ನೇರೆಂಕಿಗುತ್ತು: ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಪರಿವಾರ ದೈವಗಳು ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ
(ನ್ಯೂಸ್ ಕಡಬ) newskadaba.com. ಕಡಬ,ಡಿ.29. ಭೂತಾರಾಧನೆಯಲ್ಲಿ ನಂಬಿಕೆಯೇ ಪ್ರಧಾನವಾಗಿದೆ. ಪೂಜೆ ಮಾಡುತ್ತಿರುವಂತೆಯೇ ಅಲ್ಲಿ ಸಾನಿಧ್ಯ ಸನ್ನಿಹಿತವಾಗುವುದೇ ದೈವರಾಧನೆಯ ವಿಶೇಷ ಕಲ್ಪನೆಯಾಗಿದೆ. ಇದು ಹಂತ ಹಂತವಾಗಿ ನಮ್ಮ ಮುಂದೆ ಪ್ರಕಟಗೊಳ್ಳುತ್ತದೆ ಎಂದು ಜಾನಪದ ವಿದ್ವಾಂಸ ಎಲ್ಲೂರು ಕೆ.ಲಕ್ಷ್ಮೀನಾರಾಯಣಕುಂಡಂತಾಯರವರು ಹೇಳಿದರು.ಕಡಬ ತಾಲೂ ಕು ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆದ ಶ್ರೀ ದೈವಗಳ ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವದ ಪ್ರಯುಕ್ತ ನಡೆದ ಧರ್ಮಜಾಗೃತಿ ಸಭೆಯಲ್ಲಿ ಮುಖ್ಯ ಉಪನ್ಯಾಸ ನೀಡಿದರು. ಈಗ ದೈವರಾಧಾನೆಯಲ್ಲೂ […]


