Kadaba News

ಮಂಗಳೂರು: ಏರ್‌ಪೋರ್ಟ್‌ನ ಶೌಚಾಲಯದಲ್ಲಿ ಅಕ್ರಮ ಚಿನ್ನ ಪತ್ತೆ..!!!

(ನ್ಯೂಸ್ ಕಡಬ) newskadaba.com ಮಂಗಳೂರು , ನ.4. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಚಿನ್ನದ ಗಟ್ಟಿಯಿರುವ ಬ್ಯಾಗೊಂದು ಪತ್ತೆಯಾದ ಘಟನೆ ವರದಿಯಾಗಿದೆ. ದುಬೈಯಿಂದ ಮಂಗಳೂರಿಗೆ ತಲುಪಿದ್ದ ಸ್ಪೈಸ್ ಜೆಟ್ ಎಸ್.ಜಿ.60ರಲ್ಲಿ ಬಂದಿದ್ದ ಪ್ರಯಾಣಿಕನೊಬ್ಬ ಈ ಬ್ಯಾಗನ್ನು ಬಿಟ್ಟು ಹೋಗಿದ್ದು, ಸ್ವಚ್ಛತಾ ಸಿಬ್ಬಂದಿ ಶೌಚಾಲಯ ಸ್ವಚ್ಛಗೊಳಿಸುವ ಸಂದರ್ಭ ಈ ಬ್ಯಾಗನ್ನು ಕಂಡಿದ್ದು, ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ. ಕಂದಾಯ ಗುಪ್ತಚರ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕ ಆಗಮಿಸಿ, ಪರಿಶೀಲನೆ ನಡೆಸಿದಾಗ 1.166 ಗ್ರಾಂ.ವಿದೇಶಿ ಮೂಲದ ಚಿನ್ನದ ಬಿಸ್ಕತ್ತುಗಳಿರುವುದು ಬೆಳಕಿಗೆ ಬಂದಿದೆ. ಇಪ್ಪತ್ತನಾಲ್ಕು ಕ್ಯಾರೆಟ್ […]

ಮಂಗಳೂರು: ಏರ್‌ಪೋರ್ಟ್‌ನ ಶೌಚಾಲಯದಲ್ಲಿ ಅಕ್ರಮ ಚಿನ್ನ ಪತ್ತೆ..!!! Read More »

ಕರಾವಳಿ

ಸಾರಿಗೆ ಸಂಸ್ಥೆಗಳಿಗೂ ತಟ್ಟಿದ GST ಬಿಸಿ ► ಗುಜರಿ ಬಸ್‌’ಗಳ ಖರೀದಿಗೆ ತೆರಿಗೆ ಎಷ್ಟು ಗೊತ್ತೆ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.4. ಕೇಂದ್ರ ಸರ್ಕಾರ ದೇಶದಲ್ಲಿ ಜಿಎಸ್ ಟಿ ಜಾರಿಗೆ ತಂದ ಮೇಲೆ  ಉದ್ಯಮ, ವ್ಯಾಪಾರ, ವಹಿವಾಟಿನ ಮೇಲೆ ಮಹತ್ವದ ಬದಲಾವಣೆಗಳು ನಡೆದಿವೆ. ಆದ್ರೆ ಜಿಎಸ್ ಟಿಯ ಬಿಸಿ ಈಗ ಸಾರಿಗೆ ಸಂಸ್ಥೆಗಳಿಗೂ ತಟ್ಟಿದೆ. ಜಿಎಸ್ ಟಿಯಿಂದ  ಸಾರಿಗೆ ಸಂಸ್ಥೆ ಸಂಕಷ್ಟಕ್ಕೀಡಾಗಿದೆ. GST ಜಾರಿಗೆ ಬಂದ ನಂತರ ಕೆಎಸ್​’ಆರ್​ಟಿಸಿಗೆ ಬಿಸಿ ತಟ್ಟಿದೆ. ಈಗಾಗಲೆ ಗುಜರಿಗೆ ಸೇರಿರುವ 800 ಬಸ್‌’ಗಳ ಖರೀದಿಗೆ ಗುಜರಿಯವರು ಮುಂದೆ ಬರುತ್ತಿಲ್ಲ. ಕಾರಣವೇನು ಅಂತಿರಾ..? ಹೌದು ಗುಜರಿ ವಸ್ತುಗಳ ಖರೀದಿ ಮೇಲೆ ಶೇಕಡ

ಸಾರಿಗೆ ಸಂಸ್ಥೆಗಳಿಗೂ ತಟ್ಟಿದ GST ಬಿಸಿ ► ಗುಜರಿ ಬಸ್‌’ಗಳ ಖರೀದಿಗೆ ತೆರಿಗೆ ಎಷ್ಟು ಗೊತ್ತೆ…? Read More »

ಕರಾವಳಿ

ಸ್ನೇಹಿತರೊಂದಿಗೆ ಮ್ಯೂಸಿಕ್ ಪಾರ್ಟಿ ಮಾಡಬೇಕೆ…??? ►ಹಾಗಾದರೆ ಈ ಆ್ಯಪ್ ಡೌನ್‌ಲೋಡ್ ಮಾಡಿ…!!!

(ನ್ಯೂಸ್ ಕಡಬ) newskadaba.com ಕಡಬ, ನ.4.  ಸ್ನೇಹಿತರೊಂದಿಗೆ ಸಂಗೀತವನ್ನು ಪ್ಲೇ ಮಾಡಿ ಪಾರ್ಟಿ ಖುಷಿ ಹೆಚ್ಚಿಸ ಬೇಕೆ..??  ಏಕಕಾಲದಲ್ಲಿ  ಉಚ್ಛ ಸ್ವರದಲ್ಲಿ ನಿಮ್ಮ ಹ್ಯಾಂಡ್ ಸೆಟ್‌ನಲ್ಲಿ ಯೂಟ್ಯೂಬ್, ಸ್ಪಾಟಿಫೈ, ಸೌಂಡ್‌ಕ್ಲೌಡ್ ಅಥವಾ ಮ್ಯೂಸಿಕ್ ಲೈಬ್ರೆರಿಯಲ್ಲಿ ಸಂಗೀತವನ್ನು ಪ್ಲೇ ಮಾಡಿ ಪಾರ್ಟಿಯಲ್ಲಿ ಕುಣಿಯಲು ನೆರವಾಗುವ  ‘ಪಾರ್ಟಿ ಮ್ಯೂಸಿಕ್ ಆ್ಯಪ್’ ಬಂದಿದೆ. ಹೌದು ಈ ಆ್ಯಪ್ ಹೆಸರು “ಆ್ಯಂಪ್‌ಮಿ” ಅಂತ. ಈ ‘ಆ್ಯಂಪ್‌ಮಿ’ ಆ್ಯಪ್ ನಲ್ಲಿ ಜೈಂಟ್ ಮಲ್ಟಿ ಸ್ಪೀಕರ್ ಸೆಟಪ್ ಸಹಾಯದಿಂದ ಮೊಬೈಲ್ ಫೋನ್ ಹಾಗೂ ಬ್ಲೂಟೂಥ್ ಸ್ಪೀಕರ್ ಬಳಸಿ

ಸ್ನೇಹಿತರೊಂದಿಗೆ ಮ್ಯೂಸಿಕ್ ಪಾರ್ಟಿ ಮಾಡಬೇಕೆ…??? ►ಹಾಗಾದರೆ ಈ ಆ್ಯಪ್ ಡೌನ್‌ಲೋಡ್ ಮಾಡಿ…!!! Read More »

ತಂತ್ರಜ್ಞಾನ, ಲೈಫ್‍ಸ್ಟೈಲ್

ಕಡಬ: ಬೂತ್ ಮಟ್ಟದ ಕಾರ್ಯಕರ್ತರ ಸಭೆ ►ಪರಿವರ್ತನಾ ಯಾತ್ರೆ ಯಶಸ್ಸಿಗೆ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ

(ನ್ಯೂಸ್ ಕಡಬ) newskadaba.com ಕಡಬ, ನ.3. ಸುಳ್ಯದಲ್ಲಿ ನಡೆಯುವ ನವಕರ್ನಾಟದ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯನ್ನು ಯಶಸ್ಸುಗೊಳಿಸಲು ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ಸನ್ನದ್ದರಾಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಕಡಬದ ಅನುಗ್ರಹ ಸಭಾಭವನದಲ್ಲಿ ನಡೆದ ಸುಳ್ಯ ಮಂಡಲದ ನೆಲ್ಯಾಡಿ ಮತ್ತು ಕಡಬ ಶಕ್ತಿ ಕೇಂದ್ರಗಳ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಶುದ್ದಾಚಾರದ ಆಡಳಿತ ನೀಡಲು ಬಿಜೆಪಿಯನ್ನು ಗೆಲ್ಲಿಸಬೇಕು, ರಾಜ್ಯದ ಜನತೆ ಅಪೇಕ್ಷೀಸಿದಂತೆ ಕಾರ್ಯಕರ್ತರು ಕಾಂಗ್ರೆಸ್ಸ್‌ ಸರಕಾರದ ದುರಾಡಳಿತವನ್ನು ಹಾಗೂ ಕೇಂದ್ರ ಸರಕಾರದ

ಕಡಬ: ಬೂತ್ ಮಟ್ಟದ ಕಾರ್ಯಕರ್ತರ ಸಭೆ ►ಪರಿವರ್ತನಾ ಯಾತ್ರೆ ಯಶಸ್ಸಿಗೆ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ Read More »

ಕರಾವಳಿ

ಗೂಗಲ್ ನಕ್ಷೆಯಲ್ಲಿ ಕನ್ನಡ ಬಳಕೆ ► ಸಂತಸ ವ್ಯಕ್ತಪಡಿಸಿದ ಕನ್ನಡಿಗರು

(ನ್ಯೂಸ್ ಕಡಬ) newskadaba.com ಕಡಬ, ನ.3. ಗೂಗಲ್ ನಕ್ಷೆಯಲ್ಲಿ ಈಗ ಸ್ಥಳಗಳ ಹೆಸರು ಇಂಗ್ಲಿಷ್‍‌ನಲ್ಲಿ ಮಾತ್ರ ಅಲ್ಲ ಕನ್ನಡದಲ್ಲಿಯೂ ಲಭ್ಯವಿದೆ. ಇಲ್ಲಿಯವರೆಗೆ ಗೂಗಲ್ ಮ್ಯಾಪ್‍ನಲ್ಲಿ ಸ್ಥಳಗಳ ಹೆಸರು ಇಂಗ್ಲಿಷ್‍ನಲ್ಲಿ ಮಾತ್ರ ಕಾಣುತ್ತಿತ್ತು. ಇದೀಗ ಇಂಗ್ಲಿಷ್ ಜತೆಗೆ ಕನ್ನಡದಲ್ಲಿಯೂ ಸ್ಥಳದ ಹೆಸರನ್ನು ಓದಬಹುದು. ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಿಗರಿಗೊಂದು ಸಂತೋಷದ ಸುದ್ದಿ ಇದಾಗಿದೆ. ಆಯಾ ಪ್ರಾಂತೀಯ ಭಾಷೆ ನಕ್ಷೆಯಲ್ಲಿ ಕಾಣಿಸಿಕೊಳ್ಳಲಿದೆ. ಗೂಗಲ್‌ನ ಈ ಕ್ರಮವನ್ನು ಪ್ರಶಂಸಿಸಿ, ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಸಂತೋಷ ವ್ಯಕ್ತಪಡಿಸಿ, ಗೂಗಲ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಗೂಗಲ್ ನಕ್ಷೆಯಲ್ಲಿ ಕನ್ನಡ ಬಳಕೆ ► ಸಂತಸ ವ್ಯಕ್ತಪಡಿಸಿದ ಕನ್ನಡಿಗರು Read More »

ಕರಾವಳಿ

ಪುತ್ತೂರು: ಕೆ.ಪಿ.ಎಲ್.ಇ ಕಾಯಿದೆ ತಿದ್ದುಪಡಿ ವಿರೋದಿಸಿ ಖಾಸಗಿ ವೈದ್ಯರ ಮುಷ್ಕರ

(ನ್ಯೂಸ್ ಕಡಬ) newskadaba.com ಪುತ್ತೂರು, ನ.03. ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ರಾಜ್ಯ ಸರಕಾರದ ವಿರುದ್ಧ ಕೈಗೊಂಡ ಮುಷ್ಕರದಿಂದಾಗಿ ಪುತ್ತೂರಿನ ಎಲ್ಲಾ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿತು.  

ಪುತ್ತೂರು: ಕೆ.ಪಿ.ಎಲ್.ಇ ಕಾಯಿದೆ ತಿದ್ದುಪಡಿ ವಿರೋದಿಸಿ ಖಾಸಗಿ ವೈದ್ಯರ ಮುಷ್ಕರ Read More »

ಕರಾವಳಿ

ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ►ಜೈ ತುಳುನಾಡು ಸಂಘಟನೆ ವತಿಯಿಂದ ಟ್ವೀಟ್ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ.3. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಮಂಗಳೂರಿನ ಜೈ ತುಳುನಾಡು ಸಂಘಟನೆಯ ವತಿಯಿಂದ 1 ಲಕ್ಷ ಟ್ವೀಟ್ ಅಭಿಯಾನವನ್ನು ನಡೆಸಲಾಯಿತು.   ಕರಾವಳಿ ಜಿಲ್ಲೆಯನ್ನು ಪ್ರತ್ಯೇಕ ತುಳುರಾಜ್ಯವಾಗಿ ಪರಿಗಣಿಸುವಂತೆ ಗಮನ ಸೆಳೆಯಲು ಕಪ್ಪು ದಿನವನ್ನಾಗಿ ಘೋಷಿಸಿ ಇನ್ನೊಂದು 1 ಲಕ್ಷ ಟ್ವೀಟ್ ಗುರಿಯನ್ನು ಅಭಿಯಾನವನ್ನು ಜೋಡಿಸಲಾಯಿತು. ಒಂದೇ ದಿನ 2 ಲಕ್ಷ ಟ್ವೀಟ್‌’ಗಳು ಟ್ರೆಂಡ್

ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ►ಜೈ ತುಳುನಾಡು ಸಂಘಟನೆ ವತಿಯಿಂದ ಟ್ವೀಟ್ ಅಭಿಯಾನ Read More »

ಕರಾವಳಿ

ಮಂಗಳೂರು: ಸಿಟಿ ಬಸ್‌ ಡಿಕ್ಕಿ ► ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ನ.3. ಸಿಟಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ವೃದ್ಧೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಕರ್ನಕಟ್ಟೆ ಬಾಲ ಏಸು ಮಂದಿರದ ಬಳಿ ಶುಕ್ರವಾರ ನಡೆದಿದೆ. ಮೃತ ಮಹಿಳೆಯನ್ನು ಕುಲಶೇಖರ ಕೋಟಿಮುರ ನಿವಾಸಿ ಲಿಲ್ಲಿ ಪಿಂಟೋ (65) ಎಂದು ಗುರುತಿಸಲಾಗಿದೆ . ಬಾಲ ಏಸು ಮಂದಿರದಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮನೆಗೆ ವಾಪಾಸಾಗುತ್ತಿದ್ದ ವೇಳೆ ಬಸ್‌ ಡಿಕ್ಕಿ ಹೊಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಡು, ತನಿಖೆ ಪ್ರಾರಂಭಿಸಿದ್ದಾರೆ.

ಮಂಗಳೂರು: ಸಿಟಿ ಬಸ್‌ ಡಿಕ್ಕಿ ► ಮಹಿಳೆ ಮೃತ್ಯು Read More »

ಕರಾವಳಿ

ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್‌ ► ಪುತ್ತೂರಿನ ಹನುಮಗಿರಿ ಶ್ರೀ ಆಂಜನೇಯ ಕ್ಷೇತ್ರಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ.3. ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್‌ ಪುತ್ತೂರು ತಾಲೂಕಿನ ಈಶ್ವರಮಂಗಿಲದಲ್ಲಿರುವ ಹನುಮಗಿರಿ ಪಂಚಮುಖಿ ಶ್ರೀ ಆಂಜನೇಯ ಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಕೋದಂಡರಾಮನ ಪ್ರತಿಷ್ಠಾ ಮಹೋತ್ಸವ ಸಲುವಾಗಿ ಬೆಳಗ್ಗೆ ಸುಮಾರು 9.40 ರ ವೇಳೆಗೆ ಆಗಮಿಸಿದ ಅವರನ್ನು ಧರ್ಮಶ್ರೀ ಪ್ರತಿಷ್ಠಾನದ ಮಹಾ ಪೋಷಕರಾದ ಜಿ.ಕೆ. ಮಹಾಬಲೇಶ್ವರ ಭಟ್‌ರವರು ಹಾರಾರ್ಪಣೆ ಮಾಡಿ ಬರಮಾಡಿಕೊಂಡರು. ಬಳಿಕ ಕೋದಂಡರಾಮ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು

ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್‌ ► ಪುತ್ತೂರಿನ ಹನುಮಗಿರಿ ಶ್ರೀ ಆಂಜನೇಯ ಕ್ಷೇತ್ರಕ್ಕೆ ಭೇಟಿ Read More »

ಕರಾವಳಿ

ಖಾಸಗಿ ಬಸ್ ಪಲ್ಟಿ ► ಓರ್ವ ಮೃತ್ಯು, 6 ಮಂದಿ ಗಂಭೀರ

(ನ್ಯೂಸ್ ಕಡಬ) newskadaba.com ಧಾರವಾಡ, ನ.03. ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು, 6 ಜನ ಗಂಭೀರ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ಹೊನ್ನಾಪುರ ಶುಕ್ರವಾರ ಬೆಳಿಗ್ಗೆ ನಡೆದಿದೆ. ಶುಕ್ರವಾರ ಬೆಳಿಗ್ಗಿನ ಜಾವ ಬೆಂಗಳೂರಿನಿಂದ ಗೋವಾ ಕಡೆಗೆ ಹೊರಟ ಬಸ್‍ ಹೊನ್ನಾಪುರ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 6 ಜನರ ಸ್ಥಿತಿ ಗಂಭೀರವಾಗಿದ್ದು, ಒಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಹೊನ್ನಾಪುರ

ಖಾಸಗಿ ಬಸ್ ಪಲ್ಟಿ ► ಓರ್ವ ಮೃತ್ಯು, 6 ಮಂದಿ ಗಂಭೀರ Read More »

ಕರ್ನಾಟಕ
Scroll to Top