Kadaba News

ತಡ ರಾತ್ರಿ ಮುಂಬೈನಿಂದ ಬೆಂಗಳೂರಿಗೆ ಅನರ್ಹ ಶಾಸಕರ ಆಗಮನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.29.ಅನರ್ಹಗೊಂಡ ಶಾಸಕರು  ಸ್ಪೀಕರ್ ರಮೇಶ್ ಕುಮಾರ್ ಅನರ್ಹತೆ ಆದೇಶ ಹೊರಡಿಸಿದ ಬೆನ್ನಲ್ಲೆ ಮುಂಬೈನಿಂದ ತಂಡವಾಗಿ ಬೆಂಗಳೂರಿಗೆ ಆಗಮಿಸಿದೆ. ಮುನಿರತ್ನ ಹಾಗೂ ಶಿವರಾಮ್ ಹೆಬ್ಬಾರ್ ಇಬ್ಬರೂ ಮುಂಬೈನಿಂದ ಒಂದೇ ವಿಮಾನದಲ್ಲಿ ಆಗಮಿಸಿದ್ದಾರೆ. ಅವರ ನಂತರ ಮತ್ತೊಂದು ವಿಮಾನದಲ್ಲಿ ಎಸ್.ಟಿ ಸೋಮಶೇಖರ್, ಬೈರತಿ ಬಸವಾರಾಜ್, ಗೋಪಾಲಯ್ಯ ಹಾಗೂ ಎಂ.ಟಿ.ಬಿ ನಾಗರಾಜ್ ಬೆಂಗಳೂರಿಗೆ ಆಗಮಿಸಿದ್ದಾರೆ.ಭಾನುವಾರ  ತಡ ರಾತ್ರಿ  ಅನರ್ಹಗೊಂಡ ಶಾಸಕರು  ಮುಂಬೈನಿಂದ ತಂಡವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ತಡ ರಾತ್ರಿ ಮುಂಬೈನಿಂದ ಬೆಂಗಳೂರಿಗೆ ಅನರ್ಹ ಶಾಸಕರ ಆಗಮನ Read More »

ಕರಾವಳಿ

ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಕೇರಳ ಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಬದಿಯಡ್ಕ, ಜುಲೈ.27.ಇಂದು ಕೇರಳಕ್ಕೆ ಭೇಟಿ ನೀಡಿದ ಶ್ರೀಲಂಕಾ ಪ್ರಧಾನಿ ರಣಿಲ್‌ ವಿಕ್ರಮ ಸಿಂಘೆ ಶುಕ್ರವಾರ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.ಇಂದು ಕುಂಬಳೆ ನೀರ್ಚಾಲು ಬಳಿಯ ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮವಾದ ಕಾರಣ ಪತ್ರಕರ್ತರಿಗೆ    ಪ್ರವೇಶನಿಷೇಧಿಸಲಾಗಿತ್ತು.ಕಾಸರಗೋಡು ಬೇಕಲದ ಲಲಿತ್‌ ರೆಸಾರ್ಟ್‌ ಹೆಲಿಪ್ಯಾಡ್‌ ನಿಂದ ಮಂಗಳೂರಿಗೆ ಹೊರಟ ರಣಿಲ್‌ ವಿಕ್ರಮ್‌ ಸಿಂಘೆ ಅವರನ್ನು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್‌ ಬಾಬು ಬೀಳ್ಕೊಟ್ಟರು.

ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಕೇರಳ ಕ್ಕೆ ಭೇಟಿ Read More »

ರಾಷ್ಟ್ರೀಯ ನ್ಯೂಸ್

ಮೂಡುಬಿದರೆ: ಯಕ್ಷಸಂಗಮ ➤ 20ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಸನ್ಮಾನ ಸಮಾರಂಭ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಜುಲೈ.27.ದ.ಕ ಜಿಲ್ಲೆಯ ಜಾನಪದ ಕಲೆ ಯಕ್ಷಗಾನ.ಯಕ್ಷಸಂಗಮದ 20ನೇ ವರ್ಷದ ಯಕ್ಷಸಂಗಮ ಕಾರ್ಯಕ್ರಮ ಇಂದು  ಸಮಾಜಮಂದಿರ ಮೂಡಬಿದರೆ ಇಲ್ಲಿ ರಾತ್ರಿ 9.00ಗಂಟೆಗೆ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮೂಲತಃ ಮಿಜಾರಿನ ಪ್ರಮುಖ  ಕಟೀಲು ಮೇಳದ ಪ್ರಸಿದ್ಧ ಮದ್ದಲೆವಾದಕ ಮೋಹನ್‌ ಶೆಟ್ಟಿಗಾರ್ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಇವರ ಸಾಧನೆ ಅಪಾರ, 15ನೇ ಪ್ರಾಯದಲ್ಲೇ ಗುರುಪುರ ಅಣ್ಣಿಭಟ್‌ ರವರಲ್ಲಿ ಚೆಂಡೆ – ಮದ್ದಲೆ ವಾದನ ಕಲಿತುಕೊಂಡು ಪರಿಣತರಾದರು.ಕುಲಕಸುಬಾದ ಕೈಮಗ್ಗದಲ್ಲೇ ಮುಂದುವರಿದರೂ ಹಲವಾರು ಮೇಳಗಳಿಗೆ ಹಿಮ್ಮೇಳವಾದಕರಾಗಿ ಭಾಗವಹಿಸುತ್ತಿದ್ದರು.1982ರಲ್ಲಿ ಕಟೀಲಿನ

ಮೂಡುಬಿದರೆ: ಯಕ್ಷಸಂಗಮ ➤ 20ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಸನ್ಮಾನ ಸಮಾರಂಭ Read More »

ಕರಾವಳಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ➤ ಗ್ರೂಫ್ ‘ಡಿ’ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.27.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಕರ ಬಾಲಮಂದಿರ, ಮಂಗಳೂರು ಸಂಸ್ಥೆಗೆ ಗ್ರೂಫ್ ‘ಡಿ’ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಸೇವೆಯನ್ನು ಒಂದು ವರ್ಷದ ಅವಧಿಗೆ ಸೂಕ್ತ ದರ್ಜೆಯ ನೊಂದಾಯಿತ ಸಂಸ್ಥೆಗಳಿಂದ  ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಪತ್ರಗಳನ್ನು ಕರ್ನಾಟಕ ಸರಕಾರದ ಇ-ಪ್ರೂಕ್ಯೂರ್‍ಮೆಂಟ್ ಪೋರ್ಟಲ್‍ನಿಂದ ಜುಲೈ 15 ರಿಂದ ಡೌನ್‍ಲೋಡ್ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನ. ಆಗಸ್ಟ್ 17 ಸಂಜೆ 4.30 ಗಂಟೆಗೆ ಅಧೀಕ್ಷಕರು, ಸರ್ಕಾರಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ➤ ಗ್ರೂಫ್ ‘ಡಿ’ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಟೆಂಡರ್ ಆಹ್ವಾನ Read More »

ಕರಾವಳಿ

ಬಂಟ್ವಾಳ ತಾಲೂಕು ಪಂಚಾಯತ್ ➤ ಕೆ.ಡಿ.ಪಿ ಸಭೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.27.ಬಂಟ್ವಾಳ ತಾಲೂಕು ಪಂಚಾಯತ್‍ನ 2019-20ನೇ ಸಾಲಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಮೀಕ್ಷೆ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಎಂದು ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಬಂಟ್ವಾಳ ಇವರ ಪ್ರಕಟಣೆ ತಿಳಿಸಿದೆ.

ಬಂಟ್ವಾಳ ತಾಲೂಕು ಪಂಚಾಯತ್ ➤ ಕೆ.ಡಿ.ಪಿ ಸಭೆ ಮುಂದೂಡಿಕೆ Read More »

ಕರಾವಳಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ➤ ಸಹಾಯಕ ನಿರ್ದೇಶಕರಾಗಿ ಕುಮಾರ್ ಬಾಬು ಬೆಕ್ಕೇರಿ ಆಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.27.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇದರ ನೂತನ ಸಹಾಯಕ ನಿರ್ದೇಶಕರಾಗಿ ಕುಮಾರ್ ಬಾಬು ಬೆಕ್ಕೇರಿ ಅವರು ಆಯ್ಕೆಯಾದರು. ಹಾಗೂ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾಗಿ  ಜು.24ರಂದು ಅಧಿಕಾರ ಸ್ವೀಕರಿಸಿದ್ದಾರೆ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ➤ ಸಹಾಯಕ ನಿರ್ದೇಶಕರಾಗಿ ಕುಮಾರ್ ಬಾಬು ಬೆಕ್ಕೇರಿ ಆಧಿಕಾರ ಸ್ವೀಕಾರ Read More »

ಕರಾವಳಿ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ➤ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಹಿರಿಯನಾಗರಿಕರ ಪ್ರಶಸ್ತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.27.ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದಲ್ಲಿ ಆಚರಿಸುವ ಸಂದರ್ಭದಲ್ಲಿ ಹಿರಿಯನಾಗರಿಕರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯನಾಗರಿಕ ಸಾಧಕರಿಗೆಪ್ರಶಸ್ತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. (ಸಾಂಸ್ಥಿಕ,ಕಾನೂನು,ಶಿಕ್ಷಣ ಕ್ಷೇತ್ರ,ಕ್ರೀಡಾ ಕ್ಷೇತ್ರ,ಸಾಹಿತ್ಯ ಕ್ಷೇತ್ರ,ಕಲಾ ಕ್ಷೇತ್ರ,ಹಿರಿಯನಾಗರಿಕರ ಕ್ಷೇತ್ರದಲ್ಲಿ ಸಮಾಜಸೇವೆ) ಗಣನೀಯವಾಗಿ ಸೇವೆ ಸಲ್ಲಿಸಿದ ಹಿರಿಯನಾಗರಿಕರಿಗೆ ಪ್ರಶಸ್ತಿಗಳನ್ನು ಹಾಗೂ ಹಿರಿಯನಾಗರಿಕರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆ ಪ್ರಶಸ್ತಿಗಳನ್ನು ರಾಜ್ಯ ಸರಕಾರವು ನೀಡಲಿದೆ. ಈ ಬಗ್ಗೆ ದ.ಕ ಜಿಲ್ಲೆಯಿಂದ ಪ್ರಶಸ್ತಿಗೆ ಅರ್ಜಿ ಹಾಕಲು ಬಯಸುವ ಹಿರಿಯ ನಾಗರಿಕರು

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ➤ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಹಿರಿಯನಾಗರಿಕರ ಪ್ರಶಸ್ತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ➤ ಅಧ್ಯಕ್ಷರ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.27.ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಬಿ.ಎ ಬಾವಾ ಅವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಇಂತಿವೆ. ಇಂದು ಬೆಳಿಗ್ಗೆ 9.15 ಗಂಟೆಗೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, ಬೆಳಿಗ್ಗೆ 9.30 ಗಂಟೆಗೆ ಮಿಜ್ಬಾ ಮಹಿಳಾ ಕಾಲೇಜು ಉದ್ಘಾಟನೆ, ಮಧ್ಯಾಹ್ನ 12 ಗಂಟೆಗೆ ಮಂಗಳೂರು ಬಿಷಬ್ ಹೌಸ್‍ಗೆ ಭೇಟಿ, ಸಂಜೆ 4 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಭೇಟಿ – ಜೈನ್ ಸಮುದಾಯದವರ ಬಗ್ಗೆ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ➤ ಅಧ್ಯಕ್ಷರ ಪ್ರವಾಸ Read More »

ಕರಾವಳಿ

ಜಿಲ್ಲಾ ಗೃಹರಕ್ಷಕದಳ ಕಚೇರಿ ➤ ಕಾರ್ಗಿಲ್ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.27.ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಕಾರ್ಗಿಲ್ ದಿನಾಚರಣೆಯ ದಿನವನ್ನು ಆಚರಿಸಲಾಯಿತು. ಹುತಾತ್ಮರಾದ ವೀರ ಯೋಧರಿಗೆ ಮುಂಬತ್ತಿ ಹಚ್ಚಿ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠ ಡಾ|| ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು .ಕಾರ್ಯಕ್ರಮದಲ್ಲಿ ಉಪಸಮಾದೇಷ್ಟರಾದ ರಮೇಶ್, ಕಚೇರಿ ಸಿಬ್ಬಂದಿಗಳಾದ ರತ್ನಾಕರ, ಅನಿತಾ, ದಲಾಯತ್ ಮಿನಾಕ್ಷಿ ಹಾಗೂ ಗೃಹರಕ್ಷಕರಾದ ರಮೇಶ್ ಭಂಡಾರಿ, ಸನತ್ ಕುಮಾರ್ ಆಳ್ವ, ದಿವಾಕರ, ಸತೀಶ್ ಆಚಾರ್ಯ, ಬಶೀರ್ ಹಾಗೂ ಸುಖಿತಾ ಎ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಗೃಹರಕ್ಷಕದಳ ಕಚೇರಿ ➤ ಕಾರ್ಗಿಲ್ ದಿನಾಚರಣೆ Read More »

ಕರಾವಳಿ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ➤ ವಿಕಲಚೇತನರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.27.2019-20ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರಿಗೆ ನೀಡುವ ಸೌಲಭ್ಯಗಳಾದ ಆಧಾರ ಯೋಜನೆ ಮತ್ತು ಯಂತ್ರಚಾಲಿತ ದ್ವಿಚಕ್ರ ವಾಹನ ನೀಡುವ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳ ಕಚೇರಿ ಮಂಗಳೂರು ಅಥವಾ ತಾಲ್ಲೂಕಿನ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಲ್ಲಿ ಅಥವಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಅಗಸ್ಟ್ 15.ಹೆಚ್ಚಿನ ಮಾಹಿತಿಗಾಗಿ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ➤ ವಿಕಲಚೇತನರಿಂದ ಅರ್ಜಿ ಆಹ್ವಾನ Read More »

ಕರಾವಳಿ
Scroll to Top