ಬೈಕ್ ಡಿಕ್ಕಿ ► ಯುವಕರಿಬ್ಬರು ಮೃತ್ಯು
(ನ್ಯೂಸ್ ಕಡಬ) newskadaba.com ಮಂಡ್ಯ, ನ.11. ಅತಿವೇಗದಿಂದ ಬಂದ ಬೈಕೊಂದು ಬ್ರಿಡ್ಜ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 209ರ ಚಿಲ್ಲಾಪುರ ಗೇಟ್ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ಹಲಗೂರಿನ ಪ್ರತಾಪ್(23) ಬಾಣಸಮುದ್ರದ ಶಶಿ(24) ಮೃತ ದುರ್ದೈವಿಗಳು. ಘಟನೆಯಿಂದ ಪ್ರತಾಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶಶಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅತಿವೇಗವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ ► ಯುವಕರಿಬ್ಬರು ಮೃತ್ಯು Read More »
ಕರಾವಳಿ
