ಏಣಿತಡ್ಕ: ಶಾಸಕರಿಂದ ರಸ್ತೆ ಕಾಮಗಾರಿ ವೀಕ್ಷಣೆ ► ಕಿಂಡಿ ಅಣೆಕಟ್ಟು ನಿರ್ಮಾಣ ಶೀಘ್ರದಲ್ಲಿ ಪ್ರಾರಂಭ-ಎಸ್.ಅಂಗಾರ
(ನ್ಯೂಸ್ ಕಡಬ) newskadaba.com ಪುತ್ತೂರು, ನ.11. ಇಲ್ಲಿನ ಕೊಯಿಲ ಗ್ರಾಮದ ಏಣಿತಡ್ಕದಲ್ಲಿ ಶಾಸಕರ ಅನುದಾನದಿಂದ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ಸುಳ್ಯ ಶಾಸಕ ಎಸ್.ಅಂಗಾರ ವೀಕ್ಷಣೆ ಮಾಡಿ ಕಾಮಗಾರಿಯ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು. ಏಣಿತಡ್ಕದ ನೂತನ ಸೇತುವೆ ಬಳಿಯಿಂದ ಸಬಳೂರು ಅಯೋಧ್ಯಾನಗರದ ಶ್ರೀರಾಮ ಭಜನಾ ಮಂದಿರದ ತನಕ ಸುಮಾರು 97 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಡಾಮಾರೀಕರಣ ನಡೆಯುತ್ತಿದೆ. ಇತ್ತೀಚೆಗೆ ಇದರ ಗುದ್ದಲಿ ಪೂಜೆ ನೇರವೇರಿ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಯಲ್ಲಿ ಶಾಸಕರು ಕಾಮಗಾರಿ […]


