News Kadaba

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಮುಖ

(ನ್ಯೂಸ್ ಕಡಬ) newskadaba,ನವದೆಹಲಿ ಜೂ.08: ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಕೆಯ ಹಾದಿ ಮುಂದುವರೆದಿದ್ದು, ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯಾವಾದ 24 ಗಂಟೆಗಳ ಅವಧಿಯಲ್ಲಿ 86,498 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದ 62 ದಿನಗಳ ಕನಿಷ್ಠ ಪ್ರಮಾಣವಾಗಿದೆ. ಮಂಗಳವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,89,96,473ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,51,309ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,03,702ಕ್ಕೆ ಏರಿಕೆಯಾಗಿದೆ. ಇನ್ನು ಭಾರತದಲ್ಲಿ ಒಂದೇ  18,73,485 […]

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಮುಖ Read More »

ಕರಾವಳಿ

ಕೋವಿಡ್-19: ರಾಜ್ಯದಲ್ಲಿ ಇಳಿಯದ ಸಾವಿನ ಪ್ರಕರಣ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.08: ರಾಜ್ಯದಲ್ಲಿ ಹೊಸ ಸೋಂಕು ಪ್ರಕರಣಗಳು ಇಳಿಕೆಯಾದರೂ, ಸಾವಿನ ಪ್ರಮಾಣ ಮಾತ್ರ ಇಳಿಕೆಯಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊಪ್ಪಳ ಮೂಲದ 2 ವರ್ಷದ ಮಗು ಸೇರಿ 340 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದು, ಸೋಮವಾರ 11,958 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 27,07,481ಕ್ಕೆ ತಲುಪಿದೆ. ರಾಜ್ಯದಲ್ಲಿ 0-9 ವರ್ಷದ 81,520 ಮಕ್ಕಳಿಕೆ ಸೋಂಕು ತಗುಲಿದ್ದು, 10-19 ವರ್ಷದ 2,03,526 ಮಕ್ಕಳಿಗೆ ಸೋಂಕು ತಗುಲಿರುವುದು

ಕೋವಿಡ್-19: ರಾಜ್ಯದಲ್ಲಿ ಇಳಿಯದ ಸಾವಿನ ಪ್ರಕರಣ Read More »

ಕರ್ನಾಟಕ

ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ ➤ 5 ಭಾಷೆಗಳಲ್ಲಿ 777 ಚಾರ್ಲಿ ಸಿನಿಮಾ ಟೀಸರ್ ರಿಲೀಸ್

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.06:’ಕಿರಿಕ್ ಪಾರ್ಟಿ’ ಹೀರೋ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕನಾಗಿಯೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ರಕ್ಷಿತ್ ಶೆಟ್ಟಿ ಬರ್ತ್​ಡೇಗೆ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘777 ಚಾರ್ಲಿ. ಚಿತ್ರತಂಡ ಸರ್​ಪ್ರೈಸ್ ಒಂದನ್ನು ನೀಡಿದೆ. ರಕ್ಷಿತ್ ಶೆಟ್ಟಿ ನಾಯಕನಾಗಿರುವ 777 ಚಾರ್ಲಿ ಎಂಬ ಮುದ್ದಾದ ನಾಯಿಯ ಕತೆಯಿರುವ ‘777 ಚಾರ್ಲಿ’ ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ.ಕನ್ನಡ, ತಮಿಳು, ತೆಲುಗು,

ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ ➤ 5 ಭಾಷೆಗಳಲ್ಲಿ 777 ಚಾರ್ಲಿ ಸಿನಿಮಾ ಟೀಸರ್ ರಿಲೀಸ್ Read More »

ಸಿನಿಮಾ

ಕನ್ನಡದ ಹಿರಿಯ ನಟಿ ಸುರೇಖಾ ನಿಧನ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.06: ವರನಟ ಡಾ. ರಾಜ್‌ಕುಮಾರ್ ಜತೆ “ತ್ರಿಮೂರ್ತಿ”ಯಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಸುರೇಖಾ (66) ಹೃದಯಾಘಾತದಿಂದ ನಿಧನರಾದರು.   160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುರೇಖಾ ಬೆಂಗಳೂರು ನಗರದಲ್ಲಿ ನಿಧನರಾದರು. ಮಣ್ಣಿನ ಮಕ್ಕಳು, ಸಂಭ್ರಮ, ಕಿಂಗ್, ಶಂಕರ್ ಸುಂದರ್, ಆಲೆಮನೆ, ಬಿಳಿಗಿರಿಯ ಬನದಲ್ಲಿ ಚಿತ್ರಗಳಲ್ಲಿ ರಾಜ್‌ಕುಮಾರ್ ಜತೆ ನಟಿಸಿದ್ದಾರೆ.ಬನಶಂಕರಿ ಚಿತಾಗಾರದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.  

ಕನ್ನಡದ ಹಿರಿಯ ನಟಿ ಸುರೇಖಾ ನಿಧನ Read More »

ಕರಾವಳಿ

MRPL ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ ➤ ಪ್ರತಿಭಟನೆ ನಡೆಸಿ ಆಕ್ರೋಶ

(ನ್ಯೂಸ್ ಕಡಬ) newskadaba,ಮಂಗಳೂರು ಜೂ.06: ಎಂಆರ್​ಪಿಎಲ್​ನ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆಗಿರುವ ಅನ್ಯಾಯ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮನೆ-ಮನೆ ಪ್ರತಿಭಟನೆ ನಡೆಸಲಾಯಿತು. ಡಿವೈಎಫ್ಐ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಬೆಂಬಲದೊಂದಿಗೆ ಮನೆಮನೆ ಪ್ರತಿಭಟನೆ ನಡೆಯಿತು.   ತುಳುನಾಡ ಅಭಿವೃದ್ದಿಯಲ್ಲಿ ತುಳುವರಿಗೆ ದೊಡ್ಡ ಪಾಲು ಸಿಗಬೇಕು. ಸ್ಥಳೀಯರಿಗೆ ಉದ್ಯೋಗ ನಿರಾಕರಿಸುವ ಕಂಪನಿಗಳಿಗೆ ಬೀಗ ಜಡಿಯಿರಿ ಎಂಬ ಫಲಕಗಳೊಂದಿಗೆ ಡಿವೈಎಫ್ಐ, ಎಸ್​ಎಫ್ಐ ಕಾರ್ಯಕರ್ತರು, ಸಿಪಿಎಂ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

MRPL ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ ➤ ಪ್ರತಿಭಟನೆ ನಡೆಸಿ ಆಕ್ರೋಶ Read More »

ಕರ್ನಾಟಕ

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸದ್ಯದಲ್ಲೇ ಕೊರೊನಾ ಲಸಿಕೆ ➤ ಸಚಿವ ಡಾ.ಕೆ. ಸುಧಾಕರ್‌

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.06: ಸದ್ಯಕ್ಕೆ 18 ವರ್ಷ ಮೇಲ್ಪಟ್ಟ ಆದ್ಯತಾ ಗುಂಪಿನವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಅತೀ ಶೀಘ್ರದಲ್ಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು. ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ  ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಉಚಿತ ದಿನಸಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಲಾ 5 ಸಾವಿರ ರೂಪಾಯಿ ಸಹಾಯಧನ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸದ್ಯದಲ್ಲೇ ಕೊರೊನಾ ಲಸಿಕೆ ➤ ಸಚಿವ ಡಾ.ಕೆ. ಸುಧಾಕರ್‌ Read More »

ಕರ್ನಾಟಕ

ದ. ಕನ್ನಡದ ಮೊದಲ ಆಕ್ಸಿಜನ್ ಉತ್ಪಾದನಾ ಘಟಕ ಬಂಟ್ವಾಳದಲ್ಲಿ ಉದ್ಘಾಟನೆ

(ನ್ಯೂಸ್ ಕಡಬ) newskadaba,ಬಂಟ್ವಾಳ ಜೂ.05:ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಆಕ್ಸಿಜನ್ ಉತ್ಪಾದನಾ ಘಟಕವನ್ನು ವಾಮದಪದವು ಸಮುದಾಯ ಬಂಟ್ವಾಳದ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಉದ್ಘಾಟನೆ ಮಾಡಲಾಯಿತು.     ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದರು.ಬಂಟ್ವಾಳದಲ್ಲಿ ಕೊರೊನಾ ವಿರುದ್ಧ ಹೋರಾಟ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್ ಹಾಗೂ ಅಧಿಕಾರಿ ವೃಂದದ ಶ್ರಮವನ್ನು ಅವರು ಶ್ಲಾಘಿಸಿದರು.  

ದ. ಕನ್ನಡದ ಮೊದಲ ಆಕ್ಸಿಜನ್ ಉತ್ಪಾದನಾ ಘಟಕ ಬಂಟ್ವಾಳದಲ್ಲಿ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಸುಳಿವು ನೀಡಿದ ಸಿಎಂ ಬಿಎಸ್‌ವೈ..!?

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.05: ಕೊರೋನಾ ನಿರೀಕ್ಷಿತ ಮಟ್ಟದಲ್ಲಿ ಕಡಿಮೆ ಆಗದ ಕಾರಣ ಜೂ. 3ರಂದು ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಿ ಘೋಷಣೆ ಮಾಡಲಾಗಿತ್ತು.   ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಲಾಕ್‌ಡೌನ್ ಸಡಿಲಿಕೆ ಕುರಿತು ಸುಳಿವು ಕೊಟ್ಟಿದ್ದಾರೆ. ಸೋಮವಾರದಿಂದ ಲಾಕ್‌ಡೌನ್‌ ಸಡಿಲಿಕೆ ಮಾಡುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.ಇನ್ನು ಮೂರ್ನಾಲ್ಕು ದಿನ ರಾಜ್ಯದ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತೇವೆ. ಯಾವ್ಯಾವ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಗಮನಿಸುತ್ತೇವೆ. ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು

ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಸುಳಿವು ನೀಡಿದ ಸಿಎಂ ಬಿಎಸ್‌ವೈ..!? Read More »

ಕರ್ನಾಟಕ

ಭಾರತದಲ್ಲಿ ದೈನಂದಿನ ಕೊರೋನಾ ವೈರಸ್ ಪ್ರಕರಣಗಳು ಇಳಿಕೆ

(ನ್ಯೂಸ್ ಕಡಬ) newskadaba,ನವದೆಹಲಿ ಜೂ.05: ಭಾರತದಲ್ಲಿ ದೈನಂದಿನ ಕೊರೋನಾ ವೈರಸ್ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1,20,529 ಕೇಸ್ ದಾಖಲಾಗಿವೆ. ಅಲ್ಲದೆ, 3,380 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.   ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,86,94,879ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 3,44,082ಕ್ಕೆ ತಲುಪಿದೆ.  ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ

ಭಾರತದಲ್ಲಿ ದೈನಂದಿನ ಕೊರೋನಾ ವೈರಸ್ ಪ್ರಕರಣಗಳು ಇಳಿಕೆ Read More »

ರಾಷ್ಟ್ರೀಯ ನ್ಯೂಸ್

ಕಾರ್ಕಳ: ಊಟ ಕೇಳಿದ ಹೆತ್ತ ತಾಯಿಗೆ ಥಳಿಸಿದ ಪಾಪಿ ಪುತ್ರ

(ನ್ಯೂಸ್ ಕಡಬ) newskadaba,ಕಾರ್ಕಳ ಜೂ.05: ಊಟ ಕೇಳಿದ 82 ವರ್ಷದ ತಾಯಿಯನ್ನು ಮಗ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿ ಕ್ರೂರತ್ವ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.   ತಾಲೂಕಿನ ಕಲ್ಯಾ ಗ್ರಾಮದ ಕೈಕಂಬ ಎಂಬಲ್ಲಿ 82 ವರ್ಷದ ಯಶೋಧ ಹಾಗೂ ಮಗ ದಾಮೋದರನೊಂದಿಗೆ ವಾಸವಾಗಿದ್ದರು. ತಾಯಿ ಹಸಿವಿನಿಂದ ಮಗನಲ್ಲಿ ಊಟ ಕೇಳಿದ್ದಾರೆ. ಈ ವೇಳೆ ಕೋಪಗೊಂಡ ಮಗ ದಾಮೋದರ ಊಟ ನೀಡದೇ, ಎದ್ದು ನಿಲ್ಲಲು ಆಗದ ವೃದ್ಧೆ ತಾಯಿಯನ್ನು ಹೊಡೆದು ಮನೆಯಿಂದ ಹೊರಗೆ ಹಾಕಿದ್ದಾನೆ ಎನ್ನಲಾಗಿದೆ.

ಕಾರ್ಕಳ: ಊಟ ಕೇಳಿದ ಹೆತ್ತ ತಾಯಿಗೆ ಥಳಿಸಿದ ಪಾಪಿ ಪುತ್ರ Read More »

ಕರ್ನಾಟಕ
Scroll to Top