Mangalore

ಕೋವಿಡ್ ವಾರಿಯರ್ಸ್‌ಗೆ ಕಿರುಕುಳ ➤ ಜಿಲ್ಲಾಧಿಕಾರಿಗೆ ದೂರು

(ನ್ಯೂಸ್ ಕಡಬ) newskadaba.com ಮಂಗಳೂರು , ಜು.23:  ಕೋವಿಡ್-19 ಸೋಂಕಿತರ ಚಿಕಿತ್ಸೆಯಲ್ಲಿ ಶ್ರಮಿಸುತ್ತಿರುವ ವಾರಿಯರ್ಸ್‌ಗೆ ಸ್ಥಳೀಯರು ಕಿರುಕುಳ ನೀಡುತ್ತಿರುವ ದೂರು ಕೇಳಿ ಬಂದಿದೆ. ಮೂಡುಬಿದಿರೆ ತಾಲ್ಲೂಕಿನ ಶಿರ್ತಾಡಿಯ ನಿವಾಸಿಯೊಬ್ಬರು ಈ ಬಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ.       ‘ನಾವು ಶಿರ್ತಾಡಿಯಲ್ಲಿ ವಾಸವಾಗಿದ್ದು, ನನ್ನ ಪತ್ನಿ ವೆನ್ಲಾಕ್‌ ಕೋವಿಡ್ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಕೋವಿಡ್-19 ದೃಢವಾಗಿದೆ. ನನ್ನ ಮಗನಿಗೂ ಕೋವಿಡ್‌ ತಗಲಿದೆ. ಸದ್ಯಕ್ಕೆ ನಾವು ಹೋಂ […]

ಕೋವಿಡ್ ವಾರಿಯರ್ಸ್‌ಗೆ ಕಿರುಕುಳ ➤ ಜಿಲ್ಲಾಧಿಕಾರಿಗೆ ದೂರು Read More »

ಕರಾವಳಿ, ಕರ್ನಾಟಕ

ದ.ಕನ್ನಡದಲ್ಲಿ ಲಾಕ್ ಡೌನ್ ರಿಲೀಫ್ – ಕಡಬ ಪೇಟೆಯಲ್ಲಿ ಹೆಚ್ಚಿದ ಜನಸಂದಣಿ

(ನ್ಯೂಸ್ ಕಡಬ) newskadaba.com  ಕಡಬ,ಜುಲೈ 23: ಕೊರೋನ  ಪ್ರಕರಣ ಹೆಚ್ಚಳದಿಂದ ದ.ಕ ಜಿಲ್ಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ಇಂದು ಬೆಳಗ್ಗೆ ಮುಕ್ತಾಯವಾಗಿದ್ದು, ವಾಣಿಜ್ಯ ಚಟುವಟಿಕೆಗಳನ್ನು ಅವಕಾಶ ನೀಡಲಾಗಿರುವ ಹಿನ್ನಲೆಯಲ್ಲಿ ಜಿಲ್ಲೆ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಕಡಬ ಪೇಟೆಯಲ್ಲಿ ಜನಸಂದಣಿಯು ಬೆಳಿಗ್ಗೆಯಿಂದಲೇ ಹೆಚ್ಚಾಗಿದೆ. ಮೊದಲಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದು ವ್ಯಾಪಾರ ವಹಿವಾಟು ಆರಂಭವಾಗಿದೆ. ಇಂದು ಬೆಳಗ್ಗೆ 5 ಗಂಟೆಯ ಅನಂತರ ಲಾಕ್ ಡೌನ್ ತೆರವುಗೊಂಡಿದ್ದು ಈ ಹಿಂದೆ ಅನುಮತಿ

ದ.ಕನ್ನಡದಲ್ಲಿ ಲಾಕ್ ಡೌನ್ ರಿಲೀಫ್ – ಕಡಬ ಪೇಟೆಯಲ್ಲಿ ಹೆಚ್ಚಿದ ಜನಸಂದಣಿ Read More »

ಕರಾವಳಿ, ಕರ್ನಾಟಕ

ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ – ಮೂವರು ಆರೋಪಿಗಳು ಅರೆಷ್ಟ್

( ನ್ಯೂಸ್ ಕಡಬ)  newskadaba.com ಪಡುಬಿದ್ರೆ  ಜುಲೈ ,23: ತೆಂಕ ಎರ್ಮಾಳ್ ಎಂಬಲ್ಲಿನ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಇಂದು ಬೆಳಿಗ್ಗೆ ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನ  ಬಂಧಿಸಿದ್ದಾರೆ.     ಮುಖ್ಯ ಆರೋಪಿ  ಕಮಲ್ ಸಾಹೇಬ್ ತಪ್ಪಿಸಿಕೊಂಡಿದ್ದು, ಆತನ ಅಳಿಯ ನಾಸಿರ್, ಮೊಮ್ಮಗ ಜಮೀರ್ ಮತ್ತು ಇನ್ನೋರ್ವ ಸದ್ದಾಂ ನನ್ನು ಪೊಲೀಸರು ಬಂಧಿಸಿದ್ದಾರೆ.ಈ ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಮನೆಯಲ್ಲಿಯೇ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದರು. ಖಚಿತ ಮಾಹಿತಿ ಪಡೆದು  ಪಡುಬಿದ್ರಿ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು

ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ – ಮೂವರು ಆರೋಪಿಗಳು ಅರೆಷ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಾರ್ವಜನಿಕವಾಗಿ ನಾಗರಪಂಚಮಿ ಆಚರಣೆಗೆ ಅವಕಾಶವಿಲ್ಲ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಮಣ್ಯ, ಜು.23:   ಕೊರೊನಾ ಸೋಂಕು ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇದರ ಆರ್ಭಟಕ್ಕೆ ಬ್ರೇಕ್ ಹಾಕೋದಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಈ ಬಾರಿ ಸಾರ್ವಜನಿಕವಾಗಿ ನಾಗರಪಂಚಮಿ ಆಚರಣೆಗೆ ಅವಕಾಶವಿಲ್ಲಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.    ಕುಕ್ಕೆ ಸುಬ್ರಮಣ್ಯದಲ್ಲಿ ಈ ಬಗ್ಗೆ ಮಾತನಾಡಿದ ಸಚಿವರು, ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಕೂಡ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಎಲ್ಲಾ

ಸಾರ್ವಜನಿಕವಾಗಿ ನಾಗರಪಂಚಮಿ ಆಚರಣೆಗೆ ಅವಕಾಶವಿಲ್ಲ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ

ಕುಂದಾಪುರ : ಹಟ್ಟಿಯಲ್ಲಿದ್ದ ದನ ಕದ್ದೋಯ್ದ ಕಳ್ಳರು

(ನ್ಯೂಸ್ ಕಡಬ) newskadaba.com ಕುಂದಾಪುರ, ಜು.23:  ಹಟ್ಟಿಯಲ್ಲಿದ್ದ ಎರಡು ದನಗಳನ್ನು ಹಿಂಸಾತ್ಮಾಕವಾಗಿ ಇನ್ನೋವಾ ಕಾರಲ್ಲಿ ಕದ್ದೋಯ್ದ ಘಟನೆ ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಸುರಕುಂದ ಎಂಬಲ್ಲಿ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಮಂಗಳವಾರ ಮುಂಜಾನೆ ಆರೋಪಿಗಳಾದ ಉನ್ನಿ ಮೊಹಿನ್‌ ಮತ್ತು ಅವರ ಇಬ್ಬರು ಮಕ್ಕಳು ಇನೋವಾ ಕಾರಿನಲ್ಲಿ ಹಾಗೂ ಮೋಟಾರು ಸೈಕಲಿನಲ್ಲಿ ಬಂದಿದ್ದು ದೂರುದಾರರ ಕೊಟ್ಟಿಗೆಯಲ್ಲಿದ್ದ ಎರಡು ದನಗಳನ್ನು ತಮ್ಮ ಕಾರಿನಲ್ಲಿ ಹಿಂಸಾಸ್ಮಾಕವಾಗಿ ತುಂಬಿಸಿ ಕದ್ದೊಯುತ್ತಿದ್ದಾಗ ಎಚ್ಚರಗೊಂಡ ಮನೆಯವರು ಇದನ್ನು ನೋಡಿ

ಕುಂದಾಪುರ : ಹಟ್ಟಿಯಲ್ಲಿದ್ದ ದನ ಕದ್ದೋಯ್ದ ಕಳ್ಳರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯದಲ್ಲಿ ದನದ ಮಾಂಸ ಸಾಗಾಟ – ಆರೋಪಿಯ ಬಂಧನ

(ನ್ಯೂಸ್ ಕಡಬ ) newskadaba.com ಸುಳ್ಯ, ಜುಲೈ .22:   ಸುಳ್ಯ ಗಾಂಧಿನಗರದಿಂದ ಪೈಚಾರು ಕಡೆಗೆ ಸೂಟ್ ಕೇಸ್‌ನಲ್ಲಿ ದನದ ಮಾಂಸ ತುಂಬಿಸಿ ಪೈಚಾರು ಕಡೆ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಸಿದ್ದಾರೆ.   ಬಂಧಿತ ಆರೋಪಿಯನ್ನು ಕಲ್ಲುಮುಟ್ಲು ನಿವಾಸಿ ನಿಸಾರ್ (30) ಎಂದು ಗುರುತಿಸಲಾಗಿದೆ.ಲಾಕ್ ಡೌನ್ ಹಿನ್ನಲೆಯಲ್ಲಿ ಪೊಲೀಸರು ಸುಳ್ಯದ ಜ್ಯೋತಿ ಸರ್ಕಲ್ ಬಳಿ ಸ್ಕೂಟರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂತು. ಪೊಲೀಸರು ಸ್ಕೂಟರ್ ಸಮೇತ ದನದ ಮಾಂಸವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ

ಸುಳ್ಯದಲ್ಲಿ ದನದ ಮಾಂಸ ಸಾಗಾಟ – ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮೊಬೈಲ್ ನಂಬರ್ ಚೀಟಿಯಲ್ಲಿ ಬರೆದು, ಕಣ್ಸನ್ನೆ ಮಾಡಿದ ಯುವಕ ➤ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು: ಜು.22., ಚಿಕಿತ್ಸೆಗೆಂದು ತಂದೆಯ ಜತೆ ಕ್ಲಿನಿಕ್ ವೊಂದಕ್ಕೆ ಬಂದಿದ್ದ ಯುವತಿಗೆ ಯುವಕನೋರ್ವ ಕಣ್ಸನ್ನೆ ಮಾಡಿ ಮತ್ತು ಮೊಬೈಲ್ ನಂಬರ್ ಅನ್ನು ಚೀಟಿಯಲ್ಲಿ ಬರೆದು ಬಿಸಾಡಿ ಲೈಂಗಿಕ ಕಿರುಕುಳ ನೀಡಿದ ಘಟನೆ ಪುತ್ತೂರು ದರ್ಬೆ ಬಳಿ ನಡೆದಿದೆ. ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುರುಷರಕಟ್ಟೆಯ ಯುವಕನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಈ ಕುರಿತು ಯುವತಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354(ಡಿ)

ಮೊಬೈಲ್ ನಂಬರ್ ಚೀಟಿಯಲ್ಲಿ ಬರೆದು, ಕಣ್ಸನ್ನೆ ಮಾಡಿದ ಯುವಕ ➤ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕರಾವಳಿ

ಕೊರೊನಾ ವಾರಿಯರ್ಸ್‌ಗಾಗಿ ತಮ್ಮ 2 ಕಾರುಗಳನ್ನು ನೀಡಿದ ಅಭಯಚಂದ್ರ ಜೈನ್‌

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಜು.22:  ಇತ್ತೀಚೆಗೆ ಹಲವು ಕಡೆಗಳಲ್ಲಿ ಕೊರೊನಾ ವಾರಿಯರ್ಸ್ ಕಿಲೋಮೀಟರ್ ಗಟ್ಟಲೆ ನಡೆದು ಬಂದ ಘಟನೆಗಳ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್‌ಗೆ ನೆರವು ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಅಭಯಚಂದ್ರ ಜೈನ್‌ ಅವರು ತನ್ನ ಎರಡು ಕಾರುಗಳನ್ನು ಕೂಡಾ ಕೊರೊನಾ ವಾರಿಯರ್ಸ್‌ಗಳ ಸಹಾಯಕ್ಕಾಗಿ ನೀಡಿದ್ದಾರೆ.     ಜೈನ್ ಕಳೆದ 15 ದಿನಗಳಿಂದ ಮತ್ತು ಮಾರ್ಚ್‌ನಲ್ಲಿ ಲಾಕ್ ಡೌನ್ ಸಮಯದಲ್ಲಿ ತನ್ನ ಕಾರುಗಳನ್ನು ಕೊರೊನಾ ವಾರಿಯರ್ಸ್‌ಗೆ ನೀಡಿದ್ದರು. ಸಾರ್ವಜನಿಕ

ಕೊರೊನಾ ವಾರಿಯರ್ಸ್‌ಗಾಗಿ ತಮ್ಮ 2 ಕಾರುಗಳನ್ನು ನೀಡಿದ ಅಭಯಚಂದ್ರ ಜೈನ್‌ Read More »

ಕರಾವಳಿ, ಕರ್ನಾಟಕ

ಗೊಬ್ಬರ ಹೊತ್ತು ಕೃಷಿ ಬೇಸಾಯ ಮಾಡುತ್ತಿರುವ ಬಿಗ್ ಬಾಸ್‌ ಫೈನಲ್ ಸ್ಪರ್ಧಿ ಭೂಮಿ ಶೆಟ್ಟಿ… !!!

(ನ್ಯೂಸ್ ಕಡಬ) newskadaba.com ಕುಂದಾಪುರ: ಜು.22., ಬಿಗ್ ಬಾಸ್‌ ಸೀಸನ್‌ನಲ್ಲಿ 7ನಲ್ಲಿ ಫೈನಲ್ ಸ್ಪರ್ಧಿಯಾಗಿ ಗುರುತಿಸಿಕೊಂಡ ಕರಾವಳಿ ಕುವರಿ ಭೂಮಿ ಶೆಟ್ಟಿ ಸದ್ಯ ಬೆಂಗಳೂರು  ಸಿಟಿಯಿಂದ ದೂರವಿದ್ದು, ಇದೀಗ ತನ್ನ ಹುಟ್ಟೂರಿನಲ್ಲಿ ಕೃಷಿ ಕಾಯಕದಲ್ಲಿ ಖುಷಿ ಕಾಣುತ್ತಿದ್ದಾರೆ. ಮೂಲತಃ ಉಡುಪಿ ಜಿಲ್ಲೆ ಬೈದೂಂರು ತಾಲೂಕಿನ ಬೀಜೂರು ಗ್ರಾಮದ ಗಂಟಿಹೊಳೆಯ ಭೂಮಿ ಶೆಟ್ಟಿ, ವಿದ್ಯಾಭ್ಯಾಸ ನಟನೆ ಅಂತ ಬೆಂಗಳೂರಿನಲ್ಲೇ ಇದ್ದರು. ಸದ್ಯ ಕೊರೋನಾ ಹಿನ್ನಲೆ ಲಾಕ್ ಡೌನ್ ಅದ ಕಾರಣ ಊರಲ್ಲೇ ಇದ್ದು, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಭೂಮಿ

ಗೊಬ್ಬರ ಹೊತ್ತು ಕೃಷಿ ಬೇಸಾಯ ಮಾಡುತ್ತಿರುವ ಬಿಗ್ ಬಾಸ್‌ ಫೈನಲ್ ಸ್ಪರ್ಧಿ ಭೂಮಿ ಶೆಟ್ಟಿ… !!! Read More »

ಕರಾವಳಿ

ಗಾಯಗಳಿಂದ ರಸ್ತೆಯಲ್ಲಿ ಬಿದ್ದು ವ್ಯಕ್ತಿಯ ನರಳಾಟ ➤ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಬಜರಂಗದಳ

(ನ್ಯೂಸ್ ಕಡಬ) newskadaba.com ಪುತ್ತೂರು,ಜು.22:  ಮೊಣಕಾಲಿನ ಮಂಡಿ ಜಾರಿದಂತಿದ್ದು, ಎದ್ದು ನಿಲ್ಲಲಾಗುತ್ತಿಲ್ಲ, ಹೊಟ್ಟೆಯಲ್ಲಿ ಹೊಕ್ಕುಳ ಪಕ್ಕದಲ್ಲಿ ಮಾಂಸ ಸೀಳಿ ಹೊರಬಂದಂದಂತೆ ಕಾಣುತ್ತಿದ್ದು, ಅದಕ್ಕೆ ಪಂಚೆಯನ್ನು ಮುಚ್ಚಿಕೊಂಡು ನೋವನ್ನು ಸಹಿಸಿಕೊಂಡು ರಸ್ತೆ ಬದಿಯಲ್ಲಿ ಬಿದ್ದು ನರಳುತ್ತಿದ್ದ ವ್ಯಕ್ತಿಯೊಬ್ಬನ್ನು ಪುತ್ತೂರಿನ ಬಜರಂಗದಳದ ಕಾರ್ಯಕರ್ತರು ಸರಕಾರಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.     ಮೂಲತ: ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಶಂಕರ ಯಾನೆ ಮುನ್ನ ಎಂದು ಗರುತಿಸಲಾಗಿದೆ. ಕೆಲ ದಿನಗಳ ಹಿಂದೆ ಮಂಗಳೂರು ಪರಿಸರದಲ್ಲಿ ನಡೆದಿದ್ದ ಹೊಡೆದಾಟ

ಗಾಯಗಳಿಂದ ರಸ್ತೆಯಲ್ಲಿ ಬಿದ್ದು ವ್ಯಕ್ತಿಯ ನರಳಾಟ ➤ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಬಜರಂಗದಳ Read More »

ಕರಾವಳಿ, ಕರ್ನಾಟಕ
Scroll to Top