News Kadaba

ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶ..!!

(ನ್ಯೂಸ್ ಕಡಬ) newskadaba.com ಹೈದರಬಾದ್  ,ಸೆ.08:  ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶರಾಗಿದ್ದಾರೆ. ಅವರು ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.   ಬಾತ್ ರೂಮ್ ನಲ್ಲಿ ಕುಸಿದು ಬಿದ್ದ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅವರು ಮೃತಪಟ್ಟರು. ಲಾಕ್ ಡೌನ್ ನಿಂದ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ಅವರು ಗುಂಟೂರಿನಲ್ಲಿ ಇದ್ದರು.ಸಮರಸಿಂಹ ರೆಡ್ಡಿ, ಪ್ರೇಮಿಚುಕುಂಡಮ್ ರಾ, ನರಸಿಂಹ ನಾಯ್ಡು, ನೂವೊಸ್ತಾನಂತೆ ನೇನೊದ್ದಂತನಾ, ಜುಲಾಯಿ, ರೆಡಿ, ಕಿಕ್, […]

ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶ..!! Read More »

ರಾಷ್ಟ್ರೀಯ ನ್ಯೂಸ್

ಬಿಳಿನೆಲೆ ಅಕ್ರಮ ಶೆಡ್ ವಿಚಾರ ➤ ದೇವಪ್ಪ ಗೌಡರ ಅಂಗಡಿಯ ಲಾಕ್ ಮತ್ತೆ ಓಪನ್

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಸೆ.05:  ಕಳೆದ ಕೆಲವು ದಿನಗಳ ಹಿಂದೆ ಭಾರಿ ಸುದ್ದಿ ಮಾಡಿದ್ದ ಬಿಳಿನೆಲೆ ಅಕ್ರಮ ಶೆಡ್ ವಿಚಾರದಲ್ಲಿ ಕೊನೆಗೆ ಗ್ರಾ. ಪಂ ಅನಧಿಕೃತ ಅಂಗಡಿಗಳಿಗೆ ಬೀಗ ಜಡಿದಿತ್ತು. ಈ ವೇಳೆ ದೇವಪ್ಪ ಗೌಡ ಎಂಬುವರಿಗೆ ಸೇರಿದ ಅಂಗಡಿಯನ್ನು ಲಾಕ್ ಮಾಡಲಾಗಿತ್ತು ಇಧೀಗಾ ಗೈ ಕೋರ್ಟ್ ಆದೇಶದಂತೆ ಬೀಗ ಜಡಿದಿದ್ದ ಅಂಗಡಿಯ ಲಾಕ್ ಮತ್ತೆ ಓಪನ್ ಆಗಿದೆ.   ದೇವಪ್ಪ ಗೌಡ ಎಂಬವರಿಗೆ ಸೇರಿದ ಅಂಗಡಿ ಹಾಗೂ ವಾಸದ ಮನೆಗೆ ಏಕಾಏಕಿ ಬೀಗ ಜಡಿದಿರುವ

ಬಿಳಿನೆಲೆ ಅಕ್ರಮ ಶೆಡ್ ವಿಚಾರ ➤ ದೇವಪ್ಪ ಗೌಡರ ಅಂಗಡಿಯ ಲಾಕ್ ಮತ್ತೆ ಓಪನ್ Read More »

ಕರಾವಳಿ, ಕರ್ನಾಟಕ

ಸೆಲೆಬ್ರೆಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಆಫ್ರಿಕಾ ಪ್ರಜೆಯ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 05: ಸ್ಯಾಂಡಲ್ ವುಡ್ ಸೇರಿದಂತೆ ಹಲವು ಪ್ರಸಿದ್ಧ ವ್ಯಕ್ತಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ಆಫ್ರಿಕಾ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ.   ಲೂಮ್ ಪೆಪ್ಪಾರ್ ಸಾಂಬ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಆರ್ ಟಿಓ ಸಿಬ್ಬಂದಿ ರವಿಶಂಕರ್ ಸೇರಿದಂತೆ ಹಲವರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ದ್ವಿವೇದಿ, ರವಿಶಂಕರ್, ವೀರೇನ್ ಖನ್ನಾ,

ಸೆಲೆಬ್ರೆಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಆಫ್ರಿಕಾ ಪ್ರಜೆಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು : ಕರಾವಳಿ ದೇವಳಗಳಲ್ಲಿ ಸೇವೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.05: ಕೋವಿಡ್-19 ಕಾರಣಕ್ಕೆ ಐದು ತಿಂಗಳುಗಳಿಂದ ಕರಾವಳಿಯ ದೇವಾಲಯಗಳಲ್ಲಿ ಸ್ಥಗಿತಗೊಂಡಿದ್ದ ಸೇವೆಗಳು ಆರಂಭ ಗೊಂಡಿವೆ. ಮುಂಜಾಗ್ರತಾ ಕ್ರಮದೊಂದಿಗೆ ಭಕ್ತರ ದಟ್ಟಣೆಯೂ ಕಂಡುಬಂತು.   ದ.ಕ.ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ,ಕಟೀಲು, ಮಂಗಳಾದೇವಿ, ಕದ್ರಿ, ಕುದ್ರೋಳಿ, ಪೊಳಲಿ, ಶ್ರೀ ಶರವು ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಸೇವೆಗಳು ಆರಂಭಗೊಂಡಿವೆ. ಎಳೆಯ ಮಕ್ಕಳ ಉಪಸ್ಥಿತಿಯಲ್ಲಿ ನಡೆಸಬೇಕಾದ ಅನ್ನಪ್ರಾಶನ, ಅಕ್ಷರಾಭ್ಯಾಸ ಮೊದಲಾದ ಸೇವೆಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ. ಕಟೀಲು ಕ್ಷೇತ್ರದಲ್ಲಿ ಅನ್ನಪ್ರಾಶನ ಸೇವೆ ರಶೀದಿ ಮಾಡಿಸಿದವರಿಗೆ

ಮಂಗಳೂರು : ಕರಾವಳಿ ದೇವಳಗಳಲ್ಲಿ ಸೇವೆ ಆರಂಭ Read More »

ಕರಾವಳಿ, ಕರ್ನಾಟಕ

ಪಬ್’ಜಿಗೆ ಸಡ್ಡು ಹೊಡೆದ ಫೌ-ಜಿ ಆ್ಯಪ್ ➤ ನಟ ಅಕ್ಷಯ್ ಕುಮಾರ್ ಪ್ರಚಾರ ರಾಯಭಾರಿ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.05:  ಚೀನಾದ ಪಬ್’ಜಿ ಮೊಬೈಲ್ ಆ್ಯಪ್ ನಿಷೇಧ ಆದ ಬೆನ್ನಲ್ಲೇ ಬೆಂಗಳೂರು ಮೂಲಕ ಎನ್’ಕೋರ್ ಗೇಮ್ಸ್ ಕಂಪನಿ ಫೌ-ಜಿ ಎಂಬ ಹೆಸರಿನ ಮೊಬೈಲ್ ಗೇಮ್ ವೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಆ್ಯಪ್’ನಲ್ಲಿ ಹೂಡಿಕೆ ಮಾಡಿದ್ದು, ಪ್ರಚಾರ ರಾಯಭಾರಿ ಆಗಿದ್ದಾರೆ.ಪಬ್ ಜಿ ರೀತಿ ಇಬ್ಬರಿಗಿಂದ ಹೆಚ್ಚಿನ ಜನರು ಆಡಬಹುದಾಗಿದ್ದು, ಈ ಆಟವನ್ನು ಭಾರತೀಯ ಭದ್ರತಾಪಡೆಗಳ ನೈಜ ಸಾಹಸಮಯ ಸನ್ನಿವೇಶವನ್ನು ಆಧರಿಸಿ ರೂಪಿಸಲಾಗಿದೆ. ಇದೇ ವೇಳೆ ಫೌ-ಜಿ

ಪಬ್’ಜಿಗೆ ಸಡ್ಡು ಹೊಡೆದ ಫೌ-ಜಿ ಆ್ಯಪ್ ➤ ನಟ ಅಕ್ಷಯ್ ಕುಮಾರ್ ಪ್ರಚಾರ ರಾಯಭಾರಿ Read More »

ರಾಷ್ಟ್ರೀಯ ನ್ಯೂಸ್

ಪ್ರೀತಿಯ ಸಾಕುನಾಯಿಗೆ ಸೀಮಂತ ➤ ಹೇಗಿದೆ ಗೊತ್ತ ಸೋನುವಿನ ಅಲಂಕಾರ..!!

(ನ್ಯೂಸ್ ಕಡಬ) newskadaba.com ವಿಜಯಪುರ, ಸೆ.05:  ಮನುಷ್ಯರು ಸೀಮಂತ ಕಾರ್ಯಕ್ರಮ ಆಯೋಜಿಸುವುದು ಸಾಮಾನ್ಯ. ಹಸುಗಳಿಗೂ ಗೋವು ಪ್ರೀಯರು ಸೀಮಂತ ಮಾಡಿದ ಉದಾಹರಣೆಗಳುಂಟು. ಆದರೆ, ಅತೀ ನಂಬಿಕಸ್ತ ಪ್ರಾಣಿಗೆ ಸೀಮಂತ ನಡೆಸುವ ಮೂಲಕ ಬಸವನಾಡಿನ ಜನ ಗಮನ ಸೆಳೆದಿದ್ದಾರೆ.   ವಿಜಯಪುರದ ಕನ್ನಡ ಪರ ಹೋರಾಟಗಾರ ಪ್ರಕಾಶ ಕುಂಬಾರ ತಮ್ಮ ಮನೆಯ ಸಾಕು ನಾಯಿ ಸೋನು ಹೆಸರಿನ ಶ್ವಾನಕ್ಕೆ ಸೀಮಂತ ನಡೆಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಪ್ರಕಾಶ ಕುಂಬಾರ ಸುಮಾರು ಆರು ತಿಂಗಳ ಹಿಂದೆ ಪೊಮೆರೇನಿಯನ್ ತಳಿಯ

ಪ್ರೀತಿಯ ಸಾಕುನಾಯಿಗೆ ಸೀಮಂತ ➤ ಹೇಗಿದೆ ಗೊತ್ತ ಸೋನುವಿನ ಅಲಂಕಾರ..!! Read More »

ಕರ್ನಾಟಕ

ಸೆ.6 ರಿಂದ ಕರ್ನಾಟಕದ ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 05: ಕರ್ನಾಟಕದ ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.‌       11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ವಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. ಸೆಪ್ಟೆಂಬರ್ 7 ರಂದು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ

ಸೆ.6 ರಿಂದ ಕರ್ನಾಟಕದ ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ Read More »

ಕರಾವಳಿ, ಕರ್ನಾಟಕ

ನೂಜಿಬಾಳ್ತಿಲ: ಶಿಕ್ಷಕರ ದಿನಾಚರಣೆ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಸೆ. 05: ಕಡಬ ತಾಲೂಕಿನ ನೂಜಿಬಾಳ್ತಿಲ ಉ.ಹಿ.ಪ್ರಾ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಹಿರಿಯ ಪತ್ರಕರ್ತ ಖಾದರ್‌ ಸಾಹೇಬ್‌ ದೀಪ ಬೆಳಗಿಸಿ ಉದ್ಘಾಟಿಸಿದರು.   ಶಾಲಾ ಎಸ್‌ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ, ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಸುಂದರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಹಿರಿಯ ಶಿಕ್ಷಕಿ ಸಚಿದೇವಿ ಎಸ್‌ ಡಿ ಎಂ ಸಿ ಉಪಾಧ್ಯಕ್ಷೆ ಕಮಲಾಕ್ಷಿ ಬರೆಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂಜಿಬಾಳ್ತಿಲ: ಶಿಕ್ಷಕರ ದಿನಾಚರಣೆ Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ : ಕೋಳಿ ಅಂಕಕ್ಕೆ ಪೊಲೀಸರ ದಾಳಿ ಮೂವರು ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.05:  ಸರ್ಕಾರಿ ಗುಡ್ಡದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ ತಂಡವೊಂದರ ಮೇಲೆ ಗುರುವಾರ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ಧಾರೆ. ಮೂವರನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ನಾಲ್ವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.   ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ಎಂಬಲ್ಲಿ ಗುರುವಾರ ದಂದು ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಸರ್ಕಾರಿ ಗುಡ್ಡದಲ್ಲಿ ಅಕ್ರಮ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆ ಪೊಲೀಸ್

ಉಪ್ಪಿನಂಗಡಿ : ಕೋಳಿ ಅಂಕಕ್ಕೆ ಪೊಲೀಸರ ದಾಳಿ ಮೂವರು ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಶಾಸಕ ಎಸ್.ಅಂಗಾರರಿಗೆ ಕೊರೋನಾ ನೆಗೆಟಿವ್

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 05: ಕಳೆದ ಶುಕ್ರವಾರ ಕೊರೋನ ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ಬಂದಿದ್ದ ಸುಳ್ಯ ಶಾಸಕ ಎಸ್‌.ಅಂಗಾರರು ಇಂದು ಮತ್ತೆ ಕೊರೋನ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್‌ ಬಂದಿರುವುದಾಗಿ ತಿಳಿದುಬಂದಿದೆ. ಅವರು ಒಂದು ವಾರಗಳ ಕಾಲ ಕ್ವಾರಂಟೈನ್‌ ನಲ್ಲಿದ್ದರು. ಅವರ ಪತ್ನಿ ಮತ್ತು ಕಾರು ಚಾಲಕನನ್ನು ಕೂಡ ಪರೀಕ್ಷೆ ಮಾಡಲಾಗಿದ್ದು ಅವರ ವರದಿಯೂ ಕೂಡ ನೆಗೆಟಿವ್‌ ಬಂದಿರುವುದಾಗಿ ತಿಳಿದುಬಂದಿದೆ.

ಸುಳ್ಯ: ಶಾಸಕ ಎಸ್.ಅಂಗಾರರಿಗೆ ಕೊರೋನಾ ನೆಗೆಟಿವ್ Read More »

ಕರಾವಳಿ, ಕರ್ನಾಟಕ
Scroll to Top