corona

ಪುತ್ತೂರು: ತಾಯಿಯನ್ನು ಬಲಿ ಪಡೆದ ಕೊರೋನಾ ➤ ಹತ್ತು ದಿನದ ನವಜಾತ ಶಿಶುವಿಗೂ ಪಾಸಿಟಿವ್

(ನ್ಯೂಸ್ ಕಡಬ) newskadaba.com ಪುತ್ತೂರು, ಜು 09. ವಾರದ ಹಿಂದೆ ಸೋಂಕು ತಗುಲಿ ಕೂರ್ನಡ್ಕದ ಬಾಣಂತಿ ಮಂಗಳೂರಿನ ವೆನ್ಲಾಕ್ ಕೊವೀಡ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದು, ಆಕೆಯ ಹತ್ತು ದಿನದ ನವಜಾತ ಶಿಶುವಿಗೂ ಸೋಂಕು ಬಾಧಿಸಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಮೃತ ಮಹಿಳೆಯ ಅಂತ್ಯಕ್ರಿಯೆ ಸುರಕ್ಷತಾ ಕ್ರಮಗಳೊಂದಿಗೆ ಕೂರ್ನಡ್ಕದ ಜುಮ್ಮಾ ಮಸೀದಿಗೆ ಒಳಪಟ್ಟ ಬೆದ್ರಾಳದ ದಫನ ಭೂಮಿಯಲ್ಲಿ ನೆರವೇರಿತು. ಮೃತಳ ಸಂಬಂಧಿ ಅಲಂಕಾರು ನಿವಾಸಿ 42 ವರ್ಷದ ವಯಸ್ಸಿನ ಮಹಿಳೆ 4 ದಿನಗಳ ಹಿಂದೆ ಸೋಂಕಿನ ಶಂಕೆ ಹಿನ್ನಲೆಯಲ್ಲಿ ವೆನ್ಲಾಕ್ […]

ಪುತ್ತೂರು: ತಾಯಿಯನ್ನು ಬಲಿ ಪಡೆದ ಕೊರೋನಾ ➤ ಹತ್ತು ದಿನದ ನವಜಾತ ಶಿಶುವಿಗೂ ಪಾಸಿಟಿವ್ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆ..!!!

(ನ್ಯೂಸ್ ಕಡಬ) newskadaba.com ಮಂಗಳೂರು, ಜು 08. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಬುಧವಾರ ಒಂದೇ ದಿನ ಮೂವರು ಮೃತಪಟ್ಟಿದ್ದು ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಪುತ್ತೂರು ಮೂಲದ 32 ವರ್ಷದ ಮಹಿಳೆ, ಉಳ್ಳಾಲದ 62 ವರ್ಷದ ವೃದ್ದೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂವರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದು ಈ ಪೈಕಿ ಇಬ್ಬರು ಮಹಿಳೆಯರು ನಗರದ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲೆಯಲ್ಲಿ ಕೊರೊನಾ ಶರವೇಗದಲ್ಲಿ ವ್ಯಾಪಿಸುತ್ತಿದ್ದು ಮಂಗಳವಾರದವರೆಗೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆ..!!! Read More »

ಕರಾವಳಿ

2021 ಜುಲೈ ತನಕ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ➤ತಪ್ಪಿದ್ದಲ್ಲಿ10ಸಾವಿರ ದಂಡ ಹಾಗೂ 2ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಕೇರಳ, ಜು.06. ಕೊರೋನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿರುವ ಹಿನ್ನಲೆಯಲ್ಲಿ ಕೇರಳ ಸರಕಾರ ಸುರಕ್ಷತಾ ಕ್ರಮಗಳ ಪಾಲನೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸುವಂತೆ ಭಾನುವಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ. ಕೇರಳ ಸರ್ಕಾರದ ಈ ಮಹತ್ವದ ಆದೇಶ 2021 ಜುಲೈವರೆಗೂ ಅನ್ವಯವಾಗಲಿದೆ. ಅಲ್ಲದೇ ಇದೇ ವೇಳೆ ಮದುವೆಗೆ 50ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಹಾಗೂ ಅಂತ್ಯಕ್ರೀಯೆಯಲ್ಲಿ 20 ಜನರಷ್ಟೆ ಭಾಗವಹಿಸಬೇಕು. ಸಮುದಾಯ ಕಾರ್ಯಕ್ರಮ,

2021 ಜುಲೈ ತನಕ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ➤ತಪ್ಪಿದ್ದಲ್ಲಿ10ಸಾವಿರ ದಂಡ ಹಾಗೂ 2ವರ್ಷ ಜೈಲು ಶಿಕ್ಷೆ Read More »

ರಾಷ್ಟ್ರೀಯ ನ್ಯೂಸ್

ತಯಾರಾಯ್ತು 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್.!!

(ನ್ಯೂಸ್ ಕಡಬ) newskadaba.com., ಮುಂಬೈ.ಜು.04., ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಇದೀಗ ವ್ಯಕ್ತಿಯೊಬ್ಬರು 2.89 ಲಕ್ಷ ಬೆಲೆ ಬಾಳುವ ಮಾಸ್ಕ್ ತಯಾರಿಸಿ ಅದನ್ನು ಧರಿಸುವ ಮೂಲಕ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ಮೌಲ್ಯದ ಮಾಸ್ಕ್ ತಯಾರಿಸಿ, ತಾನೇ ಧರಿಸಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಮಾತನಾಡಿರುವ ಶಂಕರ್, ಈ

ತಯಾರಾಯ್ತು 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್.!! Read More »

ರಾಷ್ಟ್ರೀಯ ನ್ಯೂಸ್

ಕೊರೊನಾ ಅಟ್ಟಹಾಸ ➤ ನಾಳೆಯಿಂದ (ಜುಲೈ 5 ರಿಂದ) ಜುವ್ಯೆಲ್ಲರಿ ಶಾಪ್ ಕ್ಲೋಸ್

(ನ್ಯೂಸ್ ಕಡಬ) newskadaba.com ., ಮಂಗಳೂರು, ಜು.04., ದ.ಕ ಜಿಲ್ಲೆಯಲ್ಲಿ ಕೊರೊನಾ ‌ಪ್ರಕರಣ ಹೆಚ್ಚಳದ ಹಿನ್ನಲೆ ನಾಳೆಯಿಂದ ಐದು ದಿನಗಳ ‌ಕಾಲ ಜಿಲ್ಲೆಯ ಜ್ಯುವೆಲ್ಲರಿ ಮಳಿಗೆಯನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ದ.ಕ ಜಿಲ್ಲಾ ಸ್ವರ್ಣ ವ್ಯಾಪಾರ ಸಂಘ ನಿರ್ಧರಿಸಿವೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಜಿಲ್ಲೆಯ ಜ್ಯುವೆಲ್ಲರಿಗಳು ಜುಲೈ 5 ರಿಂದ ಜುಲೈ 9ರವರೆಗೆ ಬಂದ್‌‌ ಮಾಡಲು ತೀರ್ಮಾನ ಮಾಡಿವೆ. ಕಾರ್ಪೊರೇಟ್ ಸ್ವರ್ಣಾಭರಣ ಮಳಿಗೆ ಸೇರಿ ಎಲ್ಲವೂ ಬಂದ್‌ ಆಗಲಿದ್ದು, ಇನ್ನು ಚಿನ್ನಾಭರಣ

ಕೊರೊನಾ ಅಟ್ಟಹಾಸ ➤ ನಾಳೆಯಿಂದ (ಜುಲೈ 5 ರಿಂದ) ಜುವ್ಯೆಲ್ಲರಿ ಶಾಪ್ ಕ್ಲೋಸ್ Read More »

ಕರಾವಳಿ, ಕರ್ನಾಟಕ

ಜೈಲಿಗೂ ವಕ್ಕರಿಸಿದ ಸೋಂಕು ➤ 20 ಕೈದಿಗಳು, 6 ಮಂದಿ ಜೈಲು ಸಿಬ್ಬಂದಿಗೆ ಕೊರೊನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.02. ಕೊರೊನಾ ಮಹಾಮಾರಿ ದಿನೇ ದಿನೇ ತನ್ನ ಆರ್ಭಟವನ್ನು ಜಾಸ್ತಿ ಮಾಡುತ್ತಿದ್ದು, ಈಗ ಪರಪ್ಪನ ಅಗ್ರಹಾರಕ್ಕೂ ವಕ್ಕರಿಸಿದೆ. ಸಿಲಿಕಾನ್ ಸಿಟಿಯ ಸೆಂಟ್ರಲ್ ಜೈಲಿನಲಿದ್ದ 20 ಕೈದಿಗಳು ಮತ್ತು ಆರು ಮಂದಿ ಜೈಲು ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ. ಹೊಸದಾಗಿ ಅರೆಸ್ಟ್ ಆಗಿ ಜೈಲಿಗೆ ತೆರಳಿದ್ದ ಅರೋಪಿಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೂರು ದಿನಗಳ ಹಿಂದೆ ಜೈಲಿನಲ್ಲಿದ್ದ ಸುಮಾರು 150 ಜನರ ಸ್ಯಾಂಪಲ್ ಪಡೆಯಲಾಗಿತ್ತು. ಈಗ ಇದರ ವರದಿ ಬಂದಿದ್ದು, 150 ಜನರ

ಜೈಲಿಗೂ ವಕ್ಕರಿಸಿದ ಸೋಂಕು ➤ 20 ಕೈದಿಗಳು, 6 ಮಂದಿ ಜೈಲು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ Read More »

ಕರ್ನಾಟಕ

ಉಳ್ಳಾಲದ ಮಹಿಳೆಗೆ ಕೊರೊನಾ ಪಾಸಿಟಿವ್‌ ➤ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಭೀತಿ..!!!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.24,. ಬೇಧಿಯ ಕಾರಣದಿಂದ 8 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಉಳ್ಳಾಲದ ಅಝಾದ್‌ ನಗರದ ಮಹಿಳೆಗೆ ಕೊರೊನಾ ಪಾಸಿಟಿವ್‌ ಆಗಿದ್ದು ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಗಳಿಗೆ ಹಾಗೂ ಇತರ ರೋಗಿಗಳಿಗೆ ಭೀತಿ ಉಂಟಾಗಿದೆ. ಉಳ್ಳಾಲದ ಅಝಾದ್‌ ನಗರದ 57 ವರ್ಷದ ಮಹಿಳೆಯನ್ನು ಬೇಧಿಯ ಕಾರಣದಿಂದ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 8 ದಿನಗಳ ಕಾಲ ಅವರು ಅಲ್ಲಿಯೇ ಚಿಕಿತ್ಸೆ ಪಡೆದಿದ್ದರು. ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್‌

ಉಳ್ಳಾಲದ ಮಹಿಳೆಗೆ ಕೊರೊನಾ ಪಾಸಿಟಿವ್‌ ➤ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಭೀತಿ..!!! Read More »

ಕರಾವಳಿ

ತನ್ನ ಪತ್ನಿ ಮತ್ತು ಮಗಳಿಗೆ ಕೊರೋನಾ ಸೋಂಕು ದೃಢ..!!! ➤ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಟ್ವೀಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.23,. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರ ಪತ್ನಿ ಹಾಗೂ ಮಗಳಿಗೂ ಕೊರೊನಾ ವೈರಸ್‌‌ ಸೋಂಕು ಇರುವುದು ದೃಢಪಟ್ಟಿದೆ. ಈ ಕುರಿತು ಸಚಿವ ಸುಧಾಕರ್‌ ಅವರು ಟ್ವಿಟರ್‌ನಲ್ಲಿ ಮಾಹಿತಿ ಖಚಿತಪಡಿಸಿದ್ದಾರೆ. ಸುಧಾಕರ್ ಅವರ 82 ವರ್ಷ ತಂದೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಧಾಕರ್ ಅವರ ತಂದೆಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷಿಸಿದಾಗ ಅವರಿಗೂ ಸೋಂಕು ತಗುಲಿರುವುದು ದೃಢವಾಗಿದ್ದು. ಅವರ

ತನ್ನ ಪತ್ನಿ ಮತ್ತು ಮಗಳಿಗೆ ಕೊರೋನಾ ಸೋಂಕು ದೃಢ..!!! ➤ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಟ್ವೀಟ್ Read More »

ಕರ್ನಾಟಕ

ಕಾನ್‌ಸ್ಟೇಬಲ್‌ನಿಂದಾಗಿ 5 ತಿಂಗಳ ಮಗುವಿಗೂ ಹರಡಿದ ಕೊರೋನಾ ಸೋಂಕು..!!!

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ.23,. ಕಾನ್‌ಸ್ಟೇಬಲ್‌ನಿಂದಾಗಿ ಒಂದೇ ಮನೆಯ ನಾಲ್ವರಿಗೆ ಕೊರೋನಾ ಸೋಂಕು ಸೋಮವಾರ ದೃಢಪಟ್ಟಿದೆ. ಪತ್ನಿ ಹಾಗೂ ಮಗುವನ್ನು ನೋಡಿಕೊಂಡು ಬರಲು ಮಾವನ ಮನೆಗೆ ಬಂದಿದ್ದ ಕಾನ್‌ಸ್ಟೇಬಲ್‌ನಿಂದಾಗಿ ಆತನ ಕುಟುಂಬದ ಐದು ತಿಂಗಳ ಮಗು ಸೇರಿ ಪತ್ನಿ, ಅತ್ತೆ ಮತ್ತು ಮಾವನಿಗೂ ಕೊರೋನಾ ದೃಢಪಟ್ಟಿದೆ. ಬೆಂಗಳೂರಿನ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೇಬಲ್‌ ಇತ್ತೀಚೆಗೆ ತಮ್ಮ ಪತ್ನಿಯ ಹೆರಿಗೆಗೆಂದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ನಾರಾಯಣಪುರಕ್ಕೆ ಬಂದು ಹೋಗಿದ್ದರು. ಬೆಂಗಳೂರಿಗೆ ತೆರಳಿದಾಗ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು,

ಕಾನ್‌ಸ್ಟೇಬಲ್‌ನಿಂದಾಗಿ 5 ತಿಂಗಳ ಮಗುವಿಗೂ ಹರಡಿದ ಕೊರೋನಾ ಸೋಂಕು..!!! Read More »

ಕರ್ನಾಟಕ

ಅಡುಗೆ ಭಟ್ಟರಿಗೆ ಕೊರೊನಾ ದೃಢ ➤ ಬೆಳಿಗ್ಗೆ ಮದುವೆಯಾದ ನವಜೋಡಿ ಸಂಜೆ ವೇಳೆ ಕ್ವಾರಂಟೈನ್ ನಲ್ಲಿ ಲಾಕ್

(ನ್ಯೂಸ್ ಕಡಬ) newskadaba.com ತುಮಕೂರು, ಜೂ.22,. ಬೆಳಗ್ಗೆ ತಾನೇ ಮದುವೆ ಮುಗಿಸಿದ ನವಜೋಡಿಗೆ ಸಂಜೆ ವೇಳೆ ಕ್ವಾರಂಟೈನ್‍ನಲ್ಲಿ ಲಾಕ್ ಆದ ಘಟನೆ ತುಮಕೂರಿನ ಹೇರೂರಿನಲ್ಲಿ ನಡೆದಿದೆ. ಮದುವೆ ಮನೆಯಲ್ಲಿ ಅಡುಗೆ ಭಟ್ಟರೋರ್ವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ನವಜೋಡಿ ಸೇರಿದಂತೆ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ. ಹೇರೂರಿನ ವರ ಗಿರೀಶ್‍ಗೆ ಕಾಟೇನಹಳ್ಳಿಯ ವಧು ಮೀನಾಕ್ಷಿಯ ಜೊತೆ ವಿವಾಹವಾಗಿತ್ತು. ಈ ಮದುವೆಗೆ ಅಡುಗೆ ಮಾಡಲು ಬಂದ ಅಡುಗೆ ಭಟ್ಟರೋರ್ವರು ಚಿಟ್ಟದ ಕುಪ್ಪೆ ನಿವಾಸಿ 50 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಅಡುಗೆ ಭಟ್ಟರಿಗೆ ಕೊರೊನಾ ದೃಢ ➤ ಬೆಳಿಗ್ಗೆ ಮದುವೆಯಾದ ನವಜೋಡಿ ಸಂಜೆ ವೇಳೆ ಕ್ವಾರಂಟೈನ್ ನಲ್ಲಿ ಲಾಕ್ Read More »

ಕರಾವಳಿ
Scroll to Top