News Kadaba

ಸುಬ್ರಹ್ಮಣ್ಯ: ಕೆ.ಎಸ್.ಎಸ್ ಕಾಲೇಜಿನಲ್ಲಿ ಆತ್ಮನಿರ್ಭರ ಭಾರತ ಉದ್ಯೋಗ ನೈಪುಣ್ಯ ಶಿಬಿರ ಸಮಾಪನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ನ. 15: ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಆತ್ಮನಿರ್ಭರ ಭಾರತ ಉದ್ಯೋಗ ನೈಪುಣ್ಯ ಶಿಬಿರವು ಶನಿವಾರ ರಾತ್ರಿ ಸಮಾಪನಗೊಂಡಿದೆ. ಗ್ರಾಮ ವಿಕಾಸ ಸಮಿತಿ, ಮಂಗಳೂರು ವಿಭಾಗ ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ) ಪುತ್ತೂರು ಸಹಕಾರ ಭಾರತಿ ದ.ಕ ಜಿಲ್ಲೆ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ, ಪುತ್ತೂರು, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಹಾಗೂ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೇಷಿ ಪತ್ತಿನ ಸರಕಾರಿ ಸಂಘ ನಿಯಮಿತ ಸುಬ್ರಹ್ಮಣ್ಯ ಇವುಗಳ ಸಹಯೋಗದೊಂದಿಗೆ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ […]

ಸುಬ್ರಹ್ಮಣ್ಯ: ಕೆ.ಎಸ್.ಎಸ್ ಕಾಲೇಜಿನಲ್ಲಿ ಆತ್ಮನಿರ್ಭರ ಭಾರತ ಉದ್ಯೋಗ ನೈಪುಣ್ಯ ಶಿಬಿರ ಸಮಾಪನ Read More »

ಕರಾವಳಿ

ಪುತ್ತೂರು: ಬೆಂಕಿ ಅವಘಡ..!

(ನ್ಯೂಸ್ ಕಡಬ) newskadaba.com ಪುತ್ತೂರು, ನ.14: ಇಂದು ಮುಂಜಾನೆ ಮಾಣಿ ಮೈಸೂರು ರಸ್ತೆಯ ಬೈಪಾಸ್ ಶ್ರೀ ಮಂಗಳ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಕಂಪನಿಯ ವಸ್ತುಗಳ  ಪವನ್ ಎಂಟರ್ ಪ್ರೈಸಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.   ಸಂಸ್ಥೆಯ ಮಾಲಕ ಮಂಜುನಾಥ್ ಅವರು ಮುಂಜಾನೆ ಸಂಸ್ಥೆಯನ್ನು ತೆರೆಯುವ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಸಂಭವಿಸಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.  

ಪುತ್ತೂರು: ಬೆಂಕಿ ಅವಘಡ..! Read More »

ಕರಾವಳಿ

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯವರಿಂದ ಕುಕ್ಕೆ ಕಾಮಗಾರಿಗಳ ಪರಿಶೀಲನೆ ➤ ಭಕ್ತರ ಅನುಕೂಲಕ್ಕೆ ಪ್ರತ್ಯೇಕ ಸುತ್ತು ಪೌಳಿ ನಿರ್ಮಾಣಕ್ಕೆ ಯೋಜನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ  ನ. 14: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಪೂರ್ವಭಾವಿ ಸಭೆಗೆ ಆಗಮಿಸಿದ್ದ ದ.ಕ ಡಿಸಿ ರಾಜೇಂದ್ರ ಕೆ,ವಿ ರವರು ಶ್ರೀ ದೇವರ ದರ್ಶನ ಪಡೆದು ಬಳಿಕ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಭಕ್ತರಿಗೆ ಸೇವೆಗಳನ್ನು ನೆರವೇರಿಸಲು ಅನುಕೂಲವಾಗುವಂತೆ ಪ್ರತ್ಯೇಕ ಯೋಜನೆ ಕುರಿತು ಮಾತನಾಡಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸುಸೂತ್ರವಾಗಿ ಸೇವೆಗಲನ್ನು ನೆರವೇರಿಸಲು ಹಾಗೂ ಅನ್ನ ಪ್ರಸಾದ ಸ್ವೀಕರಿಸಲು ಅನುಕೂಲವಾಗುವಂತೆ ಹೊಸದಾಗಿ ಪ್ರತ್ಯೇಕ ಪೂಜಾ ಶಾಲೆ ಅನ್ನ ಪ್ರಸಾದ

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯವರಿಂದ ಕುಕ್ಕೆ ಕಾಮಗಾರಿಗಳ ಪರಿಶೀಲನೆ ➤ ಭಕ್ತರ ಅನುಕೂಲಕ್ಕೆ ಪ್ರತ್ಯೇಕ ಸುತ್ತು ಪೌಳಿ ನಿರ್ಮಾಣಕ್ಕೆ ಯೋಜನೆ Read More »

ಕರಾವಳಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಆಚರಣೆಯ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ  ನ. 14: ಡಿ. 12ರಿಂದ 22 ರವರೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಚಂಪಾಷಷ್ಠಿ ಆಚರಣೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದ್ದು. ಕೋವಿಡ್ 19 ನಿಯಾಗಳಿಗಾನುಸಾರವಾಗಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.   ಮುಜರಾಯಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶುಕ್ರವಾರ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೃಗೊಂಡಿದ್ದಾರೆ. ಉರುಳು ಸೇವೆ, ಉಟೋಪಚಾರ, ವಸತಿ,

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಆಚರಣೆಯ ಪೂರ್ವಭಾವಿ ಸಭೆ Read More »

ಕರಾವಳಿ

ಉಡುಪಿಯಲ್ಲಿ ಬಿದಿರು ಪಟಾಕಿ ಸೌಂಡು ➤ ಇದು ನಮ್ಮ ಪೂರ್ವಜರ ಕೊಡುಗೆ.!

(ನ್ಯೂಸ್ ಕಡಬ) newskadaba.com ಉಡುಪಿ ನ. 14:ಕೊರೊನಾ ಕರಾಳತೆಯಿಂದ ಹೊರಬಂದು ದೀಪಾವಳಿಗೆ ಪಟಾಕಿ ಸಿಡಿಸೋಣ ಅಂತ ಜನ ಹಾಕಿದ್ದ ಲೆಕ್ಕಾಚಾರ ಉಲ್ಟಾ ಆಗಿದೆ. ರಾಜ್ಯ ಸರ್ಕಾರ ರಾಸಾಯನಿಕ ಪಟಾಕಿ ನಿಷೇಧ ಮಾಡಿ, ದುಷ್ಪರಿಣಾಮ ರಹಿತ ಪಟಾಕಿಗೆ ಮಣೆ ಹಾಕಿದೆ. ಪಟಾಕಿಯ ಸಾಹಸವೇ ಬೇಡ ಅಂತಾ ಇಲ್ಲೊಂದು ತಂಡ ಬಿದಿರಿನ ಪಟಾಕಿ ರೆಡಿ ಮಾಡಿದ್ದಾರೆ   ಉಡುಪಿಯ ಪರ್ಕಳ ಫ್ರೆಂಡ್ಸ್ ಬಿದಿರು ಪಟಾಕಿ ತಯಾರಿಸಿದ್ದಾರೆ. ಏಳು ಗಂಟು ಇರುವ ಒಂದು ತುಂಡು ಬಿದಿರು. ಬುಡದ ಒಂದು ಗಂಟು ಬಿಟ್ಟು

ಉಡುಪಿಯಲ್ಲಿ ಬಿದಿರು ಪಟಾಕಿ ಸೌಂಡು ➤ ಇದು ನಮ್ಮ ಪೂರ್ವಜರ ಕೊಡುಗೆ.! Read More »

ಕರಾವಳಿ

ಓಡಬಾಯಿ :ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿ

(ನ್ಯೂಸ್ ಕಡಬ) newskadaba.com ಸುಳ್ಯ  ನ. 14: ಸುಳ್ಯದ ಓಡಬಾಯಿಯಲ್ಲಿ ಕಂಟೈನರೊಂದು ಚರಂಡಿಗೆ ಪಲ್ಟಿಯಾಗಿ ಬಿದ್ದಿದೆ.  ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಸುಳ್ಯದ ಓಡಬಾಯಿ ಬಳಿ ಇದ್ದ ಬ್ಯಾರಿಕೇಡ್ ನ್ನು ತಪ್ಪಿಸಲು ಹೋಗಿ ,ಚಾಲಕ ನಿಯಂತ್ರಣ ಕಳೆದು ಕೊಂಡಿದ್ದಾನೆ.     ಪರಿಣಾಮ ಕಂಟೈನರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸ್ಲ್ಯಾಬ್ ಮೇಲೆ ಹೋಗಿ ಚರಂಡಿಗೆ ಇಳಿದಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.    

ಓಡಬಾಯಿ :ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿ Read More »

ಕರಾವಳಿ

ಬಿಳಿನೆಲೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನ ದಲ್ಲಿ ಗೋ ಪೂಜೆ

(ನ್ಯೂಸ್ ಕಡಬ) newskadaba.com ಬಿಳಿನೆಲೆ ನ. 14: ಶ್ರೀ ಗೋಪಾಲ ಕೃಷ್ಣ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ದೀಪಾವಳಿ ವಿಶೇಷವಾಗಿ ಗೋ ಪೂಜಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಅರ್ಚಕರಾದ ವೆಂಕಟೇಶ್ ಭಟ್ ಪೂಜಾ ಕಾರ್ಯವನ್ನು ನೆರವೇರಿಸಿದರು.       ಗೋಪೂಜಾ ದಿನವಾದ ಇಂದು ವರ್ಷಂಪ್ರತಿ ಜರಗುವ ಗೋ ಪೂಜೆಯು, ಇಂದು ಗೋವನ್ನು ಪೂಜಿಸುವುದರೊಂದಿಗೆ ವಿಜ್ರಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ, ತಿಮ್ಮಪ್ಪ ಗೌಡ ಪರ್ಲ, ವಿಶ್ವ ಹಿಂದೂ ಪರಿಷತ್ತಿನ ಗೌರವಾಧ್ಯಕ್ಷ ಜಯಪ್ರಕಾಶ್ ಮೋಂಟಡ್ಕ,ಅಧ್ಯಕ್ಷ

ಬಿಳಿನೆಲೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನ ದಲ್ಲಿ ಗೋ ಪೂಜೆ Read More »

ಕರಾವಳಿ

ಬಳ್ಪ: ಭಾರೀ ಗಾಳಿಗೆ ಧರೆಗುರಯಳಿದ ಅಡಿಕೆ ಮರಗಳು

(ನ್ಯೂಸ್ ಕಡಬ) newskadaba.com ಬಳ್ಪ-ಯೇನೆಕಲ್ಲು, ನ.14: ಕಳೆದ ದಿನ ಬೀಸಿದ ಭಾರೀ ಗಾಳಿಗೆ ಬಳ್ಪ-ಯೇನೆಕಲ್ಲು ಭಾಗಗಳಲ್ಲಿ ನೂರಾರು ಅಡಿಕೆ ಮರಗಳು ಹಾನಿಯಾಗಿದೆ.     ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆಯವರ ತೋಟದಲ್ಲಿ ಮತ್ತು ನಿವೃತ್ತ ಯೋಧ ಬಳ್ಪ ಗ್ರಾಮದ ರಾಧಾಕೃಷ್ಣ ಕುಳರವರ ತೋಟದಲ್ಲಿ ನೂರಾರು ಅಡಿಕೆ ಮರಗಳು ಹಾನಿಯಾಗಿವೆ.    

ಬಳ್ಪ: ಭಾರೀ ಗಾಳಿಗೆ ಧರೆಗುರಯಳಿದ ಅಡಿಕೆ ಮರಗಳು Read More »

ಕರಾವಳಿ

ಹರಿಹರ ಪಲ್ಲತ್ತಡ್ಕ: ಚಾಲಕನ ನಿಯಂತ್ರಣ ತಪ್ಪಿ ಅಲ್ಟೊ ಕಾರು ಪಲ್ಟಿ

(ನ್ಯೂಸ್ ಕಡಬ) newskadaba.com ಹರಿಹರ ಪಲ್ಲತ್ತಡ್ಕ, ನ.14: ಕೊಲ್ಲಮೊಗ್ರ ಕೊರಂಬಟ ಲೋಹಿತ್ ಎಂಬವರ ಅಲ್ಟೊ ಕಾರು ಚಾಲಕನ ನಿಯಂತ್ರಣ ತಪ್ಪಿ ಹರಿಹರ ಪಲ್ಲತ್ತಡ್ಕದ ಪಾಲ್ತಾಡು ಸಮೀಪ ರಸ್ತೆ ಪಕ್ಕದ ಚರಂಡಿಗೆ ಪಲ್ಟಿಯಾದ ಘಟನೆ ನಡೆದಿದೆ.     ಪಲ್ಟಿಯಾದ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಚಾಲಕರೊಬ್ಬರೇ ಇದ್ದುದರಿಂದ ಯಾವುದೇ ಪ್ರಾಣಾಪಾಯವಾಗದೇ ಅದೃಷ್ಟವಶತ್ ನಿಂದ ಪಾರಾಗಿದ್ದಾರೆ.      

ಹರಿಹರ ಪಲ್ಲತ್ತಡ್ಕ: ಚಾಲಕನ ನಿಯಂತ್ರಣ ತಪ್ಪಿ ಅಲ್ಟೊ ಕಾರು ಪಲ್ಟಿ Read More »

ಕರಾವಳಿ

ಸಾಲ ಯೋಜನೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  (ಕರ್ನಾಟಕ ವಾರ್ತೆ) ನ. 14: ಅಲ್ಪಸಂಖ್ಯಾತ ಸಮುದಾಯ ನಿಗಮದಿಂದ ಕೋವಿಡ್‍ನಿಂದ ಆರ್ಥಿಕ ತೊಂದರೆ ಅನುಭವಿಸುತ್ತಿರುವ ಅಲ್ಪಸಂಖ್ಯಾತ ಮಹಿಳೆಯರಿಂದ ನಿಗಮದ ವೆಬ್‍ಸೈಟ್ (kmdcmicro.karnataka.gov.in) ಮೂಲಕ ಅರ್ಜಿಆಹ್ವಾನಿಸಲಾಗಿದೆ.   ಯಾವುದೇ ಯೋಜನೆಯಲ್ಲೂ ಇದುವರೆಗೆ ಸಾಲ, ಸಹಾಯಧನ ಪಡೆಯದ ಕೋವಿಡ್-19ರ ಪಿಡುಗಿನಿಂದಾಗಿ ತೊಂದರೆಗೊಳಗಾದ ಅಂತ್ಯೋದಯ/ಬಿಪಿಎಲ್‍ಕಾರ್ಡ್ ಹೊಂದಿರುವ 25 ರಿಂದ 50 ವಯೋಮಾನದೊಳಗಿನ ಮಹಿಳೆಯರಿಗೆ ತಳ್ಳುವ ಗಾಡಿಯಲ್ಲಿ ವ್ಯಾಪಾರ, ಬೀದಿ ವ್ಯಾಪಾರ, ಜಾತ್ರೆಗಳಲ್ಲಿ ವ್ಯಾಪಾರ, ಕಿರಾಣಿಅಂಗಡಿ, ಅರಿಷಿನ/ಕುಂಕುಮ/ ಅಗರಬತ್ತಿ/ಕರ್ಪೂರ, ಪಾದಚಾರಿ ಮಾರ್ಗದಲ್ಲಿ ಟೀ/ಕಾಫಿ ಮಾರಾಟ, ಎಳನೀರು ವ್ಯಾಪಾರ, ಹೂವಿನ ವ್ಯಾಪಾರ,

ಸಾಲ ಯೋಜನೆಗೆ ಅರ್ಜಿ ಆಹ್ವಾನ Read More »

ಕರಾವಳಿ
Scroll to Top