Bantwal news

ಅಪರಿಚಿತ ಗಂಡಸಿನ ಮೃತ ದೇಹ ಪತ್ತೆ.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16: ನಗರದ ಬಲ್ಮಠದ ಬಳಿಯಿರುವ ಪೆಟ್ರೋಲ್ ಬಂಕ್‍ನಲ್ಲಿ ಕುಸಿದು ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಿಲಾಯಿತು ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 27ರಂದು ಮೃತಪಟ್ಟಿದ್ದಾರೆ. ಅಪರಿಚಿತ ಮೃತ ವ್ಯಕ್ತಿಯು ಕುದ್ರೋಳಿಯ ನಿವಾಸಿಯಾಗಿದ್ದು, ಸುಮಾರು 5 ಅಡಿ ಎತ್ತರವಿದ್ದು, ಗೋಧಿ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಈ ಚಹರೆಯುಳ್ಳ ಮೃತರ ವಾರಸುದಾರರಿದ್ದಲ್ಲಿ ಮಂಗಳೂರು ಪೂರ್ವಪೊಲೀಸ್ ಠಾಣಾ (ಕದ್ರಿ ಪೊಲೀಸ್ಠಾಣೆ) ದೂ.ಸಂ:0824-2220520 ಗೆ ಸಂಪರ್ಕಿಸುವಂತೆ ಮಂಗಳೂರು ಪೂರ್ವ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ […]

ಅಪರಿಚಿತ ಗಂಡಸಿನ ಮೃತ ದೇಹ ಪತ್ತೆ.! Read More »

ಕರಾವಳಿ

ನಾಳೆ (ಡಿ.17) ಕಡಬಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16: ಮಾನ್ಯ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ   ರವರು ನಾಳೆ (ಡಿ.17) ಪೂರ್ವಾಹ್ನ 11 ಘಂಟೆಗೆ ಕಡಬ ತಾಲೂಕು ಕಚೇರಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆಕೊಳ್ಳಬೇಕೆಂದು ಕಡಬ ತಹಶೀಲ್ದಾರ್ ಅನಂತ ಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ನಾಳೆ (ಡಿ.17) ಕಡಬಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ Read More »

ಕರಾವಳಿ

ಇನ್ನು ಮುಂದೆ ಅಪ್ರಾಪ್ತರು ವಾಹನ ಚಲಾಯಿಸಿದಲ್ಲಿ ರೂ. 50,000 ದಂಡ.!

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ.16: ಇನ್ನು ಮುಂದೆ ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡುಬಂದಲ್ಲಿ ಸರಕಾರ ನಿಗದಿಪಡಿಸಿದ ರೂ. 50,000 ದಂಡವನ್ನು ಕಟ್ಟುನಿಟ್ಟಾಗಿ ಪಾವತಿಸಬೇಕಾದೀತು ಎಂದು ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಜಿ ಹೇಳಿದರು.   ಅವರು ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಸೋಮವಾರವ ನಡೆದ ಉಳ್ಳಾಲ ಪೊಲೀಸ್ ಠಾಣೆಯ ಅಪರಾಧ ತಡೆ ಮಾಸಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಕೊರೊನಾ ಸಂಕಷ್ಟ ದಿಂದ ದುಡಿಮೆ ಇಲ್ಲದೆ ಜನ ತೊಂದರೆಗೀಡಾಗಿದ್ದಾರೆ. ಈ ಸಂದರ್ಭ ವಾಹನ ಸಂಚಾರದ ಕಾನೂನಿನಲ್ಲಿ ಮಾನವೀಯತೆ ತೋರಿಸಿದ್ದೇವೆ. ಆದರೆ ಇನ್ನು

ಇನ್ನು ಮುಂದೆ ಅಪ್ರಾಪ್ತರು ವಾಹನ ಚಲಾಯಿಸಿದಲ್ಲಿ ರೂ. 50,000 ದಂಡ.! Read More »

ಕರಾವಳಿ

ಕಬಕ :ಬೈಕ್ ಅಪಘಾತ ➤ ಹಿರಿಯ ಆರ್.ಎಸ್.‌ಎಸ್ ಕಾರ್ಯಕರ್ತ ನಿಧನ

(ನ್ಯೂಸ್ ಕಡಬ) newskadaba.com ಕಬಕ, ಡಿ.15: ಕಬಕ ಬಳಿ ಡಿವೈಡರ್‍ಗೆ ಬೈಕ್ ಹೊಡೆದ ಪರಿಣಾಮ ಹಿರಿಯ ಆರ್‍ಎಸ್‍ಎಸ್ ಕಾರ್ಯಕರ್ತ ಮೃತಪಟ್ಟಿದ್ದಾರೆ. ಘಟನೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಇಂದು (ಡಿ15) ಮುಂಜಾನೆ ನಡೆದಿದೆ. ಮೃತ ಪಟ್ಟವರನ್ನು ಆರ್‍ಎಸ್‍ಎಸ್ ನ ಹಿರಿಯ ಕಾರ್ಯಕರ್ತ ಬಂಟ್ವಾಳದ ನಿವಾಸಿ ವೆಂಕಟರಮಣ ಹೊಳ್ಳ ಎಂದು ಗುರುತಿಸಲಾಗಿದೆ. ಇವರು ಪುತ್ತೂರಿನಿಂದ ಬಂಟ್ವಾಳಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಕಬಕ ಸಮೀಪದ ಪೋಳ್ಯದಲ್ಲಿ ಅಳವಡಿಸಿರುವ ಡಿವೈಡರ್ ಬಳಿ ಈ ಅಪಘಾತ ಸಂಭವಿಸಿದೆ.

ಕಬಕ :ಬೈಕ್ ಅಪಘಾತ ➤ ಹಿರಿಯ ಆರ್.ಎಸ್.‌ಎಸ್ ಕಾರ್ಯಕರ್ತ ನಿಧನ Read More »

ಕರಾವಳಿ

ಕಾರ್ಕಳ: ಪೊಲೀಸರ ಅತಿಥಿಯಾದ ಗೋಕಳ್ಳರಿಗೆ ನೆರವಾಗುತ್ತಿದ್ದ ಅನಿಲ್ ಪ್ರಭು

(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ.14: ಕಳವುಗೈದ ಹಸುಗಳನ್ನು ಕೊಂದು ಅದರ ಮಾಂಸ ಮಾರಾಟ ಮಾಡುತ್ತಿದ್ದ ಬಜರಂಗದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ, ತೆಳ್ಳಾರು ರಸಯ ನಿವಾಸಿ ಅನಿಲ್ ಪ್ರಭುನನ್ನು ಪೊಲೀಸರು ಬಂಧಿಸಿದ್ದಾರೆ.   ನವಂಬರ್ 6ರಂದು ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿದ್ದ ಹುಡ್ಕೋ ಕಾಲನಿಯ ಮುಹಮ್ಮದ್ ಯಾಸೀನ್ ಎಂಬಾತನನ್ನು ತಡೆದಿದ್ದರು. ಆದರೆ, ಅರ್ಧದಲ್ಲಿಯೇ ಪರಾರಿಯಾಗಿದ್ದ ಆತನ ವಾಹನ ಪರಿಶೀಲನೆ ನಡೆಸಿದ ಪೊಲೀಸರಿಗೆ ಪ್ಲಾಸ್ಟಿಕ್ ಚೀಲದೊಳಗೆ ದನದ

ಕಾರ್ಕಳ: ಪೊಲೀಸರ ಅತಿಥಿಯಾದ ಗೋಕಳ್ಳರಿಗೆ ನೆರವಾಗುತ್ತಿದ್ದ ಅನಿಲ್ ಪ್ರಭು Read More »

ಕರಾವಳಿ, ಕ್ರೈಮ್ ನ್ಯೂಸ್

ಮುಲ್ಕಿ : ಬೈಕ್ ಗೆ ಕಾರು ಡಿಕ್ಕಿ ➤ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.14: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಲ್ನಾಡು ಜಂಕ್ಷನ್ ಬಳಿ ಕಾರು ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಬೈಕ್ ಸವಾರನನ್ನು ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಅಜೀಂ(20) ಗುರುತಿಸಲಾಗಿದೆ. ಬೈಕ್ ಸವಾರ ಸುರತ್ಕಲ್ ಕಾಟಿಪಳ್ಳ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಸಮೀಪದ ಕೊಲ್ನಾಡು ಜಂಕ್ಷನ್ ಬಳಿ ಕೊಲ್ನಾಡು ಇಂಡಸ್ಟ್ರಿಯಲ್ ಏರಿಯಾ ಒಳ ರಸ್ತೆಯಿಂದ ಏಕಾಏಕಿ ಹೆದ್ದಾರಿ ಕ್ರಾಸ್

ಮುಲ್ಕಿ : ಬೈಕ್ ಗೆ ಕಾರು ಡಿಕ್ಕಿ ➤ ಸವಾರ ಗಂಭೀರ Read More »

ಕರಾವಳಿ

ಬಂಟ್ವಾಳ : ಚುನಾವಣೆ ಬಹಿಷ್ಕಾರ ಬ್ಯಾನರ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.13: ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಅರಮನೆಹಿತ್ಲು ಎಂಬಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಶನಿವಾರ ರಾತ್ರಿ ಬಳಿಕ ಕಂಡುಬಂದಿದೆ. ನಂದಾವರದಿಂದ ಅರಮನೆಹಿತ್ಲುವರೆಗೆ ಸಂಪರ್ಕ ರಸ್ತೆ ಕಾಮಗಾರಿಗೆ ಅನುದಾನ ದೊರೆತರೂ ಕೆಲಸ ನಡೆಯದ ಕಾರಣ ಗ್ರಾಪಂ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಬ್ಯಾನರ್ ನಲ್ಲಿ ನಮೂದಿಸಲಾಗಿದೆ.

ಬಂಟ್ವಾಳ : ಚುನಾವಣೆ ಬಹಿಷ್ಕಾರ ಬ್ಯಾನರ್ Read More »

ಕರಾವಳಿ

ಬಂಟ್ವಾಳ :ಪತಿಯ ನಾಮಪತ್ರ ತಿರಸ್ಕರಿಸುವಂತೆ ಪತ್ನಿಯಿಂದ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.13:  ಗ್ರಾಪಂ ಚುನಾವಣೆ ಸಂದರ್ಭ ತನ್ನ ಪತಿ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿ ಎಂದು ಪತ್ನಿಯೇ ಹೇಳಿದ ಪ್ರಕರಣ ಬಂಟ್ವಾಳ ತಾಲೂಕಿನ ಅನಂತಾಡಿ ಎಂಬಲ್ಲಿ ಡಿ.12 ರ ಕಳೆದ ದಿನ ನಡೆದಿದೆ. ನಾಮಪತ್ರ ಸಲ್ಲಿಸಿದ ವ್ಯಕ್ತಿಯ ವಿರುದ್ಧ ಕೆಲವು ಪ್ರಕರಣಗಳು ಇದ್ದು, ಈ ಹಿನ್ನೆಲೆಯಲ್ಲಿ ತಿರಸ್ಕರಿಸಬೇಕು ಎಂದು ಅವರ ಪತ್ನಿ ಮತ್ತು ಕೆಲವರು ಆಗಮಿಸಿ ಆಕ್ಷೇಪ ಸಲ್ಲಿಸಿದರು. ಈ ಕುರಿತು ಅವರು ದೂರನ್ನೂ ನೀಡಿದ್ದಾರೆ. ಆದರೆ, ಅಭ್ಯರ್ಥಿ ಅಪರಾಧಿ ಎಂದು ಯಾವುದೇ ಘೋಷಣೆ

ಬಂಟ್ವಾಳ :ಪತಿಯ ನಾಮಪತ್ರ ತಿರಸ್ಕರಿಸುವಂತೆ ಪತ್ನಿಯಿಂದ ಮನವಿ Read More »

ಕರಾವಳಿ, ಕರ್ನಾಟಕ

ಮಂಗಳೂರು :ಅಂಗಡಿಯ ಚಾವಣಿಯ ಹೆಂಚು ತೆಗೆದು ಒಳಹೊಕ್ಕ ಕಳ್ಳರು.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಹಳೆಯಂಗಡಿ ಮೀನು ಮಾರುಕಟ್ಟೆ ಸಮೀಪದ ಅಂಗಡಿಗೆ ಕಳ್ಳರು ಕನ್ನ ಹಾಕಿರುವ ಘಟನೆ ಡಿ.11 ರ ಕಳೆದ ರಾತ್ರಿ ನಡೆದಿದೆ. ಹಳೆಯಂಗಡಿಯ ಮುದ್ದು ಸಾಲ್ಯಾನ್ ಎಂಬವರ ಅಂಗಡಿಯ ಚಾವಣಿಯ ಹೆಂಚು ತೆಗೆದು ಒಳಹೊಕ್ಕ ಕಳ್ಳರು, ನಗದು ಹಾಗೂ ಕೆಲ ವಸ್ತುಗಳನ್ನು ಕದ್ದೊಯ್ದಿದ್ದಾರೆ.ಮುದ್ದು ಸಾಲ್ಯಾನ್ ಇಂದು ಬೆಳಗ್ಗೆ ಅಂಗಡಿ ತೆರೆದಾಗ ಕಳವು ಅರಿವಿಗೆ ಬಂದಿದೆ. ಮುಲ್ಕಿ ಠಾಣೆ ಪೊಲೀಸರು ಸ್ಥಳಕ್ಕೆ‌ ಭೇಟಿ ಪರಿಶೀಲನೆ‌ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.      

ಮಂಗಳೂರು :ಅಂಗಡಿಯ ಚಾವಣಿಯ ಹೆಂಚು ತೆಗೆದು ಒಳಹೊಕ್ಕ ಕಳ್ಳರು.! Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ :ಬೈಕ್ ಅಪಘಾತ ➤ ಖ್ಯಾತ ಪಾಕಪ್ರವೀಣ ಕಾಂತಡ್ಕ ಶಂಕರನಾರಾಯಣ ಭಟ್ ಮೃತ್ಯು

(ನ್ಯೂಸ್ ಕಡಬ) newskadaba.com ಫರಂಗಿಪೇಟೆ, ಡಿ.12: ಬಂಟ್ವಾಳ ತಾಲೂಕಿನ ಫರಂಗಿಪೇಟೆ ರಾ.ಹೆ. 75ರಲ್ಲಿ ಗುರುವಾರ ಇಳಿಸಂಜೆ ಬೈಕ್ ಸ್ಕಿಡ್ ಆಗಿ ನಡೆದ ಅಪಘಾತದಲ್ಲಿ ವಿಟ್ಲದ ಜನಪ್ರಿಯ ಬಾಣಸಿಗ ಕಾಂತಡ್ಕ ಶಂಕರನಾರಾಯಣ ಭಟ್ (58) ಮೃತಪಟ್ಟಿದ್ದಾರೆ. ಮಂಗಳೂರು ಕಡೆಯಿಂದ ಬೈಕಿನಲ್ಲಿ ವಿಟ್ಲ ಕಡೆಗೆ ಬರುತ್ತಿದ್ದ ಅವರ ಬೈಕ್, ಫರಂಗಿಪೇಟೆಯ ಮೀನು ಮಾರುಕಟ್ಟೆ ಬಳಿ ಪಲ್ಟಿಯಾಗಿ ಅಪಘಾತ ಘಟಿಸಿದ್ದಾಗಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ವಿಟ್ಲ :ಬೈಕ್ ಅಪಘಾತ ➤ ಖ್ಯಾತ ಪಾಕಪ್ರವೀಣ ಕಾಂತಡ್ಕ ಶಂಕರನಾರಾಯಣ ಭಟ್ ಮೃತ್ಯು Read More »

ಕರಾವಳಿ
Scroll to Top