ಮ್ಯಾಟ್ರಿಮೊನಿ ವೆಬ್ಸೈಟ್ನಲ್ಲಿ ಮದುವೆ ವಿವರ ಹಾಕಿ ► 11.39 ಲಕ್ಷ ರೂ. ಕಳೆದುಕೊಂಡ ಮುಲ್ಕಿಯ ವ್ಯಕ್ತಿ..!!!
(ನ್ಯೂಸ್ ಕಡಬ) newskadaba.com ಮಂಗಳೂರು, ಅ.17. ಫಾರಿನ್ ಹುಡುಗಿಯನ್ನು ಮದುವೆಯಾಗುವ ಆಸೆಯಿಂದ ವ್ಯಕ್ತಿಯೋರ್ವರು ತನ್ನ ಮದುವೆಯ ಕುರಿತು ಕನ್ನಡ ಮ್ಯಾಟ್ರಿಮೊನಿ ವೆಬ್ಸೈಟ್ನಲ್ಲಿ ವಿವರ ಹಾಕಿದ ಬಳಿಕ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡ ಘಟನೆ ಮುಲ್ಕಿಯಲ್ಲಿ ನಡೆದಿದೆ. ವಿದೇಶಿ ಯುವತಿಯ ಜಾಲದಲ್ಲಿ ಬಿದ್ದ ಯುವಕ ಈಗ ಸರಿ ಸುಮಾರು 11.39 ಲಕ್ಷ ರೂಪಾಯಿ ಕಳೆದು ಕೊಂಡಿದ್ದಾನೆ. ಸಿಂಗಾಪುರದಲ್ಲಿ ಉದ್ಯೋಗದಲ್ಲಿದ್ದ ಮುಲ್ಕಿಯ ಯುವಕನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಕೆಲವು ಸಮಯದ ಹಿಂದೆ ಹೆಂಡತಿಗೆ ಡೈವೋರ್ಸ್ ನೀಡಿದ್ದ. ಎರಡನೇ ಮದುವೆಗೋಸ್ಕರ ಈತ 2017 ರ ಜೂನ್ ನಲ್ಲಿ ಮ್ಯಾಟ್ರಿಮೋನಿಯಲ್ […]
