ಮಂಗಳೂರು: ಸಿಟಿ ಬಸ್ ಡಿಕ್ಕಿ ► ಮಹಿಳೆ ಮೃತ್ಯು
(ನ್ಯೂಸ್ ಕಡಬ) newskadaba.com ಮಂಗಳೂರು, ನ.3. ಸಿಟಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ವೃದ್ಧೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಕರ್ನಕಟ್ಟೆ ಬಾಲ ಏಸು ಮಂದಿರದ ಬಳಿ ಶುಕ್ರವಾರ ನಡೆದಿದೆ. ಮೃತ ಮಹಿಳೆಯನ್ನು ಕುಲಶೇಖರ ಕೋಟಿಮುರ ನಿವಾಸಿ ಲಿಲ್ಲಿ ಪಿಂಟೋ (65) ಎಂದು ಗುರುತಿಸಲಾಗಿದೆ . ಬಾಲ ಏಸು ಮಂದಿರದಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮನೆಗೆ ವಾಪಾಸಾಗುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಡು, ತನಿಖೆ ಪ್ರಾರಂಭಿಸಿದ್ದಾರೆ.
ಮಂಗಳೂರು: ಸಿಟಿ ಬಸ್ ಡಿಕ್ಕಿ ► ಮಹಿಳೆ ಮೃತ್ಯು Read More »
ಕರಾವಳಿ
