ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ► ಪುತ್ತೂರಿನ ಹನುಮಗಿರಿ ಶ್ರೀ ಆಂಜನೇಯ ಕ್ಷೇತ್ರಕ್ಕೆ ಭೇಟಿ
(ನ್ಯೂಸ್ ಕಡಬ) newskadaba.com ಪುತ್ತೂರು, ನ.3. ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಪುತ್ತೂರು ತಾಲೂಕಿನ ಈಶ್ವರಮಂಗಿಲದಲ್ಲಿರುವ ಹನುಮಗಿರಿ ಪಂಚಮುಖಿ ಶ್ರೀ ಆಂಜನೇಯ ಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಕೋದಂಡರಾಮನ ಪ್ರತಿಷ್ಠಾ ಮಹೋತ್ಸವ ಸಲುವಾಗಿ ಬೆಳಗ್ಗೆ ಸುಮಾರು 9.40 ರ ವೇಳೆಗೆ ಆಗಮಿಸಿದ ಅವರನ್ನು ಧರ್ಮಶ್ರೀ ಪ್ರತಿಷ್ಠಾನದ ಮಹಾ ಪೋಷಕರಾದ ಜಿ.ಕೆ. ಮಹಾಬಲೇಶ್ವರ ಭಟ್ರವರು ಹಾರಾರ್ಪಣೆ ಮಾಡಿ ಬರಮಾಡಿಕೊಂಡರು. ಬಳಿಕ ಕೋದಂಡರಾಮ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು […]

