Kadaba News

ಶಬರಿಮಲೆ ದೇವಸ್ಥಾನ ಇಂದಿನಿಂದ ತೆರೆಯಲಿದೆ, ಮಹಿಳೆಯರಿಗೆ ಭದ್ರತೆಯ ಕೊರತೆ

(ನ್ಯೂಸ್ ಕಡಬ) newskadaba.com ಪತ್ತನಂತಿಟ್ಟ , ನ.16  ಕೇರಳದ ವಿಶ್ವ ಪ್ರಸಿದ್ದ ಶಬರಿಮಲೆ ದೇವಸ್ಥಾನ ಭಕ್ತರ ದರ್ಶನಕ್ಕೆ ಇಂದಿನಿಂದ ತೆರೆಯಲಿದೆ. ದೇವಸ್ಥಾನದ ಸುತ್ತ ಭಾರಿ ಭದ್ರತೆ ಒದಗಿಸಲಾಗಿದೆ. ಶಬರಿ ಮಲೆಗೆ ಭೆಟಿ ನೀಡುವ ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಅಂತಿಮ ನಿರ್ಣಯ ನೀಡುವವರೆಗೂ ರಕ್ಷಣೆ ನೀಡಲಾಗುವುದಿಲ್ಲ ಎಂದು ಕೇರಳದ ಸಚಿವರು ಹೇಳಿಕೆ ನೀಡಿದ್ದಾರೆ. ಸುಮಾರು ಹತ್ತು ಸಾವಿರ ಪೊಲೀಸರನ್ನು ಬೆಟ್ಟ ಮತ್ತು ದೇವಸ್ಥಾನದ ಸುತ್ತಮುತ್ತ ಅಹಿತಕರ ಘಟನೆಗಳನ್ನು ತಪ್ಪಿಸುವ ಸಲುವಾಗಿ ನಿಯೋಜನೆ ಮಾಡಲಾಗಿದೆ. ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ […]

ಶಬರಿಮಲೆ ದೇವಸ್ಥಾನ ಇಂದಿನಿಂದ ತೆರೆಯಲಿದೆ, ಮಹಿಳೆಯರಿಗೆ ಭದ್ರತೆಯ ಕೊರತೆ Read More »

ರಾಷ್ಟ್ರೀಯ ನ್ಯೂಸ್

ಕಡ್ಯ ಕೊಣಾಜೆ ಗ್ರಾ.ಪಂ. ವಿಶೇಷ ಗ್ರಾಮಸಭೆ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.15  ಕಡ್ಯ ಕೊಣಾಜೆ ಗ್ರಾ.ಪಂ.ನಲ್ಲಿ 2020-21ನೇ ಸಾಲಿನ ನಮ್ಮ ಗ್ರಾಮ ನಮ್ಮ ಯೋಜನೆಯ ವಿಶೇಷ ಗ್ರಾಮ ಸಭೆ ಬುಧವಾರ ಕಡ್ಯ ಕೊಣಾಜೆ ಶ್ರೀ ದುರ್ಗಾಂಬಿಕಾ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಬೇಬಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯಶೋಧರ ಗೌಡ ಮಾತನಾಡಿ, ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳ ಸದುಪಯೋಗಗಳನ್ನು ಗ್ರಾಮಸ್ಥರು ಪಡೆದು ಅಭಿವೃದ್ಧಿಗೆ ಕೈಜೋಡಿಸಿ ಎಂದರು. ಗ್ರಾ.ಪಂ. ಸದಸ್ಯರಾದ ಪುಷ್ಪಾ ಕುಮಾರಿ, ಚಂದ್ರಾವತಿ, ಪೊಡಿಯಾ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಜನೆಯ ಕುರಿತಾಗಿ

ಕಡ್ಯ ಕೊಣಾಜೆ ಗ್ರಾ.ಪಂ. ವಿಶೇಷ ಗ್ರಾಮಸಭೆ Read More »

ಕರಾವಳಿ

ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಶೂ ವಿತರಿಸಿ ಮಕ್ಕಳ ದಿನಾಚರಣೆ ಆಚರಣೆ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.15  ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಚಾಚಾ ನೆಹರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪುಟಾಣಿಗಳಿಗೆ ಶೂ ವಿತರಣೆ ಹಾಗೂ ಆಟೋಟ ಸ್ಪರ್ದೆಯಲ್ಲಿ ಪುಟಾಣಿಗಳಿಗೆ ಬಹುಮಾನ ವಿತರಣೆ ಮಾಡಿ ಆಚರಿಸಲಾಯಿತು. ಪಂಡಿತ್‍ ಜವಾಹರ್ ಲಾಲ್ ನೆಹರುರವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುತ್ತೂರು ಸತ್ಯಸಾಯಿ ಸೇವಾಸಮಿತಿ ಕೊಡುಗೆಯಾಗಿ ನೀಡಿದ ಶೂ ವಿತರಿಸಿದಲ್ಲದೆ, ಮಕ್ಕಳ ದಿನಾಚರಣೆ ಅಂಗವಾಗಿ ನಡೆಸಲಾಗಿದ್ದ ಮಕ್ಕಳ ಆಟೋಟ ಸ್ಪರ್ದೆಯಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ

ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಶೂ ವಿತರಿಸಿ ಮಕ್ಕಳ ದಿನಾಚರಣೆ ಆಚರಣೆ Read More »

ಕರಾವಳಿ

ನ.18ರಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಕುರಿತ ಎರಡು ಕೃತಿಗಳ ಬಿಡುಗಡೆ

 (ನ್ಯೂಸ್ ಕಡಬ) newskadaba.com ಮಂಗಳೂರು, ನ.15  ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ, ಹಿಂದೂಸ್ತಾನ್ ಪತ್ರಿಕೆಯ ಸಂಪಾದಕಿಯಾಗಿದ್ದ ಮೃಣಾಲ್ ಪಾಂಡೆ ಅವರ ಕುರಿತಾದ ಎರಡು ಕೃತಿಗಳ ಬಿಡುಗಡೆ ಸಮಾರಂಭ ನವೆಂಬರ್ 18ರಂದು ಸಂಜೆ 4ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಹಿಂದಿ ಶಿಕ್ಷಕಿ ಡಾ.ಯಶೋಧಾ ಕರನಿಂಗ ಅವರು ಬರೆದಿರುವ ಕೃತಿಗಳನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಬಿಡುಗಡೆ ಮಾಡಿ, ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ (ಎನ್ ಎಸ್ ಸಿಡಿಎಫ್)ವತಿಯಿಂದ ನಡೆಯುವ ಮೂರು ದಿನಗಳ ಸಂಸ್ಖೃತಿ

ನ.18ರಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಕುರಿತ ಎರಡು ಕೃತಿಗಳ ಬಿಡುಗಡೆ Read More »

ಕರಾವಳಿ

ನೂಜಿಬಾಳ್ತಿಲದಲ್ಲಿ ಪಿಂಗಾರ ಕಲಾ ಸಂಘದ ಕಲಾವಿಧರಿಂದ ಬೀದಿ ನಾಟಕ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.15  ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದ.ಕ. ಜಿಲ್ಲಾ ಪಂಚಾಯತ್ ಇದರ ಸಹಯೋಗದಲ್ಲಿ ಪಿಂಗಾರ ಕಲಾ ಸಂಘ ಕೈಕಂಬ ಮಂಗಳೂರು ಕಲಾವಿಧರಿಂದ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಬೀದಿ ನಾಟಕ ಬುಧವಾರದಂದು ನಡೆಯಿತು. ಕಾರ್ಯಕ್ರಮವನ್ನು ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು. ಪಿಂಗಾರ ಕಲಾವಿಧರು ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯ ಕುರಿತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಟನೆ, ಪ್ರದರ್ಶನದ ಮೂಲಕ

ನೂಜಿಬಾಳ್ತಿಲದಲ್ಲಿ ಪಿಂಗಾರ ಕಲಾ ಸಂಘದ ಕಲಾವಿಧರಿಂದ ಬೀದಿ ನಾಟಕ Read More »

ಕರಾವಳಿ

ನವಂಬರ್ 14 – ವಿಶ್ವ ಮಧುಮೇಹಿಗಳ ದಿನ

(ನ್ಯೂಸ್ ಕಡಬ) newskadaba.com ನ.14  ಸಕ್ಕರೆ ಖಾಯಿಲೆ ಅಥವಾ ಮಧುಮೇಹ ರೋಗ ಎನ್ನುವುದು ಬಹಳ ಪುರಾತನವಾದ ಖಾಯಿಲೆ. ಪ್ರಾಚೀನ ಈಜಿಪ್ಟ್ ತಾಡಪತ್ರೆಗಳಲ್ಲಿ “ಅತಿಯಾದ ಮೂತ್ರ ವಿಸರ್ಜಿಸುವ ರೋಗ” ಎಂದು ನಮೂದಿಸಲಾಗಿದೆ. ಪ್ರಾಚೀನ ಭಾರತೀಯ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲಿಯೂ ಈ ರೋಗದ ಸ್ಥಿತಿಯನ್ನು ಮಧುಮೇಹರೋಗ ಮತ್ತು ಸಿಹಿಮೂತ್ರ ರೋಗ ಎಂದು ಉತ್ತೇಜಿಸಲಾಗಿದೆ. (ಇರುವೆಗಳನ್ನು ಆಕರ್ಷಿಸುವ ಮೂತ್ರ) ಡಯಾಬಿಟಿಸ್ ಎಂಬ ಶಬ್ದವನ್ನು ಕ್ರಿ.ಶ. 2ನೇ ಶತಮಾನದಲ್ಲಿ ಗಿಸ್‍ನ ಅರಿಯೇಟಸ್ ಎಂಬ ವೈದ್ಯ ನೀಡಿದನು. ಕ್ರಿ.ಶ. 1600ರಲ್ಲಿ ಥೋಮಸ್ ವಿಲ್ಸನ್

ನವಂಬರ್ 14 – ವಿಶ್ವ ಮಧುಮೇಹಿಗಳ ದಿನ Read More »

ವಿಶೇಷ ಲೇಖನಗಳು

ಸರಸ್ವತೀ ವಿದ್ಯಾಲಯದಲ್ಲಿ ಪ್ರೌಢ ಮತ್ತು ಪದವಿಪೂರ್ವ ವಿಭಾಗದ ವತಿಯಿಂದ ನೇಜಿ ಕಟಾವು ಕಾರ್ಯ

(ನ್ಯೂಸ್ ಕಡಬ) newskadaba.com ನ.13  ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅನ್ನದ ಬೆಲೆಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸರಸ್ವತೀ ವಿದ್ಯಾಲಯದ ಪ್ರೌಢ ಹಾಗೂ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳೇ ನೇಜಿ ನಾಟಿ ಬೆಳೆದ ಪೈರನ್ನು ಕಟಾವು ಮಾಡಿದರು. ಸಂಸ್ಥೆಯ ಸಂಚಾಲಕ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ಭತ್ತ ಕಟಾವು ಕಾರ್ಯಕ್ಕೆ ಚಾಲನೆ ನೀಡಿ ಕೃಷಿಕರೇ ದೇಶದ ಬೆನ್ನೆಲುಬು, ಕೃಷಿ ಕಾರ್ಯದಲ್ಲಿ ತೊಡಗಿರುವವರಿಗೆ ಯಾವತ್ತು ದುರ್ಭೀಕ್ಷೆ ಇಲ್ಲ ಎಂದರು. ಆಡಳಿತ ಮಂಡಳಿ ನಿರ್ದೇಶಕ ಶಿವ ಪ್ರಸಾದ್ ರೈ ಮೈಲೇರಿ

ಸರಸ್ವತೀ ವಿದ್ಯಾಲಯದಲ್ಲಿ ಪ್ರೌಢ ಮತ್ತು ಪದವಿಪೂರ್ವ ವಿಭಾಗದ ವತಿಯಿಂದ ನೇಜಿ ಕಟಾವು ಕಾರ್ಯ Read More »

ಕರಾವಳಿ

ಜೂಜಾಟ ಆಡುತ್ತಿದ್ದವರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com  ಧರ್ಮಸ್ಥಳ,  ನ.13  ಕೋಳಿ ಅಂಕ ಜೂಜಾಟ ಆಡುತ್ತಿದ್ದವರ ಪೈಕಿ 5 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಶಿಬರಾಜೆ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಅವರ ವಶದಿಂದ ವಿವಿಧ ಜಾತಿಯ ಒಟ್ಟು 8 ಹುಂಜ ಕೋಳಿಗಳನ್ನು ಮತ್ತು ಒಟ್ಟು 730 ರೂಪಾಯಿ ನಗದು ಹಣವನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಆಡುತ್ತಿದ್ದವರು ಪೊಲೀಸರ ವಶಕ್ಕೆ Read More »

ಕರಾವಳಿ

ಕಳವು

 (ನ್ಯೂಸ್ ಕಡಬ) newskadaba.com  ವೇಣೂರು,  ನ.13  ಮನೆಯ ಹಿಂದಿನ ಮತ್ತು ಮುಂದಿನ ಬಾಗಿಲಿಗೆ ಬೀಗ ಹಾಕಿಕೊಂಡು ಮನೆ ಸಮೀಪದ ವಿಷ್ಣುಮೂರ್ತಿ ದೇವಸ್ಥಾನದ ಪೂಜೆಗೆಂದು ಹೋದವರ ಮನೆಯಲ್ಲಿ ಸುಮಾರು 32000 ರೂ ಮೌಲ್ಯದ ಸೊತ್ತು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಮಂಗಳವಾರದಂದು ಕಳವಾಗಿದೆ. ಶ್ರೀಮತಿ ಕುಸುಮಾ ತನ್ನ ಕುಟುಂಬದೊಂದಿಗೆ ದೇವಸ್ಥಾನದ ಪೂಜೆ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಮನೆಯಲ್ಲಿರುವ ಸಾಮಾನು ಚೆಲ್ಲಪಿಲ್ಲಿ ಯಾಗಿರುವುದನ್ನು ಗಮನಿಸಿದರು ಮತ್ತು ಗ್ವಾಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು 6 ಗ್ರಾಂ ತೂಕದ ಜುಮುಕಿ ಸಹಿತ

ಕಳವು Read More »

ಕರಾವಳಿ

ವಿಶ್ವ ನ್ಯೂಮೋನಿಯ ದಿನ – ನವೆಂಬರ್ 12

 (ನ್ಯೂಸ್ ಕಡಬ) newskadaba.com  ನ.12    ಪ್ರತೀ ವರ್ಷ ನವೆಂಬರ್ 12ರಂದು ವಿಶ್ವ ನ್ಯೂಮೋನಿಯ ದಿನ ಎಂದು ಆಚರಿಸಿ ನ್ಯೂಮೋನಿಯ ರೋಗದ ಬಗ್ಗೆ ಜಾಗ್ರತೆ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. 12 ನವೆಂಬರ್ 2009 ರಿಂದ ಈ ಆಚರಣೆ ತರಲಾಯಿತು. ಇದೊಂದು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದ್ದು ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ. ವಿಶ್ವದಾದ್ಯಂತ ಪ್ರತೀ ವರ್ಷ 155 ಮಿಲಿಯನ್ 5 ವರ್ಷದ ಕೆಳಗಿನ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ ಮತ್ತು 1.6 ಮಿಲಿಯನ್ ಮಂದಿ ಸಾವಿಗೀಡಾಗುತ್ತಾರೆ.

ವಿಶ್ವ ನ್ಯೂಮೋನಿಯ ದಿನ – ನವೆಂಬರ್ 12 Read More »

ವಿಶೇಷ ಲೇಖನಗಳು
Scroll to Top