News Kadaba

ಭಾರಿ ಧಾರಾಕಾರ ಮಳೆ…!- ಸಂಚಾರ ವ್ಯತ್ಯಯ

(ನ್ಯೂಸ್ ಕಡಬ)newskadaba.com ಪುತ್ತೂರು, ಜು.25. ಕಳೆದ ಕೆಲವು ದಿನಗಳಿಂದ ಕೊಡಗಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೊಡಗಿನ ಮರ ಸಹಿತ ಭೂಕುಸಿತ ಉಂಟಾಗಿ ಮಾಣಿ- ಮೈಸೂರು ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವಾಗಿದೆ. ಈ ಪ್ರದೇಶದಲ್ಲಿ ಇನ್ನಷ್ಟು ಭೂಕುಸಿತ ಸಾಧ್ಯತೆ ಎದುರಾಗಿದ್ದು, ಆತಂಕ ಸೃಷ್ಟಿಸಿದೆ.

ಭಾರಿ ಧಾರಾಕಾರ ಮಳೆ…!- ಸಂಚಾರ ವ್ಯತ್ಯಯ Read More »

ಕರಾವಳಿ

ಗೃಹಲಕ್ಷ್ಮಿ ಯೋಜನೆಗೆ ಉಚಿತ ನೋಂದಣಿಗೆ ಸರಕಾರದ ಆದೇಶ ➤ ಗ್ರಾಮ ಒನ್ ಸೇವಾ ಕೇಂದ್ರಗಳ ಸಮಸ್ಯೆ ಪರಿಹರಿಸಲು ಸರಕಾರಕ್ಕೆ ಮನವಿ

(ನ್ಯೂಸ್ ಕಡಬ)newskadaba.com ಕಡಬ, ಜು.25. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗ್ಯಾರಂಟಿ ಯೋಜನೆಗೆ ಉಚಿತವಾಗಿ ನೋಂದಣಿಗೆ ಸರಕಾರ ಆದೇಶ ನೀಡಿರುವುದರಿಂದ ಗ್ರಾಮ ಒನ್ ಕೇಂದ್ರಗಳು ಸಂಕಷ್ಟಕ್ಕೆ ಒಳಗಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವಂತೆ ಕಡಬ ತಾಲೂಕಿನ ಗ್ರಾಮ ಒನ್ ಫ್ರಾಂಚೈಸಿನ ನಿರ್ವಾಹಕರು ಕಡಬ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕಡಬ ತಾಲೂಕಿನ ಸುಮಾರು 20 ಗ್ರಾಮ ಒನ್ ಫ್ರಾಂಚೈಸಿ ನಿರ್ವಾಹಕರು ಮನವಿ ನೀಡಿದ್ದು, ನಾವು ಒಂದು ವರುಷದ ಹಿಂದೆ ಗ್ರಾಮ ಒನ್ ಕೇಂದ್ರಗಳನ್ನು ಬಂಡವಾಳ ಹೂಡಿಕೆ ಮಾಡಿ

ಗೃಹಲಕ್ಷ್ಮಿ ಯೋಜನೆಗೆ ಉಚಿತ ನೋಂದಣಿಗೆ ಸರಕಾರದ ಆದೇಶ ➤ ಗ್ರಾಮ ಒನ್ ಸೇವಾ ಕೇಂದ್ರಗಳ ಸಮಸ್ಯೆ ಪರಿಹರಿಸಲು ಸರಕಾರಕ್ಕೆ ಮನವಿ Read More »

ಕರಾವಳಿ

ಲೋಕಾಯುಕ್ತ ದಾಳಿ ಮಾಡುತ್ತಿದ್ದಂತೆ ಲಂಚದ ಹಣ ನುಂಗಿದ ಅಧಿಕಾರಿ

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಜು.25. ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಕಂದಾಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿಯುವ ವೇಳೆ ಕಂದಾಯ ಅಧಿಕಾರಿಯೊಬ್ಬ ಲಂಚದ ಹಣವನ್ನೇ ನುಂಗಿ ನೀರು ಕುಡಿದ ವಿಚಿತ್ರ ಘಟನೆ ವರದಿಯಾಗಿದೆ. ಕಂದಾಯ ಅಧಿಕಾರಿಯಾಗಿರುವ ಪಟ್ಟಾರಿ ಗಜೇಂದ್ರ ಸಿಂಗ್ ವ್ಯಕ್ತಿಯೊಬ್ಬರ ಜಮೀನು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ವ್ಯಕ್ತಿಯಿಂದ 5000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಲೋಕಾಯುಕ್ತ ದಾಳಿ ಮಾಡುತ್ತಿದ್ದಂತೆ ಲಂಚದ ಹಣ ನುಂಗಿದ ಅಧಿಕಾರಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ಗೃಹಜ್ಯೋತಿ ನೋಂದಣಿ’ಗೆ ಇಂದು ಕೊನೇ ದಿನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.25. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆಯ ಕೂಡ. ಈ ಯೋಜನೆಯ ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ನೋಂದಾಯಿಸಿಕೊಳ್ಳಲು ಇಂದು ಕೊನೆಯ ದಿನವಾಗಿದೆ ಎನ್ನಲಾಗಿದೆ. ಇಂದು ನೋಂದಾಯಿಸಿಕೊಂಡವರಿಗೆ ಮಾತ್ರವೇ ಆಗಸ್ಟ್ ತಿಂಗಳ ಬಿಲ್ ಮೊತ್ತ 00 ಬರಲಿದೆ. ಗೃಹಜ್ಯೋತಿ ಯೋಜನೆಗೆ ನೋಂದಣಿ ಆರಂಭಗೊಂಡ ನಂತರ, ರಾಜ್ಯದಲ್ಲಿ ಈವರೆಗೆ ಇರುವಂತ ಫಲಾನುಭವಿಗಳಲ್ಲಿ ಶೇ.60ರಷ್ಟು ಗ್ರಾಹಕರು ಮಾತ್ರವೇ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಶೇ.40ರಷ್ಟು ವಿದ್ಯುತ್ ಗ್ರಾಹಕರು ನೋಂದಣಿ ಮಾಡುವುದು

‘ಗೃಹಜ್ಯೋತಿ ನೋಂದಣಿ’ಗೆ ಇಂದು ಕೊನೇ ದಿನ Read More »

ಕರ್ನಾಟಕ

ಗಮನ ಬೇರೆಡೆ ಸೆಳೆದು ಬ್ಯಾಗ್ ಕಳವುಗೈದ ಖದೀಮರು

(ನ್ಯೂಸ್ ಕಡಬ)newskadaba.com ಮಂಗಳೂರು, ಜು.25. ಗಮನ ಬೇರೆ ಕಡೆಗೆ ಸೆಳೆದು ಕಾರಿನಲ್ಲಿದ್ದ ಬ್ಯಾಗ್‌ ಕಳವು ಮಾಡಿದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಮಹಿಳೆಯೋರ್ವರು ಪಿವಿಎಸ್‌ ಬಳಿಯ ಲಕ್ಷ್ಮೀನಾರಾಯಣ ದೇವಸ್ಥಾನದ ಗೇಟಿನ ಮುಂಭಾಗದಲ್ಲಿ ಕಾರು ನಿಲ್ಲಿಸಿ ಕಾರು ಸರ್ವೀಸ್‌ ಸೆಂಟರ್‌ ಗೆ ಕರೆ ಮಾಡಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಆಗ ಅಪರಿಚಿತ ವ್ಯಕ್ತಿಯೋರ್ವ ಬಂದು 10 ರೂ. ನೋಟನ್ನು ಅವರ ಕಾರಿನ ಎಡಭಾಗದಲ್ಲಿ ಹಾಕಿ ನಿಮ್ಮ ಹಣ ಬಿದ್ದಿದೆ ಎಂದು ಹೇಳಿದ್ದು, ಮಹಿಳೆ ಅದನ್ನು ಹೆಕ್ಕುತ್ತಿದ್ದಾಗ ಅಪರಿಚಿತ ವ್ಯಕ್ತಿಯು ಕಾರಿನ ಬಲಬದಿಯಲ್ಲಿಯೂ ನೋಟು

ಗಮನ ಬೇರೆಡೆ ಸೆಳೆದು ಬ್ಯಾಗ್ ಕಳವುಗೈದ ಖದೀಮರು Read More »

ಕರಾವಳಿ, ಕ್ರೈಮ್ ನ್ಯೂಸ್

ರೇಬಿಸ್‌ನಿಂದ ಸಾವಿನ ಪ್ರಮಾಣದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ !

(ನ್ಯೂಸ್ ಕಡಬ)newskadaba.com ನವದೆಹಲಿ, ಜು.24. ದೇಶಾದ್ಯಂತ 2022ರಲ್ಲಿ ಸಂಭವಿಸಿದ ರೇಬಿಸ್ ಸೋಂಕಿನಿಂದಾದ ಮರಣ ಪ್ರಮಾಣದಲ್ಲಿ ಕರ್ನಾಟಕ ರಾಜ್ಯಗಳು ಮೂರನೆ ಸ್ಥಾನದಲ್ಲಿವೆ ಎಂದು ತಿಳಿದುಬಂದಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಬಘೇಲ್ , ಕೇರಳ ಸಂಸದ ಡೀನ್ ಕುರಿಯಾಕೋಸ್ ಅವರ ಪ್ರಶ್ನೆಗೆ ಪ್ರತಿಯಾಗಿ ಲೋಕಸಭೆಯಲ್ಲಿ ಮಂಡಿಸಿದರು ಎನ್ನಲಾಗಿದೆ. ವರದಿಯ ಪ್ರಕಾರ, ದಕ್ಷಿಣ ಭಾರತದ ಐದು ರಾಜ್ಯಗಳು ಅತಿ ಹೆಚ್ಚು ರೇಬಿಸ್ ಸೋಂಕಿನ ಮರಣ ಪ್ರಮಾಣವನ್ನು ದಾಖಲಿಸಿದ್ದು, ಇಡೀ ಭಾರತದಲ್ಲಿ ಆಂಧ್ರಪ್ರದೇಶ

ರೇಬಿಸ್‌ನಿಂದ ಸಾವಿನ ಪ್ರಮಾಣದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ! Read More »

ರಾಷ್ಟ್ರೀಯ ನ್ಯೂಸ್

‘ಆಯಾ ತಾಲೂಕಿನ ಪರಿಸ್ಥಿತಿ ಅವಲೋಕಿಸಿ ರಜೆ ನೀಡಿ’ – ತಹಸೀಲ್ದಾರ್‌‌ಗಳಿಗೆ ಡಿಸಿ ಆದೇಶ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.24. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ , ಕಡಬ, ಬಂಟ್ವಾಳ ಸುಳ್ಯ ತಾಲೂಕುಗಳಲ್ಲಿ ತಹಸೀಲ್ದಾರ್ ಹಂತದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಆಯ್ದ ಶಾಲೆಗಳಿಗೆ ಸ್ಥಳೀಯವಾಗಿ ರಜೆ ಘೋಷಿಸಲು ಆಯಾ ತಾಲೂಕಿನ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ. ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.  

‘ಆಯಾ ತಾಲೂಕಿನ ಪರಿಸ್ಥಿತಿ ಅವಲೋಕಿಸಿ ರಜೆ ನೀಡಿ’ – ತಹಸೀಲ್ದಾರ್‌‌ಗಳಿಗೆ ಡಿಸಿ ಆದೇಶ Read More »

ಕರಾವಳಿ

ವಿಶ್ವಕಪ್ ಗೆ ನಟ ಶಾರುಖ್ ಖಾನ್ ರಾಯಭಾರಿ

(ನ್ಯೂಸ್ ಕಡಬ)newskadaba.com ಮುಂಬೈ, ಜು.24. ಬಾಲಿವುಡ್‌ ನಟ ಶಾರುಖ್ ಖಾನ್ ಅವರು ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ವಿಶ್ವಕಪ್ 2023 ರ ಟೂರ್ನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಪೋಟೋ ಮತ್ತು ಪ್ರೋಮೊವನ್ನು ಹಂಚಿಕೊಂಡಿದೆ. ಭಾರತವು 2023 ರಲ್ಲಿ ಅಕ್ಟೋಬರ್ 5 ಆರಂಭಗೊಂಡು ನವೆಂಬರ್ 19 ರ ನಡುವೆ ನಡೆಯುವ ಪಂದ್ಯಾಟದಲ್ಲಿ ಹತ್ತು ತಂಡಗಳು ಪ್ರತಿಷ್ಠಿತ ಸ್ಪರ್ಧೆಯಲ್ಲಿ ಸೆಣಸಾಡಲಿದೆ. ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ

ವಿಶ್ವಕಪ್ ಗೆ ನಟ ಶಾರುಖ್ ಖಾನ್ ರಾಯಭಾರಿ Read More »

ರಾಷ್ಟ್ರೀಯ ನ್ಯೂಸ್

ಯೂಟ್ಯೂಬ್ ವಿಡಿಯೋ ಅನುಕರಣೆಯಿಂದ ಪ್ರಾಣ ಕಳೆದುಕೊಂಡ ಬಾಲಕ

(ನ್ಯೂಸ್ ಕಡಬ)newskadaba.com ತೆಲಂಗಾಣ, ಜು.24. 11 ವರ್ಷದ ಬಾಲಕನೊಬ್ಬ ಯೂಟ್ಯೂಬ್ ವಿಡಿಯೋವನ್ನು ಅನುಕರಣೆ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತ ಬಾಲಕನನ್ನು 6ನೇ ತರಗತಿಯ ವಿದ್ಯಾರ್ಥಿ ಉದಯ್ (11) ಎಂದು ಗುರುತಿಸಲಾಗಿದೆ. ರಾತ್ರಿ ಊಟ ಮುಗಿಸಿ ತನ್ನ ಕೋಣೆಗೆ ಹೋದವನು ಬಾಗಿಲು ಚಿಲಕ ಹಾಕಿಕೊಂಡು ಮೊಬೈಲ್​ ನೋಡಲು ಪ್ರಾರಂಭಿಸಿದ್ದಾನೆ. ಉದಯ್ ಪೋಷಕರು ಎಷ್ಟೇ ಕರೆದರೂ ಉತ್ತರ ನೀಡಲಿಲ್ಲ, ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ, ನಂತರ ಅವರು ಬಾಗಿಲು ಒಡೆದು ನೋಡಿದಾಗ ಆತ ನೇಣುಬಿಗಿದ ಸ್ಥಿತಿಯಲ್ಲಿ

ಯೂಟ್ಯೂಬ್ ವಿಡಿಯೋ ಅನುಕರಣೆಯಿಂದ ಪ್ರಾಣ ಕಳೆದುಕೊಂಡ ಬಾಲಕ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ನಾಳೆ ದ.ಕ, ಉಡುಪಿ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ➤ ಹವಾಮಾನ ಇಲಾಖೆ ಮುನ್ಸೂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.24. ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಚಿಕ್ಕಮಗಳೂರು , ಶಿವಮೊಗ್ಗ, ಕೊಡಗು ಆರೆಂಟ್‌ ಅಲರ್ಟ್‌ ನ್ನು ನೀಡಲಾಗಿದೆ. ಬಾಗಲಕೋಟೆ, ಬೆಳಗಾವಿ, ಹಾವೇರಿ, ಕಲಬುರಗಿ, ಹಾವೇರಿ, ಹಾಸನ ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಮುಂದಿನ 7 ದಿನಗಳ ಕಾಲ ಮಳೆ ಅರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಮಂಗಳೂರು: ನಾಳೆ ದ.ಕ, ಉಡುಪಿ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ➤ ಹವಾಮಾನ ಇಲಾಖೆ ಮುನ್ಸೂಚನೆ Read More »

ಕರಾವಳಿ
Scroll to Top