ನೂಜಿಬಾಳ್ತಿಲ ಸ. ಉ.ಹಿ.ಪ್ರಾ. ಶಾಲೆಕಡಬ ವಲಯ ಮಟ್ಟದ ಖೋ ಖೋ ಪಂದ್ಯಾಟ ➤’ಶಿಸ್ತು, ಸಾಮರಸ್ಯ ಕ್ರೀಡೆಯಿಂದ ಸಾಧ್ಯ’ ಬಾಲಕೃಷ್ಣ ಬಳ್ಳೇರಿ
(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.26.ಕಡಬ ವಲಯ ಮಟ್ಟದ ಖೋ ಖೋ ಪಂದ್ಯಾವಳಿ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು. ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಬಳ್ಳೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ಕ್ರೀಡೆ ಜೀವನದ ಒಂದು ಭಾಗವಾಗಿದ್ದು, ಆರೋಗ್ಯಕರ ಶಿಸ್ತು, ಸಾಮರಸ್ಯ ಬೆಳೆಯಲು ಕ್ರೀಡೆ ಸಹಕಾರಿ. ಕ್ರೀಡೆಯಲ್ಲಿ ಗೆದ್ದರೂ ಅಥವಾ ಸೋತರೂ, ಭಾಗವಹಿಸುವುದರಿಂದ ನಮ್ಮ ದೈಹಿಕ, ಮಾನಸಿಕ ಸಧೃಡತೆ ಸಾಧ್ಯ ಎಂದರು.ಬಿಳಿನೆಲೆ ಶಾಲಾ ದೈಹಿಕ […]





