Mangalore

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ವಿನಿಯೋಗ ➤ ಸಂಪ್ರದಾಯದಂತೆ ಹೊಸ ಅಕ್ಕಿ ನೈವೇದ್ಯ ಕಾರ್ಯಕ್ರಮ

(ನ್ಯೂಸ್‌ಕಡಬ)newskadaba.com.ಪುತ್ತೂರು. ಆ,22: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.22ರಂದು ನಡೆಯುವ ಕದಿರು ವಿನಿಯೋಗ ಕಾರ್ಯಕ್ರಮ ದೇವಸ್ಥಾನದ ಸಂಪ್ರದಾಯಕ್ಕೆ ಸೀಮೀತಗೊಂಡು ಸಾಂಕೇತಿಕವಾಗಿ ಹೊಸ ಅಕ್ಕಿ ನೈವೇದ್ಯ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷ ಸಂಪ್ರದಾಯದಂತೆ ಭಾದ್ರಪದ ಶುಕ್ಲ ಪಕ್ಷದ ಹಸ್ತಾ ನಕ್ಷತ್ರದ ಗೌರಿ ತದಿಗೆಯಂದು ಕದಿರು ವಿನಿಯೋಗ ನಡೆಯುತ್ತಿದ್ದು, ಈ ವರ್ಷ ಅಧಿಕ ಮಾಸದ ಕಾರಣ ಹಸ್ತಾ ನಕ್ಷತ್ರವು ಶ್ರೀ ಗಣೇಶ ಚತುರ್ಥಿಯಂದು ಬಂದ ಹಿನ್ನೆಲೆಯಲ್ಲಿ ಆ.22 ರಂದು ಶ್ರೀ ದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ, […]

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ವಿನಿಯೋಗ ➤ ಸಂಪ್ರದಾಯದಂತೆ ಹೊಸ ಅಕ್ಕಿ ನೈವೇದ್ಯ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಸಂಪ್ರೀತ್ ಕೈಯಲ್ಲಿ ಅರಳಿದ ಕುಂಚ ➤ ಮನೆಯಲ್ಲಿ ಎದ್ದು ನಿಂತ ಬಾಲ ಗಣೇಶ

(ನ್ಯೂಸ್ ಕಡಬ) newskadaba.com ಕಡಬ. ಆ,22: ಇಂದು ದೇಶಾದದ್ಯಾಂತ ಗೌರಿ ಗಣೇಶ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಈ ಬಾರಿಯ ಎಲ್ಲ ಹಬ್ಬ ಹರಿದಿನಗಳನ್ನ ಕೊರೋನಾ ಕಸಿದಿದೆ.ಆದರೂ ಸರಳವಾಗಿ ಗಣೇಶನ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.     ಬಿಳಿನಲೆಯ ಮುಂಗ್ಲಿಮಜಲು ಎಂಬಲ್ಲಿ ಬಾಲಕನೋರ್ವ ಕಳೆದೊಂದು ವಾರದಿಂದ ತನ್ನದೆ ಶೈಲಿಯಲ್ಲಿ ಪುಟ್ಟ ಗಣೇಶನನ್ನ ಮನೆಗೆ ಬರಮಾಡಿಕೊಂಡಿದ್ದಾನೆ.     ಹೌದು, ಈತನ ಹೆಸರು ಸಂಪ್ರೀತ್ ಬಿ ಎಲ್. 8 ತರಗತಿಯಲ್ಲಿ ಓದುತ್ತಿರುವ ಈತ, ಲಕ್ಷ್ಮಣ ಆಚಾರ್ಯ ಹಾಗೂ

ಸಂಪ್ರೀತ್ ಕೈಯಲ್ಲಿ ಅರಳಿದ ಕುಂಚ ➤ ಮನೆಯಲ್ಲಿ ಎದ್ದು ನಿಂತ ಬಾಲ ಗಣೇಶ Read More »

ಕರ್ನಾಟಕ, ವಿಶೇಷ ಲೇಖನಗಳು

ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ➤ ಹವಾಮಾನ ಇಲಾಖೆಯಿಂದ `ಯೆಲ್ಲೊ’ ಅಲರ್ಟ್ ಘೋಷಣೆ

(ನ್ಯೂಸ್‌ಕಡಬ)newskadaba.com ಬೆಂಗಳೂರು. ಆ,22 : ಇಂದಿನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಯು ಮುನ್ಸೂಚನೆ ನೀಡಿದೆ. ಮುಂಗಾರು ಚುರುಕುಗೊಂಡಿರುವುದರಿಂದ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಯು ತಿಳಿಸಿದೆ. ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಕೊಡಗು, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ➤ ಹವಾಮಾನ ಇಲಾಖೆಯಿಂದ `ಯೆಲ್ಲೊ’ ಅಲರ್ಟ್ ಘೋಷಣೆ Read More »

ಕರಾವಳಿ, ಕರ್ನಾಟಕ

ಚೇತರಿಕೆ ಕಾಣದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆರೋಗ್ಯ

(ನ್ಯೂಸ್ ಕಡಬ) newskadaba.com ನವದೆಹಲಿ. ಆ,21:  ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಮೊದಲಿನಂತೆ ವೆಂಟಿಲೇಟರ್‌ ವ್ಯವಸ್ಥೆ ಮುಂದುವರಿಸಲಾಗಿದೆ. ಕೊರೊನಾ ಸೋಂಕು ಧೃಡಪಟ್ಟ ಬಳಿಕ ಅವರಲ್ಲಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದೆ. ಈ ಸಂಬಂಧ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆಗಷ್ಟ್ 10ರಂದು ದೆಹಲಿಯ ಆರ್ಮಿ ರಿಸರ್ಚ್‌ ಆಯಂಡ್‌ ರೆಫೆರಲ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ತೆಗೆಯಲಾಗಿದೆ. ಮತ್ತೇ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚೇತರಿಕೆ ಕಾಣದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆರೋಗ್ಯ Read More »

ರಾಷ್ಟ್ರೀಯ ನ್ಯೂಸ್

ಸುಧಾರಣೆ ಕಾಣದ ಗಾನ ಗಂಧರ್ವ ಎಸ್ ಪಿ ಬಿ ಆರೋಗ್ಯ ➤ ಅಂತರಾಷ್ಟ್ರೀಯ ವೈದ್ಯರ ತಂಡದಿಂದ ಚಿಕಿತ್ಸೆ

(ನ್ಯೂಸ್ ಕಡಬ) newskadaba.com ಚೆನ್ನೈ. ಆ,21:  ಕೊರೊನಾ ಸೋಂಕಿನಿಂದ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಇದೀಗ ಅಂತರಾಷ್ಟ್ರೀಯ ವೈದ್ಯರ ತಂಡದಿಂದ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.   ಕಳೆದ ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರುತ್ತಿಲ್ಲ. ಈ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಅಂತರಾಷ್ಟ್ರೀಯ ವೈದ್ಯರ ತಂಡವನ್ನು ಕರೆಸಲಾಗಿದ್ದು, ಇಂದಿನಿಂದ ಈ ವೈದ್ಯರ ತಂಡ ಎಸ್.ಪಿ.ಬಿ.ಗೆ ಚಿಕಿತ್ಸೆ ನೀಡಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಆ.5

ಸುಧಾರಣೆ ಕಾಣದ ಗಾನ ಗಂಧರ್ವ ಎಸ್ ಪಿ ಬಿ ಆರೋಗ್ಯ ➤ ಅಂತರಾಷ್ಟ್ರೀಯ ವೈದ್ಯರ ತಂಡದಿಂದ ಚಿಕಿತ್ಸೆ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು ಮತ್ತೆ ಸೆಂಟ್ರಲ್ ಮಾರ್ಕೆಟ್ ಬಂದ್

(ನ್ಯೂಸ್ ಕಡಬ) newskadaba.com.ಮಂಗಳೂರು, ಆ.21: ಕೋವಿಡ್-19 ಹೆಚ್ಚಾಗುತ್ತಿರುವುದರಿಂದ ವಿಪತ್ತು ನಿರ್ವಹಣೆ ದೃಷ್ಟಿಯಿಂದ ನಗರದ ಸೆಂಟ್ರಲ್ ಮಾರುಕಟ್ಟೆಯನ್ನು ಮತ್ತೆ ಮಂಗಳೂರು ಮಹಾನಗರ ಪಾಲಿಕೆ ಬಂದ್ ಮಾಡಿದೆ. ಗುರುವಾರ ಸಂಜೆ ವೇಳೆಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಬಂದು, ಶುಕ್ರವಾರದಿಂದ ವ್ಯಾಪಾರ ವ್ಯವಹಾರ ಸ್ಥಗಿತಗೊಳಿಸುವಂತೆ ಸೂಚಿಸಿ ವ್ಯಾಪಾರಿಗಳನ್ನು ಕಳುಹಿಸಿದರು. ಸೆಂಟ್ರಲ್ ಮಾರುಕಟ್ಟೆಗೆ ಬಂದ್ ಮಾಡಿರುವ ಆದೇಶವನ್ನು ಪಾಲಿಕೆಯು ಹಿಂಪಡೆದಿದ್ದರಿಂದ ಕಳೆದ ಗುರುವಾರದಿಂದ ವರ್ತಕರು ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯವಹಾರವನ್ನು ಆರಂಭಿಸಿದ್ದರು, ಆದರೆ ಮಂಗಳವಾರ ಜಿಲ್ಲಾಧಿಕಾರಿ ಹೊಸ ಆದೇಶ ಹೊರಡಿಸಿ ಸಾರ್ವಜನಿಕ ಹಿತದೃಷ್ಟಿಯಿಂದ

ಮಂಗಳೂರು ಮತ್ತೆ ಸೆಂಟ್ರಲ್ ಮಾರ್ಕೆಟ್ ಬಂದ್ Read More »

ಕರಾವಳಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ ಮಾಡಿದ್ದ ಆರೋಪ ➤ ಪ್ರಚಾರಗಿಟ್ಟಿಸಲು ಹೋಗಿ ಜೈಲು ಸೇರಿದ ಭೂಪ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,21:  ಕಳೆದ ಬುಧವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿ ವಸಂತ ಕೃಷ್ಣ ಶೇರಿಗಾರ್ (33) ಎಂಬಾತನನ್ನು ಬಂಧಿಸಲಾಗಿದ್ದು, ಪ್ರಚಾರ ಪಡೆಯುವ ಉದ್ದೇಶದಿಂದ ಆತ ಈ ಕೃತ್ಯ ಎಸಗಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿ ಕೇವಲ ಪ್ರಚಾರಕ್ಕಾಗಿ ತಾನು ಈ ಕೃತ್ಯ ಎಸಗಿರುವುದಾಗಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ ಮಾಡಿದ್ದ ಆರೋಪ ➤ ಪ್ರಚಾರಗಿಟ್ಟಿಸಲು ಹೋಗಿ ಜೈಲು ಸೇರಿದ ಭೂಪ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗೌರಿ – ಗಣೇಶ ಚತುರ್ಥಿಯ ಶುಭ ಕೋರಿದ ಸಿಎಂ ಬಿ.ಎಸ್.ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು. ಆ,21:  ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ರಾಜ್ಯದಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜ್ಯದ ಜನರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಣೇಶ ಚತುರ್ಥಿ ಶುಭಾಷಯ ತಿಳಿಸಿದ್ದಾರೆ.   “ರಾಜ್ಯದ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹೃತ್ಪೂರ್ವಕ ಶುಭಕಾಮನೆಗಳು. ಜಗನ್ಮಾತೆ ಗೌರಿ ಎಲ್ಲರಿಗೂ ಸುಖ, ಶಾಂತಿ, ಆರೋಗ್ಯಗಳನ್ನು ಕರುಣಿಸಲಿ, ವಿಘ್ನವಿನಾಶಕ ವಿನಾಯಕನು ಎಲ್ಲರ ಸಂಕಷ್ಟಗಳನ್ನು ಕಳೆದು ನಾಡಿಗೆ ಸಮೃದ್ಧಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ” ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.ಬೆಂಗಳೂರಿನಲ್ಲಿ

ಗೌರಿ – ಗಣೇಶ ಚತುರ್ಥಿಯ ಶುಭ ಕೋರಿದ ಸಿಎಂ ಬಿ.ಎಸ್.ಯಡಿಯೂರಪ್ಪ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಬೆತ್ತೋಡಿಯಲ್ಲಿ ಆಯುಷ್ಮಾನ್ ಹೆಲ್ತ್‍ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com.ಕಡಬ, ಆ.21: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಗ್ರಾಮಸ್ಥರಿಗೆಲ್ಲರಿಗೂ ಆಯುಷ್ಮಾನ್ ಹೆಲ್ತ್‍ಕಾರ್ಡ್ ಒದಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಐತ್ತೂರು ಇದರ ವತಿಯಿಂದ ಆ20ರಂದು ಬೆತ್ತೋಡಿ ಸಿ.ಆರ್.ಸಿ ಕಾಲೋನಿ ಬಳಿ ಆಯುಷ್ಮಾನ್ ಹೆಲ್ತ್‍ಕಾರ್ಡ್ ಅಭಿಯಾನ ನಡೆಯಿತು. ಗ್ರಾಮ ಪಂಚಾಯತ್ ಐತ್ತೂರು ಮತ್ತು ಡಿಜಿಟಲ್ ಸೇವಾ ಸಿಂಧು ಕಡಬ ಇದರ ಸಂಯುಕ್ತ ಆಶ್ರಯದಲ್ಲಿ  ನಡೆದ ಅಭಿಯಾನವನ್ನು  ತಮ್ಮಯ್ಯ ಗೌಡ ಸುಳ್ಯ ಉದ್ಘಾಟಿಸಿದರು. ಬೆಳಗ್ಗೆಯಿಂದ ಸಂಜೆಯ ವರೆಗೆ ಮಾಸ್ಕ್ ಮತ್ತು ಸಮಾಜಿಕ ಅಂತರ ಕಾಯ್ದುಕೊಂಡು 270 ಮಂದಿ

ಬೆತ್ತೋಡಿಯಲ್ಲಿ ಆಯುಷ್ಮಾನ್ ಹೆಲ್ತ್‍ಕಾರ್ಡ್ ಅಭಿಯಾನ Read More »

ಕರಾವಳಿ

ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಯಾದ ಬೈಕ್ – ಸ್ಕೂಟಿ ➤ ಪ್ರಾಣಾಪಾಯದಿಂದ ಪಾರಾದ ಸವಾರರು

(ನ್ಯೂಸ್ ಕಡಬ) newskadaba.com ಸುಳ್ಯ. ಆ,21:  ಅರಂತೋಡು ಪೇಟೆ ಬಳಿ ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ಸವಾರರಿಗೆ ಗಾಯವಾದ ಘಟನೆ ಕಳೆದ ದಿನ ನಡೆದಿದೆ.     ಅಡ್ಯಡ್ಕ ಕಾಳಿಮುತ್ತು ಹಾಗೂ ಜಾನ್ಸನ್ ಮೇಸ್ತ್ರಿಯವರ ಬೈಕ್ ಪರಸ್ಪರ ಡಿಕ್ಕಿ ಹೊಡೆದು, ಕಾಳಿಮುತ್ತು ಹಾಗೂ ಬೈಕ್ ನ ಹಿಂಬದಿ ಸವಾರ ಮೋನಪ್ಪ ಎಂಬುವರಿಗೆ ಗಾಯವಾಗಿದೆ. ಸುಳ್ಯದಿಂದ ಕಲ್ಲುಗುಂಡಿಗೆ ಜಾನ್ಸನ್ ತೆರಳುತ್ತಿದ್ದಾಗ ಕಾಳಿಮುತ್ತು ಎಂಬುವರು ಅಡ್ಯಡ್ಕ ಕಡೆಗೆ ಹೋಗುತ್ತಿದ್ದರು.  ಈ ಸಂದರ್ಭದಲ್ಲಿ ಘಟನೆ ನಡೆದಿದೆ.  

ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಯಾದ ಬೈಕ್ – ಸ್ಕೂಟಿ ➤ ಪ್ರಾಣಾಪಾಯದಿಂದ ಪಾರಾದ ಸವಾರರು Read More »

ಕರಾವಳಿ, ಕರ್ನಾಟಕ
Scroll to Top