Kadaba News

ಭಾರತೀಯ ವಾಯು ಸೇನೆಯ ವಿಮಾನ ಪತನ ► 5 ಸೈನಿಕರ ಮೃತ್ಯು

(ನ್ಯೂಸ್ ಕಡಬ) newskadaba.com ಗುವಾಹಾಟಿ, ಅ.6. ಭಾರತೀಯ ವಾಯು ಸೇನೆಯ ವಿಮಾನವೊಂದು ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಪತನಗೊಂಡಿದ್ದು 5 ಸೈನಿಕರು ಸಾವನ್ನಪ್ಪಿದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ. ಚೀನಾ ಹಾಗೂ ಭಾರತದ ಗಡಿಯ 12 ಕಿ.ಮೀ ವ್ಯಾಪ್ತಿ ಭೂ ಪ್ರದೇಶದಲ್ಲಿ ಇಂದು ಮುಂಜಾನೆ 6 ಗಂಟೆ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಎಂಐ 17ವಿ5 ವಿಮಾನ ಪತನಗೊಂಡಿದ್ದು ಅವಘಡದಲ್ಲಿ 5 ಸೈನಿಕರು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ತೀವ್ರ ಗಾಯಗಳಾಗಿವೆ. ವಿಮಾನದಲ್ಲಿ ಒಟ್ಟು 7 ಮಂದಿ ಇದ್ದರು ಎಂದು ವರದಿಯಾಗಿದೆ. […]

ಭಾರತೀಯ ವಾಯು ಸೇನೆಯ ವಿಮಾನ ಪತನ ► 5 ಸೈನಿಕರ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ನೇತ್ರಾವತಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕನ ಮೃತ ದೇಹ ಪತ್ತೆ..

 (ನ್ಯೂಸ್ ಕಡಬ) newskadaba.com ಮಂಗಳೂರು, ಅ.6. ಆಟೋ ಚಾಲಕರೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಸಮೀಪದಲ್ಲಿ ಗುರುವಾರ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ ಕೋಡಿಕಲ್ ಅಶೋಕ ನಗರದ ಮಹಮ್ಮದ್ ಬಶೀರ್ (35) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ತೊಕ್ಕೊಟು ಕಡೆಗೆ ಹೋಗುತ್ತಿದ್ದ ವೇಳೆ ಆಟೋ ನಿಲ್ಲಿಸಿ ನದಿಗೆ ಹಾರಿದ್ದಾರೆ. ಹಾರಿದ ಕೆಲವೇ ಕ್ಷಣದಲ್ಲಿ ಸಾರ್ವಜನಿಕರು ಜಮಾಯಿದ್ದು ಕೂಡಲೆ ಪೊಲೀಸರಿಗೆ ಸುದ್ಧಿ ಮುಟ್ಟಿದ್ದಾರೆ. ನದಿಗೆ ಬಿದ್ದು ನೀರಿನಲ್ಲಿ ವಿಲವಿಲ ಒದ್ದಾಡಿದ ದೃಶ್ಯ ಮೊಬೈಲ್ ನಲ್ಲಿ

ನೇತ್ರಾವತಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕನ ಮೃತ ದೇಹ ಪತ್ತೆ.. Read More »

ಕರಾವಳಿ

ಆಲಂಕಾರು: ಬಿಜೆಪಿ ಸಮರ್ಥನಾ ಸಮಾವೇಶ ► ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಮುಂದಿನ ಗುರಿ- ಡಿ.ಎಸ್.ವೀರಯ್ಯ

(ನ್ಯೂಸ್ ಕಡಬ) newskadaba.com ಕಡಬ,ಅ.6. ಭಾರತೀಯ ಜನತಾ ಪಾರ್ಟಿಯ ಬೆಳಂದೂರು, ಹಾಗೂ ನೆಲ್ಯಾಡಿ ಶಕ್ತಿ ಕೇಂದ್ರಗಳ ಎಸ್ .ಸಿ ಮೋರ್ಚಾ ವತಿಯಿಂದ ಸಮರ್ಥನಾ ಸಮಾವೇಶ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರೈತ ಭವನ ಸಭಾಂಗಣದಲ್ಲಿ ಗುರುವಾರ ನಡೆಯಿತು. ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಸಮರ್ಥನಾ ಸಮಾವೇಶವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನದ ತತ್ವ ಆದರ್ಶಗಳನ್ನು ಗೌರವಿಸಿ ಬಿಜೆಪಿ ಆಡಳಿತವಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ

ಆಲಂಕಾರು: ಬಿಜೆಪಿ ಸಮರ್ಥನಾ ಸಮಾವೇಶ ► ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಮುಂದಿನ ಗುರಿ- ಡಿ.ಎಸ್.ವೀರಯ್ಯ Read More »

ಕರಾವಳಿ

ಮಂಗಳೂರು: ಮೊದಲ ಮಹಿಳಾ ಡಿಸಿಪಿಯಾಗಿ ► ಉಮಾ ಪ್ರಶಾಂತ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.5. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತರಾಗಿ ಉಮಾ ಪ್ರಶಾಂತ್ ನೇಮಕಗೊಂಡಿದ್ದು, ಇವರು ಮೊದಲ ಮಹಿಳಾ ಡಿಸಿಪಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಂಗಳೂರು ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿಯಾಗಿದ್ದ ಹನುಮಂತರಾಯರಿಂದ ತೆರವಾಗಿದ್ದ ಸ್ಥಾನಕ್ಕೆ ಉಮಾ ಪ್ರಶಾಂತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹನುಮಂತ್ ಈಗ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದಾರೆ. ಮೂಲತ: ಮೈಸೂರಿನವರಾದ ಉಮಾ ಅವರು

ಮಂಗಳೂರು: ಮೊದಲ ಮಹಿಳಾ ಡಿಸಿಪಿಯಾಗಿ ► ಉಮಾ ಪ್ರಶಾಂತ್ ನೇಮಕ Read More »

ಕರಾವಳಿ

ಮಂಗಳೂರು:ನೀರು ಪಾಲಾದ ಯುವಕ ► ಕೊಲೆ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು,ಅ.5. ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜಿ ಸಮೀಪದ ಶಿಬರೂರು ದೇವಸ್ಥಾನ ಸಮೀಪದ ಕೆರೆಯಲ್ಲಿ ಯುವಕನನ್ನು ಸ್ನೇಹಿತರೇ ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ ರಾತ್ರಿ ಘಟನೆ ನಡೆದಿದ್ದು ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತನನ್ನು ಸುರತ್ಕಲ್ ನ ಕೃಷ್ಣಾಪುರದ ನಿವಾಸಿ ಫಯಾಜ್ ಎಂಬವರ ಪುತ್ರ ಮಕ್ಸೂದ್ ಎಂದು ಗುರುತಿಸಲಾಗಿದೆ. ಮೃತ ಮಕ್ಸೂದ್ ಮಂಗಳೂರಿನ ಎಂಆರ್ ಪಿಎಲ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮಕ್ಸೂದ್ ಅಕ್ಟೋಬರ್ 3 ರಂದು

ಮಂಗಳೂರು:ನೀರು ಪಾಲಾದ ಯುವಕ ► ಕೊಲೆ ಶಂಕೆ Read More »

ಕರಾವಳಿ

ಕಡಬ: ಆಸಿಡ್ ಸೇವಿಸಿ ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಅ.05. ನೆಂಟಸ್ತಿಕೆ ಕೂಡಿ ಬರದ ಹಿನ್ನೆಲೆಯಲ್ಲಿ ಯುವತಿಯೋರ್ವಳು ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಹಳೆನೇರಂಕಿ ಗ್ರಾಮದಲ್ಲಿ ಬುಧವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಹಳೆನೇರಂಕಿ ಗ್ರಾಮದ ಅರಜ್ಜಿಗೆ ನಿವಾಸಿ ಕೃಷ್ಣಪ್ಪ ಪೂಜಾರಿ ಎಂಬವರ ಪುತ್ರಿ ಸೌಮ್ಯ ಎಂದು ಗುರುತಿಸಲಾಗಿದೆ. ಈಕೆಗೆ ಹಲವು ನೆಂಟಸ್ಥಿಕೆಗಳು ಬಂದಿದ್ದರೂ ಯಾವುದೂ ಕೂಡಿಬರದ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾಗಿ ಆಸಿಡ್ ಕುಡಿದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆಕೆಯ ತಂದೆ

ಕಡಬ: ಆಸಿಡ್ ಸೇವಿಸಿ ಯುವತಿ ಆತ್ಮಹತ್ಯೆ Read More »

ಕರಾವಳಿ

ಕಡಬ ಎಸ್ಎಮ್ಎ ರೀಜನಲ್ ಮಹಾಸಭೆ, ಸಮಿತಿ ಪುನಃರಚನೆ ► ಪ್ರತಿಭಾನ್ವಿತರಿಗೆ ಸ್ಮರಣಿಕೆ ನೀಡಿ ಗೌರವ

(ನ್ಯೂಸ್ ಕಡಬ) newskadaba.com ಕಡಬ,ಅ.5. ಇಲ್ಲಿಯ ರೀಜನಲ್ ಎಸ್ಎಮ್ಎ ಸಂಘಟನೆಯ ಮಹಾಸಭೆಯು ಕಡಬ ಅಲ್ಮದೀನ ಮಸ್ಜಿದ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸುಳ್ಯ, ಕಡಬ, ಬೈತಡ್ಕ ರೀಜನಲ್ ಘಟಕದ ಬೆಳ್ಳಾರೆ ಝೋನಲ್ ಅಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಎಸ್ಎಂಎ ಸಂಘಟನೆಯ ಸಮಿತಿಯನ್ನು ಪುನಃರಚಿಸಿ ಪದಾಧಿಕಾರಿಗಳ ಜವಾಬ್ದಾರಿಯನ್ನು ವಿವರಿಸಿದರು. ಎಸ್ಎಮ್ಎ ಸಂಘಟನೆಯ ಗೌರವಾಧ್ಯಕ್ಷರಾದ ಮರ್ದಾಳ ತಕ್ವೀಯತುಲ್ ಇಸ್ಲಾಂ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ತಂಙಳ್ ದುಃವಾರ್ಶೀವಚನ ನೀಡಿದರು. ಕಲ್ಲುಗುಡ್ಡೆ ನೂರುಲ್ ಹುದಾ ಮಸ್ಜಿದ್ನ ಸದರ್ ಮೊಹಲ್ಲಿಂ

ಕಡಬ ಎಸ್ಎಮ್ಎ ರೀಜನಲ್ ಮಹಾಸಭೆ, ಸಮಿತಿ ಪುನಃರಚನೆ ► ಪ್ರತಿಭಾನ್ವಿತರಿಗೆ ಸ್ಮರಣಿಕೆ ನೀಡಿ ಗೌರವ Read More »

ಕರಾವಳಿ

ಕಳಾರ ಅಂಗನವಾಡಿ ► ಮಾತೃಪೂರ್ಣ ಯೋಜನೆಗೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ,ಅ.4. ಕಳಾರ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆಗೆ ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮಗೇರ ತುಂಬೆತ್ತಡ್ಕ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಗ್ರಾ.ಪಂ. ಸದಸ್ಯರಾದ ಹಾಜಿ ಕೆ.ಎಂ. ಹನೀಫ್, ಅಶ್ರಫ್ ಶೇಡಿಗುಂಡಿ, ಜಯಂತಿ ಕಳಾರ ಸ.ಹಿ.ಪ್ರಾ.ಶಾಲೆಯ ಮುಖ್ಯಗುರು ಹಮೀದ್, ಗ್ರಾ.ಪಂ. ಕಾರ್ಯದರ್ಶಿ ಭುವನೇಂದ್ರ ಮರ್ದಾಳ, ಅಂಗನವಾಡಿ ಕಾರ್ಯಕರ್ತೆ ಸುಶೀಲ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಕಳಾರ ಅಂಗನವಾಡಿ ► ಮಾತೃಪೂರ್ಣ ಯೋಜನೆಗೆ ಚಾಲನೆ Read More »

ಕರಾವಳಿ

ಅಡ್ಡಗದ್ದೆ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆ…

(ನ್ಯೂಸ್ ಕಡಬ) newskadaba.com ಕಡಬ,ಅ.4.  ಅಡ್ಡಗದ್ದೆ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆಗೆ ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ತುಂಬೆತ್ತಡ್ಕ,  ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಜಯಂತಿ, ಕಾರ್ಯದರ್ಶಿ ಭುವನೇಂದ್ರ ಮರ್ದಾಳ ಅಂಗನವಾಡಿ ಕಾರ್ಯಕರ್ತೆ ರುಕ್ಮಿಣಿ ಉಪಸ್ಥಿತರಿದ್ದರು.

ಅಡ್ಡಗದ್ದೆ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆ… Read More »

ಕರಾವಳಿ

ಪಾಲೆತ್ತಡ್ಕ ಅಂಗನವಾಡಿ ► ಗರ್ಭಿಣಿ, ಬಾಣಂತಿಯರಿಗೆ ಊಟ ಬಡಿಸುವ ಮೂಲಕ ಮಾತೃಪೂರ್ಣ ಯೋಜನೆಗೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ,ಅ.4. ಪಾಲೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆಗೆ ಮರ್ದಾಳ ಗ್ರಾ.ಪಂ.ಸದಸ್ಯ ಬಾಲವಿಕಾಸ ಸಮಿತಿ ಅಧ್ಯಕ್ಷ ಹರೀಶ್ ಕೋಡಂದೂರು ಗರ್ಭಿಣಿಯರಿಗೆ  ಹಾಗೂ ಬಾಣಂತಿಯರಿಗೆ ಊಟ ಬಡಿಸುವ ಮೂಲಕ ಚಾಲನೆ ಸೋಮವಾರ ನೀಡಿದರು. ಈ ಸಂಧರ್ಭದಲ್ಲಿ ಗ್ರಾ.ಪಂ.ಸದಸ್ಯ ಅಬೂಬಕ್ಕರ್, ಪಾಲೆತ್ತಡ್ಕ ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ರೇಖಾ, ಅಂಗನವಾಡಿ ಕಾರ್ಯಕರ್ತೆ ಪಾರ್ವತಿ, ಸಹಾಯಕಿ ಜಯಂತಿ ರೈ ಉಪಸ್ಥಿತರಿದ್ದರು.

ಪಾಲೆತ್ತಡ್ಕ ಅಂಗನವಾಡಿ ► ಗರ್ಭಿಣಿ, ಬಾಣಂತಿಯರಿಗೆ ಊಟ ಬಡಿಸುವ ಮೂಲಕ ಮಾತೃಪೂರ್ಣ ಯೋಜನೆಗೆ ಚಾಲನೆ Read More »

ಕರಾವಳಿ
Scroll to Top