Mangalore

ಪುತ್ತೂರು ಪೊಲೀಸ್ ಠಾಣೆಯಲ್ಲಿ ಎಚ್.ಡಿ. ರೇವಣ್ಣ ವಿರುದ್ಧ ದೂರು

(ನ್ಯೂಸ್ ಕಡಬ) newskadaba,ಪುತ್ತೂರು ಜೂ. 20: ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖಾಸಗಿ ನರ್ಸಿಂಗ್ ಹೋಮ್‌ಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಪುತ್ತೂರಿನ ಐಎಂಎ ಹೆರಾಸ್ಮೆಂಟ್ ಕಮಿಟಿಯ ಚೇರ್‌ಮೇನ್ ಆಗಿರುವ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಒತ್ತಾಯಿಸಿದ್ದಾರೆ.

ಪುತ್ತೂರು ಪೊಲೀಸ್ ಠಾಣೆಯಲ್ಲಿ ಎಚ್.ಡಿ. ರೇವಣ್ಣ ವಿರುದ್ಧ ದೂರು Read More »

ಕರಾವಳಿ

ಭಾರತದಲ್ಲಿಂದು 58,419 ಹೊಸ ಕೋವಿಡ್-19 ಕೇಸ್ ಪತ್ತೆ

(ನ್ಯೂಸ್ ಕಡಬ) newskadaba,ನವದೆಹಲಿ ಜೂ. 20:ಭಾರತದಲ್ಲಿ ಕೊರೋನಾ ಅಬ್ಬರದ ಇಳಿಕೆಯ ಹಾದಿ ಮುಂದುವರೆದಿದ್ದು, ದೇಶದಲ್ಲಿ ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 58,419 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 1576 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಶನಿವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,98,81,965ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,86,713ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಸಕ್ರಿಯ ಸೋಂಕಿತರ ಸಂಖ್ಯೆ 7,29,243ಕ್ಕೆ ಕುಸಿದ್ದು, 75 ದಿನಗಳ ಬಳಿಕ ದೇಶದಲ್ಲಿ ದಾಖಲಾಗಿರುವ ಅತೀ ಕನಿಷ್ಠ

ಭಾರತದಲ್ಲಿಂದು 58,419 ಹೊಸ ಕೋವಿಡ್-19 ಕೇಸ್ ಪತ್ತೆ Read More »

ಕರಾವಳಿ

ಧರ್ಮಸ್ಥಳ-ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಗುಂಡ್ಯದಿಂದ ವಾಪಸ್

(ನ್ಯೂಸ್ ಕಡಬ) newskadaba,ಸುಬ್ರಹ್ಮಣ್ಯ ಜೂ. 20: ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ನಿರ್ಬಂಧವಿದ್ದರೂ ಹೊರಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಭಕ್ತರನ್ನು ಗುಂಡ್ಯ ಚೆಕ್’ಪೋಸ್ಟ್ ನಿಂದಲೇ ವಾಪಸ್ ಕಳುಹಿಸುವ ಕಾರ್ಯ ನಡೆಯುತ್ತಿದೆ. ಅಗತ್ಯ ದಾಖಲೆಗಳನ್ನು ಹೊಂದಿದವವರನ್ನು ಮಾತ್ರ ಜಿಲ್ಲೆಯ ಒಳಬರಲು ಬಿಡಲಾಗುತ್ತಿದೆ. ಶಿರಾಡಿ ಘಾಟ್ ಮೂಲಕ ಜಿಲ್ಲೆಯ ಧರ್ಮಸ್ಥಳ ಮತ್ತು ಸುಬ್ರಮಣ್ಯ ಪುಣ್ಯಕ್ಷೇತ್ರಗಳಿಗೆ ಭಕ್ತರು ಆಗಮಿಸುತ್ತಿದ್ದಾರೆ. ನಿನ್ನೆ ಒಂದೇ ದಿನ ತೀರ್ಥಯಾತ್ರೆ ಆಗಮಿಸಿದ್ದ ಬರೋಬ್ಬರಿ 69 ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಮುಂದಿನ ಎರಡು ವಾರಗಳ ಕಾಲ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳನ್ನು ಕರೆಯಲಾಗುವುದಿಲ್ಲ.

ಧರ್ಮಸ್ಥಳ-ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಗುಂಡ್ಯದಿಂದ ವಾಪಸ್ Read More »

ಕರಾವಳಿ

ಮಂಗಳೂರಿನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆ ➤ ಪಾಲಿಕೆ ಅಧಿಕಾರಿಗಳಿಂದ ದಾಳಿ

(ನ್ಯೂಸ್ ಕಡಬ) newskadaba,ಮಂಗಳೂರು ಜೂ. 20: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಗರದ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಅದ್ದೂರಿಯಾಗಿ ಮದುವೆ ನಡೆಯುತ್ತಿತ್ತು. ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ( ಮನಪಾ) ಸಹಾಯಕ ಆಯುಕ್ತ ಮತ್ತು ಕಂದಾಯ ಇಲಾಖೆಯ ಉಪ ಆಯುಕ್ತ ಜಂಟಿ ದಾಳಿ ನಡೆಸಿ ಮದುವೆ ನಿಲ್ಲಿಸಿದ್ದಾರೆ. ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ, ಎಕ್ಕೂರಿನ ಭಾಸ್ಕರಚಂದ್ರ ಶೆಟ್ಟಿಯವರ ಪುತ್ರಿಯ ವಿವಾಹ ಸೇರಿದಂತೆ ನಾಲ್ಕು ಜೋಡಿಗಳ ಮದುವೆಯನ್ನು ಏರ್ಪಡಿಸಲಾಗಿತ್ತು. ಮದುವೆ ಹಿನ್ನೆಲೆ ದೇವಸ್ಥಾನದ ಮುಂಭಾಗದಲ್ಲಿ 40ಕ್ಕೂ ಹೆಚ್ಚು

ಮಂಗಳೂರಿನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆ ➤ ಪಾಲಿಕೆ ಅಧಿಕಾರಿಗಳಿಂದ ದಾಳಿ Read More »

ಕರಾವಳಿ

ರಾಜ್ಯದಲ್ಲಿ ಇಳಿಮುಖದತ್ತ ಸಾಗಿದ ಕೊರೋನಾ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.19:ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಇಳಿಮುಖದತ್ತ ಸಾಗಿದೆ. ಇಂದು 5,815 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 28,01,936ಕ್ಕೆ ಏರಿಕೆಯಾಗಿದೆ.   ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 161 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 33,763ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 11,832 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ

ರಾಜ್ಯದಲ್ಲಿ ಇಳಿಮುಖದತ್ತ ಸಾಗಿದ ಕೊರೋನಾ Read More »

ಕರ್ನಾಟಕ

ಗಂಡು ಮಗುವಿಗಾಗಿ 4 ಹೆಣ್ಣು ಮಕ್ಕಳನ್ನು ಮಾರಾಟಕ್ಕಿಟ್ಟ ಅಪ್ಪ

(ನ್ಯೂಸ್ ಕಡಬ) newskadaba,ಚಿಕ್ಕಬಳ್ಳಾಪುರ ಜೂ.19:ಗಂಡು ಮಗು ಬೇಕೇ ಬೇಕೆಂದು ವ್ಯಕ್ತಿ ತನ್ನ 4 ಹೆಣ್ಣು ಮಕ್ಕಳನ್ನು ಮಾರಾಟಕ್ಕಿಟ್ಟಿದ್ದಾನೆ. ಮಕ್ಕಳನ್ನು ಮಾರುವುದು ಬೇಡ ಎಂದಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರದಬ್ಬಿದ್ದಾನೆ.   ನಗರದ ಅಂಬೇಡ್ಕರ್ ಕಾಲೋನಿಯ ಪಾಪಿ ತಂದೆಯ ಹೆಸರು ಮುನಿಯಪ್ಪ, ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಈತ, 8 ವರ್ಷಗಳ ಹಿಂದೆ ಸಂಜು ಅವರನ್ನು ಮದುವೆಯಾಗಿದ್ದ. ಬಳಿಕ 4 ಹೆಣ್ಣು ಮಕ್ಕಳ ತಂದೆಯಾಗಿದ್ದಾನೆ. ಆದರೆ ಗಂಡು ಮಗು ಬೇಕೇ ಬೇಕೆಂದು ಪತ್ನಿಗೆ ಅಪರೇಷನ್ ಮಾಡಿಸಿಲ್ಲ. ಮಾತ್ರವಲ್ಲದೆ

ಗಂಡು ಮಗುವಿಗಾಗಿ 4 ಹೆಣ್ಣು ಮಕ್ಕಳನ್ನು ಮಾರಾಟಕ್ಕಿಟ್ಟ ಅಪ್ಪ Read More »

ಕರಾವಳಿ

ರಾಜ್ಯದಲ್ಲಿ 2ನೇ ಹಂತದ ಅನ್ ಲಾಕ್ ಘೋಷಣೆ ಮಾಡಿದ BSY

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.19: 2ನೇ ಹಂತದ ಕರ್ನಾಟಕ ಅನ್​ಲಾಕ್ ಭಾಗವಾಗಿ ಪಾಸಿಟಿವಿಟಿ ರೇಟ್ ಆಧಾರದ ಮೇಲೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ನಿರ್ಬಂಧ ಸಡಿಲಿಸಿ ಬೆಳಗ್ಗೆಯಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಜಿಲ್ಲೆ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಮಾತ್ರ ಈ ಸಡಿಲಿಕೆ

ರಾಜ್ಯದಲ್ಲಿ 2ನೇ ಹಂತದ ಅನ್ ಲಾಕ್ ಘೋಷಣೆ ಮಾಡಿದ BSY Read More »

ಕರಾವಳಿ

25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶತಕ ಬಾರಿಸಿದ ಪೆಟ್ರೋಲ್ ಬೆಲೆ..?!

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.19: ಕರ್ನಾಟಕದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ನಿನ್ನೆಯಷ್ಟೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪೆಟ್ರೋಲ್ ಬೆಲೆ ಶತಕ ಬಾರಿಸುವ ಮೂಲಕ ವಾಹನ ಸವಾರರಿಗೆ ಮತ್ತಷ್ಟು ಶಾಕ್ ನೀಡಿದೆ. ಕರ್ನಾಟಕದ ಬೆಂಗಳೂರು, ಉತ್ತರ ಕನ್ನಡದ ಶಿರಸಿ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ಬೀದರ್, ಚಾಮರಾಜನಗರ, ಹಾವೇರಿ, ಬೆಂಗಳೂರು ಗ್ರಾಮಾಂತರ, ಧಾರವಾಡ, ಗುಲ್ಬರ್ಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಹಾಸನ, ಹಾವೇರಿ, ಕೊಡಗು, ರಾಯಚೂರು, ರಾಮನಗರ, ದಾವಣಗೆರೆ,

25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶತಕ ಬಾರಿಸಿದ ಪೆಟ್ರೋಲ್ ಬೆಲೆ..?! Read More »

ಕರಾವಳಿ

ದಕ್ಷಿಣ ಕನ್ನಡದಲ್ಲಿ ನಿಯಂತ್ರಣಕ್ಕೆ ಬಾರದ ಕೋವಿಡ್ ➤ ಲಾಕ್ ಡೌನ್ ವಿಸ್ತರಣೆ..?!

(ನ್ಯೂಸ್ ಕಡಬ) newskadaba,ಮಂಗಳೂರು ಜೂ.19: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿಲ್ಲ. ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ಹೇರಿದರೂ ಸೋಂಕಿನ ಅರ್ಭಟ ತಗ್ಗಿಲ್ಲ. ಇಂದು ಈ ಮಹಾಮಾರಿಗೆ 15 ಮಂದಿ ಬಲಿಯಾಗಿದ್ದು, ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 1,024 ಕ್ಕೆ ಏರಿದೆ. ಜಿಲ್ಲೆಯ ಇಂದಿನ ಪಾಸಿಟಿವಿಟಿ ರೇಟ್ 10.07% ಆಗಿದೆ. ಜತೆಗೆ ಇಂದು 665 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 6,931ಆಕ್ವೀವ್ ಕೇಸ್ ಇದ್ದು

ದಕ್ಷಿಣ ಕನ್ನಡದಲ್ಲಿ ನಿಯಂತ್ರಣಕ್ಕೆ ಬಾರದ ಕೋವಿಡ್ ➤ ಲಾಕ್ ಡೌನ್ ವಿಸ್ತರಣೆ..?! Read More »

ಕರಾವಳಿ, ಕರ್ನಾಟಕ

ಸುಳ್ಯದ ವ್ಯಕ್ತಿ ನ್ಯೂಜಿಲೆಂಡ್‌ನಲ್ಲಿ ಅನಾರೋಗ್ಯದಿಂದ ನಿಧನ

(ನ್ಯೂಸ್ ಕಡಬ) newskadaba,ಸುಳ್ಯ, ಜೂ.19: ನ್ಯೂಜಿಲೆಂಡ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಅರಂತೋಡು ಮೇರ್ಕಜೆಯ ಮೂಲದ ಜಯಪ್ರಕಾಶ್(45) ಅವರು ಜೂನ್ 15 ರ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಸೌಖ್ಯದ ಕಾರಣದಿಂದ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಬ್ರೈನ್ ಟ್ಯೂಮರ್ ಇರುವುದು 3 ವಾರದ ಹಿಂದೆ ಗೊತ್ತಾಗಿತ್ತು. ಅದಕ್ಕಾಗಿ ಆಪರೇಶನ್ ಮಾಡಲು ಸಿದ್ಧತೆ ನಡೆಸಿದಾಗ ಅವರು ಅಸೌಖ್ಯ ತೀವ್ರಗೊಂಡು ಕೋಮಕ್ಕೆ ಜಾರಿದರೆನ್ನಲಾಗಿದೆ. ಶುಕ್ರವಾರ ರಾತ್ರಿ 2.30 ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಜಯಪ್ರಕಾಶ್ ಅವರ ಪತ್ನಿ ಪುಷ್ಪಾ

ಸುಳ್ಯದ ವ್ಯಕ್ತಿ ನ್ಯೂಜಿಲೆಂಡ್‌ನಲ್ಲಿ ಅನಾರೋಗ್ಯದಿಂದ ನಿಧನ Read More »

ಕರಾವಳಿ
Scroll to Top