navarathri

ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ ► ನವರಾತ್ರಿ ಉತ್ಸವ, ಹೊಸಅಕ್ಕಿ ನೈವೇದ್ಯ

(ನ್ಯೂಸ್ ಕಡಬ) newskadaba.com ಕಡಬ,ಅ.4. ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಅಂಗವಾಗಿ, ಆಯುಧಪೂಜೆ, ಅಕ್ಷರಾಭ್ಯಾಸ ಹಾಗೂ ಹೊಸಅಕ್ಕಿ ನೈವೇದ್ಯ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಧಾರ್ಮಿಕ ವಿಧಿವಿಧಾನಗಳನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಶಶಿ ಗಿರಿವನ ನಾಲೂರು ನೆರವೇರಿಸಿದರು. ಅರ್ಚಕ ಕೃಷ್ಣ ಹೆಬ್ಬಾರ್ ಸಹಕರಿಸಿದರು. ನವರಾತ್ರಿ ಸಂದರ್ಭದಲ್ಲಿ ದೇವಳದಲ್ಲಿ ಆಯುಧಪೂಜೆ,  ಅಕ್ಷರಾಭ್ಯಾಸ ಹಾಗೂ ಹೊಸಅಕ್ಕಿ ನೈವೇದ್ಯ ಕಾರ್ಯಕ್ರಮವು ಜರುಗಿತು. ದೇವಳದ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಲೆ, ಕಾರ್ಯದರ್ಶಿ ಬಾಲಕೃಷ್ಣ ಗೌಡ […]

ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ ► ನವರಾತ್ರಿ ಉತ್ಸವ, ಹೊಸಅಕ್ಕಿ ನೈವೇದ್ಯ Read More »

ಕರಾವಳಿ

ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ ► ನವರಾತ್ರಿ ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com ಕಡಬ,ಅ.4. ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ, ಆಯುಧ ಪೂಜೆಯು ವಿಜೃಂಭಣೆಯಿಂದ ನಡೆಯಿತು. ನವರಾತ್ರಿ ಅಂಗವಾಗಿ ಪ್ರತಿದಿನ ರಾತ್ರಿ ದೇವರ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ, ಶ್ರೀದುರ್ಗಾಪೂಜೆ, ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಮತ್ತು ಅಲಂಕಾರ,ಅರ್ಚನೆ ಹೂವಿನ ಪೂಜೆ ವಿಶೇಷ ಸೇವೆಗಳು ನಡೆದು ದೇವರಿಗೆ ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆದವು. ವಿಶೇಷವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಲಾಯಿತು. ಆಯುಧ ಪೂಜೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಅಭ್ಯಾಂಕರ್

ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ ► ನವರಾತ್ರಿ ವಿಶೇಷ ಪೂಜೆ Read More »

ಕರಾವಳಿ

ಈ ವರ್ಷ ನನ್ನ ಕೊನೆಯ ದಸರಾ ಆಚರಣೆ ► ಜನಾರ್ಧನ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19, ‘ಮುಂದಿನ ನವರಾತ್ರಿ, ಉತ್ಸವವನ್ನು ನಾನು ನೋಡುತ್ತೇನೋ ಇಲ್ಲವೊ ಗೊತ್ತಿಲ್ಲ. ಬಹುಶಃ ಈ ಬಾರಿಯ ದಸರಾ ನನ್ನ ಕೊನೆಯ ಆಚರಣೆ ಆದರೂ ಅಚ್ಚರಿ ಇಲ್ಲ. ಇದು ನನ್ನ ಕೊನೇ ಸುದ್ದಿಗೋಷ್ಠಿ ಇದ್ದರೂ ಇರಬಹುದು’ ಎಂದು ವಿಷಾದಭರಿತ ಮಾತುಗಳನ್ನಾಡಿದವರು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ. ಮಂಗಳೂರಿನ ಕುದ್ರೋಳಿ ಕ್ಷೇತ್ರದಲ್ಲಿ ದಸರಾ ಆಚರಣೆ ಕುರಿತು ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ವಿಷಾದದ ಮಾತನ್ನು ನುಡಿದು ಕೊನೆಗೆ ಮೌನಕ್ಕೆ ಜಾರಿದರು.

ಈ ವರ್ಷ ನನ್ನ ಕೊನೆಯ ದಸರಾ ಆಚರಣೆ ► ಜನಾರ್ಧನ ಪೂಜಾರಿ Read More »

ಕರಾವಳಿ
Scroll to Top