News Kadaba

ಹಿಮಾಚಲ ಪ್ರದೇಶದಲ್ಲಿ ಮತ್ತೆ ಮೇಘಸ್ಫೋಟ ಭಾರಿ ಪ್ರವಾಹ; ರಕ್ಷಣಾ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಶಿಮ್ಲಾ, ಆ.05. ಉತ್ತರಾಖಂಡ ಬೆನ್ನಲ್ಲೇ ಇದೀಗ ಹಿಮಾಚಲ ಪ್ರದೇಶದಲ್ಲೂ ಮೇಘಸ್ಫೋಟ ಸಂಭವಿಸಿದ್ದು, ಭಾರಿ ಮಳೆ ಮತ್ತು ಭೀಕರ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಮೇಘಸ್ಫೋಟವಾಗಿದ್ದು, ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಶಿಮ್ಲಾದ ರಾಂಪುರ ಬಳಿಯ ಪ್ರವಾಹ ಪೀಡಿತ ಸಮೇಜ್ ಗ್ರಾಮದಲ್ಲಿ ಪ್ರಸ್ತುತ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಮೇಘಸ್ಫೋಟದ ಬಳಿಕ ಸುರಿದ ಭಾರಿಮಳೆಯಿಂದಾಗಿ ಪ್ರವಾಹ ಏರ್ಪಟ್ಟಿದ್ದು, ಇಲ್ಲಿನ ಸಮೇಜ್ ಗ್ರಾಮ ಸೇರಿದಂತೆ ಹಲವು ಗಿರಿಧಾಮಗಳು ಮುಳುಗಡೆಯಾಗಿವೆ.

ಹಿಮಾಚಲ ಪ್ರದೇಶದಲ್ಲಿ ಮತ್ತೆ ಮೇಘಸ್ಫೋಟ ಭಾರಿ ಪ್ರವಾಹ; ರಕ್ಷಣಾ ಕಾರ್ಯಾಚರಣೆ Read More »

ರಾಷ್ಟ್ರೀಯ ನ್ಯೂಸ್

ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಟಕ್ಕರ್ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.03. ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿರುವ ಮುಡಾ ಅಕ್ರಮ ವಿರುದ್ಧ ಹೋರಾಟಕ್ಕಿಳಿದಿರುವ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಅದಕ್ಕೆ ಟಕ್ಕರ್ ಕೊಡಲು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಮನಗರದಲ್ಲಿ ಇಂದು ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ. ರಾಮನಗರದಲ್ಲಿ ಸಭೆ, ನಾಳೆ ಚನ್ನಪಟ್ಟಣ, ಆಗಸ್ಟ್ 5 ಮದ್ದೂರು, ಆಗಸ್ಟ್ 6 ಮಂಡ್ಯ, ಆಗಸ್ಟ್ 9ರಂದು ಮೈಸೂರಿನಲ್ಲಿ ಬಹಿರಂಗ ಸಮಾರೋಪ ಸಭೆ ನಡೆಸಲಿದ್ದೇವೆ. ಬಿಜೆಪಿ, ಜೆಡಿಎಸ್‌

ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಟಕ್ಕರ್ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ..! Read More »

ಕರ್ನಾಟಕ

ವಯನಾಡು ಭೂ ಕುಸಿತ ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ವಹಿಸಿರುವ ಜಿಲ್ಲಾಧಿಕಾರಿ ಕನ್ನಡತಿ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.03. ಭೂ ಕುಸಿತದಿಂದ ತತ್ತರಗೊಂಡಿರುವ ವಯನಾಡ್ ನಲ್ಲಿ ಜಿಲ್ಲಾಧಿಕಾರಿ ಮೇಘಶ್ರೀ ಡಿ.ಆರ್ ದುರಂತ ಸಂಭವಿಸಿದ ದಿನದಿಂದಲೂ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಾರ್ಯಾಚರಣೆಯ ಸಂಪೂರ್ಣ ಉಸ್ತುವಾರಿ ವಹಿಸಿರುವ ಮೇಘಶ್ರೀ ಕರ್ನಾಟಕದವರು. ಮೇಘಶ್ರೀ ಡಿಆರ್ ಅವರು ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ ಮತ್ತು ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಸೇವೆ ಸಲ್ಲಿಸಲು ದಣಿವರಿಯದೆ ಕೆಲಸ ಮಾಡುದ್ದಾರೆ ಎನ್ನಲಾಗಿದೆ.

ವಯನಾಡು ಭೂ ಕುಸಿತ ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ವಹಿಸಿರುವ ಜಿಲ್ಲಾಧಿಕಾರಿ ಕನ್ನಡತಿ..! Read More »

ಕರ್ನಾಟಕ

ಬಾಹ್ಯಾಕಾಶ ಯಾನಕ್ಕೆ ಇಬ್ಬರ ಹೆಸರು ಖಚಿತ ಪಡಿಸಿದ ಇಸ್ರೋ ಒಪ್ಪಂದಕ್ಕೆ ಸಹಿ ಹಾಕಿದ ಅಮೆರಿಕದ ಕಂಪೆನಿ..!

(ನ್ಯೂಸ್ ಕಡಬ) newskadaba.com ನವದೆಹಲಿ, ಆ.03. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಸಹಯೋಗದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಇಬ್ಬರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಇಸ್ರೋ  ಬಹಿರಂಗಪಡಿಸಿದೆ. ಈ ವರ್ಷಾಂತ್ಯದಲ್ಲಿ ನಡೆಯಲಿದೆ ಎನ್ನಲಾಗಿರುವ ಪ್ರವಾಸ ಸಂಬಂಧ ಇಸ್ರೋ ಮತ್ತು ಅಮೆರಿಕದ ಆ್ಯಕ್ಸಿಯೋಂ ಸ್ಪೇಸ್‌ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಅನ್ವಯ ಆ್ಯಕ್ಸಿಯೋಂ ಸ್ಪೇಸ್ ಕಂಪನಿ ‘ಆ್ಯಕ್ಸಿಯೋಂ-4’ ಮಿಷನ್‌ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲಿದೆ.

ಬಾಹ್ಯಾಕಾಶ ಯಾನಕ್ಕೆ ಇಬ್ಬರ ಹೆಸರು ಖಚಿತ ಪಡಿಸಿದ ಇಸ್ರೋ ಒಪ್ಪಂದಕ್ಕೆ ಸಹಿ ಹಾಕಿದ ಅಮೆರಿಕದ ಕಂಪೆನಿ..! Read More »

ರಾಷ್ಟ್ರೀಯ ನ್ಯೂಸ್

ಕರ್ನಾಟಕದಲ್ಲಿ 4398 ಸರ್ಕಾರಿ ಶಾಲೆಗಳಿಗೆ ಮುಚ್ಚುವ ಆತಂಕ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.03. ರಾಜ್ಯದಲ್ಲಿರುವ 46 ಸಾವಿರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪೈಕಿ ಸುಮಾರು 18 ಸಾವಿರ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ 30 ದಾಟಿಲ್ಲ. ಆಶ್ಚರ್ಯವೆಂದರೆ ಈ ಪೈಕಿ 4300 ಕ್ಕೂ ಹೆಚ್ಚು ಶಾಲೆಗಳಲ್ಲಿ 10ಕ್ಕಿಂತ ಕಡಿದು ಮಕ್ಕಳಿದ್ದಾರೆ. ಇದರಲ್ಲಿ ಶೂನ್ಯ ದಾಖಲಾತಿಯ ಶಾಲೆಗಳೂ ಇವೆ. ಇದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಮಂಡಿಸಿರುವ ಅಧಿಕೃತ ಮಾಹಿತಿ. ಈ ಹಿಂದೆ 10ಕ್ಕಿಂತ ಕಡಿಮೆ ಮಕ್ಕಳಿರುವ

ಕರ್ನಾಟಕದಲ್ಲಿ 4398 ಸರ್ಕಾರಿ ಶಾಲೆಗಳಿಗೆ ಮುಚ್ಚುವ ಆತಂಕ..! Read More »

ಕರ್ನಾಟಕ

ಮನೆಗೆ ನುಗ್ಗಿ ಕಳವು ಪ್ರಕರಣ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ.03. ಮನೆಗೆ ನುಗ್ಗಿ ಕಳವುಗೈದ ಮರುದಿನವೇ ಆರೋಪಿ ಬಂಧನ ಕ್ಕೊಳಗಾದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಇಚ್ಲಂಗೋಡು ಪಚ್ಚಂಬಳದ ಮುರ್ಶಿದ್ (19) ಎಂದು ಗುರುತಿಸಲಾಗಿದೆ. ಅಬ್ದುಲ್ ಮಜೀದ್ ರವರ ಮನೆಗೆ ನುಗ್ಗಿದ ಈತ 29,700 ರೂ.ಕಳವು ಗೈದಿದ್ದನು. ಎರಡು ಅಂತಸ್ತಿನ ಈ ಮನೆಯ ಟೆರೆಸ್ ನ ಬಾಗಿಲು ತೆರಳುವ ಬಾಗಿಲು ಮುರಿದು ಒಳನುಗ್ಗಿದ್ದು, ಕಪಾಟಿನಲ್ಲಿ ರಿಸಲಾಗಿದ್ದ ಹಣವನ್ನು ಕಳವುಗೈದು ಪರಾರಿ ಯಾಗಿದ್ದನು .ವಿಚಾರಣೆ ನಡೆಸಿದಾಗ ಮುರ್ಶಿದ್ ತಪ್ಪೊಪ್ಪಿ ಕೊಂಡನು ಎಂದು ಪೊಲೀಸರು

ಮನೆಗೆ ನುಗ್ಗಿ ಕಳವು ಪ್ರಕರಣ ಆರೋಪಿ ಅರೆಸ್ಟ್..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇವಲ 2 ಅಂಕಗಳಿಂದ UPSC ಪರೀಕ್ಷೆಯಲ್ಲಿ ವಿಫಲ ಮುಂದೆ IAS ಆದ ಆದಿತ್ಯ

(ನ್ಯೂಸ್ ಕಡಬ) newskadaba.com ನವದೆಹಲಿ, ಆ.03. ಕಿಡಿಗೇಡಿಯಾಗಿದ್ದ ಹುಡುಗ ಈಗ ದೊಡ್ಡ ಅಧಿಕಾರಿಯಾಗಿರುವುದು ಹಳ್ಳಿಯ ಜನಕ್ಕೆ ನಂಬಲೂ ಅಸಾಧ್ಯವಾಗಿದೆ. ಮೊದಲು ಇಂಜಿನಿಯರ್ ಆದ ಆದಿತ್ಯ ನಂತರ ಎಂಬಿಎ ಪದವಿ ಪಡೆದರು. ಇದು ಅವರಿಗೆ ತೃಪ್ತಿ ನೀಡದಿದ್ದಾಗ, ಅವರು UPSC ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಆರಂಭಿಸಿದರು. ಅಂತಿಮವಾಗಿ IAS ಅಧಿಕಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. 12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ, ಆದಿತ್ಯ ಪಾಂಡೆ ಪಂಜಾಬ್ ನಲ್ಲಿರುವ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಿಂದ ಬಿ.ಟೆಕ್ ಮಾಡಿದರು. ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು

ಕೇವಲ 2 ಅಂಕಗಳಿಂದ UPSC ಪರೀಕ್ಷೆಯಲ್ಲಿ ವಿಫಲ ಮುಂದೆ IAS ಆದ ಆದಿತ್ಯ Read More »

ರಾಷ್ಟ್ರೀಯ ನ್ಯೂಸ್

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ     ಲೋಪದೋಷ ಸರಿಪಡಿಸುವಂತೆ ಸುಪ್ರೀಂ ಸೂಚನೆ            

(ನ್ಯೂಸ್ ಕಡಬ) newskadaba.com ನವದೆಹಲಿ, ಆ.03. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ಹಲವು ಮಾರ್ಗಸೂಚಿಗಳನ್ನು ನೀಡಿದ್ದು, ಲೋಪದೋಷಗಳನ್ನು ಆಮೂಲಾಗ್ರವಾಗಿ ಸರಿಪಡಿಸುವಂತೆ ತಜ್ಞರ ಸಮಿತಿಗೆ ಸೂಚಿಸಿದೆ. ಪ್ರಶ್ನೆಪತ್ರಿಕೆ ಮುದ್ರಣದಿಂದ ಆರಂಭಿಸಿ ಪರೀಕ್ಷಾ ಕೇಂದ್ರಗಳಿಗೆ ತಲುಪುವ ವರೆಗೆ ಎಲ್ಲ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಅಗತ್ಯವಿರುವೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇದು ಮುಂದಿನ ವರ್ಷಕ್ಕೆ ಮುಂದುವರಿಯಬಾರದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಕೇಂದ್ರಕ್ಕೆ ಸೂಚಿಸಿದೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ     ಲೋಪದೋಷ ಸರಿಪಡಿಸುವಂತೆ ಸುಪ್ರೀಂ ಸೂಚನೆ             Read More »

ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.03. ಮನೆಯ ಬಾವಿಗೆ ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಮೃತರನ್ನು ಬೆಳ್ತಂಗಡಿ ನಗರದ ಗುರುದೇವ ಕಾಲೇಜ್ ರಸ್ತೆಯಲ್ಲಿರುವ ಸೀಡ್ ಫಾರ್ಮ್ ಬಳಿ ಇರುವ ಮನೆಯ ಬಾವಿಗೆ ಬಿದ್ದು ಸುಮಾಲಿನಿ ಜೈನ್ (63) ಎಂದು ಗುರುತಿಸಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್ ಜಲೀಲ್‌ ಹಾಗೂ ಅಲ್ಫಾಸ್ ಲಾಯಿಲ ಸೇರಿ ಬಾವಿಗೆ ಹಗ್ಗ ಹಾಕಿ ಮಹಿಳೆಯನ್ನು ಮೇಲಕ್ಕೆತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಅವರು

ಬೆಳ್ತಂಗಡಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಸಾಕ್ಸ್‌ ನೊಳಗೆ ವಿದೇಶಿ ಕರೆನ್ಸಿ ಕಳ್ಳಸಾಗಣೆ ಪಾಕ್ ಗಗನಸಖಿ ವಶಕ್ಕೆ  

(ನ್ಯೂಸ್ ಕಡಬ) newskadaba.com ಲಾಹೋರ್, ಆ.02. ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಳ್ಳಸಾಗಾಣಿಕೆ ವ್ಯವಹಾರದಲ್ಲಿ ಸಿಕ್ಕಿಬಿದ್ದಿರುವ ಬಗ್ಗೆ ಸಾಕಷ್ಟು ಸುದ್ದಿ ಕೇಳಿರುತ್ತೇವೆ. ಆದರೆ ಇದೀಗ ಗಗನಸಖಿಯೊಬ್ಬಳು ವಿದೇಶಿ ಕರೆನ್ಸಿಯನ್ನು ತನ್ನ ಸಾಕ್ಸ್ ನಲ್ಲಿ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ. ಲಾಹೋರ್‌ನ ಅಲ್ಲಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್‌ಲೈನ್ಸ್‌ ನಲ್ಲಿ ಗಗನಸಖಿಯೊಬ್ಬಳು ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ. ಕಸ್ಟಮ್ಸ್ ಅಧಿಕಾರಿಗಳು, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮತ್ತು ಇಮಿಗ್ರೇಶನ್ ಆಥೋರಿಟಿಯು ಜಂಟಿ ಕಾರ್ಯಾಚರಣೆ ನಡೆಸಿ ಗಗನಸಖಿಯ

ಸಾಕ್ಸ್‌ ನೊಳಗೆ ವಿದೇಶಿ ಕರೆನ್ಸಿ ಕಳ್ಳಸಾಗಣೆ ಪಾಕ್ ಗಗನಸಖಿ ವಶಕ್ಕೆ   Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top