ಸುಳ್ಯ: ಭಾರೀ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ ಅಪಾಯದಿಂದ ಪಾರು
(ನ್ಯೂಸ್ ಕಡಬ)newskadaba.com ಸುಳ್ಯ, ಜು.26. ಭಾರೀ ಗಾಳಿ ಮಳೆಗೆ ಮನೆಯೊಂದರ ಮೇಲೆ ತೆಂಗಿನ ಮರವೊಂದು ಬುಡ ಸಹಿತ ಬಿದ್ದಿರುವ ಘಟನೆ ಸುಳ್ಯದ ಮಂಡೆಕೋಲು ಗ್ರಾಮದ ಶಾಲಾ ಬಳಿ ನಡೆದಿದೆ. ಇಲ್ಲಿನ ಭವಾನಿಶಂಕರ ಆಚಾರ್ಯ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು, ಘಟನೆಯಲ್ಲಿ ಮನೆಯ ಮೇಲ್ಛಾವಣಿಗೆ ಅಪಾರ ಹಾನಿಯಾಗಿದೆ. ಮನೆಯೊಳಗೆ ಭವಾನಿಶಂಕರ ಅವರ ತಾಯಿ ಹಾಗೂ ಪತ್ನಿ ಇದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಸುಳ್ಯ: ಭಾರೀ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ ಅಪಾಯದಿಂದ ಪಾರು Read More »
ಕರಾವಳಿ




