Mangalore

ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ➤ ಡಿಪ್ಲೊಮಾ ಆಫ್-ಲೈನ್ ಮುಖಾಂತರ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.9.ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ಈ ಸಂಸ್ಥೆಯಲ್ಲಿ 2019-20ನೇ ಸಾಲಿನ ಪ್ರಥಮ ವರ್ಷ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಭರ್ತಿಯಾಗದೇ ಖಾಲಿ ಉಳಿದಿರುವ ಸೀಟುಗಳಿಗೆ ಆಫ್-ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವೆಬ್‍ಸ್ಶೆಟ್ www.dte.kar.nic.in ಮೂಲಕ ಡೌನಲೋಡ್ ಮಾಡಿ ಜುಲೈ 15 ರಿಂದ ಜುಲೈ 19 ರವರೆಗೆ ಬೆಳಿಗ್ಗೆ 10.30 ಗಂಟೆಯಿಂದ ಸಚಿಜೆ 5.30 ಗಂಟೆಯವರೆಗೆ ಸ್ವೀಕರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಕಚೇರಿ ದೂರವಾಣಿ ಸಂಖ್ಯೆ: 0824-2211636 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ […]

ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ➤ ಡಿಪ್ಲೊಮಾ ಆಫ್-ಲೈನ್ ಮುಖಾಂತರ ಅರ್ಜಿ ಆಹ್ವಾನ Read More »

ಕರಾವಳಿ

ಮಂಗಳೂರು ವಿಭಾಗದ ಕೇಂದ್ರಿಯ ಮರಗಳ ಸಂಗ್ರಹಾಲಯ ➤ ಇ-ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.9.ಮಂಗಳೂರು ವಿಭಾಗದ ಕೇಂದ್ರಿಯ ಮರಗಳ ಸಂಗ್ರಹಾಲಯ ಸುಳ್ಯ, ನೆಟ್ಟಣ, ಮಣ್ಣಗುಂಡಿಯಲ್ಲಿ ದಾಸ್ತಾನು ಇರುವ ಅರಣ್ಯ ಉತ್ಪನ್ನಗಳನ್ನು ಜುಲೈ 20 ರಂದು ಇ-ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.mstcecommerce.com ನ್ನು ಸಂಪರ್ಕಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗ ಇವರ ಪ್ರಕಟಣೆ ತಿಳಿಸಿದೆ.

ಮಂಗಳೂರು ವಿಭಾಗದ ಕೇಂದ್ರಿಯ ಮರಗಳ ಸಂಗ್ರಹಾಲಯ ➤ ಇ-ಹರಾಜು Read More »

ಕರಾವಳಿ

ಜಿಲ್ಲಾ ಮಟ್ಟದ ವಾರ್ಷಿಕ ಮಹಾಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.9.ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ ಮಂಗಳೂರು ಇದರ ಜಿಲ್ಲಾ ಮಟ್ಟದ ವಾರ್ಷಿಕ ಮಹಾಸಭೆ ಹಾಗೂ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಸರಕಾರಿ ವಾಹನ ಚಾಲಕರಿಗೆ ಸನ್ಮಾನ ಸಮಾರಂಭವು ಸಂಘದ ಆದ್ಯಕ್ಷ ಅರುಣಕಾಂತ್ ಅವರ ಅಧ್ಯಕ್ಷತೆಯಲ್ಲಿ ಜೂನ್ 7 ರಂದು ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಕೆ ಬಾಲಕೃಷ್ಣ ಹಿಂದಿನ ಸಭೆಯ ನಡಾವಳಿಯನ್ನು ಮಂಡಿಸಿದರು. ಉಪಾಧ್ಯಕ್ಷ ಪೌಲ್ ಡಿಸೋಜ ಲೆಕ್ಕಪತ್ರಗಳನ್ನು ಮಂಡಿಸಿದರು.ಸಂಘದ ಮಾಜಿ ಅಧ್ಯಕ್ಷ ಬಿ

ಜಿಲ್ಲಾ ಮಟ್ಟದ ವಾರ್ಷಿಕ ಮಹಾಸಭೆ Read More »

ಕರಾವಳಿ

ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.9.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜುಲೈ 15 ರಿಂದ 27 ರವರೆಗೆ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಕ್ಷಯರೋಗದ ಪ್ರಮುಖ ಅಂಶಗಳು ಇಂತಿವೆ: ನಿರಂತರ ಚಿಕಿತ್ಸೆಯಿಂದ ಕ್ಷಯ ರೋಗವನ್ನು ಗುಣಪಡಿಸುವುದು. ಟಿಬಿಯು ಶ್ವಾಸಕೋಶಗಳಿಗಷ್ಟೇ ಅಲ್ಲದೆ ದೇಹದ ಇನ್ನಿತರ ಭಾಗಗಳಿಗೂ ಹರಡಬಹುದು, ರೋಗ ನಿರ್ಣಯಿಸಿದ ಎಲ್ಲಾ ಪ್ರಕರಣಗಳಿಗೆ ಉಚಿತ ಚಿಕಿತ್ಸೆ. ಕಫವನ್ನು ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ, ಅಪೂರ್ಣ ಚಿಕಿತ್ಸೆಯು ಹೆಚ್ಚಿನ ತೊಂದರೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಕೊಳಚೆ ಪ್ರದೇಶ, ಹಿಂದುಳಿದವರ್ಗ,

ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ Read More »

ಕರಾವಳಿ

ಬಂಟ್ವಾಳ ತ್ರೈಮಾಸಿಕ ಕೆ.ಡಿ.ಪಿ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.9.ಬಂಟ್ವಾಳ ತಾಲೂಕು ಪಂಚಾಯತ್‍ನ 2019-20 ನೇ ಸಾಲಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಮೀಕ್ಷಾ ಸಭೆಯನ್ನು ಆಯೋಜಿಸಲಾಗಿದೆ. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಎಸ್.ಜಿ,ಎಸ್.ವೈ ಸಭಾಂಗಣದಲ್ಲಿ ಜುಲೈ 30 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ.

ಬಂಟ್ವಾಳ ತ್ರೈಮಾಸಿಕ ಕೆ.ಡಿ.ಪಿ ಸಭೆ Read More »

ಕರಾವಳಿ

ಮಂಗಳೂರು-ಬೆಂಗಳೂರು ಮಳೆಗಾಲದಲ್ಲಿ ರೈಲುಸಂಚಾರ ಕಷ್ಟಕರ➤ಪಶ್ಚಿಮಘಟ್ಟದ ಮೂಲಕ ಹಾದುಹೋಗುವ ರೈಲುಮಾರ್ಗದಲ್ಲಿ ಗುಡ್ಡ ಕುಸಿತ.

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜುಲೈ.8.ಬೆಂಗಳೂರು- ಮಂಗಳೂರು ನಡುವೆ ಪ್ರತೀ ವರ್ಷ ಮಳೆಗಾಲದಲ್ಲಿ ರೈಲು ಸಂಚಾರ ಅನುಮಾನ. ಸಕಲೇಶಪುರ – ಸುಬ್ರಹ್ಮಣ್ಯ ರೈಲು ಮಾರ್ಗದ ಮಧ್ಯೆ ಕಳೆದ ಬಾರಿ ಅತಿವೃಷ್ಟಿ ಸಂದರ್ಭ 65 ಕಡೆ ಭೂಕುಸಿತ ಸಂಭವಿಸಿ ತಿಂಗಳುಗಟ್ಟಲೆ ರೈಲು ಓಡಾಟ ಸ್ಥಗಿತಗೊಂಡಿತ್ತು. ಮಾರ್ಗದ ಎರಡೂ ಕಡೆ ಗುಡ್ಡಗಳು ಈಗಲೂ ಬಾಯ್ದಿರೆದೇ ಇವೆ. ಹೀಗಾಗಿ ಈ ಬಾರಿಯೂ ಮಳೆ ಜೋರಾದಾಗ ಭೂಕುಸಿತ ಪುನರಾವರ್ತನೆಯಾಗುವ ಸಾಧ್ಯತೆ ಹೆಚ್ಚು.ಈ ರೈಲು ಮಾರ್ಗ ನಿರ್ಮಾಣವಾದ ಬಳಿಕ ಇಷ್ಟು ಭಾರೀ ಪ್ರಮಾಣದಲ್ಲಿ ಗುಡ್ಡ

ಮಂಗಳೂರು-ಬೆಂಗಳೂರು ಮಳೆಗಾಲದಲ್ಲಿ ರೈಲುಸಂಚಾರ ಕಷ್ಟಕರ➤ಪಶ್ಚಿಮಘಟ್ಟದ ಮೂಲಕ ಹಾದುಹೋಗುವ ರೈಲುಮಾರ್ಗದಲ್ಲಿ ಗುಡ್ಡ ಕುಸಿತ. Read More »

ಕರಾವಳಿ

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಶಾಸಕರ ರಾಜೀನಾಮೆಗೆ ಬಿಜೆಪಿ ಕಾರಣವಲ್ಲ ➤ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜುಲೈ.8.ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ 14 ಶಾಸಕರು ರಾಜೀನಾಮೆ ಕೊಡುವ ಮೂಲಕ ರಾಜ್ಯ ಸರ್ಕಾರಕ್ಕೆ ಅಲ್ಪಬಹುಮತಕ್ಕೆ ಇಳಿದಿದೆ.ನಮ್ಮ ಭಾರತೀಯ ಜನತಾ ಪಕ್ಷ ಯಾವುದೇ ಶಾಸಕರಿಗೆ ರಾಜೀನಾಮೆ ನೀಡಿ ಎಂದು ಒತ್ತಡ ಹೇರಿಲ್ಲ. ರಾಜೀನಾಮೆ ಪರ್ವ ಆರಂಭಿಸಿದ್ದು ರಾಹುಲ್ ಗಾಂಧಿ ಎಂದು ತಿರುಗೇಟು ನೀಡಿದ್ದಾರೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ಸಂಸದರ ಆರೋಪಕ್ಕೆ ರಾಜನಾಥ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಶಾಸಕರ ರಾಜೀನಾಮೆಗೆ ಬಿಜೆಪಿ ಕಾರಣವಲ್ಲ ➤ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ Read More »

ಕರಾವಳಿ

ನೂಜಿಬಾಳ್ತಿಲದ ದಿಲೀಪ್ ಕವಿವೃಕ್ಷ ಬಳಗದ ಜಿಲ್ಲಾಧ್ಯಕ್ಷನಾಗಿ ಆಯ್ಕೆ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಜುಲೈ.8.ರಾಜ್ಯ ಕವಿವೃಕ್ಷ ಬಳಗದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷನಾಗಿ ಯುವ ಕವಿ ನೂಜಿಬಾಳ್ತಿಲ ಗ್ರಾಮದ ದಿಲೀಪ್ ವೇದಿಕ್ ಕಡಬ ಆಯ್ಕೆಯಾಗಿದ್ದಾರೆ. ಯುವ ಕವಿ, ಸಾಹಿತಿಯಾಗಿರುವ ದಿಲೀಪ್ ವೇದಿಕ್ ಇವರು ಕವಿ, ಕಥೆಗಾರ, ಗಾಯಕ, ವಾಗ್ಮಿಯಾಗಿ, ಕರ್ನಾಟಕ ಹಾಗೂ ಕೇರಳ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸುವ ಜತೆಗೆ ಈಗಾಗಲೇ ಹಲವಾರು ಕೃತಿ, ಕವನಗಳನ್ನು ರಚಿಸಿದ್ದಾರೆ. ಇವರು ದ.ಕ. ಜಿಲ್ಲಾ ಕವಿ ಬಳಗ ಮತ್ತು ಅಕಾಡೆಮಿಯ ಸದಸ್ಯರಾಗಿದ್ದರು. ಇದೀಗ ಇವರನ್ನು ಕವಿವೃಕ್ಷ ಬಳಗದ ದ.ಕ. ಜಿಲ್ಲಾಧ್ಯಕ್ಷರನ್ನಾಗಿ

ನೂಜಿಬಾಳ್ತಿಲದ ದಿಲೀಪ್ ಕವಿವೃಕ್ಷ ಬಳಗದ ಜಿಲ್ಲಾಧ್ಯಕ್ಷನಾಗಿ ಆಯ್ಕೆ Read More »

ಕರಾವಳಿ

ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ➤ ಈಜು ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶುಭಹಾರೈಕೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.8.ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ (SFI) ಸಂಸ್ಥೆ ಆಶ್ರಯದಲ್ಲಿ ಜೂನ್  2019ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಈಜು ಸಂಕೀರ್ಣ, ಇದರ ವತಿಯಿಂದ ಈಜು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್‍ಕೋಟ್, ಗುಜರಾತ್ ಇಲ್ಲಿ ನಡೆದ 46ನೇ ರಾಷ್ಟ್ರೀಯ ಜೂನಿಯರ್ ಹಾಗೂ 36ನೇ ಸಬ್ ಜೂನಿಯರ್ ಈಜು ಚಾಂಪಿಯನ್‍ಶಿಪ್-2019ನ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ 4 x 50 ಮೀಟರ್ ಫ್ರೀ ಸ್ಟ್ರೈಲ್ ರೀಲೆಯಲ್ಲಿ ಮಂಗಳೂರಿನ ಶ್ರೀ ವಫೀ ಅಬ್ದುಲ್ ಹಕೀಂ ಚಿನ್ನದ ಪದಕ ಹಾಗೂ

ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ➤ ಈಜು ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶುಭಹಾರೈಕೆ. Read More »

ಕರಾವಳಿ

ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.8.ಬೈಕಂಪಾಡಿಯ ಗ್ರೂಪ್ ಓವರ್ ಕಂಪೆನಿಯಲ್ಲಿ ಎಲೆಕ್ಟ್ರೀಕಲ್ ಕೆಲಸ ಮಾಡಿಕೊಂಡಿದ್ದ, ಬೆಳಗಾವಿ ಜಿಲ್ಲೆಯ ಬಸವರಾಜ್(32) ಎಂಬಾತನು ಜುಲೈ 4 ರಿಂದ ಕಾಣೆಯಾಗಿದು,್ದ ಪ್ರಕರಣ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೂಲತ: ಸವದತ್ತಿ ತಾಲೂಕಿನ ಮೂರುಗೋಡು ಹೋಬಳಿಯ ಬಸವರಾಜ್, ಜೀನ್ಸ್ ಪ್ಯಾಂಟ್ ಮತ್ತು ಸಾಧಾರಣ ಶರ್ಟ್ ಧರಿಸಿರುತ್ತಾರೆ. ಎತ್ತರ 150 ಸೆಂ.ಮಿ, ಮಾತನಾಡುವ ಭಾಷೆ ಕನ್ನಡ ಬಿಳಿ ಮೈಬಣ್ಣ, ಕಪ್ಪು ಕೂದಲು. ಈ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣಾ ದೂರವಾಣಿ

ಕಾಣೆಯಾಗಿದ್ದಾರೆ Read More »

ಕರಾವಳಿ
Scroll to Top