ಉಳ್ಳಾಲ: ವಾಚು, ಚಪ್ಪಲಿ, ಕನ್ನಡಕ, ಸೇತುವೆ ಮೇಲಿಟ್ಟು ► ಅಪರಿಚಿತ ವ್ಯಕ್ತಿ ಆತ್ಮಹತ್ಯೆಗೆ ಶರಣು
(ನ್ಯೂಸ್ ಕಡಬ) newskadaba.com ಕಡಬ,ಅ12. ಅಪರಿಚಿತ ವ್ಯಕ್ತಿಯೊರ್ವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಉಳ್ಳಾಲ ಸಮೀಪ ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿ ತನ್ನ ವಾಚು, ಚಪ್ಪಲಿ, ಕನ್ನಡಕ, ನೇತ್ರಾವತಿ ಸೇತುವೆಯ ಮೇಲಿಟ್ಟು ನದಿಗೆ ಹಾರಿದ್ದಾನೆ. ದಾರಿಯಲ್ಲಿ ಸಾಗುವ ವಾಹನ ಚಾಲಕರು ವ್ಯಕ್ತಿಯನ್ನು ತಡೆಯಲು ಮುಂದಾಗುತ್ತಿದ್ದಂತೆ ನದಿಗೆ ಹಾರಿದ್ದಾನೆ ಎನ್ನಲಾಗಿದೆ. ಈ ಕುರಿತು ಉಳ್ಳಾಲ ಠಾಣೆಗೆ ಮಾಹಿತಿ ನೀಡಲಾಗಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಳ್ಳಾಲ: ವಾಚು, ಚಪ್ಪಲಿ, ಕನ್ನಡಕ, ಸೇತುವೆ ಮೇಲಿಟ್ಟು ► ಅಪರಿಚಿತ ವ್ಯಕ್ತಿ ಆತ್ಮಹತ್ಯೆಗೆ ಶರಣು Read More »
ಕರಾವಳಿ
