಸೋಂಕು ಎಷ್ಟೋ ಜನರ ಬದಕನ್ನೇ ಕಿತ್ತುಕೊಂಡಿದೆ. ಲಕ್ಷಾಂತರ ಜನರ ಉಸಿರನ್ನೇ ನಿಲ್ಲಿಸಿದೆ. ಇದೇ ಹಿನ್ನೆಲೆಯಲ್ಲಿ ಕೋವಿಡ್ ನಿಂದ ಕೆಲಸವಿಲ್ಲದೆ ನೊಂದ ನಟನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಲಾಕ್‍ಡೌನ್ ವೇಳೆ ಎಲ್ಲೂ ಕೆಲಸ ಸಿಗದೆ ನಿರುದ್ಯೋಗದಿಂದ ಬಳಲಿದ ಬೆಂಗಾಲಿ ನಟನೊಬ್ಬ ಕೊಲ್ಕತ್ತಾದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್ ಪೊಲೀಸರು ನಟನನ್ನು ಕಾಪಾಡಿದ್ದಾರೆ.ನಿದ್ದೆ ಮಾತ್ರೆಯನ್ನು ನುಂಗಿದ 31 ವರ್ಷದ ಧಾರವಾಹಿ ನಟ ಫೇಸ್ ಬುಕ್ ಲೈವ್ ಮಾಡಿದ್ದಾನೆ. ಇದನ್ನು ಗಮನಿಸಿದ ಕೆಲವರು ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಲಾಕ್‍ಡೌನ್ ಎಫೆಕ್ಟ್‌ನಿಂದ ನಿರುದ್ಯೋಗ ➤ ನಟ ಆತ್ಮಹತ್ಯೆಗೆ ಯತ್ನ Read More »

ರಾಷ್ಟ್ರೀಯ ನ್ಯೂಸ್

ತರಕಾರಿ ವಾಹನದಲ್ಲಿ ಮದ್ಯ ಸಾಗಾಟ ➤ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.09:ಬೆಂಗಳೂರಿನಿಂದ ತಮಿಳುನಾಡಿಗೆ ತರಕಾರಿ ಸಾಗಿಸುವ ವಾಹನದಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಗರದ ಕೆಆರ್ ಮಾರ್ಕೆಟ್ ನಲ್ಲಿ ನಡೆದಿದೆ. ಮಂಗಳವಾರ ತಡರಾತ್ರಿ ಪೊಲೀಸರು ತಪಾಸಣೆ ಮಾಡುವ ವೇಳೆ ತರಕಾರಿ ತುಂಬಿದ್ದ ಜೀಪ್ ಕಲಾಸಿಪಾಳ್ಯ ಕಡೆಯಿಂದ ಬರುತ್ತಿತ್ತು. ಇಡೀ ಜೀಪ್ ತುಂಬಾ ಬೇರೆ ಬೇರೆ ರೀತಿಯ ತರಕಾರಿಗಳು ತುಂಬಿದ್ದವು. ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತರಕಾರಿಗಳ ನಡುವೆ, ಎರಡು ಬಗೆಯ ಬರೋಬ್ಬರಿ ಐನೂರು ಲೀಟರ್ ಮದ್ಯ ಪತ್ತೆಯಾಗಿದೆ.ತಕ್ಷಣ

ತರಕಾರಿ ವಾಹನದಲ್ಲಿ ಮದ್ಯ ಸಾಗಾಟ ➤ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ Read More »

ಕರ್ನಾಟಕ

28 ಪತ್ನಿಯರ ಎದುರು 37ನೇ ಮದುವೆಯಾದ ಭೂಪ..!

(ನ್ಯೂಸ್ ಕಡಬ) newskadaba,ನವದೆಹಲಿ ಜೂ.09: 21ನೇ ಶತಮಾನದಲ್ಲೂ ವ್ಯಕ್ತಿಯೊಬ್ಬ ಬರೋಬ್ಬರಿ 37 ಮದುವೆಯಾಗಿದ್ದಾನೆ. ಅದೂ, ಉಳಿದ ಪತ್ನಿಯರ ಎದುರಿಗೇ 37ನೇ ಪತ್ನಿಯನ್ನು ವರಿಸಿದ್ದಾನೆ. ಮದುವೆಯಾಗುತ್ತಿರುವ ವೀಡಿಯೋ ವೈರಲ್ ಆಗಿದೆ. ಇದು ಅವರ 37ನೇ ಮದುವೆ ಎಂದು ಹೇಳಲಾಗಿದ್ದು, ಈ ವಿವಾಹಕ್ಕೆ ಅವರ ಉಳಿದ 28 ಪತ್ನಿಯರು, 35 ಮಕ್ಕಳು ಮತ್ತು 126 ಮರಿಮೊಮ್ಮಕ್ಕಳು ಸಾಕ್ಷಿಯಾಗಿದ್ದಾರೆ. ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

28 ಪತ್ನಿಯರ ಎದುರು 37ನೇ ಮದುವೆಯಾದ ಭೂಪ..! Read More »

ಕರಾವಳಿ

ಬ್ಲಾಕ್ ಫಂಗಸ್‍ಗೆ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿ ಔಷಧ ಪೂರೈಕೆ ➤ ಡಿವಿಎಸ್

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.08: ಕೋವಿಡ್ ಸಾಂಕ್ರಾಮಿಕದ ನಡುವೆಯೇ ಕರ್ನಾಟಕದಲ್ಲಿ ಬ್ಲಾಕ್ ಫಂಗಸ್ ಸೋಂಕು ಹೆಚ್ಚಾಗುತ್ತಿದೆ. ಬ್ಲಾಕ್ ಫಂಗಸ್ ನಿರ್ವಹಣೆಗೆ ಇಂದು ಹೆಚ್ಚುವರಿಯಾಗಿ 2,490 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧಿಯನ್ನು ರಾಜ್ಯಕ್ಕೆ ಕೇಂದ್ರದಿಂದ ಪೂರೈಕೆ ಮಾಡಲಾಗಿದೆ.   ಈ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕರ್ನಾಟಕಕ್ಕೆ ಮತ್ತೆ 2,490 ವಯಲ್ಸ್ ಆಂಫೊಟೆರಿಸಿನ್- ಬಿ ಔಷಧಿ ಪೂರೈಕೆ ಮಾಡಲಾಗಿದೆ ಕೇಂದ್ರ ಸಚಿವ ಡಿವಿಎಸ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಬ್ಲಾಕ್ ಫಂಗಸ್‍ಗೆ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿ ಔಷಧ ಪೂರೈಕೆ ➤ ಡಿವಿಎಸ್ Read More »

ಕರಾವಳಿ

ಕನ್ಯಾನ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ

(ನ್ಯೂಸ್ ಕಡಬ) newskadaba,ಕನ್ಯಾನ ಜೂ.08: ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕನ್ಯಾನ ಸಂಕದಬಳಿ ಸಂಭವಿಸಿದೆ.     ಕನ್ಯಾನ ದಿಲ್ ದಾರ್ ಹೊಟೇಲ್ ಮಾಲಕ ಇಬ್ರಾಹಿಂ ಅವರು ಕನ್ಯಾನ ಪೇಟೆಗೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಸ್ಕೂಟಿ ಇಬ್ರಾಹಿಂ ಅವರ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ಇಬ್ರಾಹಿಂ ಅವರು ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ಯಾನ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ Read More »

ಕರಾವಳಿ

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಮುಖ

(ನ್ಯೂಸ್ ಕಡಬ) newskadaba,ನವದೆಹಲಿ ಜೂ.08: ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಕೆಯ ಹಾದಿ ಮುಂದುವರೆದಿದ್ದು, ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯಾವಾದ 24 ಗಂಟೆಗಳ ಅವಧಿಯಲ್ಲಿ 86,498 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದ 62 ದಿನಗಳ ಕನಿಷ್ಠ ಪ್ರಮಾಣವಾಗಿದೆ. ಮಂಗಳವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,89,96,473ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,51,309ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,03,702ಕ್ಕೆ ಏರಿಕೆಯಾಗಿದೆ. ಇನ್ನು ಭಾರತದಲ್ಲಿ ಒಂದೇ  18,73,485

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಮುಖ Read More »

ಕರಾವಳಿ

ಕೊಡಗು:ವಾಕಿಂಗ್ ಗೆ ಹೋಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ

(ನ್ಯೂಸ್ ಕಡಬ) newskadaba,ಮಡಿಕೇರಿ ಜೂ.08: ಬೆಳಗಿನ ಜಾವ ನಾಯಿಯೊಂದಿಗೆ ವಾಕಿಂಗ್ ಗೆ ಹೋಗಿದ್ದ ವ್ಯಕ್ತಿ ರಸ್ತೆ ಮಧ್ಯದಲ್ಲೇ ಕಾಡಾನೆ ದಾಳಿಗೆ ಮೃತಪಟ್ಟಿರುವ ಘಟನೆ ಕೊಡಗಿನಲ್ಲಿ ನಡೆದಿದೆ.ದಕ್ಷಿಣ ಕೊಡಗಿನ ಅರ್ವತೋಕ್ಲು ಗ್ರಾಮದಲ್ಲಿ ಈ ಘಟನೆ ವರದಿಯಗಿದ್ದು, ಮೃತ ವ್ಯಕ್ತಿಯನ್ನು ಪಿಹೆಚ್ಎಸ್ ಕಾಲೋನಿಯ ರಂಗಸ್ವಾಮಿ (52) ಎಂದು ಗುರುತಿಸಲಾಗಿದೆ.   ಎಂದಿನಂತೆ ಮನೆಯ ಬಳಿ ನಾಯಿಯ ಜೊತೆ ನಡೆದುಕೊಂಡು ಹೋಗುತ್ತಿರುವಾಗ, ರಂಗಸ್ವಾಮಿ ಅವರ ಮೇಲೆ ದಾಳಿ ನಡೆಸಿದ ಆನೆ ವ್ಯಕ್ತಿಯನ್ನು ಎಸೆದಿದ್ದು ಗಂಭೀರವಾಗಿ ಗಾಯಗೊಳಿಸಿದೆ.ಗಾಯಾಳು ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಆತನನ್ನು ಮಂಗಳೂರಿನ

ಕೊಡಗು:ವಾಕಿಂಗ್ ಗೆ ಹೋಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ Read More »

ಕರ್ನಾಟಕ

ಬೆಂಗಳೂರು ತಲುಪಿದ 29ನೇ ಆಕ್ಸಿಜನ್ ಎಕ್ಸ್ ಪ್ರೆಸ್

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.08:29ನೇ ಆಕ್ಸಿಜನ್ ಎಕ್ಸ್ ಪ್ರೆಸ್ ವಿಶೇಷ ರೈಲು ಇಂದು ಬೆಂಗಳೂರಿಗೆ ಆಗಮಿಸಿದೆ. 126.7 ಮೆಟ್ರಿಕ್ ಟನ್ ವೈದ್ಯಕೀಯ ಲಿಕ್ವಿಡ್ ಆಕ್ಸಿಜನ್ ಹೊತ್ತ ಈ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನ ವೈಟ್ ಫೀಲ್ಡ್ ಕಂಟೈನರ್ ಡಿಪೋ ತಲುಪಿರುವುದಾಗಿ ಪ್ರಸಾರ ಭಾರತಿ ಟ್ವೀಟ್ ಮಾಡಿದೆ.   ಇದುವರೆಗೆ ರಾಜಧಾನಿ ಬೆಂಗಳೂರಿಗೆ 29 ರೈಲುಗಳ ಮೂಲಕ 3,340.69 ಟನ್ ದ್ರವ ವೈದ್ಯಕೀಯ ಆಮ್ಲಜನಕ ತರಲಾಗಿದೆ. ಈ ಮೂಲಕ ಕೋವಿಡ್-19 ರೋಗಿಗಳಿಗೆ ಅತ್ಯವಶ್ಯಕವಾದ ಪ್ರಾಣವಾಯು ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ತಲುಪಿದ 29ನೇ ಆಕ್ಸಿಜನ್ ಎಕ್ಸ್ ಪ್ರೆಸ್ Read More »

ಕರಾವಳಿ
Scroll to Top