Kadaba News

ಸ್ಕೂಟಿ ಮತ್ತು ಬೈಕ್ ಢಿಕ್ಕಿ ➤ ಸ್ಕೂಟಿ ಸವಾರ ಸಾವು

(ನ್ಯೂಸ್ ಕಡಬ) newskadaba.com ಸುಳ್ಯ, ಆಗಸ್ಟ್.26.ಆ.24 ರಂದು ರಾತ್ರಿ ಸುಳ್ಯ ತಾಲೂಕಿನ ಬೆಳ್ಳಾರೆ- ಸವಣೂರು ರಸ್ತೆಯ ಮುಕ್ಕೂರು ಸನಿಹದ ಕನರ್ತಮಜಲು‌ ಬಳಿ ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಸ್ಕೂಟಿ ಸವಾರ ತೀವ್ರಗಾಯಗೊಂಡಿದ್ದು ಅವರನ್ನು ತಕ್ಷಣ ಆಸ್ಪತ್ರೆ ಗೆ ಕೊಂಡೊಯ್ಯಲಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.‌ಸ್ಕೂಟಿ ಇವರು ಪೆರುವಾಜೆ ಗ್ರಾಮದ ಅಡ್ಯತಕಂಡ ನಿವಾಸಿ ಪುರುಷೋತ್ತಮ ಗೌಡ ಅಡ್ಯತಕಂಡ (42)ವರ್ಷ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ಸ್ಕೂಟಿ ಮತ್ತು ಬೈಕ್ ಢಿಕ್ಕಿ ➤ ಸ್ಕೂಟಿ ಸವಾರ ಸಾವು Read More »

ಕರಾವಳಿ

ಸುಳ್ಯದ ಹಿರಿಯ ಪತ್ರಕರ್ತ ವಿಧಿವಶ

(ನ್ಯೂಸ್ ಕಡಬ) newskadaba.com ಸುಳ್ಯ, ಆಗಸ್ಟ್.26.ಹಿರಿಯ ಪತ್ರಕರ್ತ ಚಂದ್ರೇಶ್ ಗೋರಡ್ಕ ರವಿವಾರ ದಂದು ನಿಧನರಾದರು.ಮೃತ ಚಂದ್ರೇಶ್ ಗೋರಡ್ಕರವರಿಗೆ 48 ವರ್ಷ. ಅವರು ಲಿವರ್ ಸಂಬಂಧಿ ಕಾಯಿಲೆಯಿಂದ ಅಸ್ವಸ್ಥರಾಗಿದ್ದರು. ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.ಅದರೆ ಮತ್ತೆ ಲಿವರ್ ಹಾಗೂ ಕಿಡ್ನಿ ವೈಫಲ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾರದ ಹಿಂದೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಪತ್ನಿ , ಇಬ್ಬರು ಪುತ್ರರನ್ನು ಅಗಲಿದ್ದಾರೆ.  

ಸುಳ್ಯದ ಹಿರಿಯ ಪತ್ರಕರ್ತ ವಿಧಿವಶ Read More »

ಕರಾವಳಿ

ನೂಜಿಬಾಳ್ತಿಲ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ

(ನ್ಯೂಸ್ ಕಡಬ) newskadaba.comಕಲ್ಲುಗುಡ್ಡೆ, ಆಗಸ್ಟ್.26.ನೂಜಿಬಾಳ್ತಿಲ ರೆಂಜಿಲಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 35ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ರವಿವಾರ ನೂಜಿಬಾಳ್ತಿಲ ಉ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಊರಿನ ಹಿರಿಯರಾದ ವೀರಮ್ಮ ಬದನಡ್ಕ ಉದ್ಘಾಟಿಸಿದರು. ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಜಯಂತ ಬರೆಮೇಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹರಿಶ್ಚಂದ್ರ ಕನ್ವರೆ, ನೂಜಿಬಾಳ್ತಿಲ ಶಾಲಾ ಮುಖ್ಯ ಶಿಕ್ಷಕ ಶ್ರೇಯಾನ್ಸ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ,

ನೂಜಿಬಾಳ್ತಿಲ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ Read More »

ಕರಾವಳಿ

ನೂಜಿಬಾಳ್ತಿಲ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ ➤ ಉತ್ತಮ ಮಾರ್ಗದರ್ಶನದಿಂದ ಸಧೃಡ ಸಮಾಜ – ರಾಧಕೃಷ್ಣ ಬೋರ್ಕರ್

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.26. ನೂಜಿಬಾಳ್ತಿಲ ರೆಂಜಿಲಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆದ 35ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಸಮಾರೋಪ ಸಮಾರಂಭ ರವಿವಾರ ನೂಜಿಬಾಳ್ತಿಲ ಉ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಪುತ್ತೂರು ತಾ.ಪಂ. ಅಧ್ಯಕ್ಷ ರಾಧಕೃಷ್ಣ ಬೋರ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನತೆಯಿಂದ ಮಾಡಲಾಗದ ಕೆಲಸವಿಲ್ಲ, ಯುವ ಜನರು ಸಂಘಟನೆ ಜೊತೆಗೆ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡು ಸಮಾಜದ, ಬಡಜನರ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕಾಗಿದೆ. ಮಕ್ಕಳಾಗಿರುವಾಗಲೇ ಅವರಿಗೆ ಸರಿಯಾದ ಮಾರ್ಗದರ್ಶನ ದೊರೆತಲ್ಲಿ ಯಾವುದೇ

ನೂಜಿಬಾಳ್ತಿಲ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ ➤ ಉತ್ತಮ ಮಾರ್ಗದರ್ಶನದಿಂದ ಸಧೃಡ ಸಮಾಜ – ರಾಧಕೃಷ್ಣ ಬೋರ್ಕರ್ Read More »

ಕರಾವಳಿ

ನೂಜಿಬಾಳ್ತಿಲ ಸ. ಉ.ಹಿ.ಪ್ರಾ. ಶಾಲೆಕಡಬ ವಲಯ ಮಟ್ಟದ ಖೋ ಖೋ ಪಂದ್ಯಾಟ ➤’ಶಿಸ್ತು, ಸಾಮರಸ್ಯ ಕ್ರೀಡೆಯಿಂದ ಸಾಧ್ಯ’ ಬಾಲಕೃಷ್ಣ ಬಳ್ಳೇರಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.26.ಕಡಬ ವಲಯ ಮಟ್ಟದ ಖೋ ಖೋ ಪಂದ್ಯಾವಳಿ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು. ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಬಳ್ಳೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ಕ್ರೀಡೆ ಜೀವನದ ಒಂದು ಭಾಗವಾಗಿದ್ದು, ಆರೋಗ್ಯಕರ ಶಿಸ್ತು, ಸಾಮರಸ್ಯ ಬೆಳೆಯಲು ಕ್ರೀಡೆ ಸಹಕಾರಿ. ಕ್ರೀಡೆಯಲ್ಲಿ ಗೆದ್ದರೂ ಅಥವಾ ಸೋತರೂ, ಭಾಗವಹಿಸುವುದರಿಂದ ನಮ್ಮ ದೈಹಿಕ, ಮಾನಸಿಕ ಸಧೃಡತೆ ಸಾಧ್ಯ ಎಂದರು.ಬಿಳಿನೆಲೆ ಶಾಲಾ ದೈಹಿಕ

ನೂಜಿಬಾಳ್ತಿಲ ಸ. ಉ.ಹಿ.ಪ್ರಾ. ಶಾಲೆಕಡಬ ವಲಯ ಮಟ್ಟದ ಖೋ ಖೋ ಪಂದ್ಯಾಟ ➤’ಶಿಸ್ತು, ಸಾಮರಸ್ಯ ಕ್ರೀಡೆಯಿಂದ ಸಾಧ್ಯ’ ಬಾಲಕೃಷ್ಣ ಬಳ್ಳೇರಿ Read More »

ಕರಾವಳಿ

ಕಡಬ:ಶ್ರೀ ಕೃಷ್ಣಾಷ್ಟಮಿಯ ಸಂಭ್ರಮಾಚರಣೆ ➤ ಇದರ ಪ್ರಯುಕ್ತ ಜರುಗಿದ ಅಟ್ಟಿ ಮಡಿಕೆ ಹೊಡೆಯುವ ಸೊಬಗನ್ನು ನೋಡಲು ಬಂದ ಜನ ಸಾಗರ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.26.ಆಗಸ್ಟ್.25.ರಂದು ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ  ಶ್ರೀ ಕೃಷ್ಣಾಷ್ಟಮಿಯ ಸಂಭ್ರಮಾಚರಣೆ ಆಚರಿಸಲಾಯಿತು. ಇದರ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಜನಾ ಕಾರ್ಯಕ್ರಮವನ್ನು ಏರರ್ಪಡಿಸಲಾಗಿತ್ತು. ಈ ಹಬ್ಬದ ಪ್ರಯುಕ್ತ ಅಟ್ಟಿ ಮಡಿಕೆ ಹೊಡೆಯುವ ಕಾರ್ಯಕ್ರಮವನ್ನು ಏರರ್ಪಡಿಸಲಾಗಿತ್ತು. ಬೇರೆ ಬೇರೆ ಊರಿನಿಂದ ಬಂದಂತಹ ವಿವಿಧ ತಂಡಗಳು ಈ ಒಂದು ಅಟ್ಟಿ ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೆಲವು ತಂಡಗಳು ಈ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದುಕೊಂಡಿವೆ. ಈ ಹಬ್ಬದ ವಿಶೇಷತೆಯನ್ನು ಜನರಿಗೆ ತಿಳಿಯ ಪಡಿಸುವ ಉದ್ದೇಶದಿಂದ

ಕಡಬ:ಶ್ರೀ ಕೃಷ್ಣಾಷ್ಟಮಿಯ ಸಂಭ್ರಮಾಚರಣೆ ➤ ಇದರ ಪ್ರಯುಕ್ತ ಜರುಗಿದ ಅಟ್ಟಿ ಮಡಿಕೆ ಹೊಡೆಯುವ ಸೊಬಗನ್ನು ನೋಡಲು ಬಂದ ಜನ ಸಾಗರ Read More »

ಕರಾವಳಿ

ಹಿರಿಯಡ್ಕ : ಮುಖಾಮುಖಿ ಡಿಕ್ಕಿಯಾದ ಕಾರು ಮತ್ತು ಬೈಕ್

(ನ್ಯೂಸ್ ಕಡಬ) newskadaba.com ಮನಿಪಾಲ, ಆಗಸ್ಟ್.24.ಇಂದು ಬೆಳಗ್ಗೆ ಮಣಿಪಾಲ-ಕಾರ್ಕಳ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಕಾರ್ಕಳದಿಂದ ಮಣಿಪಾಲಕ್ಕೆ ಬರುತ್ತಿದ್ದ ಬೈಕ್ ಗೆ ಮಣಿಪಾಲ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.   ಅತೀ ವೇಗದಲ್ಲಿದ್ದ ಕಾರು ಬ್ರೇಕ್ ಹಾಕಿದ ಪರಿಣಾಮ ಜಾರಿ ಒಂದಷ್ಟು ದೂರ ಸಾಗಿ ಎದುರಿನಿಂದ ಬಂದ ಪಲ್ಸರ್ ಬೈಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಬೈಲೂರಿನ ಬೈಕ್ ಸವಾರ ಮಣಿಪಾಲಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದ ಎನ್ನಲಾಗಿದೆ. ಬೈಕ್ ಸವಾರನನ್ನು

ಹಿರಿಯಡ್ಕ : ಮುಖಾಮುಖಿ ಡಿಕ್ಕಿಯಾದ ಕಾರು ಮತ್ತು ಬೈಕ್ Read More »

ಕರಾವಳಿ

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮುಲ್ಕಿ, ಆಗಸ್ಟ್.24. ಒಬ್ಬ ರಿಕ್ಷಾಚಾಲಕ ನವೀನ್ ಎಂಬಾತ   ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಳೆಯಂಗಡಿ ಕೊಪ್ಪಲ ಬಳಿ ನಡೆದಿದೆ. ಇದು ಆತ್ಮಹತ್ಯೆ ಶಂಕೆ ಎಂದು ವ್ಯಕ್ತವಾಗಿದೆ.ಮೃತಪಟ್ಟ ವ್ಯಕ್ತಿಯು  ಕೊಳುವೈಲು ನಿವಾಸಿ ನವೀನ್ ಕರ್ಕಡ (44) ಎಂಬ ನಿವಾಸಿ ಎಂದು ಗುರುತಿಸಲಾಗಿದೆ. ಇವರು ಹಳೆಯಂಗಡಿಯಲ್ಲಿ ರಿಕ್ಷಾ ಚಾಲನಾ ವೃತ್ತಿಯನ್ನು ನಡೆಸಿಕೊಂಡಿದ್ದರು. ಐದು ವರ್ಷಗಳ ಹಿಂದೆ ಇವರ ಪತ್ನಿ ಮೃತಪಟ್ಟಿದ್ದರು.ನವೀನ್ ಅವರು ಕೆಲವು ಸಮಯಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇವರಿಗೆ ಇಬ್ಬರು

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ Read More »

ಕರಾವಳಿ

ಪರಿಸರ ಮಾಲಿನ್ಯತಡೆಗಟ್ಟಲುಯುವಜನತೆ ಶಿಕ್ಷಣ ಸಂಸ್ಥೆಗಳ ಜೊತೆಗೆ ಸಂಶೋದನೆಯಲ್ಲಿಕೈಜೋಡಿಸಬೇಕು ➤ ಡಾ. ಎನ್ ವಿನಯ ಹೆಗ್ಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.24.ಪರಿಸರ ಮಾಲಿನ್ಯ ಇಂದಿನ ಸಮಯದಲ್ಲಿ ಮಾನವಜನಾಂಗಎದುರಿಸುತ್ತಿರುವಅತಿದೊಡ್ಡ ಸಮಸ್ಯೆಯಾಗಿದೆ. ಇದನ್ನುತಡೆಗಟ್ಟಲು ಇಂದಿನ ಯುವಜನತೆ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಶೋಧನೆಯಲ್ಲಿ ಕೈಜೋಡಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು, ಇಲ್ಲವೆಂದಾದಲ್ಲಿ ಮುಂದಿನ 50ರಿಂದ60 ವರ್ಷಗಳ ಅವಧಿಯಲ್ಲಿ ಮಾನವಜನಾಂಗ ಭೀಕರ ಪರಿಣಾಮವನ್ನುಎದುರಿಸಬೇಕಾಗಬಹುದುಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎನ್ ವಿನಯ್ ಹೆಗ್ಡೆ ತಿಳಿಸಿದರು. ಅವರುಎನ್‍ಐಟಿಕೆಯಕೆಮಿಕಲ್‍ಇಂಜಿನಿಯರಿಂಗ್ ವಿಭಾಗವು, ವಿದ್ಯಾಸಂಸ್ಥೆಯ ವಜ್ರ ಮಹೋತ್ಸವದ ಅಂಗವಾಗಿ ‘ಪರಿಸರಮಾಲಿನ್ಯತಡೆಗಟ್ಟುವಿಕೆ ಹಾಗೂ ನಿಯಂತ್ರಣ : ಭವಿಷ್ಯದದೃಷ್ಟಿಕೋನ’ ಎಂಬ ವಿಷಯದ ಬಗ್ಗೆ ಭಾರತ ಸರಕಾರದಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ,

ಪರಿಸರ ಮಾಲಿನ್ಯತಡೆಗಟ್ಟಲುಯುವಜನತೆ ಶಿಕ್ಷಣ ಸಂಸ್ಥೆಗಳ ಜೊತೆಗೆ ಸಂಶೋದನೆಯಲ್ಲಿಕೈಜೋಡಿಸಬೇಕು ➤ ಡಾ. ಎನ್ ವಿನಯ ಹೆಗ್ಡೆ Read More »

ಕರಾವಳಿ

ಮೊಸರು ಕುಡಿಕೆ ನಡೆಯುವ ಸಂಧರ್ಭಗಳಲ್ಲಿ ಎಲ್ಲಾ ಮದ್ಯದಂಗಡಿಗಳು ಬಂದ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.24.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 23 ರಿಂದ ಸಪ್ಟೆಂಬರ್ 1 ರವರೆಗೆ ವಿವಿಧ ಕಡೆಗಳಲ್ಲಿ ಮೊಸರು ಕುಡಿಕೆ ಮೆರವಣಿಗೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಸಮಯ ಅಮಲು ಪದಾರ್ಥ ಸೇವಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಮುಂಜಾಗೃತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಮೊಸರು ಕುಡಿಕೆ ನಡೆಯುವ ಸ್ಥಳಗಳಲ್ಲಿ ಮೊಸರು ಕುಡಿಕೆ ನಡೆಯುವ ದಿನಾಂಕಗಳಂದು

ಮೊಸರು ಕುಡಿಕೆ ನಡೆಯುವ ಸಂಧರ್ಭಗಳಲ್ಲಿ ಎಲ್ಲಾ ಮದ್ಯದಂಗಡಿಗಳು ಬಂದ್ Read More »

ಕರಾವಳಿ
Scroll to Top