►► ಕವರ್ ಸ್ಟೋರಿ ► ಸವಣೂರಿನಿಂದ ಪ್ರತ್ಯೇಕವಾಗಲಿದೆಯೇ ಪಾಲ್ತಾಡಿ ಗ್ರಾಮ..!! ► ಈಡೇರುವುದೇ ಪಾಲ್ತಾಡಿ ಪ್ರತ್ಯೇಕ ಗ್ರಾಮ ಪಂಚಾಯತ್ ನ ಬೇಡಿಕೆ..??
ಸವಣೂರು, ಸೆ.13. ಸವಣೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿರುವ ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾ.ಪಂ.ಮಾಡಬೇಕೆಂಬ ಬೇಡಿಕೆ ಈ ಬಾರಿಯಾದರೂ ಈಡೇರುತ್ತಾ ಎಂಬ ಆಶಾ ಭಾವನೆ ಗ್ರಾಮಸ್ಥರದ್ದು. ಕಳೆದ ಬಾರಿ ಗ್ರಾಮ ಪಂಚಾಯತ್ ಪುನರ್ವಿಂಗಡನೆ ಸಮಯದಲ್ಲಿಯೇ ಈ ಕುರಿತು ಗ್ರಾಮಸ್ಥರಿಂದ ಬೇಡಿಕೆ ವ್ಯಕ್ತವಾಗಿತ್ತು.ಬಳಿಕ ಗ್ರಾಮಸ್ಥರಿಂದ ಕಂದಾಯ ಇಲಾಖೆಯ ಸಚಿವರಿಗೆ, ಗ್ರಾ.ಪಂ.ಪುನರ್ವಿಂಗಡನಾ ಸಮಿತಿಗೆ, ಇಲಾಖೆಯ ನಿರ್ದೇಶಕರಿಗೂ ಮನವಿ ಸಲ್ಲಿಸಿದ್ದರು. ಆದರೆ ಪ್ರತ್ಯೇಕ ಗ್ರಾ.ಪಂ.ಕನಸು ಕನಸಾಗಿಯೇ ಉಳಿಯಿತು. ಪಾಲ್ತಾಡಿ ಗ್ರಾಮದ ಒಟ್ಟು ವಿಸ್ತೀರ್ಣ ೨೬೬೮.೧೦ ಎಕ್ರೆ ಆಗಿದ್ದು ,ಒಟ್ಟು ೫೮೦ ಕುಟುಂಬಗಳನ್ನು ಹೊಂದಿದ್ದು […]

