Mangalore

ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಕೊರೋನಾ ಜಾಗೃತಿ ಜನಾಂದೋಲನಾ ಜಾಥಾ

(ನ್ಯೂಸ್ ಕಡಬ) newskadaba.com ಬಂಟ್ವಾಳ , ನ.14: ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ, ಗ್ರಾ. ಪಂ. ಸುಬ್ರಹ್ಮಣ್ಯ, ಜೇಸಿಐ ಸುಬ್ರಹ್ಮಣ್ಯ ಕುಕ್ಕೆ ಶ್ರೀ ರೋಟರಿ ಕ್ಲಬ್ ಸುಬ್ರಹ್ಮಣ್ಯ, ಪರ್ವತಮುಖಿ ಫ್ರೆಂಡ್ಸ್ ಆಶ್ರಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊರೋನಾ ಜಾಗೃತಿ ಜನಾಂದೋಲನಾ ಜಾಥಾ ಕಳೆದ ದಿನ ನಡೆಯಿತು.   ದೇವಸ್ಥಾನದಿಂದ ಜಾಗೃತಿ ಜಾಥಾವು ಆರಂಭಗೊಂಡ ಬಳಿಕ ಕೊರೋನಾ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಸಾರ್ವಜನಿಕರಿಗೆ ಮತ್ತು ಆಗಮಿಸಿದ ಎಲ್ಲಾ ಭಕ್ತರಿಗೆ ಭಿತ್ತಿ ಪತ್ರ ನೀಡಲಾಯಿತು. ಕೊರೋನಾ ಜಾಗೃತಿ […]

ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಕೊರೋನಾ ಜಾಗೃತಿ ಜನಾಂದೋಲನಾ ಜಾಥಾ Read More »

ಕರಾವಳಿ

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ನ.14: ಕರೋಪಾಡಿ ಗ್ರಾಮದ ಕುರೋಮೂಲೆ ಎಂಬಲ್ಲಿ ವ್ಯಕ್ತಿಯೊಬ್ಬ ಮಾನಸಿಕವಾಗಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕರೋಪಾಡಿ ಗ್ರಾಮದ ಕುರೋಮೂಲೆ ನಿವಾಸಿ ಸತೀಶ್(39) ಎಂದು ಗುರುತಿಸಲಾಗಿದೆ.     ಸತೀಶ್ ಅವರು ವಿಪರೀತ ಕುಡಿತ ಚಟವನ್ನು ಹೊಂದಿದ್ದು, ಕುಡಿತದ ಚಟ ಹೆಚ್ಚಾಗಿ ಮಾನಸಿಕವಾಗಿ ನೊಂದುಕೊಂಡಿದ್ದರು. ಇದೇ ಕಾರಣದಿಂದಾಗಿ ಈ ಹಿಂದೆ ಮೂರು ಬಾರಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಸತೀಶ್ ಅವರ ಪತ್ನಿ ಕೂಲಿ ಕೆಲಸಕ್ಕೆ

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ ತಾಲೂಕು ಕ್ರೀಡಾಧಿಕಾರಿಯಾಗಿ ದೈಹಿಕ ಶಿಕ್ಷಣ ಶಿಕ್ಷಕ ರಾಮಚಂದ್ರ ಪಿ.ಎನ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ನ.13: ಕಡಬ ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ತಾಲೂಕು ಕ್ರೀಡಾಧಿಕಾರಿಯಾಗಿ ಎಣ್ಮೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಮಚಂದ್ರ ಪಿ.ಎನ್.ರವರು ನ.7 ರಂದು ಅಧಿಕಾರ ಸ್ವೀಕರಿಸಿದ್ದಾರೆ.     ಪ್ರಸ್ತುತ ಎಣ್ಮೂರು ಪ್ರೌಢಶಾಲೆಯಲ್ಲಿ ಸತತ 12 ವರ್ಷಗಳಿಂದ ಕೆಲಸ ನಿರ್ವಹಿಸುತಿದ್ದು, ಹಿಂದೆ ಪುತ್ತೂರಿನ ಕೊಂಬಾರು, ರಾಮಕುಂಜ, ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇವರು ಕಬ್ಬಡ್ಡಿ ರಾಷ್ಟ್ರೀಯ ತೀರ್ಪುಗಾರರಾಗಿದ್ದು, ಖೋ ಖೋ ಆಟದ ರಾಜ್ಯ ಮಟ್ಟದ ತೀರ್ಪುಗಾರರು. ಸುಳ್ಯ ತಾಲೂಕು ದೈಹಿಕ

ಕಡಬ ತಾಲೂಕು ಕ್ರೀಡಾಧಿಕಾರಿಯಾಗಿ ದೈಹಿಕ ಶಿಕ್ಷಣ ಶಿಕ್ಷಕ ರಾಮಚಂದ್ರ ಪಿ.ಎನ್ ನೇಮಕ Read More »

ಕರಾವಳಿ

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 6 ಮಂದಿಯಲ್ಲಿ ಕೊರೋನಾ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಕಡಬ, ನ.13: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ 6 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಕಡಬ ತಾಲೂಕಿನ ಶಿರಾಡಿ ಕೊಣಾಜೆಯ 75 ವರ್ಷದ ಮಹಿಳೆಯಲ್ಲಿ ಹಾಗೂ ಪುತ್ತೂರು ತಾಲೂಕಿನ 61 ವರ್ಷದ ವ್ಯಕ್ತಿ, ಕೆಮ್ಮಿಂಜೆಯ 79 ವರ್ಷದ ವ್ಯಕ್ತಿ, ಸರ್ವೆಯ 39 ವರ್ಷದ ಮಹಿಳೆ, ಪಡುವನ್ನೂರಿನ 28 ವರ್ಷದ ವ್ಯಕ್ತಿ, ಕರ್ನೂರಿನ 32 ವರ್ಷದ ವ್ಯಕ್ತಿ ಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 6 ಮಂದಿಯಲ್ಲಿ ಕೊರೋನಾ ಸೋಂಕು ದೃಢ Read More »

ಕರಾವಳಿ

ಹರಿಹರ: ಆರೋಗ್ಯ ಭಾರತಿ ಪ್ರಾಯೋಜಿತ ಮನೆಮದ್ದು ಕಾರ್ಯಗಾರ

(ನ್ಯೂಸ್ ಕಡಬ) newskadaba.com ಹರಿಹರ, ನ.13: ಕಳೆದ ದಿನ ಹರಿಹರ ದೇವಸ್ಥಾನದಲ್ಲಿ ಆರೋಗ್ಯ ಭಾರತಿ ಪ್ರಾಯೋಜಿತ ಮನೆಮದ್ದು ಕಾರ್ಯಗಾರ ಕಾರ್ಯಕ್ರಮವನ್ನು ಹರಿಹರಪಲ್ಲತ್ತಡ್ಕ ಕೇಶವ ಮೂರ್ತಿ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.     ಕಾರ್ಯಕ್ರಮದಲ್ಲಿ ಮೈಸೂರಿನ ಡಾ. ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿದ್ದು, ವಿವಿಧ ಗಿಡಮೂಲಿಕೆಗಳ, ಸಂಬಾರು ವಸ್ತುಗಳ ಪರಿಚಯದ, ಉಪಯೋಗಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಹಾಗೂ ಆರೋಗ್ಯ ಕಾಪಾಡುವ ಬಗ್ಗೆ ಮಾಗಿತಿ ನೀಡಿದರು. ಕೇಂದ್ರ ಕ್ಷೇತ್ರ ಸಂಯೋಜಕರಾದ ಸದಾಶಿವ ಬೆಂಗಳೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.    

ಹರಿಹರ: ಆರೋಗ್ಯ ಭಾರತಿ ಪ್ರಾಯೋಜಿತ ಮನೆಮದ್ದು ಕಾರ್ಯಗಾರ Read More »

ಕರಾವಳಿ

ದೈವಜ್ಞ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿನಲ್ಲಿ ಇ-ಸ್ಟಾಂಪಿಂಗ್ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು ನ. 13: ಹೊಸಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಗ್ರಾಹಕರನ್ನು ಆಕರ್ಷಿಸುವ ಕೆಲಸವನ್ನು ಸಹಕಾರ ಸಂಘಗಳು ಮಾಡಬೇಕು. ಇದು ಸೊಸೈಟಿಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಸಹಕಾರ ಸಂಘಗಳ ಉಪನಿಬಂಧಕ ಶ್ರೀ ಪ್ರವೀಣ್.ಬಿ.ನಾಯಕ್ ಅಭಿಪ್ರಾಯ ಪಟ್ಟರು. ಅವರು ನಗರದ ರಥಬೀದಿ ಸಮೀಪದ ಭವಂತಿ ರಸ್ತೆಯ ಪ್ರೇಮಾ ಪ್ಲಾಜಾದಲ್ಲಿರುವ ದೈವಜ್ಞ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಲಿ.ನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಇ-ಸ್ಟಾಂಪಿಂಗ್ ಉದ್ಘಾಟಿಸಿ ಮಾತನಾಡಿದರು.   ದೈವಜ್ಞ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ತನ್ನದೇ

ದೈವಜ್ಞ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿನಲ್ಲಿ ಇ-ಸ್ಟಾಂಪಿಂಗ್ ಆರಂಭ Read More »

ಕರಾವಳಿ

ಗೂಡುದೀಪದಲ್ಲಿ ಕೊರೊನಾ ಜಾಗೃತಿ ➤ ಹಲವರ ಗಮನ ಸೆಳೆಯುತ್ತಿದೆ ಈ ಗೂಡುದೀಪ

(ನ್ಯೂಸ್ ಕಡಬ) newskadaba.com ಕಾರ್ಕಳ ನ. 13: ದೀಪಾವಳಿಯ ಗೂಡುದೀಪದ ಮೂಲಕ ಕೊರೊನಾ ಜಾಗೃತಿ ಮೂಡಿಸುವ ಪ್ರಯತ್ನವನ್ನು ಕಾರ್ಕಳ ಪುರಸಭಾ ಸದಸ್ಯ ಶುಭದ್ ರಾವ್ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಗೂಡು ದೀಪದಲ್ಲಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಹ್ಯಾಂಡ್ ವಾಶ್ ಮಾಡಿ ಮತ್ತು ಸಾಮಾಜಿಕ ಅಂತರ ಕಾಪಾಡಿ ಎಂಬ ಚಿತ್ರದೊಂದಿಗೆ ಸಂದೇಶಗಳನ್ನು ಬರೆದಿದ್ದಾರೆ.   ಪುರಸಭೆ ಸದಸ್ಯರಾಗಿರುವ ಶುಭದ್ ರಾವ್ ಕಳೆದ ಮೂರು ವರುಷಗಳಿಂದ ಗೂಡುದೀಪ ಸ್ಪರ್ದೆಯನ್ನು ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಕೋವಿಡ್

ಗೂಡುದೀಪದಲ್ಲಿ ಕೊರೊನಾ ಜಾಗೃತಿ ➤ ಹಲವರ ಗಮನ ಸೆಳೆಯುತ್ತಿದೆ ಈ ಗೂಡುದೀಪ Read More »

ಕರಾವಳಿ

ಉಳ್ಳಾಲ: ಕಳವುಗೈದ ಪಿಕಪ್ ವಾಹನ ಮತ್ತು ಆರೋಪಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ನ.13: ತೊಕ್ಕೊಟ್ಟುವಿನ ಕಲ್ಲಾಪುವಿನಿಂದ  ಪಿಕಪ್ ವಾಹನವನ್ನು ಕಳ್ಳನೋರ್ವ ಕದ್ದೊಯ್ದಿದ್ದಾನೆ. ಕಳವು ಮಾಡಿದ ಈ ವಾಹನವು ಸುರತ್ಕಲ್ ಠಾಣಾ ವ್ಯಾಪ್ತಿಯ ಚೇಳ್ಯಾರು ಬಳಿ ಮನೆಯ ಕಂಪೌಂಡಿಗೆ ಢಿಕ್ಕಿ ಹೊಡೆದಿದ್ದು, ಸುರತ್ಕಲ್ ಪೊಲೀಸರು ಕಳೆದ ದಿನ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು  ತಮಿಳುನಾಡು ಮೂಲದ ದಕ್ಷಿಣಮೂರ್ತಿ ಎಂದು ಗುರುತಿಸಲಾಗಿದೆ.  ತೊಕ್ಕೊಟ್ಟು ಕಲ್ಲಾಪು ಬಳಿಯಿರುವ ಸೂಪರ್ ಬಜಾರ್ ಎದುರು ನಿಲ್ಲಿಸಿದ್ದ ಪಿಕಪ್ ವಾಹನವನ್ನು ದಕ್ಷಿಣಮೂರ್ತಿಯವರು ಮಧ್ಯರಾತ್ರಿ ವೇಳೆ ಕಳವು ಮಾಡಿದ್ದಾರೆ. ಕಳವು ನಡೆಸಿದ ವಾಹನವನ್ನು ಕೊಂಡೊಯ್ಯುವ

ಉಳ್ಳಾಲ: ಕಳವುಗೈದ ಪಿಕಪ್ ವಾಹನ ಮತ್ತು ಆರೋಪಿ ಪೊಲೀಸರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿಯಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ ➤ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ -DC ಜಿ.ಜಗದೀಶ್

(ನ್ಯೂಸ್ ಕಡಬ) newskadaba.com ಉಡುಪಿ ನ. 13: ಸರಕಾರದ ಆದೇಶದಂತೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಹಸಿರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಹಚ್ಚಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.   ಸಂಬಂಧಪಟ್ಟ ಇಲಾಖೆ ಪ್ರಾಧಿಕಾರಗಳಿಂದ ಅಧಿಕೃತ ಪರವಾನಿಗೆಯನ್ನು ಪಡೆದ ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದು. ಸುಡುಮದ್ದು ಮಾರಾಟ ಮಾಡುವ ಮಳಿಗೆಯ ಸುತ್ತಮುತ್ತ ಪ್ರತಿನಿತ್ಯ ಸ್ಯಾನಿಟೈಸೇಷನ್‌ ಮಾಡಬೇಕು ಹಾಗೂ ಪಟಾಕಿ

ಉಡುಪಿಯಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ ➤ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ -DC ಜಿ.ಜಗದೀಶ್ Read More »

ಕರಾವಳಿ

ಮಂಗಳೂರು ವಿವಿ : ಡಿ.1ರಿಂದ ಪದವಿ,ಸ್ನಾತಕೋತ್ತರ ಪದವಿ ಕಾಲೇಜು ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು ನ. 13: ಡಿ.1ರಿಂದ ಮಂಗಳೂರು ವಿಶ್ವವಿದ್ಯಾಲಯ ಅಧೀನದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ಆರಂಭಗೊಳ್ಳಲಿವೆ. ಕೋವಿಡ್ 19 ಅನ್ ಲಾಕ್ ಬಳಿಕ, ನ.17ರಿಂದ ಶಾಲಾ ಕಾಲೇಜು ಆರಂಭಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಡಿ.1ರಿಂದ ಕಾಲೇಜು ಆರಂಭಿಸಲು ನಿರ್ಧರಿಸಲಾಗಿದೆ. ವಿವಿ ಕುಲಪತಿ ಪ್ರೊ. ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.   ಕೋವಿಡ್ ನಿಯಮ ಪಾಲಿಸಿಕೊಂಡು ಮಂಗಳೂರು, ಉಡುಪಿ, ಕೊಡಗು ವ್ಯಾಪ್ತಿಯಲ್ಲಿರುವ

ಮಂಗಳೂರು ವಿವಿ : ಡಿ.1ರಿಂದ ಪದವಿ,ಸ್ನಾತಕೋತ್ತರ ಪದವಿ ಕಾಲೇಜು ಆರಂಭ Read More »

ಕರಾವಳಿ
Scroll to Top