ಯುವಕನ ಅಪಹರಣ – 2 ಲಕ್ಷಕ್ಕೆ ಬೇಡಿಕೆ ➤ ಮೂವರು ಆರೋಪಿಗಳ ಬಂಧನ
(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.20 ಬಿಹಾರದ ಯುವಕನನ್ನು ಅಪಹರಿಸಿ ರೂ.2 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮೂವರನ್ನು ಬಂಧಿಸಿದ ಘಟನೆ ಯಶವಂತಪುರ ರೈಲು ನಿಲ್ದಾಣದಲ್ಲಿ ಸಂಭವಿಸಿದೆ ಎನ್ನಲಾಗಿದೆ. ಡಿಪ್ಲೋಮಾ ವಿದ್ಯಾರ್ಥಿ ಎ.ಪ್ರಭಾತ್ (21), ಕುಣಿಗಲ್ ನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ ರಂಗನಾಥ್ (19), ಕೃಷಿಕ ಕುಶಾಲ್ (19) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಕೃತ್ಯ ನಡೆದ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.
ಯುವಕನ ಅಪಹರಣ – 2 ಲಕ್ಷಕ್ಕೆ ಬೇಡಿಕೆ ➤ ಮೂವರು ಆರೋಪಿಗಳ ಬಂಧನ Read More »
ಕರ್ನಾಟಕ, ಕ್ರೈಮ್ ನ್ಯೂಸ್