Kadaba News

ಮುಂಗಾರು ವಿಕೋಪ ತಡೆಗೆ ಸನ್ನದ್ಧರಾಗಿ➤ಯು ಟಿ ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.11.ರಾಜ್ಯದಲ್ಲಿ ಮುಂಗಾರು ವೇಳೆ ಕಡಲ್ಕೊರೆತ ಸೇರಿದಂತೆ ಭೂಕುಸಿತ, ಕೃತಕ ನೆರೆಯನ್ನು ನಿಭಾಯಿಸಲು ಈಗಾಗಲೇ ಜಿಲ್ಲಾಡಳಿತ ಸಜ್ಜಾಗಿದ್ದು, ಎನ್ ಎಂಪಿಟಿಯಲ್ಲಿ ಎನ್ ಡಿ ಆರ್ ಎಫ್ ಪಡೆ ಈಗಾಗಲೇ ಆಗಮಿಸಿದೆ. ಪ್ರಾಕೃತಿಕ ವಿಕೋಪ ತಡೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಹೇಳಿದರು. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ […]

ಮುಂಗಾರು ವಿಕೋಪ ತಡೆಗೆ ಸನ್ನದ್ಧರಾಗಿ➤ಯು ಟಿ ಖಾದರ್ Read More »

ಕರಾವಳಿ

ನೆರೆ ರಾಜ್ಯ ಕೇರಳದಲ್ಲಿ ನೀಫಾ ವೈರಾಣು ಜ್ವರ ಪತ್ತೆ➤ನೀಫಾ ವೈರಾಸ್ ಬಗ್ಗೆ ಎಚ್ಚರ ವಹಿಸಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.11.ನೆರೆ ರಾಜ್ಯ ಕೇರಳದಲ್ಲಿ ನೀಫಾ ವೈರಾಣು ಜ್ವರ ಪತ್ತೆಯಾಗಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರಲ್ಲಿ ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಕ್ರಮಕೈಗೊಳ್ಳಿ. ಹಣ್ಣು ಹಂಪಲು ಮಾರಾಟಗಾರರ ಸಭೆ ಕರೆದು ಅವರಲ್ಲೂ ಉತ್ತಮ ಗುಣಮಟ್ಟದ ಹಣ್ಣು ಹಂಪಲು ಮಾರಾಟ ಮಾಡಲು ನಿರ್ದೇಶನ ನೀಡಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಸೂಚಿಸಿದರು.ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಹಣ್ಣುಗಳನ್ನು ಸೇವಿಸುವ

ನೆರೆ ರಾಜ್ಯ ಕೇರಳದಲ್ಲಿ ನೀಫಾ ವೈರಾಣು ಜ್ವರ ಪತ್ತೆ➤ನೀಫಾ ವೈರಾಸ್ ಬಗ್ಗೆ ಎಚ್ಚರ ವಹಿಸಿ Read More »

ಕರಾವಳಿ

ಸೂರದಾಸಜಯಂತಿ ಹಾಗೂ ದಿವ್ಯಾಂಗ ವಿದ್ಯಾರ್ಥಿಗಳಿಗೆ ಸ್ಕೂಲ್‍ಕಿಟ್ ವಿತರಣೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.10.ವಿಕಲಚೇತನರ ಬದುಕಿಗೆ ಸದಾ ನೆರವಾಗುವುದು ನಮ್ಮೆಲ್ಲರಕರ್ತವ್ಯ. ತಾವು ವಂಚಿತರಲ್ಲ ಎಂಬ ಭಾವನೆಅವರಲ್ಲಿಮನೆ ಮಾಡಬೇಕು ಹಾಗೂ ಕ್ಷಣಕ್ಷಣವೂಅವರಲ್ಲಿಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ನಾವು ಮಾಡುತ್ತಾಇರಬೇಕು, ಇದುದೇವರ ಕೆಲಸ ಎಂದು ತಿಳಿಯಬೇಕು ಎಂದು ವಿಧಾನ ಸಭಾ ಸದಸ್ಯ ಶ್ರೀ ವೇದವ್ಯಾಸಕಾಮತ್ ನುಡಿದರು. ಎಂಡೋ ಸಲ್ಫಾನ್‍ಗೆ ಬಲಿಯಾಗಿರುವಕರ್ನಾಟಕದ ಮಂದಿಗೆ ನಾನು ಸರಕಾರದ ವತಿಯಿಂದಏನೆಲ್ಲ ಸೌಲಭ್ಯಒದಗಿಸಲು ಸಾಧ್ಯವೋಅದನ್ನು ಪ್ರಾಮಾಣಿಕವಾಗಿ ಮಾಡುವ ಪ್ರಯತ್ನ ಮಾಡುತ್ತೇನೆಎಂದುಅವರು ಭರವಸೆ ನೀಡಿದರು.ಜೂನ್ 9 ರಂದು ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿಯಲ್ಲಿಟೆಕ್ಸಸ್‍ಇನ್ಸ್ಟ್ರುಮೆಂಟ್ ಬೆಂಗಳೂರು, ಸಕ್ಷಮದ.ಕಜಿಲ್ಲಾಘಟಕ

ಸೂರದಾಸಜಯಂತಿ ಹಾಗೂ ದಿವ್ಯಾಂಗ ವಿದ್ಯಾರ್ಥಿಗಳಿಗೆ ಸ್ಕೂಲ್‍ಕಿಟ್ ವಿತರಣೆ. Read More »

ಕರಾವಳಿ

ಪ್ಯಾರಿಸ್ ರಾಣಿ ಆ್ಯಶ್ಲಿ ಬಾರ್ಟಿ➤ ವೊಂಡ್ರೂಸೋವಾ ವಿರುದ್ಧ ಜಯ

(ನ್ಯೂಸ್ ಕಡಬ) newskadaba.com  ಪ್ಯಾರಿಸ್, ಜೂನ್.10. ಶನಿವಾರದ ಫೈನಲ್‌ನಲ್ಲಿ ಪ್ಯಾರಿಸ್‌ ರಾಣಿ ಆ್ಯಶ್ಲಿ ಬಾರ್ಟಿ ಮಾರ್ಕೆಟಾ ವೊಂಡ್ರೂಸೋವಾ ವಿರುದ್ಧ 6-1, 6-3 ಅಂತರದ ಸುಲಭ ಜಯ ಒಲಿಸಿ ಕೊಂಡರು. ಇವರಿಬ್ಬರಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ಆಗಿತ್ತು. ನೊವಾಕ್‌ ಜೊಕೋವಿಕ್‌ ಅವರನ್ನು 5 ಸೆಟ್‌ಗಳ ಹೋರಾಟದಲ್ಲಿ ಪರಾಭವಗೊಳಿಸಿದ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಫ್ರೆಂಚ್‌ ಓಪನ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಥೀಮ್‌ ಗೆಲುವಿನ ಅಂತರ 6-2, 3-6, 7-5, 5-7, 7-5. ಮಳೆಯಿಂದ ಅಡಚಣೆಗೊಳಗಾದ ಈ ಪಂದ್ಯ ಶನಿವಾರ ಮುಂದುವರಿದಿತ್ತು.

ಪ್ಯಾರಿಸ್ ರಾಣಿ ಆ್ಯಶ್ಲಿ ಬಾರ್ಟಿ➤ ವೊಂಡ್ರೂಸೋವಾ ವಿರುದ್ಧ ಜಯ Read More »

ಕ್ರೀಡಾ ನ್ಯೂಸ್

ಚರಂಡಿ ಹೂಳು ತುಂಬಿ ಕೊಳಚೆ ನೀರಿನ ಹರಿವಿಗೆ ತೊಡಕು➤ಮಾರಕ ರೋಗಗಳ ಉತ್ಪತ್ತಿ ಕೇಂದ್ರವಾಗಿ ಪರಿವರ್ತನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂನ್.10. ದಿನನಿತ್ಯ ಸಾವಿರಾರು ಮಂದಿ ಸಂಚರಿಸುವ ರಸ್ತೆ ಪಕ್ಕದಲ್ಲೆ ಕೊಳಚೆ ನೀರು ಗಬ್ಬೆದ್ದು ನಾರುತ್ತಿದೆ. ಮಾರಕ ರೋಗಗಳಿಗೆ ಆಸ್ಪದ ನೀಡುವ ಚರಂಡಿಯ ಕೊಳಚೆ ನೀರನ್ನು ನಿಲ್ಲಲು ಬಿಡದೆ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕಿದೆ. ಇಲ್ಲದಿದ್ದರೆ ಮಳೆಗಾಲದಲ್ಲಿ ಚರಂಡಿನೀರು ಕಟ್ಟಿಕೊಂಡು ಕೃತಕ ನೆರೆ ಉಂಟಾಗಿ, ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ, ಅಂಗಡಿ ಮಾಲಕರಿಗೆ ತೊಂದರೆ ಆಗಲಿದೆ. ಮುಂಗಾರು ಆರಂಭದ ಮೊದಲೇ ಕೆಲ ಭಾಗಗಳಲ್ಲಿ ಮಲೇರಿಯಾ, ಡೆಂಗ್ಯೂ, ಚಿಕೂನ್‌ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಇಂತಹ ರೋಗಗಳ ಹರಡುವಿಕೆಗೆ ಮೂಲ

ಚರಂಡಿ ಹೂಳು ತುಂಬಿ ಕೊಳಚೆ ನೀರಿನ ಹರಿವಿಗೆ ತೊಡಕು➤ಮಾರಕ ರೋಗಗಳ ಉತ್ಪತ್ತಿ ಕೇಂದ್ರವಾಗಿ ಪರಿವರ್ತನೆ Read More »

ಕರಾವಳಿ

ಬೈಕ್ ಮತ್ತು ಟ್ರಕ್ ನಡುವೆ ಡಿಕ್ಕಿ➤ಇಬ್ಬರು ವಿದ್ಯಾರ್ಥಿಗಳ ದುರ್ಮರಣ

(ನ್ಯೂಸ್ ಕಡಬ) newskadaba.com ಉಡುಪಿ, ಜೂನ್.10. ಜೂ.8ರಂದು ರಾತ್ರಿ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ಮೊರಬ ಗ್ರಾಮದ ಬಳಿ ವಿದ್ಯಾರ್ಥಿಗಳಾಗಿದ್ದ ನಾಲ್ವರು ಗೆಳೆಯರು ಎರಡು ಬೈಕ್‌ಗಳಲ್ಲಿ ಮಣಿಪಾಲ ದಿಂದ ಗೋವಾಕ್ಕೆ ತೆರಳುತ್ತಿದ್ದವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪಪಿರುವ ಘಟನೆ ಸಂಭವಿಸಿದೆ. ಅಂಕೋಲದಿಂದ ಮಂಗಳೂರಿಗೆ ಬರುತ್ತಿದ್ದ ಟ್ರಕ್‌ ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಬೈಕಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ಈ ಬೈಕಿನಲ್ಲಿದ್ದ ಶಯನ್‌ ಶೆಟ್ಟಿ ಮತ್ತು ಆರ್ಥಿಕ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೂಂದು ಬೈಕಿನಲ್ಲಿದ್ದ ಉಡುಪಿಯ ಅಭಿಷೇಕ್‌ ಮತ್ತು ಕಲ್ಮಾಡಿಯ

ಬೈಕ್ ಮತ್ತು ಟ್ರಕ್ ನಡುವೆ ಡಿಕ್ಕಿ➤ಇಬ್ಬರು ವಿದ್ಯಾರ್ಥಿಗಳ ದುರ್ಮರಣ Read More »

ಕರ್ನಾಟಕ

ಮಾನ್ಸೂನ್ ನಿರೀಕ್ಷೆಯಲ್ಲಿದ್ದ ಕಾರಾವಳಿ ತೀರದ ಜನರಿಗೆ ಕಾಡುತ್ತಿದೆ ಚಂಡಮಾರುತ ಭೀತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.10.ಮಳೆಯನಿರೀಕ್ಷೆಯಲ್ಲಿರುವಜನರಿಗೆಜತೆಜತೆಗೆಚಂಡಮಾರುತದಭಯಕಾಡಲಿದೆ.ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ಹೆಚ್ಚಾಗಿ ಚಂಡಮಾರುತವಾಗಲಿದೆ. ಇದರ ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರೀ ಗಾಳಿ-ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಪ್ರಸ್ತುತ ನಿರ್ಮಾಣವಾಗಿರುವ ವಾಯುಭಾರ ಕುಸಿತ 36 ಗಂಟೆಗಳಲ್ಲಿ ಚಂಡಮಾರುತದ ಸ್ವರೂಪ ಪಡೆಯಲಿದ್ದು, ವಾಯವ್ಯ ದಿಕ್ಕಿನತ್ತ ಚಲಿಸಲಿದೆ.ಎಂದು ಹವಾಮಾನ ವರದಿ ತಿಳಿಸಿದೆ.ಸಮುದ್ರದಿಂದ ಕಿನಾರೆಯತ್ತ ಈಗಾಗಲೇ ರಭಸವಾಗಿ ಗಾಳಿ ಬೀಸಲಾರಂಭಿಸಿದೆ.ಇದು ಮುಂದಿನ 2-3 ದಿನ ಇನ್ನಷ್ಟು ಹೆಚ್ಚಾಗಲಿದೆ. ರವಿವಾರ ಕೇರಳ

ಮಾನ್ಸೂನ್ ನಿರೀಕ್ಷೆಯಲ್ಲಿದ್ದ ಕಾರಾವಳಿ ತೀರದ ಜನರಿಗೆ ಕಾಡುತ್ತಿದೆ ಚಂಡಮಾರುತ ಭೀತಿ Read More »

ಕರಾವಳಿ

ಕುಡ್ಲ ಎಂಟರ್ಟೈನರ್ಸ್ ತಂಡದಿಂದ ನಾಳೆ ಸಿನಿಮಾ ಸ್ಟುಡಿಯೋ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.8.ಕಿರುಚಿತ್ರಗಳಿಂದಲೇ ಕೋಸ್ಟಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕುಡ್ಲ ಎಂಟರ್ಟೈನರ್ಸ್ ತಂಡ ಇದೀಗ ಹೊಸ ಸಿನಿಮಾ ಸ್ಟುಡಿಯೋವೊಂದನ್ನು ಆರಂಭಿಸಿದೆ.ಮಂಗಳೂರಿನ ಪದವಿನಂಗಡಿಯಲ್ಲಿರುವ ದೀಕ್ಷಾಶ್ರೀ ಬಿಲ್ಡಿಂಗ್‌ನ ಒಂದನೇಮಹಡಿಯಲ್ಲಿ ಕುಡ್ಲ ಎಂಟರ್ಟೈನರ್ಸ್ ಸ್ಟುಡಿಯೋ ಇದೇ ಜೂನ್ ೯ರ ಬೆಳಿಗ್ಗೆ ೧೦ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.   ಉದ್ಘಾಟನಾ ಸಮಾರಂಭದಲ್ಲಿ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್, ತುಳು ಚಲನಚಿತ್ರನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಕಾರ್‌ಡೆಕೋರ್‌ನ ಮಾಲಕರಾದ ಮುಕೇಶ್ ಹೆಗ್ಡೆ, ಐಒಸಿಎಲ್ ನಿವೃತ್ತ ಅಧಿಕಾರಿ ಸುಂದರ್ ಒ.ಎಸ್,

ಕುಡ್ಲ ಎಂಟರ್ಟೈನರ್ಸ್ ತಂಡದಿಂದ ನಾಳೆ ಸಿನಿಮಾ ಸ್ಟುಡಿಯೋ ಲೋಕಾರ್ಪಣೆ Read More »

ಕರಾವಳಿ

ಉದರ ದರ್ಶಕ ಶಸ್ತ್ರ ಚಿಕಿತ್ಸೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.8.ದಕ್ಷಿಣ ಕನ್ನಡ ಜಿಲ್ಲೆಯ 2019 ನೇ ಜೂನ್ ತಿಂಗಳಲ್ಲಿ ಜರುಗುವ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಸೇವೆಗಳು ಇಂತಿವೆ. ಜೂನ್ 11 ರಂದು ಬೆಳಿಗ್ಗೆ 10 ಗಂಟೆಗೆ ಸರಕಾರಿ ಆರೋಗ್ಯ ಕೇಂದ್ರ ವಿಟ್ಲ ಮತ್ತು 12 ಗಂಟೆಗೆ ಸರಕಾರಿ ಆರೋಗ್ಯ ಕೇಂದ್ರ ಮಾಣಿ, ಜೂನ್ 14 ರಂದು ಪೂರ್ವಾಹ್ನ ಸರಕಾರಿ ಕೇಂದ್ರ ಕಡಬ, ಜೂನ್ 15 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ, ಜೂನ್ 17 ರಂದು ತಾಲೂಕು ಸಾರ್ವಜನಿಕ ಆಸ್ಪತ್ರೆ

ಉದರ ದರ್ಶಕ ಶಸ್ತ್ರ ಚಿಕಿತ್ಸೆ Read More »

ಕರಾವಳಿ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ➤ಮಾಧವ ಉಲ್ಲಾಳ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.8.ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಜೂನ್ 5 ರಂದು ವನಮಹೋತ್ಸವ ಆಚರಿಸಲಾಯಿತು ಈ ವೇಳೆಗೆ ಮಾತನಾಡಿದ ಜಿಲ್ಲಾ ಕಮಾಡೆಂಟ್ ಡಾ|| ಮುರಲೀ ಮೋಹನ್ ಚೂಂತಾರುರವರು ಪ್ರತಿಯೊಬ್ಬ ಗೃಹರಕ್ಷಕರು ಒಂದು ಗಿಡದಂತೆ ಜಿಲ್ಲೆಯಲ್ಲಿರುವ ಒಂದು ಸಾವಿರ ಗೃಹರಕ್ಷಕರು ತಮ್ಮ ತಮ್ಮ ಮನೆಗಳಲ್ಲಿ, ಹತ್ತಿರದ ಸರಕಾರಿ ಶಾಲೆಯಲ್ಲಿ, ಅಂಗನವಾಡಿ, ತಮ್ಮ ಘಟಕದ ಕಚೇರಿಗಳಲ್ಲಿ ಗಿಡಗಳನ್ನು ನೆಡುವಂತೆ ತಿಳಿಸಿದರು. ಅದಲ್ಲದೇ ಮುಂದಿನ ಒಂದು ತಿಂಗಳುಗಳ ಕಾಲ ಪ್ರತಿ ಘಟಕಗಳಲ್ಲಿ ವನಮಹೋತ್ಸವದಂತಹ ಕಾರ್ಯಕ್ರಮಗಳನ್ನು

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ➤ಮಾಧವ ಉಲ್ಲಾಳ್ Read More »

ಕರಾವಳಿ
Scroll to Top