Nelyady

ಕೊಲ್ಯೊಟ್ಟು : ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ

ಕಾಣಿಯೂರು :  ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು ಹಾಗೂ ಪ್ರಮುಖಿ ಮಹಿಳಾ ಮಂಡಲ ಕೊಲ್ಯೊಟ್ಟು ನೆಲ್ಯಾಡಿ ಇದರ ವತಿಯಿಂದ ಕೊಲ್ಯೊಟ್ಟು ಅಂಗನವಾಡಿ  ಕೇಂದ್ರದಲ್ಲಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ ಮಂಗಳವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಂಪಾವತಿ ಮಾತನಾಡಿ, ಕ್ರೀಯಾಶೀಲತೆ ಮತ್ತು ವೈಚಾರಿಕತೆಯಿಂದ ಬದುಕಿದ ಪಂಡಿತ್ ದೀನ್ ದಯಾಳ್ ಉಪಾದ್ಯಾಯರು ಯಾವುದೇ ಸ್ಥಾನವನ್ನು ಬಯಸದೇ ಸಾಮಾನ್ಯ ವ್ಯಕ್ತಿಯಾಗಿಯೇ ಅಸಾಮಾನ್ಯ ಸಾಧನೆ ತೋರಿದವರು.ಅವರ ಜೀವನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು. […]

ಕೊಲ್ಯೊಟ್ಟು : ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ Read More »

ಕರಾವಳಿ, ಕರ್ನಾಟಕ

ನೆಲ್ಯಾಡಿ ಕೊಲ್ಯೊಟ್ಟು ಬೈಲು ಅಂಗನವಾಡಿಯಲ್ಲಿ ಮಹಿಳಾದಿನಾಚರಣೆ ► ಹಿರಿಯ ನಾಗರಿಕೆ ದಾರಮ್ಮ ಅಣ್ಣುಶೆಟ್ಟಿ ಅವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.23. ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟುಬೈಲು ಅಂಗನವಾಡಿಯಲ್ಲಿ ಮಹಿಳಾದಿನಾಚರಣೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುನೀತಾ ಅಧ್ಯಕ್ಷತೆ ವಹಿಸಿದ್ದರು. ‘ಪ್ರಮುಖಿ’ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ಯಾಮಾಲ ಜಿ. ಉದ್ಘಾಟಿಸಿದರು. ರಾಜ್ಯ ಯುವಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಮಂಗಳೂರು ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ  ಜಿಸ್ಮಿತಾ ಕೆ.ಆರ್ ಉಪಸ್ಥಿತರಿದ್ದರು. ರತ್ನಾಕರ

ನೆಲ್ಯಾಡಿ ಕೊಲ್ಯೊಟ್ಟು ಬೈಲು ಅಂಗನವಾಡಿಯಲ್ಲಿ ಮಹಿಳಾದಿನಾಚರಣೆ ► ಹಿರಿಯ ನಾಗರಿಕೆ ದಾರಮ್ಮ ಅಣ್ಣುಶೆಟ್ಟಿ ಅವರಿಗೆ ಸನ್ಮಾನ Read More »

ಕರಾವಳಿ
Scroll to Top