Arunachal Pradesh

ವಿಶ್ವದ ಅತಿ ಉದ್ದದ ಸೆಲಾ ಪಾಸ್ ಸುರಂಗ ಮಾರ್ಗ ಲೋಕಾರ್ಪಣೆ

(ನ್ಯೂಸ್‌ ಕಡಬ) newskadaba ನವದೆಹಲಿ, ಮಾ.09:ಪ್ರಧಾನಿ ಮೋದಿ ಅವರು ಈಶಾನ್ಯ ಪ್ರವಾಸದ ಎರಡನೇ ದಿನವಾದ ಶನಿವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇವುಗಳಲ್ಲಿ, ವಿಶ್ವದ ಅತಿ ಎತ್ತರದಲ್ಲಿ (13000 ಅಡಿ) ನಿರ್ಮಿಸಲಾಗಿರುವ ಆಯಕಟ್ಟಿನ, ಪ್ರಮುಖವಾದ, ಬಹು ನಿರೀಕ್ಷಿತ ಮತ್ತು ಉದ್ದವಾದ ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು. ಈ ಸುರಂಗ ಮಾರ್ಗವು ಅರುಣಾಚಲ ಪ್ರದೇಶದ ಪಶ್ಚಿಮ ಕಮಿಂಗ್ ಮತ್ತು ತವಾಂಗ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. […]

ವಿಶ್ವದ ಅತಿ ಉದ್ದದ ಸೆಲಾ ಪಾಸ್ ಸುರಂಗ ಮಾರ್ಗ ಲೋಕಾರ್ಪಣೆ Read More »

ರಾಷ್ಟ್ರೀಯ ನ್ಯೂಸ್

ಭಾರತೀಯ ವಾಯು ಸೇನೆಯ ವಿಮಾನ ಪತನ ► 5 ಸೈನಿಕರ ಮೃತ್ಯು

(ನ್ಯೂಸ್ ಕಡಬ) newskadaba.com ಗುವಾಹಾಟಿ, ಅ.6. ಭಾರತೀಯ ವಾಯು ಸೇನೆಯ ವಿಮಾನವೊಂದು ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಪತನಗೊಂಡಿದ್ದು 5 ಸೈನಿಕರು ಸಾವನ್ನಪ್ಪಿದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ. ಚೀನಾ ಹಾಗೂ ಭಾರತದ ಗಡಿಯ 12 ಕಿ.ಮೀ ವ್ಯಾಪ್ತಿ ಭೂ ಪ್ರದೇಶದಲ್ಲಿ ಇಂದು ಮುಂಜಾನೆ 6 ಗಂಟೆ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಎಂಐ 17ವಿ5 ವಿಮಾನ ಪತನಗೊಂಡಿದ್ದು ಅವಘಡದಲ್ಲಿ 5 ಸೈನಿಕರು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ತೀವ್ರ ಗಾಯಗಳಾಗಿವೆ. ವಿಮಾನದಲ್ಲಿ ಒಟ್ಟು 7 ಮಂದಿ ಇದ್ದರು ಎಂದು ವರದಿಯಾಗಿದೆ.

ಭಾರತೀಯ ವಾಯು ಸೇನೆಯ ವಿಮಾನ ಪತನ ► 5 ಸೈನಿಕರ ಮೃತ್ಯು Read More »

ರಾಷ್ಟ್ರೀಯ ನ್ಯೂಸ್
Scroll to Top