ಮಹತ್ವದ ಬದಲಾವಣೆಯತ್ತ ಮಹೀಂದ್ರಾ ಸಂಸ್ಥೆ ►ವರ್ಷಾಂತ್ಯದಲ್ಲಿ ವಿನೂತನ ಮಾದರಿಯ “ಎಲೆಕ್ಟ್ರಿಕ್ ಎಂಜಿನ್ ಸ್ಕೂಟರ್ಗಳು..”!!
(ನ್ಯೂಸ್ ಕಡಬ) newskadaba.com ತಂತ್ರಜ್ಞಾನ,ಸೆ.26. ಆಟೋ ಉದ್ಯಮದಲ್ಲಿ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಮಹೀಂದ್ರಾ ಸಂಸ್ಥೆಯು ಸ್ಕೂಟರ್ ಆವೃತ್ತಿಗಳನ್ನು ಎಲೆಕ್ಟ್ರಿಕ್ ಎಂಜಿನ್ ಜೊತೆ ಅಭಿವೃದ್ಧಿಗೊಳಿಸುವ ಕುರಿತು ಮಹತ್ವದ ಯೋಜನೆಯನ್ನು ರೂಪಿಸುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಇ2ಒ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಈಗಾಗಲೆ ಹಿಡಿತ ಸಾಧಿಸಿರುವ ಮಹೀಂದ್ರಾ ಸಂಸ್ಥೆಯು ಇದೀಗ ಮತ್ತೊಂದು ಮಹತ್ವದ ಬದಲಾವಣೆಗೆ ಸಜ್ಜಾಗಿದೆ. ಈಗಾಗಲೇ ವಿನೂತನ ಪ್ರಯೋಗಗಳನ್ನು ಕೈಗೊಂಡಿರುವ ಮಹೀಂದ್ರಾ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗವು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕ ವಿನ್ಯಾಸಗಳನ್ನು ಸಿದ್ಧಗೊಳಿಸಲಾಗುತ್ತಿದ್ದು, ಈ […]

