Kadaba News

ರಸ್ತೆ ಅಭಿವೃದ್ಧಿಗೆ ಜಾಗ ಬಿಟ್ಟುಕೊಡದಿದ್ದರೆ ಭೂಸ್ವಾಧೀನ ➤ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.6.ಮಂಗಳೂರು ನಗರದಲ್ಲಿ ಹಲವಾರು ಪ್ರಮುಖ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳು ಕೆಲವು ಖಾಸಗೀ ಜಾಗದ ತಕರಾರಿನಿಂದ ಅಪೂರ್ಣಗೊಂಡಿದ್ದು, ಕೂಡಲೇ ಸಮಸ್ಯೆ ಬಗೆಹರಿಸಿ ಇಂತಹ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನಿರ್ದೇಶಿಸಿದ್ದಾರೆ. ಅವರು ಸೋಮವಾರ ತಮ್ಮ ಕಚೇರಿಯಲ್ಲಿ ನಡೆದ ಸ್ಮಾರ್ಟ್‍ಸಿಟಿ ಅಂತರ್ ಇಲಾಖಾ ಕ್ರಿಯಾಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಂಗಳೂರು ನಗರದ ಭವಿಷ್ಯದ ದೃಷ್ಠಿಯಿಂದ ಪ್ರಮುಖ ರಸ್ತೆಗಳ ಅಗಲೀಕರಣವಾಗಬೇಕಾಗಿದೆ. ನಗರದಲ್ಲಿ ಹಲವು ಪ್ರಮುಖ ರಸ್ತೆಗಳ ಅಗಲೀಕರಣ, ಫುಟ್ ಪಾತ್ […]

ರಸ್ತೆ ಅಭಿವೃದ್ಧಿಗೆ ಜಾಗ ಬಿಟ್ಟುಕೊಡದಿದ್ದರೆ ಭೂಸ್ವಾಧೀನ ➤ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ Read More »

ಕರಾವಳಿ

ಭಾರತೀಯ ರೆಡ್ಕ್ರಾಸ್ ವತಿಯಿಂದ ➤ ಅಂಗನವಾಡಿ ಕೇಂದ್ರಗಳಿಗೆ ಸೊಳ್ಳೆ ಪರದೆ ವಿತರಣೆ ಹಾಗೂ ಡೆಂಗ್ಯೂ ಬಗ್ಗೆ ಜಾಗೃತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.6.ಭಾರತೀಯ ರೆಡ್‍ಕ್ರಾಸ್ ವತಿಯಿಂದ ಡೆಂಗ್ಯೂ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆ ಪ್ರಯುಕ್ತ ಇಂದು  ಅಪರಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣ, 2ನೇ ಮಹಡಿಯಲ್ಲಿ ಮಂಗಳೂರು ನಗರದ ಅಂಗನವಾಡಿ ಕೇಂದ್ರಗಳಿಗೆ ಸೊಳ್ಳೆ ಪರದೆ ವಿತರಣೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಡೆಂಗ್ಯೂ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಪತ್ರಕರ್ತರು ಆಗಮಿಸಲು ಕೋರಲಾಗಿದೆ.

ಭಾರತೀಯ ರೆಡ್ಕ್ರಾಸ್ ವತಿಯಿಂದ ➤ ಅಂಗನವಾಡಿ ಕೇಂದ್ರಗಳಿಗೆ ಸೊಳ್ಳೆ ಪರದೆ ವಿತರಣೆ ಹಾಗೂ ಡೆಂಗ್ಯೂ ಬಗ್ಗೆ ಜಾಗೃತಿ ಕಾರ್ಯಕ್ರಮ Read More »

ಕರಾವಳಿ

ಮರ್ದಾಳ ಐತ್ತೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ , ಆಗಸ್ಟ್.5.ಮರ್ದಾಳ, 102 ನೆಕ್ಕಿಲಾಡಿ, ಐತ್ತೂರು, ಕೊಣಾಜೆ, ಗ್ರಾಮಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮವು ಆ. 3ರಂದು ನಡೆಯಿತು. ಸುಳ್ಯ ಶಾಸಕ ಎಸ್ ಅಂಗಾರ ಅಭಿಯಾನಕ್ಕೆ ಚಾಲನೆ ನೀಡಿ ಬಿಜೆಪಿ ತತ್ವ ಸಿದ್ದಾಂತದ ಬಗ್ಗೆ ವಿವರಿಸಿ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದರು. ಜಿಲ್ಲಾ ಶಕ್ತಿ ಕೇಂದ್ರದ ಸದಸ್ಯರಾದ ಕೃಷ್ಣಶೆಟ್ಟಿ ಕಡಬ, ಕಡಬ ತಾಲೂಕು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ, ಮರ್ದಾಳ ಬಿಜೆಪಿ ವಲಯ ಪ್ರಮುಖ್ ಉಮೇಶ್‍ಶೆಟ್ಟಿ ಸಾಯಿರಾಂ, ಮರ್ದಾಳ

ಮರ್ದಾಳ ಐತ್ತೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ Read More »

ಕರಾವಳಿ

ಕಡ್ಯ-ಕೊಣಾಜೆ: ರೈತ ಕ್ಷೇತ್ರ ಪಾಠಶಾಲೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.5.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಕಡ್ಯ ವಾಸುದೇವ ಭಟ್‍ರವರ ಮನೆಯಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಗಾರದಲ್ಲಿ ಹಣ್ಣು-ಹಂಪಲುಗಳ ಮಾಹಿತಿ ಕಾರ್ಯಗಾರ ಇತ್ತೀಚೆಗೆ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಉಮೇಶ್ ರವರ ನೇತೃತ್ವದಲ್ಲಿ ನಡೆದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಗಾರದಲ್ಲಿ, ಕಡ್ಯ ವಾಸುದೇವ ಭಟ್‍ರವರು ತಮ್ಮ ತೋಟದಲ್ಲಿ ಬೆಳೆದಿರುವ ಹಲವು ಬಗೆಯ ಹಣ್ಣುಗಳನ್ನು ಬೆಳೆಸುವ ಹಾಗೂ ಅವುಗಳ ಬೆಳವಣಿಗೆಯ ಕುರಿತು ಹಾಗೂ ವೀಣಾ ಭಟ್‍ರವರು

ಕಡ್ಯ-ಕೊಣಾಜೆ: ರೈತ ಕ್ಷೇತ್ರ ಪಾಠಶಾಲೆ Read More »

ಕರಾವಳಿ

ಕುಂತೂರು: ಮಾರ್ ಇವಾನಿಯೋಸ್ ವಿದ್ಯಾಸಂಸ್ಥೆಯಲ್ಲಿ ಡೆಂಗ್ಯು ರೋಗದ ಕುರಿತು ➤ ಮಾಹಿತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಕುಂತೂರು, ಆಗಸ್ಟ್.5.ಇಲ್ಲಿನ ಪದವಿ ಹಾಗೂ ಬಿ.ಎಡ್. ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಜಾಗೃತಿ ಕಾರ್ಯಗಾರದಲ್ಲಿ ಇಲ್ಲಿನ ಬಿ.ಎಡ್. ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀ ರಾಜೇಶ್ ಉಪಧ್ಯಾಯ ಎಮ್. ಎನ್. ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದು ಡೆಂಗ್ಯು ರೋಗದ ಲಕ್ಷಣ, ಹರಡುವ ರೀತಿ, ಮತ್ತು ತಡೆಗಟ್ಟುವ ಸರಳ ವಿಧಾನಗಳನ್ನು ಕುರಿತಂತೆ ಸವಿಸ್ತಾರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಉಷಾ ಎಂ.ಎಲ್ ಅವರು ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕುಂತೂರು: ಮಾರ್ ಇವಾನಿಯೋಸ್ ವಿದ್ಯಾಸಂಸ್ಥೆಯಲ್ಲಿ ಡೆಂಗ್ಯು ರೋಗದ ಕುರಿತು ➤ ಮಾಹಿತಿ ಕಾರ್ಯಗಾರ Read More »

ಕರಾವಳಿ

ಮಸೀದಿ ನವೀಕರಣದ ವೇಳೆ ನಾಪತ್ತೆಯಾಗಿದ್ದ ಸೇರು ಪತ್ತೆ

(ನ್ಯೂಸ್ ಕಡಬ) newskadaba.com ನರಿಮೊಗರು, ಆಗಸ್ಟ್.5.ಸುಮಾರು 100 ವರ್ಷಗಳ ಇತಿಹಾಸ ಇರುವ ಈ ಮಸೀದಿ ಪ್ರಾರಂಭದಲ್ಲಿ ಹೆಂಚಿನ ಮಾಡನ್ನು ಹೊಂದಿತ್ತು. ಕಾಲಕ್ರಮೇಣ ಮಸೀದಿಯನ್ನು ನವೀಕರಣ ಮಾಡಲಾಗಿತ್ತು. ಮಸೀದಿ ನವೀಕರಣದ ವೇಳೆ ನಾಪತ್ತೆಯಾಗಿದ್ದ ಸೇರು ಎರಡು ದಿನಗಳ ಹಿಂದೆ ಕಾಮಗಾರಿ ನಡೆಸುವ ವೇಳೆ ಪತ್ತೆಯಾಗಿದೆ. ಸೇರಿನ ಹೊರಭಾಗದಲ್ಲಿ ಪೈಗಂಬರ್‌ ಸಮಕಾಲೀನ ಇಸ್ಲಾಂ ವಿದ್ವಾಂಸರ ಹೆಸರುಗಳನ್ನು ಕೆತ್ತಲಾಗಿದೆ. ಈ ಮಸೀದಿಯಲ್ಲಿ ಜಮಾತಿನ ಬಡವರಿಗೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿತ್ತು. ಅಕ್ಕಿ ಅಳೆಯಲು ಹಿತ್ತಾಳೆಯ ಸೇರು ಬಳಕೆಯಲ್ಲಿತ್ತು.ಈ ವಿಚಾರವಾಗಿ ಜಮಾತ್‌ ಮುಖಂಡರಲ್ಲಿ ಕೇಳಿದಾಗ

ಮಸೀದಿ ನವೀಕರಣದ ವೇಳೆ ನಾಪತ್ತೆಯಾಗಿದ್ದ ಸೇರು ಪತ್ತೆ Read More »

ಕರಾವಳಿ

ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ ➤ ಉಚಿತ ಆಯುಷ್ ಚಿಕಿತ್ಸಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.5.ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್, ವೆನ್ಲಾಕ್ ಆಯುಷ್ ಇಂಟಿಗ್ರೇಟೆಡ್ ಆಸ್ಪತ್ರೆ, ರಾಷ್ಟ್ರೀಯ ಆಯುಷ್ ಅಭಿಯಾನ ವತಿಯಿಂದ ಒಡಿಯೂರು ಶ್ರೀಗಳರವರ ಜನ್ಮದಿನೋತ್ಸವ ಸಮಿತಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇವರ ಸಹಯೋಗದೊಂದಿಗೆ, ಉಚಿತ ಆಯುಷ್ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು. ಜುಲೈ 29 ರಂದು ಶ್ರೀ ದತ್ತಾಂಜನೇಯ ಕ್ಷೇತ್ರ ದಕ್ಷಿಣ ಗಾನಾಪುರ ಒಡಿಯೂರು ಬಂಟ್ವಾಳ ತಾ, ಇಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು. ಚಿಕಿತ್ಸಾ ಶಿಬಿರದಲ್ಲಿ ಡಾ. ಮಹಮದ್

ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ ➤ ಉಚಿತ ಆಯುಷ್ ಚಿಕಿತ್ಸಾ ಶಿಬಿರ Read More »

ಕರಾವಳಿ

ಆ. 14 : ಪ್ರಗತಿ ಪರಿಶೀಲನಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.5.ಆಗಸ್ಟ್ 14 ರಂದು ಬೆಳಿಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರ, ಅಧ್ಯಕ್ಷತೆಯಲ್ಲಿ 2019ನೇ ಸಾಲಿನ ಜುಲೈ ಮಾಹೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.

ಆ. 14 : ಪ್ರಗತಿ ಪರಿಶೀಲನಾ ಸಭೆ Read More »

ಕರಾವಳಿ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಇಲಾಖಾವತಿಯಿಂದ ➤ ಉದ್ಯೋಗಿನಿ ಯೋಜನೆ:ಮಹಿಳೆಯರಿಗೆ ಸಾಲಸೌಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.5.ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ 18 ರಿಂದ 55 ವರ್ಷ ವಯೋಮಿಯ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಯೋಜನೆಯನ್ನು ಹಾಕಿಕೊಂಡಿದೆ. ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ 1.50 ಲಕ್ಷಕ್ಕೆ ಮೀರದ ಮಹಿಳೆಯರಿಂದ 2019-20ನೇ ಸಾಲಿಗೆ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಸಾಮಾನ್ಯ ವರ್ಗದ ಮಹಿಳೆಯರಿಗೆ ಬ್ಯಾಂಕಿನಿಂದ ಮಂಜೂರಾದ ಗರಿಷ್ಠ ಸಾಲ ರೂ 3 ಲಕ್ಷಕ್ಕೆ ಶೇಕಡ 30% ಸಹಾಯಧನ, ಪರಿಶಿಷ್ಟ ಜಾತಿ ಮತ್ತು

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಇಲಾಖಾವತಿಯಿಂದ ➤ ಉದ್ಯೋಗಿನಿ ಯೋಜನೆ:ಮಹಿಳೆಯರಿಗೆ ಸಾಲಸೌಲಭ್ಯ Read More »

ಕರಾವಳಿ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ➤ ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲಸೌಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.5.ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಿರುಸಾಲ ಗರಿಷ್ಠರೂ 2 ಲಕ್ಷ ಉಳಿತಾಯ ಹೊಂದಿರುವ ಅರ್ಹ ಸ್ತ್ರೀಶಕ್ತಿ ಗುಂಪುಗಳಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ 2 ಲಕ್ಷ ಬಡ್ಡಿರಹಿತ ಸಾಲವನ್ನು ನೀಡಲಾಗುವುದು. ಆಸಕ್ತಿ ಇರುವ ಸ್ತ್ರೀಶಕ್ತಿ ಗುಂಪಿನವರು ಅರ್ಜಿಯನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದುಕೊಂಡು ಆಗಸ್ಟ್ 10 ರೊಳಗಾಗಿ ತ್ರಿ-ಪ್ರತಿಯಲ್ಲಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಕಚೇರಿಗಳ ದೂರವಾಣಿ ಸಂಖ್ಯೆ: ಮಂಗಳೂರು ನಗರ 0824-2432809, ಮಂಗಳೂರು

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ➤ ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲಸೌಲಭ್ಯ Read More »

ಕರಾವಳಿ
Scroll to Top