ಕಡಬದಲ್ಲಿ ಶುಭಾರಂಭಗೊಂಡ ನಿಪ್ಪೋನ್ ಪೈಂಟ್ಸ್ ನ ಅಧಿಕೃತ ವಿತರಕ ಸಂಸ್ಥೆ ಪೈಂಟ್ಸ್ ಹಾಗೂ ಪೈಂಟಿಂಗ್ ಸಾಮಾಗ್ರಿಗಳ ಮಳಿಗೆ
(ನ್ಯೂಸ್ ಕಡಬ) newskadaba.com ಕಡಬ ,ಸಪ್ಟೆಂಬರ್.20.ಕಡಬ- ಪಂಜ ರಸ್ತೆಯಲ್ಲಿನ ಮಧುರಾ ಕಾಂಪ್ಲೆಕ್ಸ್‍ನಲ್ಲಿ ಪ್ರಾರಂಭಗೊಂಡಿರುವ ನಿಪ್ಪೋನ್ ಪೈಂಟ್ಸ್‍ನ ಅಧಿಕೃತ ವಿತರಕ ಸಂಸ್ಥೆ ಪೈಂಟ್ಸ್ ಹಾಗೂ ಪೈಂಟಿಂಗ್ ಸಾಮಾಗ್ರಿಗಳ ಮಳಿಗೆ ಎಂ.ಎಚ್ ಟ್ರೇಡರ್ಸ್‍ನ ಉದ್ಘಾಟನಾ ಸಮಾರಂಭ ಗುರವಾರ ನಡೆಯಿತು. ಸಂಸ್ಥೆಯನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀ ಪಿ.ಪಿ.ವರ್ಗೀಸ್ ಮಾತನಾಡಿ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಉದ್ಯಮ ವ್ಯವಹಾರಗಳು ಅಭಿವೃದ್ಧಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿವೆ.ಉತ್ತಮ ತಂತ್ರಜ್ಞಾನ, ಆಧುನಿಕ ವ್ಯವಸ್ಥೆಯೊಂದಿಗೆ ಉದ್ಯಮ ಸಂಸ್ಥೆಗಳು ಕಡಬ ಭಾಗದ ಜನ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗುತ್ತಿವೆ. ಬೇರೆ ಊರಿಂದ […]



