ಕೊಂಬಾರಿನ ಲೋಕೇಶ್ ಎಂಬವರಿಗೆ ಅರಣ್ಯಾಧಿಕಾರಿಗಳಿಂದ ಹಲ್ಲೆ ಆರೋಪ ➤ ಅಮಾಯಕನಿಗೆ ಹಲ್ಲೆ- ಸೆ.21ರಂದು ಕೆಂಜಾಳದಲ್ಲಿ ಪ್ರತಿಭಟನೆ
(ನ್ಯೂಸ್ ಕಡಬ) newskadaba.com ಕಡಬ ,ಸಪ್ಟೆಂಬರ್.21.ಅರಣ್ಯಧಿಕಾರಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕೊಂಬಾರು ನಿವಾಸಿ ಲೋಕೇಶ್ ಕಾಪಾರು ಅವರು ಸೆ.19ರಂದು ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಬ್ರಹ್ಮಣ್ಯ ಅರಣ್ಯ ವಿಭಾಗದ ಭಾಗಿಮಲೆ ಮೀಸಲು ಅರಣ್ಯದ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿ ನಿರಪರಾಧಿಯಾದ ತನ್ನ ಮೆಲೆ ಅರಣ್ಯಾಧಿಕಾರಿಗಳು ಹಲ್ಲೆ ನಡೆಸಿದ್ದಾಗಿ ಅವರು ಆರೋಪಿಸಿದ್ದಾರೆ, ಕೆಲವು ದಿನಗಳ ಹಿಂದೆ ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳವು ನಡೆದಿತ್ತು, ಈ ಮರಗಳನ್ನು […]






