ಆತೂರು: ದಿಕ್ರ್ ಹಲ್ಕಾ ವಾರ್ಷಿಕೋತ್ಸವ ► ಅಲ್ಲಾಹುವಿನ ಸ್ನೇಹ ಸಂಪಾದನೆಗೆ ದಿಕ್ರ್, ಸ್ವಲಾತ್ ಉತ್ತಮ ಹಾದಿ-ತ್ವಾಖ ಅಹ್ಮದ್ ಮೌಲವಿ
(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಜ. 4. ಅಲ್ಲಾಹುವಿನ ಸ್ನೇಹ ಸಂಪಾದನೆಗೆ ದಿಕ್ರ್, ಸ್ವಲಾತ್ ಹೇಳುವುದು ಉತ್ತಮ ಹಾದಿಯಾಗಿದ್ದು, ಆ ಮೂಲಕ ನಮ್ಮ ಆತ್ಮ ಶುದ್ಧೀಕರಣದೊಂದಿಗೆ ಹೃದಯಪರಿಪೂರ್ಣತೆ ಆಗುತ್ತದೆ ಜೊತೆಗೆ ಪುಣ್ಯ ಸಂಪಾದನೆ ಲಭಿಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಯಾರ್‍ಕತ್ತ್ ತ್ವಾಖ ಅಹ್ಮದ್ ಮೌಲವಿ ಅಲ್‍ಖಾಸಿಮಿ ಅಲ್‍ಅಝ್‍ಹರಿ ಹೇಳಿದರು.ಅವರು ಜ. 3ರಂದು ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳ ಮೊದಲ ಗುರುವಾರ ರಾತ್ರಿ ಆಚರಿಸಿಕೊಂಡು ಬರುತ್ತಿರುವ ದಿಕ್ರ್ ಹಲ್ಕಾ ಇದರ 18ನೇ ವಾರ್ಷಿಕೋತ್ಸವ ಸಮಾರಂಭದ ಸಭಾ […]

