ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರಧಾನಿ ಮೋದಿ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆಗೆ ಅರುಣ್ ಜೇತ್ಲಿ ಖಂಡನೆ
(ನ್ಯೂಸ್ ಕಡಬ) newskadaba.com, ನವದೆಹಲಿ ,ಮೇ.13. ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿಯವರು ರಾಜಸ್ಥಾನದ ಅಳವಾರ್ ಕೇಸಿಗೆ ಸಂಬಂಧಿಸಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆಗಳನ್ನು ಖಂಡಿಸಿದ್ದಾರೆ.ಮಾಯಾವತಿ ಅವರ ವೈಯಕ್ತಿಕ ಟೀಕೆಗಳು ರಾಜಕೀಯ ಚರ್ಚೆಯನ್ನು ಹೊಸ ಕೆಳಮಟ್ಟಕ್ಕೆ ಒಯ್ದಿದೆ ಎಂದು ಅವರು ಹೇಳಿದ್ದಾರೆ.‘ಅಳವಾರ್ ರೇಪ ಕೇಸಿಗೆ ಆಕ್ರೋಶ ವ್ಯಕ್ತಪಡಿಸುವ ಮೂಲಕ ಮಾಯಾವತಿ ಮೊಸಳೆ ಕಣ್ಣೀರು ಸುರಿಸಿದ್ದಾರೆ. ಆಕೆಗೆ ನಿಜವಾಗಿಯೂ ಕಳಕಳಿ ಇದ್ದರೆ ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರಕಾರಕ್ಕೆ ಆಕೆ ನೀಡಿರುವ […]




