Kadaba News

ಕೋವಿಡ್ ಸೋಂಕಿಗೆ ಮಾಜಿ ಶಾಸಕ ಬಲಿ

(ನ್ಯೂಸ್ ಕಡಬ) newskadaba.com ಶಿವಮೊಗ್ಗ. ಸೆ.03:  ಕೋವಿಡ್ ಸೋಂಕಿಗೆ ಭದ್ರಾವತಿ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಮೂರುದಿನಗಳ ಹಿಂದಷ್ಟೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದ ಅಪ್ಪಾಜಿ ಗೌಡರಿಗೆ ಇಂದು ಉಸಿರಾಟದ ತೊಂದರೆ ಅತಿಹೆಚ್ಚು ಕಾಣಿಸಿಕೊಂಡಿದೆ.     ಕೋವಿಡ್-19 ನಿಂದಾಗಿ ಉಸಿರಾಟ ತೊಂದರೆ ಹೆಚ್ಚಾದ ಪರಿಣಾಮ ಅಪ್ಪಾಜಿಯವರನ್ನ ಇಂದು ಸಂಜೆ 7 ಕ್ಕೆ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆಟ್ರೋದಲ್ಲಿಯೂ ಸಹ ಚಿಕಿತ್ಸೆಗೆ ಸ್ಪಂಧಿಸದ ಅಪ್ಪಾಜಿಯವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಸುಮಾರು 10-30 […]

ಕೋವಿಡ್ ಸೋಂಕಿಗೆ ಮಾಜಿ ಶಾಸಕ ಬಲಿ Read More »

ಕರ್ನಾಟಕ

ನರೇಂದ್ರ ಮೋದಿ ವೈಯಕ್ತಿಕ ಟ್ಟಿಟ್ಟರ್ ಖಾತೆ ಹ್ಯಾಕ್

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 03 : ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್‌ಸೈಟ್‌ಗೆ ಲಿಂಕ್‌ ಆಗಿರುವ ಟ್ವಿಟರ್ ಖಾತೆ ಹ್ಯಾಕ್‌ ಆಗಿರುವುದನ್ನು ಇಂದು (ಗುರುವಾರ) ಟ್ವಿಟರ್‌ ಖಚಿತ ಪಡಿಸಿದೆ. ಪರಿಹಾರ ನಿಧಿಗೆ ಕ್ರಿಪ್ಟೊಕರೆನ್ಸಿಗಳ ಮೂಲಕ ಸಹಾಯ ಮಾಡುವಂತೆ ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿ ವೆಬ್‌ಸೈಟ್‌ ಖಾತೆಯಿಂದ ಮನವಿ ಪ್ರಕಟಗೊಂಡಿದೆ.   ಮೋದಿ ಅವರ ವೆಬ್‌ಸೈಟ್‌ ಖಾತೆಯ ಮೂಲಕ ನಡೆಯುತ್ತಿರುವ ಚಟುವಟಿಕೆಗಳ ಬಗೆಗೆ ಗಮನವಿದ್ದು, ಅದನ್ನು ಸುರಕ್ಷಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು

ನರೇಂದ್ರ ಮೋದಿ ವೈಯಕ್ತಿಕ ಟ್ಟಿಟ್ಟರ್ ಖಾತೆ ಹ್ಯಾಕ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಕ್ಷಿಣ ಕನ್ನಡದಲ್ಲಿ ಸದ್ಯದಲ್ಲೇ ಪ್ಲಾಸ್ಮಾ ಥೆರಪಿ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು,  ಸೆ.03:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 270 ಹೊಸ ಕೋವಿಡ್ ಪ್ರಕರಣಗಳು ಸೋಮವಾರ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 12,713ಕ್ಕೇ ಏರಿಕೆಯಾಗಿದೆ.ಜಿಲ್ಲೆಯ ವೆಲ್ ಲಾಕ್ ಆಸ್ಪತ್ರೆಯಲ್ಲಿ ಶೀಘ್ರದಲ್ಲಿಯೇ ಪ್ಲಾಸ್ಮಾ ಥೆರಪಿಯನ್ನು ಆರಂಭಿಸಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.     ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,556.ಪ್ಲಾಸ್ಮಾ ಥೆರಪಿ ಆರಂಭಿಸುವ ಕುರಿತು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ. ಮಾಹಿತಿ ನೀಡಿದ್ದಾರೆ. “ಪ್ಲಾಸ್ಮಾ ಥೆರಪಿ ಆರಂಭಿಸಲು ಈಗಾಗಲೇ ಕಟ್ಟಡವನ್ನು ಗುರುತಿಸಲಾಗಿದೆ. ಇದಕ್ಕಾಗಿ ಯಂತ್ರವನ್ನು ಖರೀದಿ

ದಕ್ಷಿಣ ಕನ್ನಡದಲ್ಲಿ ಸದ್ಯದಲ್ಲೇ ಪ್ಲಾಸ್ಮಾ ಥೆರಪಿ ಆರಂಭ Read More »

ಕರಾವಳಿ, ಕರ್ನಾಟಕ

ಸ್ಕೂಟರ್‌- ಲಾರಿ ಢಿಕ್ಕಿ ➤‌ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ. 03 : ತಲ್ಲೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ, ಸ್ಕೂಟರ್‌ ಸವಾರ ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ಮೃತರಾದವರನ್ನು ತಲ್ಲೂರು ಗ್ರಾಮದ ನಿವಾಸಿ ಸೀತಾರಾಮ ಶೆಟ್ಟಿ (57) ಎಂದು ಗುರುತಿಸಲಾಗಿದೆ.   ಬೈಂದೂರು ಕಡೆಯಿಂದ ಬರುತ್ತಿದ್ದ ಪಿಕ್ ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಇರುವ ಡಿವೈಡರ್ ಮೇಲಕ್ಕೆ ಹತ್ತಿದ್ದು, ಇದೇ ವೇಳೆ ತಲ್ಲೂರು ಕಡೆಗೆ ಹೋಗುತ್ತಿದ್ದ ಸೀತಾರಾಮ್ ತನ್ನ ಬೈಕ್ ನ

ಸ್ಕೂಟರ್‌- ಲಾರಿ ಢಿಕ್ಕಿ ➤‌ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕರ್ನಾಟಕ

ತೆಂಗು ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿ ಕರ್ನಾಟಕ ರಾಜ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು. ಸೆ.02:  ಇಂದು ವಿಶ್ವ ತೆಂಗಿನಕಾಯಿ ದಿನ. ದೇಶದಲ್ಲಿ ಕೇರಳ ಮತ್ತು ತಮಿಳುನಾಡು ನಂತರ ಅತಿ ಹೆಚ್ಚು ತೆಂಗಿನ ಕಾಯಿ ಬೆಳೆಯುವ ರಾಜ್ಯ ಕರ್ನಾಟಕವಾಗಿದ್ದು, ರೈತರ ಅದಾಯ ಮೂಲವಾಗಿದೆ. ಹೈನುಗಾರಿಕೆ ನಂತರ ಅತಿ ಹೆಚ್ಚು ಆದಾಯ ನೀಡುವ ಜತೆಗೆ, ಕೃಷಿ ಕ್ಷೇತ್ರಕ್ಕೆ ಪೂರಕವಾಗಿರುವ ತೆಂಗು ಬೆಳೆ ಇದೀಗ ಹಲವು ಆಯಾಮಗಳನ್ನು ಒಳಗೊಂಡಿದೆ.   ರಾಜ್ಯದ ತುಮಕೂರು ಜಿಲ್ಲೆಯನ್ನು ಕಲ್ಪತರು ನಾಡು ಎಂದು ಕರೆಯುತ್ತಿದ್ದು, ಇಲ್ಲಿ ಅತಿ ಹೆಚ್ಚು ತೆಂಗಿನ ಮರಗಳಿವೆ. ಜತೆಗೆ ತಿಪಟೂರಿನ

ತೆಂಗು ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿ ಕರ್ನಾಟಕ ರಾಜ್ಯ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕಡಬ : ಕೆಲಸಕ್ಕೆಂದು ತೆರಳಿದ ಕುಂತೂರಿನ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ. ಸೆ.02:  ಯುವತಿಯೋರ್ವಳು ನಾಪತ್ತೆಯಾದ ಘಟನೆ ತಾಲೂಕಿನ ಕುಂತೂರು  ಗ್ರಾಮದ ಅರ್ಬಿ ಎಂಬಲ್ಲಿ ನಡೆದಿದೆ. ನಾಪತ್ತೆಯಾದವಳನ್ನು ಮಮತ (24) ಎಂದು ಗುರುತಿಸಲಾಗಿದೆ. ಈಕೆ ಸುಮಾರು 5 ವರುಷಗಳಿಂದ ಬಲ್ಯ ಗ್ರಾಮದ ಪಟ್ಟೆ ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ಖಾಸಗಿ ತಾತ್ಕಾಲಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.     ಈಕೆ ಆಗಸ್ಟ್ 31 ರಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿರುತ್ತಾರೆ. ಆದರೆ ಸಂಜೆಯಾದರೂ ಶಾಲೆಯಿಂದ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿರುತ್ತಾರೆ. ಇನ್ನು

ಕಡಬ : ಕೆಲಸಕ್ಕೆಂದು ತೆರಳಿದ ಕುಂತೂರಿನ ಯುವತಿ ನಾಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅಪಾಯದಲ್ಲಿ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ. ಸೆ.02: ಮಳೆಗಾಲದಲ್ಲಿ ಗುಡ್ಡ ಕುಸಿದು ಸಾವು ನೋವು ಸಂಭವಿಸುತ್ತಿರುವ ಘಟನೆಗಳು ನಡೆಯುತ್ತಿರುವುದನ್ನು ನಾವು ಪದೇ ಪದೇ ಕೇಳುತ್ತಲೇ ಇದ್ದೇವೆ. ಇಲ್ಲೊಂದು ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಗುಡ್ಡವನ್ನು ಅಗೆಯಲಾಗಿದ್ದು, ಪ್ರಸ್ತುತ ಗುಡ್ಡಗಳು ಅಪಾಯಕಾರಿ ಸ್ಥಿತಿಯಲ್ಲಿದೆ. ಗುಡ್ಡದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಮರಗಳೂ ಇರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿದೆ. ಬಿ.ಸಿ.ರೋಡು-ಪುಂಜಾಲಕಟ್ಟೆ 19.85 ಕಿ.ಮೀ.ಹೆದ್ದಾರಿ ಅಭಿವೃದ್ಧಿಗಾಗಿ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಭೂಸ್ವಾಧೀನ ಪಡಿಸಲಾದ ಪ್ರದೇಶಗಳನ್ನು ಅಗೆದು ರಸ್ತೆ ನಿರ್ಮಿಸಲಾಗಿದೆ. ರಸ್ತೆ ಸಾಗುವ ನಾವೂರು ಗ್ರಾಮದ ಬಡಗುಂಡಿ

ಅಪಾಯದಲ್ಲಿ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ Read More »

ಕರಾವಳಿ, ಕರ್ನಾಟಕ

ಇನ್ಫೋಸಿಸ್‍ ನಾರಾಯಣಮೂರ್ತಿಗೆರವರಿಗೆ ವಿಶ್ವ ಡಿಜಿಟಲ್ ಅವಾರ್ಡ್

(ನ್ಯೂಸ್ ಕಡಬ) newskadaba.com ನವದೆಹಲಿ. ಸೆ.02:  ಪ್ರಥಮ ಬಾರಿಗೆ ನೀಡಲಾಗುತ್ತಿರುವ ವಿಶ್ವ ಡಿಜಿಟಲ್ ಅವಾರ್ಡ್‍ಗೆ ಇನ್ಫೋಸಿಸ್‍ನ ನಾರಾಯಣಮೂರ್ತಿ, ರತನ್ ಟಾಟಾ , ಮುಖೇಶ್ ಅಂಬಾನಿ ಹಾಗೂ ಆನಂದ್ ಮಹೀಂದ್ರಾ ಅವರು ಭಾಜನರಾಗಿದ್ದಾರೆ. ಐಎಎ ಸಂಸ್ಥೆ ಘೋಷಣೆ ಮಾಡಿರುವ ವಿಶ್ವ ಡಿಜಿಟಲ್ ಅವಾರ್ಡ್‍ನಲ್ಲಿ ಜೀವ ಮಾನ ಸಾಧನೆಗಾಗಿ ಈ ನಾಲ್ವರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.   ಅದೇ ರೀತಿ ಇತರ ವಿಭಾಗಗಳಲ್ಲಿ ಮಹತ್ತರ ಸಾಧನೆ ಮಾಡಿರುವ ಸಾಧಕರಿಗೂ ಡಿಜಿಟಲ್ ಪ್ರಶಸ್ತಿ ನೀಡಲಾಗಿದೆ. ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ

ಇನ್ಫೋಸಿಸ್‍ ನಾರಾಯಣಮೂರ್ತಿಗೆರವರಿಗೆ ವಿಶ್ವ ಡಿಜಿಟಲ್ ಅವಾರ್ಡ್ Read More »

ರಾಷ್ಟ್ರೀಯ ನ್ಯೂಸ್

ನಾಡಹಬ್ಬ ದಸರಾ ಆಚರಣೆಗೆ ಹೆಚ್ಚಿದ ಒತ್ತಡ: ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಭೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.02. ಕೊರೋನಾ  ಕಾರಣ ಮುಂದಿಟ್ಟು ನಾಡಹಬ್ಬ ಮೈಸೂರು ದಸರಾ ಆಚರಣೆ ಕೈಬಿಡಬಾರದು ಎಂಬ ಒತ್ತಡದ ನಡುವೆ ಮೈಸೂರು ದಸರಾ ನಡೆಯುವುದೇ ಇಲ್ಲವೇ ಎಂಬ ಸಂದೇಹ ಹೆಚ್ಚಾಗಿದೆ. ಕಳೆದ ತಿಂಗಳು ಕಾವೇರಿ ನದಿಗೆ ಬಾಗಿನ ಸಮರ್ಪಿಸಲು ತೆರಳುವ ಸಂದರ್ಭದಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಸರಾ ಆಚರಣೆ ಬಗ್ಗೆ ತೀರ್ಮಾನಿಸಲು ಚಿಂತನೆ ನಡೆದಿದ್ದು, ಶೀಘ್ರವೇ ಸಭೆ ನಡೆಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೆ.7ರಂದು ಉನ್ನತಮಟ್ಟದ ಸಭೆ ನಿಗದಿಯಾಗಿದೆ ಎಂದು

ನಾಡಹಬ್ಬ ದಸರಾ ಆಚರಣೆಗೆ ಹೆಚ್ಚಿದ ಒತ್ತಡ: ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಭೆ Read More »

ಕರಾವಳಿ, ಕರ್ನಾಟಕ

ಕಡಬ: ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ಇಲ್ಲಿನ ಸಿ.ಎ. ಬ್ಯಾಂಕ್‌ ಯೋಗಕ್ಷೇಮ ಸಂಕೀರ್ಣದಲ್ಲಿ ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್‌ ಇಂದು ಶುಭಾರಂಭಗೊಂಡಿತು. ಶುಭವತಿ ರೈ ಬೆದ್ರಾಜೆ ಇವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.   ಈ ಸಂದರ್ಭದಲ್ಲಿ ಕಡಬ ಎಸ್.ಐ.ರುಕ್ಮ ನಾಯ್ಕ್‌, ಕಡಬ ಸಿ.ಎ ಬ್ಯಾಂಕ್‌ ಅಧ್ಯಕ್ಷ ರಮೇಶ್‌ ಭಟ್‌ ಕಲ್ಪುರೆ, ಸೀತಾರಾಮ ಗೌಡ ಪೊಸವಳಿಕೆ, ಕಡಬ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಯಕ್‌, ರಂಜಿತ್‌ ರೈ ಬೆದ್ರಾಜೆ ಉಪಸ್ಥಿತರಿದ್ದರು. ನೂತನ ಫ್ಯಾನ್ಸಿ

ಕಡಬ: ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್ ಶುಭಾರಂಭ Read More »

ಕರಾವಳಿ, ಕರ್ನಾಟಕ
Scroll to Top